ರಾಮನಗರ : ಯಾರೇ ಎಷ್ಟೇ ಬೊಬ್ಬೆ ಹೊಡೆದರೂ ನಾವೇ ಅಧಿಕಾರಕ್ಕೆ ಬರುತ್ತೇವೆ. ರಾಜ್ಯದಲ್ಲಿ 140 ಸ್ಥಾನ ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಹರಿಸಂದ್ರ ಗ್ರಾಮದಲ್ಲಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪಅ. 11 ರಿಂದ ತಂಡವಾಗಿ ರಾಜ್ಯ ಪ್ರವಾಸ ಆರಂಭ ಮಾಡುತ್ತೇವೆ. ಸುಮಾರು 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇವೆ, ರಾಜ್ಯದಲ್ಲಿ 140 ಸ್ಥಾನ ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
2023 ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ, ಹೆಚ್ಡಿಕೆ ಸಿಎಂ ಆಗುತ್ತಾರೆಂಬ ದೇವೇಗೌಡರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಹೆಚ್.ಡಿ.ದೇವೇಗೌಡರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಮಗನ ಮೇಲಿನ ಮಮತೆಯಿಂದ ದೇವೇಗೌಡರು ಹೇಳಿದ್ದಾರೆ. ಬಿಜೆಪಿ ಎಲ್ಲಾ ವರ್ಗದವರನ್ನೂ ಅಭಿವೃದ್ಧಿ ಮಾಡುವ ಪಕ್ಷ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಪ್ರವಾಸ ಮಾಡಿ ಪಕ್ಷ ಅಧಿಕಾರಕ್ಕೆ ತರಲಾಗುವುದು ಎಂದು ಹೇಳಿದರು.
BREAKING NEWS : ಕೆರೂರು ಗಣಪತಿ ವಿಸರ್ಜನೆ ವೇಳೆ ಗಲಭೆ ಪ್ರಕರಣ : ಬಾದಾಮಿ ಸಿಪಿಐ ‘ಕರೆಪ್ಪ ಬನ್ನೆ’ ಸಸ್ಪೆಂಡ್
BREAKING NEWS : ಮೆಕ್ಸಿಕೋದಲ್ಲಿ ನಿಗೂಢವಾಗಿ ಮಕ್ಕಳ ದೇಹ ಸೇರಿದೆ ‘ಡೆಂಜರಸ್ ಪಾಯಿಸನ್’, ಜನರಲ್ಲಿ ಆತಂಕ ಸೃಷ್ಠಿ