ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳು ಸಿಕ್ಕಾಪಟ್ಟೆ ಆಗಿದೆ. ವಾಹನ ಚಲಾಯಿಸುವಾಗ ಮೊಬೈಲ್ ಬಳಸುವವ ವಿರುದ್ಧ ದಂಡದ ಅಸ್ತ್ರವನ್ನು ಪೊಲೀಸರು ಪ್ರಯೋಗಿಸುತ್ತಿದ್ದಾರೆ. ಈ ಬಳಿಕ, ಈಗ ರಾಜ್ಯದ ದೇವಾಲಯಗಳಲ್ಲಿಯೂ ಮೊಬೈಲ್ ಬಳಕೆಗೆ ಸರ್ಕಾರ ಬ್ರೇಕ್ ಹಾಕಲು ಮುಂದಾಗಿ ಎನ್ನಲಾಗಿದೆ. ಈ ನಿಯಮವನ್ನು ಶೀಘ್ರವೇ ಜಾರಿಗೆ ತರಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಈಗ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕವೂ ಮಾನಸಿಕ ಆರೋಗ್ಯ ಸೇವೆ ಲಭ್ಯ
ಹೌದು ಈಗಾಗಲೇ ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದ ದೇವಾಲಯಗಳಲ್ಲೂ ಮೊಬೈಲ್ ಬ್ಯಾನ್ ಮಾಡಬೇಕೆಂದು ಕೂಗು ಕೇಳಿಬಂದಿದೆ. ಅರ್ಚಕರ ಸಂಘವು ಈ ಬಗ್ಗೆ ಮುಜರಾಯಿ ಇಲಾಖೆಗೆ ಪತ್ರ ಬರೆದಿದೆ ಎನ್ನಲಾಗುತ್ತಿದೆ.
ಶಿವಮೊಗ್ಗ: ಡಿ.19ರಿಂದ ಬೀದಿಬದಿ ವ್ಯಾಪಾರಸ್ಥರ ಕುಟುಂಬ ಹಬ್ಬ “ಸ್ವಾನಿಧಿ ಮಹೋತ್ಸವ”
ದೇವಸ್ಥಾನದಲ್ಲಿ ಭಕ್ತರು ಪೂಜೆ, ಪುನಸ್ಕಾರದ ವೇಲೆ ಮೊಬೈಲ್ ಬಳಸುತ್ತಾರೆ. ಅಲ್ಲದೇ ದೇವಾಲಯಗಳಲ್ಲಿ ಯುವಕ ಯುವತಿಯರು ಫೋಟೋ ತೆಗೆದುಕೊಳ್ಳುವುದು, ರೀಲ್ಸ್ ಮಾಡುವ ಕೆಲಸ ಮಾಡುತ್ತಾರೆ. ಅಲ್ಲದೇ ಭಕ್ತರ ಸೋಗಿನಲ್ಲಿ ಬಂದು ದೇವಾಲಯದ ಒಳಾಂಗಣವನ್ನು ಚಿತ್ರೀಕರಣ ಮಾಡುತ್ತಾರೆ. ಇದರಿಂದ ದೇವಾಲಯಗಳಲ್ಲಿ ಭಕ್ತರ ಏಕಾಗ್ರತೆಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ಸರ್ಕಾರ ದೇವಾಲಯಗಳಲ್ಲೂ ಮೊಬೈಲ್ ಬ್ಯಾನ್ ಮಾಡಬೇಕು ಎಂದು ಮುಜರಾಯಿ ಇಲಾಖೆಗೆ ಪತ್ರ ಬರೆದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ ದೇವಾಲಯಗಳಲ್ಲಿ ಮೊಬೈಲ್ ಬಳಕೆಯನ್ನು ಬ್ಯಾನ್ ಮಾಡಲು ಹೊಸ ನಿಯಮ ಜಾರಿಗೆ ತರಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.