ಬೆಂಗಳೂರು: ನಗರದಲ್ಲಿ ಸತತ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ( Bengaluru Rain ) ಬೆಸ್ಕಾಂನ ( BESCOM ) ಒಂದು ವಿದ್ಯುತ್ ಸ್ಟೇಷನ್ ನೀರಿನಲ್ಲಿ ಮುಳುಗಡೆಯಾಗಿದ್ದು, ಹೊರ ವರ್ತಲು ರಸ್ತೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಿದೆ.
ಭಾರೀ ಮಳೆಗೆ ಕಾಡುಬೀಸನಹಳ್ಳಿಯಲ್ಲಿರುವ ಪವರ್ ಸ್ಟೇಷನ್ ಗೆ ( Power Station ) ನೀರು ನುಗ್ಗಿದ್ದು, ಸುತ್ತಲ್ಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಜತೆಗೆ ಎರಡು ವಿದ್ಯುತ್ ಪರಿವರ್ತಕಗಳು ಮಳೆಗೆ ಹಾನಿಗೊಳಗಾಗಿರುವ ವರದಿಯಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
BIG NEWS: ಬೆಂಗಳೂರಿನಲ್ಲಿ ‘ಬೆಸ್ಕಾಂ ನಿರ್ಲಕ್ಷ್ಯ’ದಿಂದ ಯುವತಿ ಮೃತಪಟ್ಟಿಲ್ಲ – BESCOM ಸ್ಪಷ್ಟನೆ
ಕಾಡುಬೀಸನಹಳ್ಳಿಯಲ್ಲಿರುವ ಪವರ್ ಸ್ಟೇಷನ್ ಗೆ ನೀರು ನುಗ್ಗಿದ್ದು , ಬೇರೆ ವಿದ್ಯುತ್ ಕೇಂದ್ರಗಳಿಂದ ಪರ್ಯಾಯ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸ್ಟೇಷನ್ ಸಮೀಪವಿರುವ ಬೆಂಗಳೂರು ನೀರು ಸರಬರಾಜು ಮಂಡಳಿಯ ಕೊಳಚೆ ನೀರು ಶುದ್ದೀಕರಣ ಘಟಕದ ನೀರು ಉಕ್ಕಿ ಹರಿದ ಪರಿಣಾಮ ಬೆಸ್ಕಾಂ ಪವರ್ ಸ್ಟೇಷನ್ ಗೆ ನೀರು ನುಗ್ಗಿತ್ತು ಎಂದು ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ (ಗ್ರಾಹಕ ಸಂಬಂಧ ) ಎಸ್. ಆರ್. ನಾಗರಾಜ ತಿಳಿಸಿದ್ದಾರೆ.
ಜಯದೇವ ಪವರ್ ಸ್ಟೇಷನ್ ಮತ್ತು ಹೊಸಕೋಟೆ ಕೈಗಾರಿಕಾ ಪ್ರದೇಶದಲ್ಲಿರುವ ಟ್ರಾನ್ಸ್ ಫಾರ್ಮರ್ ಟ್ರಿಪ್ ಆದ ಪರಿಣಾಮ ಹೊಸಕೋಟೆ ಪ್ರದೇಶದಲ್ಲಿ ಸುಮಾರು 8 ರಿಂದ 10 ತಾಸು ವಿದ್ಯುತ್ ವ್ಯತ್ಯಯ ಉಂಟಾಗಿತ್ತು ಎಂದು ತಿಳಿಸಿದ್ದಾರೆ.
ಗದಗದಲ್ಲಿ ಹಳ್ಳದಾಟುತ್ತಿದ್ದ ವೇಳೆ ಕೊಟ್ಟಿಹೋದ ಆಟೋ: ಪವಾಡಸಾದೃಶ್ಯ ರೀತಿಯಲ್ಲಿ ನಾಲ್ವರು ಪಾರು
ವಿದ್ಯುತ್ ಮೂಲಭೂತ ಸೌಕರ್ಯ ಹಾನಿ ವಿವರ
ಆಗಸ್ಟ್ ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಈ ಅವಧಿಯಲ್ಲಿ ಒಟ್ಟು 1823 ವಿದ್ಯುತ್ ಕಂಬಗಳು ಮುರಿದಿದ್ದು, 1341 ಮರಗಳು ಮತ್ತು ಕೊಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದಿವೆ. ಒಟ್ಟು174 ಟ್ರಾನ್ಸ್ ಫಾರ್ಮರ್ ಗಳು ಹಾನಿಗೊಳಗಾಗಿವೆ. ಸುಮಾರು 55 ಡಬಲ್ ಪೋಲ್ ಸ್ಟ್ರಕ್ಚರ್ ಹಾನಿಗೊಂಡಿವೆ.
ಜುಲೈ ತಿಂಗಳಲ್ಲಿ ಸುರಿದ ಮಳೆಗೆ 703 ವಿದ್ಯುತ್ ಕಂಬಗಳು ಮುರಿದಿದ್ದು, 486 ಮರಗಳು ಮತ್ತು ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿವೆ. ಹಾಗೆಯೇ 104 ಟಿಸಿಗಳು ಮತ್ತು 23 ಡಬಲ್ ಪೋಲ್ ಸ್ಟ್ರಕ್ಚರ್ ಹಾನಿಗೊಳಗಾಗಿವೆ.
ಜೂನ್ ತಿಂಗಳಲ್ಲಿ ಬಿದ್ದ ಮಳೆಗೆ 547 ವಿದ್ಯುತ್ ಕಂಬಗಳು ಮುರಿದಿದ್ದು, 540 ಮರಗಳು ಮತ್ತು ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿವೆ. ಹಾಗೆಯೇ 466 ಟಿಸಿಗಳು ಹಾನಿಗೊಳಗಾಗಿದ್ದು, 70 ಡಬಲ್ ಪೋಲ್ ಸ್ಟ್ರಕ್ಚರ್ ಹಾನಿಗೊಳಗಾಗಿವೆ.
ಮೇ ತಿಂಗಳಲ್ಲಿ ಬಿದ್ದ ಗಾಳಿ ಮಳೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 4905 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, 6024 ಮರಗಳು ಮತ್ತು ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದಿವೆ. ಜತೆಗೆ 353 ಟಿಸಿಗಳು ಹಾನಿಗೊಂಡಿದ್ದು, 152 ಡಬಲ್ ಪೋಲ್ ಸ್ಟ್ರಕ್ಚರ್ ಎಂದು ತಿಳಿಸಿದೆ.
BIGG NEWS: ವಿಜಯಪುರದ ಭೀಮಾತೀರದಲ್ಲಿ ಮತ್ತೆ ರಕ್ತಪಾತ;ತಮ್ಮನಿಂದಲೇ ಅಣ್ಣನ ಬರ್ಬರ ಹತ್ಯೆ
ವ್ಯಾಪಕ ಮಳೆಯಿಂದಾಗಿ ನಗರದ ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಬಡಾವಣೆ ಮತ್ತು ಅಪಾರ್ಟ್ ಮೆಂಟ್ ಗಳು ಜಲಾವೃತಗೊಂಡಿವೆ. ಬೆಂಗಳೂರಿನ ಸರ್ಜಾಪುರ, ಯಮಳೂರು, ರೈನ್ ಬೋ ಬಡಾವಣೆ ಪ್ರದೇಶಗಳಲ್ಲಿನ ಅಪಾರ್ಟ್ ಮೆಂಟ್ ಗಳ ಬೇಸ್ ಮೆಂಟ್ ಗೆ ನೀರು ನುಗ್ಗಿರುವ ಪರಿಣಾಮ ಈ ಪ್ರದೇಶಗಳ ಅಪಾರ್ಟ್ ಮೆಂಟ್ ಗಳ ವಿದ್ಯುತ್ ಸಂಪರ್ಕವನ್ನು ಸುರಕ್ಷತೆ ದೃಷ್ಟಿಯಿಂದ ಕಡಿತಗೊಳಿಸಲಾಗಿದೆ ಎಂದು ನಾಗರಾಜ ತಿಳಿಸಿದ್ದಾರೆ.
ಸಹಾಯವಾಣಿಗೆ ದೂರುಗಳ ಸುರಿಮಳೆ: ಭಾನುವಾರ ಮತ್ತು ಸೋಮವಾರ ಬೆಸ್ಕಾಂ ಸಹಾಯವಾಣಿ 1912ಗೆ 32049 ದೂರಗಳು ಬಂದಿದ್ದು, ಇವುಗಳ ಪೈಕಿ 22560 ದೂರುಗಳನ್ನು ದಾಖಲಿಸಿಕೊಂಡು ಡಾಕೆಟ್ ಸಂಖ್ಯೆಗಳನ್ನು ಗ್ರಾಹಕರಿಗೆ ನೀಡಲಾಗಿದೆ, ಇವುಗಳಲ್ಲಿ 16389 ದೂರುಗಳನ್ನು ಸಂಬಂಧಪಟ್ಟ ಉಪ ವಿಭಾಗಗಳಿಗೆ ರವಾನಿಸಿ ವಿದ್ಯತ್ ಸಂಪರ್ಕ ನೀಡಲಾಗಿದ್ದು, 6171 ದೂರುಗಳು ವಿಲೇವಾರಿಗೆ ಬಾಕಿ ಉಳಿದಿವೆ.