Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಬೆಂಗಳೂರಿನ ಯುವಜನತೆಯಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ : ವೈದ್ಯರ ಎಚ್ಚರಿಕೆ!

BREAKING : ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಎಫೆಕ್ಟ್: ಜೂನ್ 1 ರಿಂದ ಪೆಟ್ರೋಲ್, ಡೀಸೆಲ್, ವಿಮಾನ ಇಂಧನ ರಫ್ತು ತೆರಿಗೆ ಕಡಿತಗೊಳಿಸಿದ ಕೇಂದ್ರ

ಎಚ್ಚರಿಕೆಯನ್ನು ಕಡೆಗಣಿಸಿದ ಹಡಗು: ಇರಾನ್ ಕಡೆಗೆ ತೆರಳುತ್ತಿದ್ದ ಸರಕು ಹಡಗಿನ ಮೇಲೆ ಅಮೆರಿಕದಿಂದ ಹೆಲ್‌ಫೈರ್ ಕ್ಷಿಪಣಿ ದಾಳಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಫ್ಘನ್ ಸಚಿವರ ಸುದ್ದಿಗೋಷ್ಠಿಗೆ ಪತ್ರಕರ್ತೆಯರ ನಿರ್ಬಂಧ: ‘ಕರ್ನಾಟಕ ಪತ್ರಕರ್ತೆಯರ ಸಂಘ’ ಖಂಡನೆ
KARNATAKA

ಆಫ್ಘನ್ ಸಚಿವರ ಸುದ್ದಿಗೋಷ್ಠಿಗೆ ಪತ್ರಕರ್ತೆಯರ ನಿರ್ಬಂಧ: ‘ಕರ್ನಾಟಕ ಪತ್ರಕರ್ತೆಯರ ಸಂಘ’ ಖಂಡನೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ನವದೆಹಲಿಯಲ್ಲಿರುವ ಆಫ್ಘನ್ ರಾಯಭಾರ ಕಚೇರಿಯಲ್ಲಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಿಂದ ಪತ್ರಕರ್ತೆಯರನ್ನು ಹೊರಗಿಟ್ಟಿರುವ ಕ್ರಮವನ್ನು ಕರ್ನಾಟಕ ಪತ್ರಕರ್ತೆಯರ ಸಂಘವು ತೀವ್ರವಾಗಿ ಖಂಡಿಸುತ್ತದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ ಅವರು,  ಭಾರತದ ನೆಲದಲ್ಲಿ ನಡೆದಿರುವ ಈ ಉದ್ದೇಶಪೂರ್ವಕ ಲಿಂಗ ತಾರತಮ್ಯದ ಕೃತ್ಯವು ಅತ್ಯಂತ ಆತಂಕಕಾರಿಯಾಗಿದೆ. ಇದು ಸಮಾನತೆ ಮತ್ತು ತಾರತಮ್ಯವನ್ನು ನಿಷೇಧಿಸುವ ಭಾರತದ ಸಂವಿಧಾನದ ವಿಧಿ 14 ಮತ್ತು 15 ರ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಪತ್ರಿಕಾಗೋಷ್ಠಿಯಿಂದ ದೂರ ಉಳಿದಿದ್ದರೂ, ಭಾರತದೊಳಗೆ ನಡೆಯುವ ಯಾವುದೇ ರಾಜತಾಂತ್ರಿಕ ಕಾರ್ಯಕ್ರಮವು ಇಂತಹ ಲಿಂಗ ತಾರತಮ್ಯವನ್ನು ಮಾನ್ಯ ಮಾಡದಂತೆ ಅಥವಾ ಸಹಿಸದಂತೆ ನೋಡಿಕೊಳ್ಳುವ ನೈತಿಕ ಮತ್ತು ಸಾಂವಿಧಾನಿಕ ಜವಾಬ್ದಾರಿ ಭಾರತ ಸರ್ಕಾರಕ್ಕಿದೆ ಎಂದು ಸಂಘವು ನಂಬುತ್ತದೆ ಎಂದು ಹೇಳಿದ್ದಾರೆ.

ಅದೇ ರೀತಿ, ತಮ್ಮ ಮಹಿಳಾ ಸಹೋದ್ಯೋಗಿಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುವ ಬದಲು ಕೇವಲ ಪುರುಷ ವರದಿಗಾರರನ್ನು ಕಳುಹಿಸಲು ನಿರ್ಧರಿಸಿದ ಕೆಲವು ಮಾಧ್ಯಮ ಸಂಸ್ಥೆಗಳ ನಡೆ ಆತಂಕಕಾರಿಯಾಗಿದೆ. ಈ ಮೌನ ಸಮ್ಮತಿಯು ಸುದ್ದಿಮನೆಗಳಲ್ಲಿನ ವೃತ್ತಿಪರ ನೈತಿಕತೆ, ಲಿಂಗ ಸಂವೇದನೆ ಮತ್ತು ಸಾಮೂಹಿಕ ಪ್ರಜ್ಞೆಯ ಗಂಭೀರ ಕುಸಿತವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಕರ್ನಾಟಕ ಪತ್ರಕರ್ತೆಯರ ಸಂಘದ ಆಗ್ರಹಗಳು ಹೀಗಿವೆ:

ಈ ತಾರತಮ್ಯದ ಕೃತ್ಯವನ್ನು ಭಾರತ ಸರ್ಕಾರವು ಕಟುವಾಗಿ ಖಂಡಿಸಿ ಹೇಳಿಕೆ ನೀಡಬೇಕು. ಭಾರತದಲ್ಲಿನ ಯಾವುದೇ ವಿದೇಶಿ ರಾಯಭಾರ ಕಚೇರಿಯ ಕಾರ್ಯಕ್ರಮವು ಲಿಂಗ ಸಮಾನತೆಯನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.

ಮಹಿಳಾ ಪತ್ರಕರ್ತೆಯರಿಗೆ ಪ್ರವೇಶ ನಿಷೇಧಿಸಿದ ಸ್ಥಳಗಳಲ್ಲಿ ವರದಿ ಮಾಡದಿರುವ ಕುರಿತು ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಿಕಾ ಸಮಿತಿಗಳು ಖಂಡಿಸಿ, ಸೂಕ್ತಕ್ರಮಕ್ಕೆ ಆಗ್ರಹಿಸಿದ್ದಾರೆ.

ಯಾರು ಮಾಡಿದರೂ, ಲಿಂಗ ತಾರತಮ್ಯಕ್ಕೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಾನವಿಲ್ಲ. ರಾಜತಾಂತ್ರಿಕ ನೆಪದಲ್ಲಿ ಇದಕ್ಕೆ ಅವಕಾಶ ನೀಡುವುದರಿಂದ ಸಮಾನತೆ, ಪತ್ರಿಕಾ ಸ್ವಾತಂತ್ರ್ಯ ಮತ್ತು ಮಹಿಳೆಯರ ಘನತೆಯ ಕುರಿತ ಭಾರತದ ಬದ್ಧತೆಗೆ ಧಕ್ಕೆಯಾಗುತ್ತದೆ. ಸ್ಥಳ, ಧ್ವನಿ ಅಥವಾ ಮಾನ್ಯತೆ ನಿರಾಕರಿಸಲ್ಪಟ್ಟಿರುವ ದೇಶದ ಎಲ್ಲಾ ಮಹಿಳಾ ಪತ್ರಕರ್ತೆಯರೊಂದಿಗೆ ಕರ್ನಾಟಕ ಪತ್ರಕರ್ತೆಯರ ಸಂಘವು ಗಟ್ಟಿಯಾಗಿ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.

ನಾವು ನಾಗರಿಕ ಸಮಾಜ, ಪತ್ರಕರ್ತರ ಸಂಘಗಳು, ಮಹಿಳಾ ಹಕ್ಕುಗಳ ಗುಂಪುಗಳು ಮತ್ತು ದೇಶದ ಎಲ್ಲಾ ಪತ್ರಿಕಾ ಸಂಸ್ಥೆಗಳಿಗೆ ಈ ನಡೆಯನ್ನು ಪ್ರತಿಭಟಿಸಲು, ಹೊಣೆಗಾರಿಕೆಯನ್ನು ಪ್ರಶ್ನಿಸಲು ಮತ್ತು ಇನ್ನು ಮುಂದೆ ಭಾರತದಲ್ಲಿ ಯಾವುದೇ ಮಾಧ್ಯಮ ಕಾರ್ಯಕ್ರಮವು ಮಹಿಳೆಯರನ್ನು ದ್ವಿತೀಯ ದರ್ಜೆಯ ಭಾಗಿದಾರರಂತೆ ನಡೆಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಬೆಂಗಳೂರಿನ ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ ಮನವಿ ಮಾಡಿದ್ದಾರೆ.

CRIME NEWS: ದೇಶಾದ್ಯಂತ ಹಲವರ ಬ್ಯಾಂಕ್ ಖಾತೆಗಳಿಂದ 150 ಕೋಟಿ ಎಗರಿಸಿದ್ದ ಸೈಬರ್‌ ವಂಚಕ ಅರೆಸ್ಟ್‌

BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್​ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ

Share. Facebook Twitter LinkedIn WhatsApp Email

Related Posts

SHOCKING : ಬೆಂಗಳೂರಿನ ಯುವಜನತೆಯಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ : ವೈದ್ಯರ ಎಚ್ಚರಿಕೆ!

2 Mins Read

ಸಾರ್ವಜನಿಕರೇ ಗಮನಿಸಿ : ‘ವಿದ್ಯುತ್ ಅವಘಡ’ದಿಂದ ಪಾರಾಗಲು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.!

3 Mins Read

BIG NEWS : ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್ : ಸರ್ಕಾರಿ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

2 Mins Read
Recent News

SHOCKING : ಬೆಂಗಳೂರಿನ ಯುವಜನತೆಯಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ : ವೈದ್ಯರ ಎಚ್ಚರಿಕೆ!

BREAKING : ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಎಫೆಕ್ಟ್: ಜೂನ್ 1 ರಿಂದ ಪೆಟ್ರೋಲ್, ಡೀಸೆಲ್, ವಿಮಾನ ಇಂಧನ ರಫ್ತು ತೆರಿಗೆ ಕಡಿತಗೊಳಿಸಿದ ಕೇಂದ್ರ

ಎಚ್ಚರಿಕೆಯನ್ನು ಕಡೆಗಣಿಸಿದ ಹಡಗು: ಇರಾನ್ ಕಡೆಗೆ ತೆರಳುತ್ತಿದ್ದ ಸರಕು ಹಡಗಿನ ಮೇಲೆ ಅಮೆರಿಕದಿಂದ ಹೆಲ್‌ಫೈರ್ ಕ್ಷಿಪಣಿ ದಾಳಿ!

ಸಾರ್ವಜನಿಕರೇ ಗಮನಿಸಿ : ‘ವಿದ್ಯುತ್ ಅವಘಡ’ದಿಂದ ಪಾರಾಗಲು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.!

State News
KARNATAKA

SHOCKING : ಬೆಂಗಳೂರಿನ ಯುವಜನತೆಯಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ : ವೈದ್ಯರ ಎಚ್ಚರಿಕೆ!

By ಸುರೇಶ್‌ KARNATAKA 2 Mins Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಿರಿಯ ವಯಸ್ಸಿನಲ್ಲೇ ತಂಬಾಕು ಮತ್ತು ಧೂಮಪಾನದ ವ್ಯಸನಕ್ಕೆ ಒಳಗಾಗುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಇದು…

ಸಾರ್ವಜನಿಕರೇ ಗಮನಿಸಿ : ‘ವಿದ್ಯುತ್ ಅವಘಡ’ದಿಂದ ಪಾರಾಗಲು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.!

BIG NEWS : ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್ : ಸರ್ಕಾರಿ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

BREAKING : ಬಿಟ್‌ ಕಾಯಿನ್ ಹಗರಣ ಕೇಸ್ : ಮೊಹಮ್ಮದ್ ನಲಪಾಡ್‌ ಗೆ ಮತ್ತೆ ಇಡಿ ಸಮನ್ಸ್.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.