ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಎಎಸ್ಐ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಕೃಷ್ಣಾ ಬಡಾವಣೆ ಬಳಿ ತಡರಾತ್ರಿ ನಡೆದಿದೆ.ಹೆಲ್ಮೆಟ್ ಧರಿಸದೇ ಅತಿವೇಗವಾಗಿ ಬೈಕ್ ಚಾಲಾಯಿಸಿ ಹಂಪ್ ಜಿಗಿಸಿದಕ್ಕೆ ಅಪಘಾತ ಸಂಭವಿಸಿದೆ.ಇದೀಗ ಹೆಲ್ಮೆಟ್ ಧರಿಸಿ ಕಡ್ಡಾಯ ಆದೇಶವನ್ನು ನಿರ್ಲಕ್ಷ ವಹಿಸಿದಕ್ಕೆ ದೊಡವಾಡ ಠಾಣೆ ಪಿಎಸ್ಐ ನಂದೀಶ್ರನ್ನು ಅಮಾನತ್ತು ಮಾಡಿ ಅದೇಶಿಸಲಾಗಿದೆ.
ಹೆಲ್ಮೆಟ್ ಧರಿಸದಿದ್ದಕ್ಕೆ ಅಪಘಾತದಲ್ಲಿ ಎಎಸ್ಐ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ, ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಎಂಬ ಆದೇಶ ಸಮರ್ಪಕವಾಗಿ ಅನುಷ್ಠಾನಗೊಳಿಸದೆ ನಿರ್ಲಕ್ಷ ವಹಿಸಿದ್ದರಿಂದ ದೊಡ್ಡವಾಡ ಠಾಣೆ ಪಿಎಸ್ಐ ನಂದೀಶ್ ಅಮಾನತು ಗೊಳಿಸಲಾಗಿದೆ.
ಚುನಾವಣೆ ದೇಣಿಗೆ ಬಗ್ಗೆ ನಿರ್ಮಲ ಸೀತಾರಾಮನ್ ಉತ್ತರ ನೀಡಬೇಕು : ಶಾಸಕ ಪ್ರದೀಪ್ ಈಶ್ವರ್
ಅಪಘಾತದಲ್ಲಿ ಏಎಸ್ಐ ವಿಜಯಕಾಂತ್ (51) ಸಾವನಪ್ಪಿದ್ದಾರೆ. ಬೈಲಹೊಂಗಲ ತಾಲೂಕಿನ ದೊಡ್ಡವಡ ಠಾಣೆ ಎಎಸ್ಐ ಎನ್ನಲಾಗುತ್ತಿದ್ದು, ಎಲ್ಲಾ ಪೊಲೀಸರು ಹೆಲ್ಮೆಟ್ ಕಡ್ಡಾಯಗೊಳಿಸಿದ್ದ ಎಸ್ ಪಿ.ಆದರೆ ಆದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಪಿಎಸ್ಐ ನಂದೀಶ್ ನನ್ನು ಅಮಾನತು ಮಾಡಿ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ್ ಗುಳೇದ್ ಆದೇಶ ಹೊರಡಿಸಿದ್ದಾರೆ.