ಬೆಂಗಳೂರು: ನಗರದಲ್ಲಿನ ಕೆಂಗೇರಿ ವಿದ್ಯುತ್ ಚಿತಾಗಾರ ಉನ್ನತೀಕರಣಕ್ಕಾಗಿ 90 ದಿನಗಳ ಕಾಲ ತಾತ್ಕಾಲಿಕ ಸ್ಥಗಿತಗೊಳಿಸಲಾಗುತ್ತಿದೆ ಎಂಬುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ.
BREAKING NEWS: ಸ್ಯಾಂಡಲ್ ವುಡ್ ಹಿರಿಯ ನಟ ಅನಂತ್ ನಾಗ್ ಸೇರಿ ಮೂವರಿಗೆ ಬೆಂಗಳೂರು ಉತ್ತರ ವಿವಿಯಿಂದ ಗೌರವ ಡಾಕ್ಟರೇಟ್
ಈ ಬಗ್ಗೆ ಬಿಬಿಎಂಪಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿತ್ತು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಕೆಂಗೇರಿ ವಿದ್ಯುತ್ ಚಿತಾಗಾರಲ್ಲಿರುವ Horizontal Coil Mounting ವಿನ್ಯಾಸದಿಂದ Vertical Coil Mounting ವಿನ್ಯಾಸಕ್ಕೆ ಬದಲಿಸುವ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ದಿನಾಂಕ: 15-07-2022 ರಿಂದ 14-10-2022(90 ದಿನಗಳು) ವರೆವಿಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿದೆ.
BIG NEWS: ನಟಿ ಸುಶ್ಮಿತಾ ಸೇನ್ ಜೊತೆ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮದುವೆ | Lalit Modi
ಈ ಚಿತಾಗಾರಕ್ಕೆ ಮೃತ ದೇಹಗಳನ್ನು ದಹನ ಕ್ರಿಯೆಗಾಗಿ ತರುವ ಸಾರ್ವಜನಿಕರು ಸಮೀಪದಲ್ಲಿರುವ ಪೀಣ್ಯ ಅಥವಾ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.