ಬೆಳಗಾವಿ : ಕಳೆದ ಒಂದು ವರ್ಷದಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ರಾಜ್ಯದ ಜನರಿಗೆ ಇದೀಗ ಮಳೆರಾಯ ಕೃಪೆ ತೋರಿದ್ದಾನೆ. ಇತ್ತೀಚಿಗೆ ಕೆಲವು ದಿನಗಳಿಂದ ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿದ್ದು ಇದೀಗ ಬೆಳಗಾವಿಯಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಎರಡು ಕಾರು ಹಾಗೂ ಒಂದು ಪಿಕಪ್ ವಾಹನ ಹಳ್ಳದಲ್ಲಿ ಕೊಚ್ಚಿ ಹೋಗಿವೆ.
ಧಾರಾಕಾರ ಮಳೆಯಿಂದ ಏಕಾಏಕಿ ಲಕ್ಷ್ಮಿ ಹಳ್ಳ ತುಂಬಿ ಹರಿದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿರುವ ಲಕ್ಷ್ಮಿ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ನೀರಿನಲ್ಲಿ ಇದೀಗ ಎರಡು ಕಾರು ಹಾಗೂ ಒಂದು ಪಿಕಪ್ ವಾಹನ ಕೊಚ್ಚಿ ಹೋಗಿವೆ.
ಅಲ್ಲದೆ ಸಂಕೇಶ್ವರದ ಲಕ್ಷ್ಮಿ ದೇವಸ್ಥಾನದ ಆವರಣಕ್ಕೂ ನೀರು ನುಗ್ಗಿವೆ.ಲಕ್ಷ್ಮಿ ಹಳ್ಳದ ನೀರು ರಸ್ತೆಗೆ ನುಗಿದ್ದರಿಂದ ವಾಹನ ಸವಾರರು ಪರದಾಟ ನಡೆಸಿದರು. ಅಲ್ಲದೆ ಸ್ಥಳೀಯರು ಹಳ್ಳದ ನೀರು ಮನೆಗಳಿಗೆ ನುಗ್ಗುವ ಆತಂಕದಲ್ಲಿದ್ದಾರೆ.