Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್ : ಸರ್ಕಾರಿ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

BREAKING : ಬಿಟ್‌ ಕಾಯಿನ್ ಹಗರಣ ಕೇಸ್ : ಮೊಹಮ್ಮದ್ ನಲಪಾಡ್‌ ಗೆ ಮತ್ತೆ ಇಡಿ ಸಮನ್ಸ್.!

BIG NEWS : ಸೇವಾನಿರತ ಶಿಕ್ಷಕರು `TET’ ಪಾಸಾಗುವುದು ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಿಟ್‌ ಕಾಯಿನ್ ಹಗರಣ ಕೇಸ್ : ಮೊಹಮ್ಮದ್ ನಲಪಾಡ್‌ ಗೆ ಮತ್ತೆ ಇಡಿ ಸಮನ್ಸ್.!
KARNATAKA

BREAKING : ಬಿಟ್‌ ಕಾಯಿನ್ ಹಗರಣ ಕೇಸ್ : ಮೊಹಮ್ಮದ್ ನಲಪಾಡ್‌ ಗೆ ಮತ್ತೆ ಇಡಿ ಸಮನ್ಸ್.!

By kannadanewsnow57

ಬೆಂಗಳೂರು: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಬಹುಕೋಟಿ ಬಿಟ್‌ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ (ED) ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್‌ಗೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ಸೋಮವಾರ (ಜೂನ್ 1) ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಇಡಿ ಅಧಿಕಾರಿಗಳು ಸೂಚಿಸಿದ್ದಾರೆ.

ಕಳೆದ ಶುಕ್ರವಾರವೇ ನಲಪಾಡ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಮೊದಲ ಬಾರಿಗೆ ಸಮನ್ಸ್ ನೀಡಿತ್ತು. ಆದರೆ, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅವರು ವಿಚಾರಣೆಯಿಂದ ವಿನಾಯಿತಿ ಕೋರಿದ್ದರು. ಈ ಮನವಿಯನ್ನು ಪರಿಗಣಿಸಿದ್ದ ಅಧಿಕಾರಿಗಳು ತಾತ್ಕಾಲಿಕ ವಿನಾಯಿತಿ ನೀಡಿದ್ದರು. ಆದರೆ ಇದೀಗ ತನಿಖೆಯನ್ನು ಚುರುಕುಗೊಳಿಸಿರುವ ಇಡಿ, ಸೋಮವಾರವೇ ವಿಚಾರಣೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಕಡಕ್ ಆದೇಶ ನೀಡಿದೆ.

ಈ ಬಹುಕೋಟಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈಗಾಗಲೇ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಮಹತ್ವದ ಮಾಹಿತಿ ಕಲೆಹಾಕುತ್ತಿದೆ.ಇತ್ತೀಚೆಗಷ್ಟೇ ಬೆಂಗಳೂರಿನ ಅಶೋಕನಗರದಲ್ಲಿರುವ ಮೊಹಮ್ಮದ್ ನಲಪಾಡ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದರು. ಸತತ 21 ಗಂಟೆಗಳ ಕಾಲ ನಡೆದ ಈ ಶೋಧ ಕಾರ್ಯದಲ್ಲಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ದಾಳಿಯ ವೇಳೆ ನಲಪಾಡ್ ನಿವಾಸದಿಂದ ಪ್ರಮುಖ ಹಾರ್ಡ್‌ಡಿಸ್ಕ್‌ಗಳು, ಕಂಪ್ಯೂಟರ್ ಡಿವೈಸ್‌ಗಳು ಹಾಗೂ ವಿದೇಶಿ ವ್ಯವಹಾರಗಳಿಗೆ ಸಂಬಂಧಿಸಿದ ಬ್ಯಾಂಕ್ ದಾಖಲೆಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ದಾಖಲೆಗಳ ಆಧಾರದ ಮೇಲೆಯೇ ಈಗ ನಲಪಾಡ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಇಡಿ ಸಜ್ಜಾಗಿದೆ.

BREAKING: Bitcoin scam case: ED summons Mohammed Nalapad again!
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್ : ಸರ್ಕಾರಿ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

2 Mins Read

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

2 Mins Read

ALERT : ಸಾರ್ವಜನಿಕ ಸ್ಥಳಗಳ ‘ಫ್ರೀ ವೈ-ಫೈ’ ಬಳಸುವವರೇ ಎಚ್ಚರ : ಇದು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು

2 Mins Read
Recent News

BIG NEWS : ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್ : ಸರ್ಕಾರಿ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

BREAKING : ಬಿಟ್‌ ಕಾಯಿನ್ ಹಗರಣ ಕೇಸ್ : ಮೊಹಮ್ಮದ್ ನಲಪಾಡ್‌ ಗೆ ಮತ್ತೆ ಇಡಿ ಸಮನ್ಸ್.!

BIG NEWS : ಸೇವಾನಿರತ ಶಿಕ್ಷಕರು `TET’ ಪಾಸಾಗುವುದು ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ

BREAKING: ಪಿಎಸ್‌ಜಿ ಚಾಂಪಿಯನ್ಸ್ ಲೀಗ್ ವಿಜಯದ ಸಂಭ್ರಮದಲ್ಲಿ ಹಿಂಸಾಚಾರ: ಪ್ಯಾರಿಸ್‌ನಲ್ಲಿ ಹಲವರ ಬಂಧನ

State News
KARNATAKA

BIG NEWS : ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್ : ಸರ್ಕಾರಿ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಕ್ರೀಡಾಪಟುಗಳಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ…

BREAKING : ಬಿಟ್‌ ಕಾಯಿನ್ ಹಗರಣ ಕೇಸ್ : ಮೊಹಮ್ಮದ್ ನಲಪಾಡ್‌ ಗೆ ಮತ್ತೆ ಇಡಿ ಸಮನ್ಸ್.!

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

ALERT : ಸಾರ್ವಜನಿಕ ಸ್ಥಳಗಳ ‘ಫ್ರೀ ವೈ-ಫೈ’ ಬಳಸುವವರೇ ಎಚ್ಚರ : ಇದು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.