ಬೆಂಗಳೂರು : ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಅಜಿತ್ ಅಲಿಯಾಸ್ ಮಲಯಾಳಿ ಅಜಿತ್ ನನ್ನ ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ ಸಿಐಡಿ ಪೋಲೀಸರು ಅರೆಸ್ಟ್ ಮಾಡಲು ಮುಂದಾಗಿದ್ದರು.ಆ ವೇಳೆ ನಾನು ವಕೀಲ ಅರೆಸ್ಟ್ ಮಾಡಲು ನೋಟಿಸ್ ನೀಡಬೇಕು ಅಂತ ಹೇಳಿದ್ದ. ಎಸ್ ಪಿ ಹಂತದ ಅಧಿಕಾರಿ ನೋಟಿಸ್ ನೀಡಬೇಕು ಎಂದು ಕೋರ್ಟ್ ಮೊರೆ ಹೋಗಿದ್ದ. ಈ ಹಿನ್ನೆಲೆ ಕೋರ್ಟ್ನಲ್ಲಿ ಸಿಐಡಿ ಅಧಿಕಾರಿಗಳು ವಾದ ಮಂಡಿಸಿದರು. ಅಜಿತ್ ನನ್ನು ವಶಕ್ಕೆ ಪಡೆಯಲು ನ್ಯಾಯಾಲಯ ಈ ವೇಳೆ ಅವಕಾಶ ನೀಡಿತ್ತು. ಇದೀಗ ವಕೀಲ ಅಜಿತ್ ಅಲಿಯಾಸ್ ಮಲಯಾಳಿ ಅಜಿತನನ್ನ ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.







