ಬಳ್ಳಾರಿ : ಬಳ್ಳಾರಿಯಲಿ ಕರ್ತವ್ಯ ನಿರತ ಸಿಐಎಸ್ಎಫ್ ಯೋಧರೊಬ್ಬರು ಸಾವನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈ ಎಂಬಲ್ಲಿ ನಡೆದಿದೆ.ಅನಾರೋಗ್ಯದಿಂದ ಸಿಐಎಸ್ಎಫ್ ಯೋಧ ಯಲ್ಲಪ್ಪ ಬಸವರಾಜ ಸೂರಣಗಿ (34) ಕೊನೆಯುಸಿರೆಳೆದಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈನಲ್ಲಿ ಅವರು ಸಾವನ್ನಪ್ಪಿದ್ದರೆ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬರದ್ವಾಡ ನಿವಾಸಿ ಎಂದು ಹೇಳಲಾಗುತ್ತಿದೆ. ಯೋಧ ಯಲ್ಲಪ್ಪ ದೋಣಿಮಲೈನಲ್ಲಿ ಕಳೆದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.