ಬೆಳಗಾವಿ: ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮುದೇನೂರು ಗ್ರಾಮದ ಮತ್ತೋರ್ವ ವೃದ್ದ ಮೃತಪಟ್ಟಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದ ಸರಸ್ವತಿ ನಿಂಗಪ್ಪ (94) ಮೃತಪಟ್ಟಿದ್ದಾನೆ
. ಈ ಮೂಲಕ ಗ್ರಾಮದಲ್ಲಿ ಇಬ್ಬರು ಮೃತಪಟ್ಟಂತಾಗಿದೆ. 4 ದಿನಗಳ ಅಂತರದಲ್ಲಿ 94 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಗ್ರಾಮದಲ್ಲಿ ನಡೆದಿದೆ. ಘಟನೆ ನಡೆದು ಮೂರ್ನಾಲ್ಕು ದಿನಗಳಾದರೂ ಜಿ್ಲ್ಲಾಧಿಕಾರಿ ನಿತೇಶ್ ಸ್ಥಳಕ್ಕೆ ಧಾವಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದಿಂದ 10 ಲಕ್ಷ ಪರಿಹಾರ
ಕಲುಷಿತ ನೀರು ಸೇವಿಸಿ ಮೃತಪಟ್ಟ ಮುದೇನೂರು ಗ್ರಾಮದ ನಿವಾಸಿ ವೃದ್ದ ಶಿವಪ್ಪ (70) ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಿಸಿದೆ. ಕಲುಷಿತ ನೀರು ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶಿವಪ್ಪ ಮೃತಪಟ್ಟಿದ್ದನು.
ಕಲುಷಿತ ನೀರು ಸೇವಿಸಿ 4 ದಿನಗಳ ಅಂತರದಲ್ಲಿ ಕಳೆದ 4 ದಿನಗಳಲ್ಲಿ ಗ್ರಾಮದ 90 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.ಅಸ್ವಸ್ಥಗೊಂಡ 90ಕ್ಕೂ ಹೆಚ್ಚು ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 3 ಮಂದಿಯ ಸ್ಥಿತಿ ಗಂಭೀರವಿದ್ದು, ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಚರಂಡಿ ನೀರು ಮಿಶ್ರಣವಾಗಿತ್ತು. ಇದನ್ನು ತಿಳಿದರೂ ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯವಹಿಸಿದಕ್ಕೆ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. 44 ಪುರುಷರು, 34 ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದ್ದು, ಇದರಲ್ಲಿ 12 ಬಾಲಕರು , 8 ಮಂದಿ ಬಾಲಕಿಯರು ಅಸ್ವಸ್ಥಗೊಂಡಿದ್ದಾರೆ.
ಜೈಲು ಸೇರಿದ್ದ ಸುಂದರ ಇರಾನ್ ಮಹಿಳೆ ಬಿಡುಗಡೆಯಾದ್ಮೇಲೆ ಹೇಗಾದಳು ನೋಡಿ!
BIGG NEWS: KPCC ಯಲ್ಲಿ ಭಿನ್ನಮತ ಸ್ಫೋಟ; ಪುಷ್ಪಾ ಅಮರನಾಥ್ ಕೆಳಗಿಳಿಸುವಂತೆ ಆಗ್ರಹ