ಬೆಳಗಾವಿ : ಬಾಲಕಿಯನ್ನು ಚುಡಾಯಿಸಿದ ಯುವಕನಿಗೆ ಬುದ್ದಿಮಾತು ಹೇಳಲು ಹೋದ ನಾಲ್ವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗದಲ್ಲಿ ನಡೆದಿದೆ.
ಸಾದಿಕ ಮಾನಿಯಾರ (17) ಎಂಬಾತ ಹಲ್ಲೆ ಮಾಡಿದ ಕಾಲೇಜು ವಿದ್ಯಾರ್ಥಿ. ಬಾಲಕಿಯನ್ನು ಚುಡಾಯಿಸಿದ್ದ ಬಾಲಕಿಯ ತಂದೆ ಆತನಿಗೆ ಬುದ್ದಿ ಹೇಳಲು ಮೂವರು ತೆರಳಿದ್ದರು. ಈ ವೇಳೆ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ಬಾಲಕಿಯ ತಂದೆ ಮತ್ತು ಅವರ ಜೊತೆಗಿದ್ದ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ.
ಗಾಯಗೊಂಡವರನ್ನು ಬೈಲಹೊಂಗಲ ಮತ್ತು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟಮೆ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS : ಮಣ್ಣಲ್ಲಿ ಮಣ್ಣಾದ ಸ್ಯಾಂಡಲ್ ವುಡ್ ಹಿರಿಯ ನಟ ‘ಲೋಹಿತಾಶ್ವ’ |Actor Lohithasva