ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪೊಲೀಸರು ಭರ್ಜರಿ ಬೇಟೆಯಾಡಿದ್ದು,ಇದೀಗ ನಕಲಿ ಆರ್‌ಎಂಡಿ ಗುಟ್ಕಾ ತಯಾರಿಕ ಜಾಲವನ್ನು ಪತ್ತೆ ಮಾಡಿದ್ದು, 7 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕೂಡ ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೌದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಂತೇಶ್ ಮೂಲಿಮನಿ ಎಂಬುವವರ ದೂರಿನ ಮೇಲೆ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಆರ್‌ಎಂಡಿ ಪಾನ್ ಮಸಾಲಾ ಮತ್ತು ಎಂ ಗೋಲ್ಡ್ ಸೆಂಟೆಡ್ ಟೊಬ್ಯಾಕೋ ಹೆಸರಿನ ಪೌಚ್ ತಯಾರಿಕೆ ಮಾಡುತ್ತಿದ್ದವರ ದಾಳಿ ಮಾಡಿ, ಏಳು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರು ದೆಹಲಿ, ಹೈದ್ರಾಬಾದ್, ಬೆಳಗಾವಿ ಹಾಗೂ ನಿಪ್ಪಾಣಿ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ಮಹಮ್ಮದ ವಶೀಮ್ ಮುನೀರ, ಹಿಮಾಯತ, ಮಹ್ಮದ್, ವಿಕಾಸ್ ಚವ್ಹಾಣ, ಸಂತೋಷ ಬಳ್ಳೋಳ್ಳೆ, ಜಹೀರ , ಇಕ್ವಾಲ್ ಎಂದು ಹೇಳಲಾಗುತ್ತಿದ್ದು,ಸುಮಾರು 30 ಲಕ್ಷ ರೂ. ಮೌಲ್ಯದ ಎಂ ಗೋಲ್ಡ್ ಸೆಂಟೆಡ್ ಟೊಬ್ಯಾಕೋ ಹಾಗೂ ಆರ್‌ಎಂಡಿ ಪಾನ್ ಮಸಾಲಾ ಮತ್ತು ನಕಲಿಯಾಗಿ ತಯಾರಿಸಲು ಬಳಸುವ ಪ್ರಿಂಟೇಡ್ , ಕಟಿಂಗ್ ಮಶೀನ್ಗಳನ್ನು ಜಪ್ತಿ ಮಾಡಿದ್ದಾರೆ.