ಬೆಂಗಳೂರು: ರಾಜ್ಯ ಸರ್ಕಾರದಿಂದ ಆಗಸ್ಟ್ 3ರಂದು ಬಿಬಿಎಂಪಿ ಚುನಾವಣೆ ( BBMP Election ) ಸಂಬಂಧ ಮಿಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ಪಟ್ಟಿ ಬಿಜೆಪಿ ನಾಯಕರಿಗೆ ಅನುಕೂಲ, ವಿಪಕ್ಷಗಳಿಗೆ ಅನಾನುಕೂಲ ಮಾಡುವಂತಿದೆ ಎಂಬುದಾಗಿ ರಾಜಕೀಯ ನಾಯಕರು ಕಿಡಿಕಾರಿದ್ದವು. ಈ ನಡುವೆ ಪರಿಷ್ಕರಣೆಗೆ ಇಳಿದಿದ್ದರೂ, ಅಂತಿಮವಾಗಿ ಆಗಸ್ಟ್ 3ರ ಪಟ್ಟಿಯನ್ನೇ ಯಥಾವತ್ ಉಳಿಸಿಕೊಂಡು, ಬಿಬಿಎಂಪಿ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿದೆ.
ರಾಜ್ಯ ಸರ್ಕಾರವು ಈ ಹಿಂದೆ ಪ್ರಕಟಿಸಿದ್ದಂತ ಬಿಬಿಎಂಪಿಯ ಕರಡು ಪಟ್ಟಿಯನ್ನು ಯಥಾವತ್ತಾಗಿ ಉಳಿಸಿಕೊಂಡಿದ್ದು, ಮಂಗಳವಾರ ಈ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಅದರಂತೆ ರಾಜ್ಯ ಸರ್ಕಾರವು 243 ವಾರ್ಡ್ ಗಳ ಮೀಸಲಾತಿಯನ್ನು ಅಂತಿಮಗೊಳಿಸಿದೆ.
BIG NEWS: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಹಿಂದಿನ ಸ್ಪೋಟಕ ರಹಸ್ಯ ಬಯಲು
ಅಂದಹಾಗೇ ಸರ್ಕಾರ ಬಿಬಿಎಂಪಿ 243 ವಾರ್ಡ್ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿದ ನಂತ್ರ, ಆಕ್ಷೇಪಣೆಗೆ ಅವಕಾಶ ಸಲ್ಲಿಸಲಾಗಿತ್ತು. ಈ ಎಲ್ಲಾ ಆಕ್ಷೇಪಣೆಯನ್ನು ಪರಿಶೀಲಿಸಿದ ನಂತ್ರ, ಬಿಬಿಎಂಪಿ ವಾರ್ಡ್ ಮೀಸಲು ಪಟ್ಟಿಯನ್ನು ಫೈನಲ್ ಗೊಳಿಸಿದೆ.
ಜನತೆಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ಅಮುಲ್, ಮದರ್ ಡೈರಿ ಹಾಲಿನ ದರ 2 ರೂ ಹೆಚ್ಚಳ | Milk Price Hike
ಈ ನಡುವೆ ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆ ಸಂಬಂಧ ಸಲ್ಲಿಸಲಾಗಿದ್ದಂತ ಅರ್ಜಿಗಳ ಕುರಿತಂತೆ ನಿನ್ನೆ ಹೈಕೋರ್ಟ್ ಮಧ್ಯಂತರ ಆದೇಶ ಅಥವಾ ಮೌಖಿಕ ಸೂಚನೆ ನೀಡಲು ನಿರಾಕರಿಸಿತ್ತು. ಕೆಲ ವಾದ ಆಲಿಸಿದ್ದಂತ ನ್ಯಾಯಪೀಠವು, ವಿಚಾರಣೆಯನ್ನು ಇಂದು ಮಧ್ಯಾಹ್ನ 2.30ಕ್ಕೆ ಮುಂದೂಡಿತ್ತು. ಹೀಗಾಗಿ ಇಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು, ಎಲ್ಲರ ಚಿತ್ತ ನ್ಯಾಯಾಲಯದತ್ತ ನೆಟ್ಟಿದೆ.