ಬೆಳಗಾವಿ: ಕ್ರಿಕೆಟ್ ವಿಚಾರಕ್ಕೆ ಉಂಟಾದಂತ ಜಗಳ, ತಾರಕಕ್ಕೆ ಏರಿದ ಪರಿಣಾಮ, ಬೆಳಗಾವಿಯಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ, ತಲ್ವಾರ್ ಗಳನ್ನು ಎಸೆದು ಬೆಚ್ಚಿ ಬೀಳಿಸುವಂತೆ ಮಾಡಿರುವ ಘಟನೆ ನಡೆದಿದೆ. ಮನೆಯ ಮುಂದಿನ ವಾಹನಗಳು ಕಿಡಿಗೇಡಿಗಳ ದಾಳಿಯಲ್ಲಿ ಜಖಂ ಗೊಂಡಿದ್ದಾರೆ.
ಬೆಳಗಾವಿ ಆಳ್ವಾಸ್ ಓಣಿಯಲ್ಲಿ ಕ್ರಿಕೆಟ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಈ ಗಲಾಟೆ ತಾರಕ್ಕೇರಿದ ಪರಿಣಾಮ, ಮನೆಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನೆಡಸಿದ್ದಾರೆ. ಅಲ್ಲದೇ ವಾಹನಗಳಲ್ಲು ಜಖಂ ಗೊಳಿಸಿದ್ದಾರೆ. ಈ ಎಲ್ಲಾ ಕಿಡಿಗೇಡಿಗಳ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಳಗಾವಿಯ ಆಳ್ವಾಸ್ ಗಲ್ಲಿಯಲ್ಲಿನ ಈ ಘಟನೆಯಿಂದ ಬೆಳಗಾವಿ ನಗರದಾಧ್ಯಂತ ಹೈ ಅಲರ್ಟ್ ಅನ್ನು ಪೊಲೀಸರು ಘೋಷಿಸಿದ್ದಾರೆ. ಅಲ್ಲದೇ ಕಿಡಿಗೇಡಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸದ್ಯ ಬೆಳಗಾವಿಯ ಆಳ್ವಾಸ್ ಗಲ್ಲಿಯಲ್ಲಿ ಬಿಗುವಿನ ವಾತಾವರಣವಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪ್ರಜ್ವಲ್ ಪೆನ್‌ಡ್ರೈವ್‌ಕೇಸ್: ಎಸ್‌ಐಟಿ ಸಹಾಯವಾಣಿಗೆ 30 ಕ್ಕೂ ಹೆಚ್ಚು ಕರೆ!
6.80 ಲಕ್ಷ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸುವುದಕ್ಕೆ ಮುಂದಾದ ದೂರಸಂಪರ್ಕ ಇಲಾಖೆ