ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ನಿಯಮಿತದ ವತಿಯಿಂದ 111ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಹ ಕಾರ್ಯಕ್ರಮ.
ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ಸ್ನೇಹಲ್ ಆರ್ ಮತ್ತು ಹಿರಿಯ ಚಲನಚಿತ್ರ ನಟ ಶ್ರೀನಾಥ್, ಹಿರಿಯ ಚಲನಚಿತ್ರ ನಟಿ ವಿನಯ ಪ್ರಸಾದ್, ಆಡಳಿತ ಮಂಡಳಿ ಅಧ್ಯಕ್ಷರಾದ ಎ. ಅಮೃತ್‌ರಾಜ್ ರವರು, ಉಪಾಧ್ಯಕ್ಷರಾದ ರವಿ ಕೆ.ಜಿ ಅವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಪ್ರಣಯರಾಜ ನಟ ಶ್ರೀನಾಥ್ ರವರು ಮಾತನಾಡಿ ನಮ್ಮ ನೀತಿ ಬದುಕು ಆದರ್ಶವಾಗಿರಬೇಕು. ವಿಶ್ವಾಸ ಪ್ರೀತಿ ಬೆಳಸಿಕೊಳ್ಳಬೇಕು. ಯುವ ಸಮುದಾಯ ಒಂದೇ ಗುರಿ ಇಟ್ಟುಕೊಳ್ಳಿ, ಏನಾಗಬೇಕು ಎಂದು ನಿರ್ಧಾರ ಮಾಡಿದರೆ ಯಶ್ವಸಿಯಾಗಲು ಸಾಧ್ಯ. ನಾನು ಶಾಲೆಯಲ್ಲಿ ಶೇಕಡ 90ರಷ್ಟು ಗೈರುಹಾಜರಿಯಾಗಿದ್ದೆ, ನಾನು ಶಿಕ್ಷಣ ಪಡೆದಿದ್ದರೆ ಉನ್ನತ ಅಧಿಕಾರಿಯಾಗಬಹುದಿತ್ತು. ಮಕ್ಕಳು ಗಮನಿಸಬೇಕು ತಂದೆ, ತಾಯಿ ನಿಮ್ಮ ಮೇಲೆ ಬಹಳ ಆಸೆಯಿಟ್ಟುಕೊಂಡಿರುತ್ತಾರೆ ಅದನ್ನ ಪೂರ್ಣಗೊಳಿಸಿ, ಜೀವನದಲ್ಲಿ ಮುಂದೆ ಬನ್ನಿ ಎಂದು ಹೇಳಿದರು.
ನಟಿ ವಿನಯ ಪ್ರಸಾದ್ ಮಾತನಾಡಿ ಎಲ್ಲದಕ್ಕೂ ಪ್ರಚಾರ ಸಿಗುವ ಕಾಲವಾಗಿದೆ. ನನ್ನ ಕೆಲಸ ಮುಖ್ಯ ಎಂದು ಶ್ರದ್ದೆ ಭಕ್ತಿಯಿಂದ ಕೆಲಸ ಮಾಡಿದರೆ ಸಾಕು ಅಧಿಕಾರ ಕೀರ್ತಿ ತಾನಗೆ ಹುಡುಕಿಕೊಂಡು ಬರುತ್ತದೆ. ಗುರಿಯಿಟ್ಟುಕೊಂಡು ಕೆಲಸ ಮಾಡಬೇಕು, ಇಂದಿನ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡವಿದೆ, ಅದರೆ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಒತ್ತಡವಾಗಲಿ, ಶಿಕ್ಷೆ ಕೊಡಲು ಬರುವುದಿಲ್ಲ ಇಂದಿನ ದಿನಗಳಲ್ಲಿ. ಗುರು, ಹಿರಿಯರು ಮತ್ತು ತಂದೆ,ತಾಯಿಯ ಮಾತನ್ನು ವಿದ್ಯಾರ್ಥಿಗಳು ಹೇಳಬೇಕು. ಯುವಕ, ಯುವತಿಯರಿಗೆ ಶಿಕ್ಷಣದ ಜೊತೆಯಲ್ಲಿ ವಿಧೇಯತೆ ಬೆಳಸಿಕೊಳ್ಳಿ, ಸೌಹರ್ದತೆಯಿಂದ ಎಲ್ಲರು ಬದುಕು ಸಾಗಿಸಬೇಕು ಎಂದು ಹೇಳಿದರು.
ಎ.ಅಮೃತ್ ರಾಜ್ ಅವರು ಮಾತನಾಡಿ ಬಿಬಿಎಂಪಿಯಲ್ಲಿ ಅಧಿಕಾರಿ ಮತ್ತು ನೌಕರರ ಮಕ್ಕಳು ಐ.ಎ.ಎಸ್.ಮತ್ತು ಇಂಜನಿಯರ್, ವೈದ್ಯರು, ಸಮಾಜದ ಉನ್ನತಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ .ಈ ಸಾಧನೆಗೆಲ್ಲ ಕಾರಣ ಬಿಬಿಎಂಪಿ ಎಂದು ಹೇಳಬಹುದು. ಒಂದು ಸಂಘ 111ವರ್ಷವಾಗಿದೆ ಎಂದರೆ ಇದರೆ ಹಿಂದೆ ಹಲವಾರು ಮಹನೀಯರುಗಳು ಶ್ರಮವಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸಿ, ಸನ್ಮಾನಿಸುವ ಮೂಲಕ ಅವರು ಇನ್ನು ಹೆಚ್ಚು ಉತ್ತಮ ಸ್ಥಾನಗಳಿಸಲಿ ಎಂದು ಪ್ರೋತ್ಸಹಿಸುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಹಾಗೂ ಮಾಸ್ಟರ್ ಪದವಿಯಲ್ಲಿ ಪ್ರತಿಭಾವಂತ 172 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಭಾಗ್ಯಶ್ರೀ ಗೌಡರವರಿಂದ ಸಂಗೀತ ಸಂಜೆ ಮತ್ತು ಮಿಮಿಕ್ರಿ ಗೋಪಿರವರಿಂದ ಹಾಸ್ಯಸಂಜೆ ಹಾಗೂ ಶುಭಲಕ್ಷ್ಮಿರವರಿಂದ ಸ್ಯಾಕ್ಸ್ ಪೋನ್ ವಾದನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗೌರವ ಸಲಹೆಗಾರರಾದ ಸಾಯಿಶಂಕರ್, ಎ.ಜೆ.ಬಾಬಣ್ಣ, ಸಮಿತಿ ಸದಸ್ಯರುಗಳಾದ ಗಂಗಾಧರ್ (ಲಾಲಿ), ವಿನಯ್‌ಕುಮಾರ್ ಕೆ.ಎನ್. ಮಹೇಶ್ ಎಂ., ಹರೀಶ್ ಕುಮಾರ್ ಎನ್.ಸಿ.ಎಂ. ಮುನಿರಾಜು ಮಂಜುನಾಥ್ ಎಲ್.ಆರ್, ಆರ್.ಪಿ. ವಾಣಿ, ಅಕ್ಕಮಹಾದೇವಿ ಎನ್., ಮಹಾದೇವಿ ಸಂಗಪ್ಪಗಾಣಿಗೇರ, ರಾಜಶೇಖರ್ ಡಿ., ಮಂಜುನಾಥ್ ಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇಂದು KSRTC ಕೇಂದ್ರ ಕಚೇರಿಗೆ ಆಂಧ್ರಪ್ರದೇಶದ ಸಚಿವರ ದಂಡೇ ಭೇಟಿ: ‘ಶಕ್ತಿ ಯೋಜನೆ’ ಬಗ್ಗೆ ಮಾಹಿತಿ ಪಡೆ ಟೀಂ
BREAKING : ರಾಮನಗರದಲ್ಲಿ ಭೀಕರ ಕೊಲೆ : ‘ನ್ಯೂ ಇಯರ್’ ಪಾರ್ಟಿ ವೇಳೆ ವ್ಯಕ್ತಿಯನ್ನು ಕೊಂದು ಬಾವಿಗೆ ಎಸೆದ ದುರುಳರು!