ಬೆಂಗಳೂರು: ಬಿಬಿಎಂಪಿ ಅಡಿಯಲ್ಲಿ ಇರುವ ಬೆಂಗಳೂರು ಹವಾಮಾನ ಕ್ರಿಯಾ ಕೋಶದ ವತಿಯಿಂದ ಬ್ಲೂಗ್ರೀನ್ ಪ್ರಶಸ್ತಿ(BluGreen Awards)ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತರು ಹಾಗೂ ಹವಾಮಾನ ಕ್ರಿಯಾ ಕೋಶದ ಮುಖ್ಯಸ್ಥರಾದ ಶ್ರೀಮತಿ ಪ್ರೀತಿ ಗೆಹ್ಲೋಟ್ ರವರು ತಿಳಿಸಿದರು.
ಬೆಂಗಳೂರನ್ನು ಹೆಚ್ಚು ಹಸಿರೀಕರಣ, ಪರಿಸರ ಸ್ನೇಹಿ ನಗರವನ್ನಾಗಿ ಮಡುವ, ಹಾವಾಮಾನ ಉಪ ಕ್ರಮದಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳು, ಸಮುದಾಯಗಳು, ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.
ನೀವು ಬೆಂಗಳೂರಲ್ಲಿ ಹವಾಮಾನ ಬದಲಾವಣೆಗಾಗಿ ನವೀನ ಪರಿಹಾರ ಜಾರಿಗೊಳಿಸುತ್ತಿದ್ದೀರಾ.? ಇಲ್ಲಿದೆ ಪ್ರಶಸ್ತಿ ಪಡೆಯಲು ಅವಕಾಶ
ಹವಾಮಾನ ಬದಲಾವಣೆಯನ್ನು ಎದುರಿಸಲು ನೀವು ನವೀನ ಪರಿಹಾರಗಳನ್ನು ಜಾರಿಗೊಳಿಸುತ್ತಿದ್ದೀರಾ?, ನೀವು ಸಮರ್ಥನೀಯತೆಯಲ್ಲಿ ಪರಿಣಾಮಕಾರಿ ಅಭ್ಯಾಸಗಳನ್ನು ಮುನ್ನಡೆಸುತ್ತಿದ್ದೀರಾ ? ಹೌದು ಎಂದಾದರೆ, ಗುರುತಿಸಿಕೊಳ್ಳಲು ಇದು ನಿಮ್ಮ ಸದಾವಕಾಶ.
ಬ್ಲೂಗ್ರೀನ್ ಪ್ರಶಸ್ತಿಗಳು ಬೆಂಗಳೂರಿನ ಹವಾಮಾನ ಕ್ರಮದ ಗುರಿಗಳನ್ನು ಮುನ್ನಡೆಸುವವರಿಗೆ ಸ್ಪೂರ್ತಿ ಮತ್ತು ಗೌರವವನ್ನು ನೀಡುವ ಗುರಿಯನ್ನು ಹೊಂದಿವೆ. ಯಶಸ್ಸಿನ ಕಥೆಗಳನ್ನು ಪ್ರದರ್ಶಿಸುವ ಮೂಲಕ, ಈ ಪ್ರಶಸ್ತಿಗಳು ಹಸಿರು ಮತ್ತು ಹೆಚ್ಚು ಸಮರ್ಥನೀಯ ಭವಿಷ್ಯಕ್ಕಾಗಿ ಸಾಮೂಹಿಕ ಪ್ರಯತ್ನಗಳನ್ನು ಉತ್ತೇಜಿಸಲು ಬಯಸುತ್ತವೆ.
ಪ್ರಮುಖ ಅಂಶಗಳು:
● ಅರ್ಹತೆ: ವ್ಯಕ್ತಿಗಳು, ಸಮುದಾಯಗಳು, ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಹವಾಮಾನ ಕ್ರಿಯೆಯನ್ನು ಬೆಂಬಲಿಸುವ ಇತರೆ ಮಧ್ಯಸ್ಥಗಾರರು.
● ಅರ್ಜಿ ಸಲ್ಲಿಸುವ ಕೊನೆ ದಿನಾಂಕ: 30ನೇ ಜನವರಿ 2025.
ಅರ್ಜಿ ಸಲ್ಲಿಸುವ ವಿಧಾನ:
● ಅರ್ಜಿ ಪಡೆಯುವ ಲಿಂಕ್: http://bit.ly/BGAwardsApply
● ವಿವರವಾದ ಮಾಹಿತಿ ಪಡೆಯುವ ಲಿಂಕ್: http://bit.ly/BGAwardsBrochure
ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು.
ಈ ತುಂಬಿದ ಅರ್ಜಿಯನ್ನು friendsofclimateactioncell@gmail.com ಮತ್ತು fellowsbcacbbmp@gmail.com ಗೆ ಇಮೇಲ್ ಮಾಡಬೇಕು.
BIG NEWS: 2025ರ ಕರ್ನಾಟಕ ‘SSLC ಪರೀಕ್ಷೆ’ಯ ಮಾದರಿ ಪ್ರಶ್ನೆಪತ್ರಿಕೆ ಪ್ರಕಟ: ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಿ
ಬಾಹ್ಯಾಕಾಶದಿಂದ ಸ್ಮಾರ್ಟ್ ಫೋನ್ ಮೂಲಕ ‘ಧ್ವನಿ ಕರೆ’ ಸಕ್ರಿಯಕ್ಕೆ ಇಸ್ರೋದಿಂದ ‘ಯುಎಸ್ ಉಪಗ್ರಹ’ ಉಡಾವಣೆ