ಬೆಂಗಳೂರು : ತಂಬಾಕು ಉತ್ಪನ್ನಗಳಿಗೆ ಅಪ್ರಾಪ್ತ ಬಾಲಕರು ದಾಸರಾಗುತ್ತಿರುವ ಹಿನೆಲೆಯಲ್ಲಿ ಇದೀಗ ಆರೋಗ್ಯ ಇಲಾಖೆ ತಂಬಾಕು ಉತ್ಪನ್ನ ಮಾರಾಟದ ಆನ್ಲೈನ್ ಆಪ್ ಗಳಿಗೆ ನಿಷೇಧಿಸಿ ಆರೋಗ್ಯ ಇಲಾಖೆಯು ಸೈಬರ್ ಕ್ರೈಂ ಗೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.
ಹೌದು ತಂಬಾಕು ಉತ್ಪನ್ನಗಳಿಗೆ ಅಪ್ರಾಪ್ತ ಬಾಲಕರು ದಾಸರಾಗುತ್ತಿದ್ದಾರೆ. ಹಾಗಾಗಿ ತಂಬಾಕು ಉತ್ಪನ್ನ ಮಾರಾಟದ ಆನ್ಲೈನ್ ಆಪ್ ಗಳಿಗೆ ನಿಷೇಧಿಸಿ ಎಂದು ಆನ್ಲೈನ್ ಹೋಂ ಡೆಲಿವರಿ ಆಪ್ ಗಳ ವಿರುದ್ಧ ಕ್ರಮಕ್ಕೆ ಸೈಬರ್ ಕ್ರೈಂ ಇಲಾಖೆಗೆ ಆರೋಗ್ಯ ಇಲಾಖೆ ಇದೀಗ ಪತ್ರ ಬರೆದಿದೆ ಕಾನೂನು ಕ್ರಮಕ್ಕೆ ಮನವಿ ಮಾಡಿದೆ.
COTPA- 2003 ಕಾಯ್ದೆ ನಿಯಮ ಉಲ್ಲಂಘನೆ ಆರೋಪ ಮಾಡಿದ್ದು, ಬ್ಲಿಂಕ್ ಇಟ್, ಝೋಮ್ಯಾಟೋ, ಸ್ವಿಗ್ಗಿ, ಜೆಪ್ಟೊ, ಬಿಗ್ ಬಾಸ್ಕೆಟ್ ಹಲವು ಹೋಂ ಡೆಲಿವರಿ ಆಫ್ ಗಳಿಂದ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. ಹಾಗಾಗಿ ಆನ್ಲೈನ್ ಆಪ್ ಗಳ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಕೋರಿ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಪತ್ರ ಬರೆದಿದ್ದಾರೆ.