ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇಂದು ಸಹ ಮುಂದುವರೆದಿದೆ. ಮಹದೇವಪುರ ಮತ್ತು ದಾಸರಹಳ್ಳಿಯಲ್ಲಿ ಕಾರ್ಯಾಚರಣೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
BIGG NEWS: ಬೆಂಗಳೂರಿನಲ್ಲಿ ರಾಜಕಾಲುವೆ ತೆರವು ವಿಚಾರ; ಬಿಬಿಎಂಪಿಗೆ ವರದಿ ಕೇಳಿದ ಹೈಕೋರ್ಟ್
ಎಪ್ಸಿಲಾನ್ ಒತ್ತುವರಿ ತೆರವಿನ ಬಗ್ಗೆ ಬಿಬಿಎಂಪಿಗೆ ಸ್ಪಷ್ಟತೆ ಇಲ್ಲ. ಎಪ್ಸಿಲಾನ್ ವಿಲ್ಲಾ ಹಾದು ಹೋಗುವ ಜಾಗ ಬಿಟ್ಟು ಪಕ್ಕದಲ್ಲಿ ಖಾಲಿ ಸೈಟ್ ಬಳಿ ಬಿಬಿಎಂಪಿ ಅಧಿಕಾರಿಗಳು ಮಾರ್ಕಿಂಗ್ ಮಾಡಿದ್ದಾರೆ. ಸಾರ್ವಜನಿಕರ ಆಕ್ರೋಶದ ಬಳಿಕ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇದೀಗ ಅಧಿಕಾರಿಗಳು ಮ್ಯಾಪ್ ಚೆಕ್ ಮಾಡುತ್ತಿದ್ದಾರೆ. ಭೂಮಾಪಕರನ್ನು ಕರೆಸಿ ಮತ್ತೆ ಪರಿಶೀಲನೆ ಮಾಡುತ್ತಿದ್ದಾರೆ.