ಬೆಳಗಾವಿ : ಬೆಳಗಾವಿಯಲ್ಲಿ ನೂರಾರು ಮಹಿಳೆಯರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಎಸಲಾಗಿದ್ದು, ಲೂಸ್ ಅಗರಬತ್ತಿ ಪ್ಯಾಕ್ ಮಾಡಲು ಹೇಳಿ ಕೋಟ್ಯಾಂತರ ರೂಪಾಯಿ ಹಣ ವಂಚನೆ ಎಸಲಾಗಿದೆ. ಮಹಿಳ ಗೃಹ ಉದ್ಯೋಗ ಸಮೂಹ ಬೆಳಗಾವಿ ಎಂಬ ಸಂಘದಿಂದ ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದ್ದು, ಮಹಾರಾಷ್ಟ್ರ ಮೂಲದ ಬಾಬಾ ಸಾಹೇಬ್ ಕೊಳೇಕರ ವಿರುದ್ಧ ಆರೋಪ ಕೇಳಿ ಬಂದಿದೆ.
ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದ ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದರು. ಐಡಿ ಕಾರ್ಡ್ ಮಾಡಲು ಮಹಿಳೆಯರಿಂದ 2500 ರೂಪಾಯಿ ವಸೂಲಿ ಮಾಡಲಾಗಿತ್ತು. ಒಂದೊಂದು ಐಡಿ ಕಾರ್ಡಿಗೆ ರೂ.3,000 ನೀಡುತ್ತೇವೆ ಎಂದು ಆಮೀಷ ಒಡ್ಡಿದ್ದರು. 20 ದಿನಕ್ಕೆ ರೂ.3,000 ಹಣ ನೀಡುತ್ತೇವೆ ಎಂದು ನಂಬಿಸಲಾಗಿತ್ತು.ವಂಚಕನ ಮಾತು ನಂಬಿ ಮಹಿಳೆಯರು ಐಡಿ ಕಾರ್ಡ್ ಖರೀದಿಸಿದ್ದರು. ಒಬ್ಬೊಬ್ಬ ಮಹಿಳೆ ತಲಾ 20 ರಿಂದ 30 ಐಡಿ ಕಾರ್ಡ್ ಖರೀದಿ ಮಾಡಿದ್ದರು.
ಸುಮಾರು 12 ಕೋಟಿ ಅಧಿಕವಾಗಿ ಹಣ ಪಡೆದು ಆರೋಪಿ ಪರಾರಿಯಾಗಿದ್ದಾನೆ. ವಂಚನೆ ಬಯಲಾಗುತ್ತಿದ್ದಂತೆ ಮಹಿಳೆಯರು ಡಿಸಿ ಮತ್ತು ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ. ನ್ಯಾಯ ಕುಡಿಸಬೇಕು ಎಂದು ಡಿಸಿ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದು ಬೆಳಗಾವಿಯ ಶಹಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹೇಳಿಕೆ ನೀಡಿದ್ದಾರೆ.








