ಬೆಂಗಳೂರು: ಸರ್ಕಾರ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು. ಅದು ಬಿಟ್ಟು ಸರ್ಕಾರಿ ಕಚೇರಿಯಲ್ಲಿ ಫೋಟೋ-ವಿಡಿಯೋ ನಿಷೇಧಿಸಿದ್ದು ಮಾತ್ರ, ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟಂತೆ. ಇದು ಭ್ರಷ್ಪಪರ ಸರ್ಕಾರ ಎಂಬುದಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ( Dinesh Gundu Rao ) ಕಿಡಿಕಾರಿದ್ದಾರೆ.
ಲಾಂಚನದಲ್ಲಿ ಶಾಂತಿಯ ಸಿಂಹವೇ ಇರಬೇಕೇ ಹೊರತು ಘರ್ಜನೆಯ ಸಿಂಹ ಬರಬಾರದು – ಡಿ.ಕೆ ಶಿವಕುಮಾರ್
ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ/ವಿಡಿಯೋ ದೃಶ್ಯ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಲು ಈ ನಿಷೇಧವೆ? ಸರ್ಕಾರಿ ಕಚೇರಿಗಳು ಭ್ರಷ್ಟರ ತಾಣವಾಗಿವೆ. ಸಾರ್ವಜನಿಕರು ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಮೊಬೈಲ್ ಮೂಲಕ ಬಯಲಿಗೆಳೆದಿದ್ದಾರೆ. ಇದು ಅಪಥ್ಯವೇ? ಎಂದು ಪ್ರಶ್ನಿಸಿದ್ದಾರೆ.
1
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ/ವಿಡಿಯೋ ದೃಶ್ಯ ಮಾಡುವುದನ್ನು ಸರ್ಕಾರ ನಿಷೇಧಿಸಿದೆ.
ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಲು ಈ ನಿಷೇಧವೆ?
ಸರ್ಕಾರಿ ಕಚೇರಿಗಳು ಭ್ರಷ್ಟರ ತಾಣವಾಗಿವೆ. ಸಾರ್ವಜನಿಕರು ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಮೊಬೈಲ್ ಮೂಲಕ ಬಯಲಿಗೆಳೆದಿದ್ದಾರೆ.
ಇದು ಅಪಥ್ಯವೇ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 15, 2022
ಈ ಸರ್ಕಾರ ಕೆಲ ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ 40% ಕಮೀಷನ್ ಹೊಡೆಯುತ್ತಿದೆ. ಸರ್ಕಾರದ ಅನೇಕ ಇಲಾಖೆಗಳು ಸಾರ್ವಜನಿಕರನ್ನು ಸುಲಿಗೆ ಮಾಡುವ ವಸೂಲಿ ಕೇಂದ್ರಗಳಾಗಿವೆ. ಸರ್ಕಾರ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು. ಅದು ಬಿಟ್ಟು ಫೋಟೋ-ವಿಡಿಯೋ ನಿಷೇಧ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟಂತೆ. ಇದು ಭ್ರಷ್ಪಪರ ಸರ್ಕಾರ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.
2
ಈ ಸರ್ಕಾರ ಕೆಲ ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ 40% ಕಮೀಷನ್ ಹೊಡೆಯುತ್ತಿದೆ.
ಸರ್ಕಾರದ ಅನೇಕ ಇಲಾಖೆಗಳು ಸಾರ್ವಜನಿಕರನ್ನು ಸುಲಿಗೆ ಮಾಡುವ ವಸೂಲಿ ಕೇಂದ್ರಗಳಾಗಿವೆ.
ಸರ್ಕಾರ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು.
ಅದು ಬಿಟ್ಟು ಫೋಟೋ-ವಿಡಿಯೋ ನಿಷೇಧ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟಂತೆ. ಇದು ಭ್ರಷ್ಪಪರ ಸರ್ಕಾರ.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 15, 2022
ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಅಕ್ರಮಗಳನ್ನು ಬಯಲಿಗೆಳೆದು ಜನರೇ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುತ್ತಿದ್ದಾರೆ. ಇದು ಪಾರದರ್ಶಕ ಸರ್ಕಾರವಾಗಿದ್ದರೆ ಹೀಗೆ ಅಕ್ರಮ ಬಯಲಿಗೆಳೆಯುವ ಜನರ ಬೆನ್ನಿಗೆ ನಿಲ್ಲಬೇಕು. ಆದರೆ ಬೊಮ್ಮಾಯಿ ಸರ್ಕಾರ ನಿಂತಿರುವುದು ಯಾರ ಬೆನ್ನಿಗೆ? ಭ್ರಷ್ಟರ ರಕ್ಷಣೆಗೆ ನಿಂತಿರುವ ಈ ಸರ್ಕಾರದಿಂದ ಏನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
3
ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಅಕ್ರಮಗಳನ್ನು ಬಯಲಿಗೆಳೆದು ಜನರೇ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುತ್ತಿದ್ದಾರೆ.
ಇದು ಪಾರದರ್ಶಕ ಸರ್ಕಾರವಾಗಿದ್ದರೆ ಹೀಗೆ ಅಕ್ರಮ ಬಯಲಿಗೆಳೆಯುವ ಜನರ ಬೆನ್ನಿಗೆ ನಿಲ್ಲಬೇಕು.
ಆದರೆ ಬೊಮ್ಮಾಯಿ ಸರ್ಕಾರ ನಿಂತಿರುವುದು ಯಾರ ಬೆನ್ನಿಗೆ?
ಭ್ರಷ್ಟರ ರಕ್ಷಣೆಗೆ ನಿಂತಿರುವ ಈ ಸರ್ಕಾರದಿಂದ ಏನು ನಿರೀಕ್ಷಿಸಲು ಸಾಧ್ಯ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 15, 2022