ಬೆಂಗಳೂರು : ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಬ್ಯಾನರ್ ಫ್ಲಾಕ್ಸ್ ಅಳವಡಿಕೆಗೆ ಎಷ್ಟೇ ಕಠಿಣ ಕ್ರಮ ತೆಗೆದುಕೊಂಡರು ಕೂಡ ಹಲವು ರಾಜಕಾರಣಿಗಳು ಬೆಂಗಳೂರು ನಗರದಲ್ಲಿ ನಿಯಮ ಉಲ್ಲಂಘಿಸಿ ಬ್ಯಾನರ್ ಗಳನ್ನು ಅಳವಡಿಸುತ್ತಾರೆ.
ಆದರೆ ಇದೀಗ ಅದಕ್ಕೇಲ್ಲಕ್ಕೂ ಬಿಬಿಎಂಪಿ ಬ್ರೇಕ್ ಹಾಕಿದ್ದು, ನಗರದಲ್ಲಿ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್ ಹಾಕುವುದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿಷೇಧಿಸಿದೆ. ಆದರೂ ಕೂಡ ನಮ್ಮ ಕಣ್ಣು ತಪ್ಪಿಸಿ ಅಕ್ರಮವಾಗಿ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್ ಹಾಕಿದರೇ, ಆ ಸ್ಥಳ ಮತ್ತು ಜಾಹಿರಾತು ಫೋಟೋ ತೆಗೆದು ನಮಗೆ ಕಳುಹಿಸಿ ಎಂದು ಬಿಬಿಎಂಪಿ 94806 85700 ವಾಟ್ಸಪ್ ಸಂಖ್ಯೆ ನೀಡಿದೆ.
ಹೌದು ಅನಧಿಕೃತವಾಗಿ ಬ್ಯಾನರ್‌ಗಳನ್ನು ಹಾಕಿ ಸಾರ್ವಜನಿಕ ಸೌಂದರ್ಯಕ್ಕೆ ದಕ್ಕೆ ತರುವುದು ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಇಂತಹ ಅನಧಿಕೃತ ಪೋಸ್ಟರ್ ಅಥವಾ ಬ್ಯಾನರ್‌ಗಳನ್ನು ಹಾಕಿದರೆ ಎಫ್‌ಐಆರ್ ದಾಖಲಿಸಲಾಗುತ್ತದೆ. ಅಕ್ರಮ ಬ್ಯಾನರ್ಗಳ ಬಗ್ಗೆ ದೂರುಗಳನ್ನು ನೀಡಲು ಬಿಬಿಎಂಪಿಯ 94806 85700 ಸಂಖ್ಯೆಗೆ ವಾಟ್ಸಾಪ್ ಮಾಡಬಹುದು ಎಂದಿದೆ.
ಮಳೆಯಿಂದ ಬಿದ್ದ ಮರಗಳ ತೆರವಿಗೆ ತಂಡ ರಚನೆ
ಇನ್ನು ಮಳೆಯಿಂದ ಬಿದ್ದ ಮರಗಳ ತೆರವಿಗೆ ಇದೀಗ ಬಿಬಿಎಂಪಿ ತಂಡ ರಚಿಸಿದೆ. 28 ವಿಧಾನಸಭಾ ಕ್ಷೇತ್ರಗಳಲ್ಲಿ 28 ಮರ ಕಟಾವು ತಂಡ ಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ 11 ತಂಡಗಳನ್ನು ಬಿಬಿಎಂಪಿ ಸಜ್ಜುಗೊಳಿಸಿದೆ.ಪ್ರತಿ ತಂಡದಲ್ಲಿ 7 ಕಾರ್ಮಿಕರು ಓರ್ವ ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ.ಈ ಸಲ 5 ಬೈಕ್ ತಂಡಗಳನ್ನು ಸಹ ಬಿಬಿಎಂಪಿ ನಿಯೋಜಿಸಿದೆ. ಮರ ತೆರು ಬಳಿಕ ಸ್ಟಾಕ್ ಮಾಡಲು 8 ಡಂಪಿಂಗ್ ಯಾರ್ಡ್ ನಿರ್ಮಾಣ ಮಾಡಲಾಗಿದೆ.ಬಿಬಿಎಂಪಿಯ ಅರಣ್ಯ ವಿಭಾಗದಿಂದ ಮರಗಳ ತೆರವಿನ ಮೇಲ್ ವಿಚಾರಣೆ ನಡೆಯಲಿದೆ ಮೇ 6 ರಿಂದ ನಿನ್ನೆಯವರೆಗೆ 271 ಮರ ಹಾಗೂ 483 ರೆಂಬೆಗಳನ್ನು ತೆರವು ಮಾಡಲಾಗಿದೆ.