ಕೆಎನ್ಎನ್ ಡಿಜಿಟಲ್ ಡೆಸ್ಕ್ : ಜಮ್ಮು ಮತ್ತು ಕಾಶ್ಮೀರ ಮತ್ತು ರಾಜಸ್ಥಾನದಲ್ಲಿ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್” ಎಂದು ಮುದ್ರಿಸಲಾದ ವಿಮಾನದ ಆಕಾರದ ಬಲೂನ್ಗಳು ಪತ್ತೆಯಾಗಿವೆ.
BREAKING NEWS : ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ; ನಾಲ್ವರು ಉಗ್ರರು ಉಡೀಸ್
ಜಮ್ಮು ಮತ್ತು ಕಾಶ್ಮೀರದ ನಡ್ನ ಸಾಂಬಾ ಪ್ರದೇಶದಲ್ಲಿ ಮತ್ತು ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಬಿಹೆಚ್ ಎನ್ ಹಾಗೂ ಎಮಿರೇಟ್ಸ್ ಎಂದು ಮುದ್ರಿತವಾಗಿರುವ ಹಸಿರು ಮತ್ತು ಬಿಳಿ ಬಣ್ಣದಲ್ಲಿ ವಿಮಾನದ ಆಕಾರದಲ್ಲಿ ಬಲೂನ್ ಪತ್ತೆಯಾಗಿದೆ. ಈ ಕುರಿತಂತೆ ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಬಿಳಿ ಮತ್ತು ಹಸಿರು ಬಣ್ಣದ ಬಲೂನ್ ದಂಟೌರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಅದರಲ್ಲಿ ಪಾಕಿಸ್ತಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್ ಎಂದು ಮುದ್ರಿಸಲಾಗಿದೆ ಎಂದು ಖಜುವಾಲಾ ವೃತ್ತದ ಅಧಿಕಾರಿ ವಿನೋದ್ ಕುಮಾರ್ ಹೇಳಿದ್ದಾರೆ.
A balloon in the shape of an aeroplane in green and white colour with BHN and emirates written on it has been recovered in the Nadd area of Samba. Further investigations underway: Jammu and Kashmir Police
— ANI (@ANI) November 1, 2022
ಈ ವರ್ಷ ಇಲ್ಲಿಯವರೆಗೆ, ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಂಜಾಬ್ನಲ್ಲಿ ಪಾಕಿಸ್ತಾನದೊಂದಿಗಿನ ಅಂತಾರಾಷ್ಟ್ರೀಯ ಗಡಿಯಲ್ಲಿ 186 ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಪತ್ತೆ ಮಾಡಿದೆ. ಜಮ್ಮು ಮತ್ತು ರಾಜಸ್ಥಾನದಲ್ಲಿ 20 ಮತ್ತು ಗುಜರಾತ್ನಲ್ಲಿ 4 ವಾಹನಗಳನ್ನು ವಾಶಕ್ಕೆ ಪಡೆದಿದೆ. 2021 ರ ಅಂದಾಜಿಗಿಂತ ಗಮನಾರ್ಹ ಏರಿಕೆಯಾಗಿದೆ.
ಬಿಎಸ್ಎಫ್ ಮಾಹಿತಿಯ ಪ್ರಕಾರ, ಪಂಜಾಬ್ನಲ್ಲಿ 2020 ರಲ್ಲಿ 47, 2021 ರಲ್ಲಿ 64 ಮತ್ತು ಈ ವರ್ಷದ ಅಕ್ಟೋಬರ್ 15 ರವರೆಗೆ 186 ಯುಎವಿಗಳು ಪತ್ತೆಯಾಗಿವೆ.
ಭಾರತದ ನಾಲ್ಕು ರಾಜ್ಯಗಳು ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಜಮ್ಮು ಮತ್ತು ಕಾಶ್ಮೀರವು ಪಾಕಿಸ್ತಾನದೊಂದಿಗೆ ಅತಿ ಉದ್ದದ ಗಡಿಯನ್ನು ಹೊಂದಿದೆ. ಇದು 1222 ಕಿಮೀ ಉದ್ದವನ್ನು ಹೊಂದಿದೆ, ನಂತರ ರಾಜಸ್ಥಾನವು 1179 ಕಿಮೀ ಹೊಂದಿದೆ.
ವಿಶ್ವದ ಅತಿ ದೊಡ್ಡ ‘ದೇವಾಲಯ’ ಎಲ್ಲಿದೆ ಗೊತ್ತಾ? ದೇಗುಲದ ವಿಶೇಷತೆ ತಿಳಿದ್ರೆ, ನಿಜಕ್ಕೂ ಅಚ್ಚರಿ ಪಡ್ತೀರಾ.!