ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕರ್ನಾಟಕದಲ್ಲಿ ಸೆಕ್ಸ್ ಟಾರ್ಶನ್ (ಲೈಂಗಿಕ ಹಿಂಸೆ/ ಲೈಂಗಿಕ ದೌರ್ಜನ್ಯ/ ಆನ್ಲೈನ್ ಹನಿಟ್ರ್ಯಾಪ್) ಹೆಸರಿನ ವಂಚನೆ ಹೆಚ್ಚಾಗುತ್ತಿದ್ದು, ಟೆಕ್ನಾಲಜಿ ಅಪ್ಟೇಡ್ ಆದಂತೆ ಸೈಬರ್ ಅಪರಾಧಿಗಳು ಹಣ ದೋಚಲು ಒಂದೊಂದು ರೀತಿಯ ಖತರ್ನಾಕ್ ಪ್ಲಾನ್ ಬಹಿರಂಗವಾಗುತ್ತಿದೆ.
ಕಾಂಗ್ರೆಸ್ನಂತೆ ಬಿಜೆಪಿ ಪಕ್ಷವು ಎಂದಿಗೂ ಓಲೈಕೆ ರಾಜಕಾರಣ ಮಾಡಿಲ್ಲ – ಸಚಿವ ಡಾ.ಕೆ.ಸುಧಾಕರ್
ಅನಾಮಿಕ ನಂಬರ್ನಿಂದ ಕರೆ ಮಾಡುವ ವಂಚಕರು ಅಶ್ಲೀಲ ವಿಡಿಯೋ ತೋರಿಸಿ ಅದನ್ನು ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಒಂದೊಮ್ಮೆ ನೀವು ಅಂತಹ ಕರೆಗಳನ್ನು ಸ್ವೀಕರಿಸಿದ್ದೇ ಆದ್ದಲ್ಲಿ ಆನ್ಲೈನ್ ಹನಿಟ್ರ್ಯಾಪ್ಗೆ ಒಳಗಾಗುವುದು ಖಚಿತ.
ನಮ್ಮ ದೇಶದಲ್ಲಿ ಒಂದು ಬಿಲಿಯನ್ಗೂ ಹೆಚ್ಚು ಜನ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿಯು ಸುಮಾರು 700 ಮಿಲಿಯನ್ ಜನ ಸ್ಮಾರ್ಟ್ಫೋನ್ ಬಳಕೆ ಮಾಡುತ್ತಾರೆ. ಆದರೆ ಇಲ್ಲಿ ಮೊಬೈಲ್ ತಂತ್ರಜ್ಞಾನ ಅಪ್ಡೇಟ್ ಆದಂತೆ ಸೈಬರ್ ಅಪರಾಧಿಗಳು ಕೂಡ ಹೆಚ್ಚಾಗುತ್ತಿದ್ದಾರೆ.
ಕಾಂಗ್ರೆಸ್ನಂತೆ ಬಿಜೆಪಿ ಪಕ್ಷವು ಎಂದಿಗೂ ಓಲೈಕೆ ರಾಜಕಾರಣ ಮಾಡಿಲ್ಲ – ಸಚಿವ ಡಾ.ಕೆ.ಸುಧಾಕರ್
ಒದೊಂದು ಐಡಿಯಾಗಳನ್ನು ಬಳಸಿ ಹಣ ಸುಲಿಗೆಗೆ ಇಳಿದಿದ್ದಾರೆ. ಇದೀಗ ಅನಾಮದೇಯ ನಂಬರ್ಗಳಿಂದ ವಿಡಿಯೋ ಕಾಲ್ ಮಾಡಿ ಸೆಕ್ಸ್ ಟಾರ್ಶನ್ ಮಾಡುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಸಹ ಈ ಹನಿಟ್ರ್ಯಾಪ್ ಬಲೆಯಲ್ಲಿ ಸಿಲುಕಿದ್ದರು. ಸಾಮಾಜಿಕ ಜಾಲತಾಣ ವಾಟ್ಸಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಮೂಲಕ ವಿಡಿಯೋ ಕಾಲ್ ಮಾಡುವ ಅಪರಿಚಿತರು ಹನಿಟ್ರ್ಯಾಪ್ ನಡೆಸುತ್ತಿದ್ದಾರೆ. ಹೆಚ್ಟಿನ ಜನ ಮರ್ಯಾದೆಗೆ ಅಂಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹಿಂದೇಟು ಹಾಕುತ್ತಾರೆ.
ಸೆಕ್ಸ್ ಟಾರ್ಶನ್ ಹೇಗೆ ನಡೆಸಲಾಗುತ್ತದೆ?
ವಿಡಿಯೋ ಕಾಲ್ ರಿಸೀವ್ ಆದ ತಕ್ಷಣ ಸಂಪೂರ್ಣ ಕರೆಯನ್ನು ರೆಕಾರ್ಡ್ ಮಾಡಿಕೊಳ್ಳಲು ಆರಂಭಿಸುತ್ತಾರೆ.
ಕ್ಯಾಮಾರದ ಮುಂದೆ ಪ್ರೀ ರೆಕಾರ್ಡೆಡ್ ಅಶ್ಲೀಲ ವಿಡಿಯೋ ತೋರಿಸಿ ಬಲೆ ಹಾಕುತ್ತಾರೆ.
ಕಾಲ್ ಕಟ್ ಮಾಡಿದ ಬಳಿಕ ರೆಕಾರ್ಡ್ ಮಾಡಿದ ವಿಡಿಯೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಾರೆ.
ಕಾಂಟ್ಯಾಕ್ಟ್ ನಂಬರ್ಗಳ ಡಾಟ ಇದೆ ಹಣ ನೀಡದಿದ್ದರೆ ವಿಡಿಯೋವನ್ನು ಎಲ್ಲರಿಗೂ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ.
ಐದು ಸಾವಿರಕ್ಕಿಂತ ಕಡಿಮೆ ಮೊತ್ತ ಕಳುಹಿಸುವಂತೆ ಪ್ರಾರಂಭದಲ್ಲಿ ಡಿಮ್ಯಾಂಡ್ ಇಡುತ್ತಾರೆ.
ಕಾಂಗ್ರೆಸ್ನಂತೆ ಬಿಜೆಪಿ ಪಕ್ಷವು ಎಂದಿಗೂ ಓಲೈಕೆ ರಾಜಕಾರಣ ಮಾಡಿಲ್ಲ – ಸಚಿವ ಡಾ.ಕೆ.ಸುಧಾಕರ್
ಹಣ ವರ್ಗಾವಣೆ ಮಾಡುತ್ತಾರೆ ಎಂದು ಗೊತ್ತಾದರೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಡುತ್ತಾರೆ.
ಯಾವುದೇ ಕರೆ ಬಂದಾಗಲು ಅದು ವಾಯ್ಸ್ ಅಥವಾ ವಿಡಿಯೋ ಕರೆಯಾ ಎಂದು ಕನ್ಫರ್ಮ್ ಮಾಡಿಕೊಳ್ಳಬೇಕು. ಮುನ್ನೆಚ್ಚರಿಕೆಯಾಗಿ ಫ್ರಂಟ್ ಕ್ಯಾಮಾರಕ್ಕೆ ಸ್ಲೈಡಿಂಗ್ ಕವರ್ ಹಾಕಿಕೊಳ್ಳಬೇಕು. ಸದ್ಯ ಈ ರೀತಿಯ ಸೆಕ್ಸ್ ಟಾರ್ಶನ್ ರಾಜ್ಯದಲ್ಲಿ ಹೆಚ್ಚಾಗುತಿದ್ದು ಜನ ಎಚ್ಚರಿಕೆಯಿಂದಿರಬೇಕಾದ ಅಗತ್ಯವಿದೆ.