ಧಾರವಾಡ: ಮೊಬೈಲ್ ಬಳಕೆ ( Mobile User ) ಹೆಚ್ಚಾದಂತೆ, ಅದನ್ನೇ ಬಂಡವಾಳವಾಗಿ ಮಾಡಿಕೊಂಡ ಅನೇಕರ ವಂಚಕರು, ವಿವಿಧ ರೀತಿಯಲ್ಲಿ ವಂಚನೆಗೆ ಇಳಿದಿದ್ದಾರೆ. ಅದರಲ್ಲೂ ನಿಮಗೆ ಅಪರಿಚಿತರಿಗೆ ವೀಡಿಯೋ ಕಾಲ್ ( Video Call ) ಮಾಡೋ ಹುಚ್ಚಿದ್ದರೇ, ಅದಕ್ಕೂ ಮುನ್ನಾ ಅಲರ್ಟ್ ( Scam Alert ) ಆಗೋದಕ್ಕಾಗಿ ಈ ಸುದ್ದಿ ಓದಿ.
ಧಾರವಾಡದ ಸುತ್ತೂರು ನಿವಾಸಿಯಾಗಿದ್ದಂತ ಪ್ರೊಫೇಸರ್ ಒಬ್ಬರು, ಆನ್ ಲೈನ್ ನಲ್ಲಿ ( Online ) ಪರಿಚಿತವಾದಂತ ಗೆಳತಿಯೊಂದಿಗೆ ಸಲುಗೆಗೆ ಇಳಿದಿದ್ದಾರೆ. ಆಕೆ ಕೇಳಿದಳು ಅಂತ ವೀಡಿಯೋ ಕಾಲ್ ಮಾಡಿ, ತನ್ನ ಖಾಸಗಿ ಅಂಗಾಂಗಗಳನ್ನು ತೋರಿಸಿದ್ದಾರೆ.
BIGG NEWS : ಮುರುಘಾಮಠದಲ್ಲಿ ನಾಲ್ಕೂವರೆ ವರ್ಷದ ಮಗು ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಯಾವಾಗ ಪ್ರೊಫೇಸರ್ ಸಾಹೇಬರು ತಮ್ಮ ಖಾಸಗಿ ಅಂಗಾಂಗವನ್ನು ವಾಟ್ಸಾಪ್ ನಲ್ಲಿ ( WhatsApp ) ಪರಿಚಿತ ಅಂಜಲಿ ಶರ್ಮಾ ಎಂಬಾಕೆಗೇ ತೋರಿಸಿದ್ರೋ, ಆ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡಂತ ಆಕೇ, ತನ್ನ ಅಸಲಿ ಆಟವನ್ನು ಶುರುಮಾಡಿದ್ದಾರೆ.
ನಿಮ್ಮ ಖಾಸಗಿ ವೀಡಿಯೋ ತನ್ನ ಬಳಿ ಇದೆ. 3 ಲಕ್ಷ ಹಣ ನೀಡದೇ ಇದ್ದರೇ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚೋದಾಗಿ ಬೆದರಿಕೆ ಹಾಕಿದ್ದಾಳೆ. ಇದಕ್ಕೆ ಪ್ರೊಫೇಸರ್ ಜಗ್ಗದೇ ಇದ್ದಾಗ, ನಾನು ಸೈಬರ್ ಅಧಿಕಾರಿ ಎಂಬುದಾಗಿ ಮತ್ತೊಬ್ಬರಿಂದ ಕರೆ ಮಾಡಿಸಿ, ಅಂಜಲಿ ನನಗೆ ಗೊತ್ತು 5 ಲಕ್ಷ ರೂ ನೀಡಿದ್ರೇ ಎಲ್ಲಾ ಸೆಟಲ್ ಮಾಡೋದಾಗಿ ನಂಬಿಸಿದ್ದಾನೆ.
BIGG NEWS : `BPL’ ಕಾರ್ಡ್ ಹೊಂದಿರುವ `SC-ST’ ಸಮುದಾಯಕ್ಕೆ 75 ಯುನಿಟ್ ಉಚಿತ ವಿದ್ಯುತ್ ನೊಂದಣಿಗೆ ಅರ್ಜಿ ಆಹ್ವಾನ
ಹೀಗೆ ಹಂತ ಹಂತವಾಗಿ ಖಾಸಗಿ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡದೇ ಇರೋದಕ್ಕೆ ಪ್ರೊಫೇಸರ್ ಹತ್ತಿರ ದೋಚಿರೋದು ಮಾತ್ರ ಬರೋಬ್ಬರಿ 21 ಲಕ್ಷವಾಗಿದೆ. ಯಾವಾಗ ವಾಟ್ಸಾಪ್ ಪರಿಚಿತ ವಂಚಕರ ಕಾಟ ಜಾಸ್ತಿ ಆಯ್ತೋ, ಪ್ರೊಫೇಸರ್ ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ವಂಚಕರಿಂದ ತಾನು ಕಳೆದುಕೊಂಡಂತ ಹಣ ಹಿಂದಿರುಗಿಸುವಂತೆ, ಬ್ಲಾಕ್ ಮೇಲ್ ಮಾಡುತ್ತಿರುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.