ಕತಾರ್: ಇಲ್ಲಿ ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತಾಗಿದೆ. ಯಾವುದೋ ಒಂದು ನಾಯಿ ಮಗುವನ್ನು ಕಚ್ಚಿತು ಎಂಬ ಕಾರಣಕ್ಕೆ ಸುಮಾರು 29 ನಾಯಿಗಳನ್ನು ಕೊಂದಿದ್ದು, ಇನ್ನಿತರ ನಾಯಿಗಳನ್ನೂ ಗಾಯಗೊಳಿಸಿರುವ ಆಘಾತಕಾರಿ ಘಟನೆ ಕತಾರ್ನಲ್ಲಿ ನಡೆದಿದೆ.
ಕತಾರ್ನ ದೋಹಾದಲ್ಲಿ ವಾಸಿಸುವ ವ್ಯಕ್ತಿಯ ಮಗನ ಮೇಲೆ ನಾಯಿ ದಾಳಿ ಮಾಡಿ ಗಾಯಗೊಳಿಸಿದೆ. ನಂತರ ಎಲ್ಲಾ ನಾಯಿಗಳು ಹತ್ತಿರದ ಆರೈಕೆ ಕೇಂದ್ರಕ್ಕೆ ಪ್ರವೇಶಿಸಿದವು. ಅಷ್ಟರಲ್ಲಿ ಆಯುಧಗಳೊಂದಿಗೆ ಕೇಂದ್ರದೊಳಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ತಮ್ಮ ಆಯುಧಗಳಿಂದ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ, ನುಗ್ಗಿ ಅಲ್ಲಿದ್ದ ನಾಯಿಗಳಿಗೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ 29 ಬೀದಿ ನಾಯಿಗಳು ಸಾವನ್ನಪ್ಪಿದ್ದು, ಇತರೆ ನಾಯಿಗಳು ಗಂಭೀರವಾಗಿ ಗಾಯಗೊಂಡಿವೆ.
ವಾಸ್ತವವಾಗಿ ಇದು ನಾಯಿ ಆರೈಕೆ ಕೇಂದ್ರವಾಗಿದೆ. ಅಲ್ಲಿ ವಾಸಿಸುವ ಶ್ವಾನಗಳು ಯಾರಿಗೂ ತೊಂದರೆ ಕೊಡುವುದಿಲ್ಲ, ತುಂಬಾ ಸ್ನೇಹಮಯಿಯಾಗಿದ್ದು, ಎಲ್ಲರಿಗೂ ಇಷ್ಟವಾಗುತ್ತಿವೆ ಎಂದು ನೆಟ್ಟಿಗರು ಹಾಗೂ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹೃದಯವಿದ್ರಾವಕ ಘಟನೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಆಗ್ರಹಿಸಿದ್ದಾರೆ. ಕತಾರ್ನ ಗಲ್ಫ್ ಪ್ರದೇಶದಲ್ಲಿ, ಸಾಮಾನ್ಯ ಜನರು ಶಸ್ತ್ರಾಸ್ತ್ರಗಳನ್ನು ಹೊಂದುವ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ. ನೀವು ಮನೆಯಲ್ಲಿ ಬಂದೂಕುಗಳನ್ನು ಇಟ್ಟುಕೊಂಡು ಅವುಗಳನ್ನು ಬಳಸುತ್ತೀರಾ? ಇದು ಸುರಕ್ಷಿತ ದೇಶವೇ? ಎಂದು ಹಲವರು ತೀವ್ರವಾಗಿ ಟೀಕಿಸುತ್ತಿದ್ದಾರೆ.
BIGG NEWS: ಕೇರಳದಲ್ಲಿ ಮಂಕಿಪಾಕ್ಸ್ ಪತ್ತೆ: ಮಂಗಳೂರು ಏರ್ ಪೋರ್ಟ್ನಲ್ಲಿ ಹೈ ಅಲರ್ಟ್