ಬೆಳಗಾವಿ: ಜಿಲ್ಲೆಯಲ್ಲಿ ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದೆ. ಈ ವಿಚಾರವಾಗಿಯೇ ಶಿವಸೇನೆಯಿಂದ ಗಡಿಯೊಳಗೆ ನುಗ್ಗುವುದಕ್ಕೆ ಪ್ರಯತ್ನ ಕೂಡ ನಡೆಸಲಾಗಿದೆ. ಈ ಹಿನ್ನಲೆಯಲ್ಲಿ 30ಕ್ಕೂ ಹೆಚ್ಚು ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
BIGG NEWS: ರಾಜ್ಯದಲ್ಲಿ ಸಿದ್ದರಾಮಯ್ಯಗೆ ಯಾವ ಕ್ಷೇತ್ರವೇ ಇಲ್ಲದಂತಾಗಿದೆ; ಕೆ.ಎಸ್.ಈಶ್ವರಪ್ಪ ವ್ಯಂಗ್ಯ
ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ತಾರಕಕ್ಕೇರಿದೆ. ಬೆಳಗಾವಿಗೆ ತೆರಳುವುದಾಗಿ ಹೇಳಿದ್ದಂತ ಮಹಾ ಸಚಿವರು ಬಾರದೇ ಇದ್ದಿದ್ದಕ್ಕೆ ಶಿವಸೇನೆಯಿಂದ ಮಹಾ ಸಚಿವರ ವಿರುದ್ಧವೇ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಮಹಾರಾಷ್ಟ್ರ ಸಚಿವರಾದಂತ ಚಂದ್ರಕಾಂತ್ ಪಾಟೀಲ್, ದೇಸಾಯಿ ವಿರುದ್ಧ ಘೋಷಣೆ ಕೂಗಿ ಶಿವಸೇನೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಬೆಳಗಾವಿ ಗಡಿಯೊಳಗೆ ನುಗ್ಗೋದಕ್ಕೆ ಯತ್ನ ನಡೆಸಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದಂತ ಪೊಲೀಸರು 30ಕ್ಕೂ ಹೆಚ್ಚು ಶಿವಸೇನೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಜೊತೆಗೆ ಬೆಳಗಾವಿ ಗಡಿಯಲ್ಲಿ ಮತ್ತಷ್ಟು ಪೊಲೀಸರ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.