ಬೆಳಗಾವಿ: ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರು ಚಳಿಗಾಲ ಅಧಿವೇಶನ ಐದನೆ ದಿನಕ್ಕೆ ಕಾಲಿಟಿಟಿದೆ.
ಆದರೂ ಪ್ರತಿಭಟನೆಯ ಕಾವು ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಇಂದು ಕೂಡ ಸರಣಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಕೊಂಡಸಕೊಪ್ಪ, ಬಸ್ತವಾಡ ಬಳಿ 11 ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದ್ದು, 2 ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಲಿವೆ. ಲವ್ ಜಿಹಾದ್ ವಿರುದ್ಧ ವಿಶೇಷ ಪೊಲೀಸ್ ದಳ ಸ್ಥಾಪಿಸಲು ಆಗ್ರಹಿಸಲಿವೆ. ಹಿಂದೂ ಜನ ಜಾಗೃತಿ ಸಮಿತಿ ಗೋವಾದಿಂದ ಪ್ರತಿಭಟನೆ ನಡೆಸಲಿದೆ. ಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಒಂದು ಲಕ್ಷ ಪರಿಹಾರಕ್ಕಾಗಿ ಆಗ್ರಹಿಸಿ ಸ್ವಾಭಿಮಾನಿ ರೈತ ಸಂಘ ಪ್ರತಿಭಟನೆ ನಡೆಸಲಿದ್ದಾರೆ. ವಸತಿ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಹೋರಾಟ ನಡೆಸಲಿದ್ದಾರೆ.