ಬೆಂಗಳೂರು: ಈಶ್ವರಪ್ಪ ಭಗವಾಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇವೆ ಎಂದಿದ್ದರು, ಬಿ.ಸಿ ನಾಗೇಶ್ ಕೇಸರಿ ಧ್ವಜದ ಮುಂದೆ ರಾಷ್ಟ್ರಧ್ವಜವನ್ನು ಕುಗ್ಗಿಸಿದ್ದಾರೆ. ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿಸುವ ಪ್ರಯತ್ನದ ಮುನ್ಸೂಚನೆಯೇ ಇದು ಬಿಜೆಪಿ ? ಸಿಎಂಗೆ ತಿರಂಗಾ ಮೇಲೆ ಗೌರವ ಇದ್ದಿದ್ದೇ ಆದರೆ ವಿವೇಕವಿಲ್ಲದ ಶಿಕ್ಷಣ ಸಚಿವರನ್ನು ವಜಾಗೊಳಿಸಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಈಶ್ವರಪ್ಪ ಭಗವಾಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇವೆ ಎಂದಿದ್ದರು, ಬಿ.ಸಿ ನಾಗೇಶ್ ಕೇಸರಿ ಧ್ವಜದ ಮುಂದೆ ರಾಷ್ಟ್ರಧ್ವಜವನ್ನು ಕುಗ್ಗಿಸಿದ್ದಾರೆ.
ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿಸುವ ಪ್ರಯತ್ನದ ಮುನ್ಸೂಚನೆಯೇ ಇದು @BJP4Karnataka?
ಸಿಎಂಗೆ ತಿರಂಗಾ ಮೇಲೆ ಗೌರವ ಇದ್ದಿದ್ದೇ ಆದರೆ ವಿವೇಕವಿಲ್ಲದ ಶಿಕ್ಷಣ ಸಚಿವರನ್ನು ವಜಾಗೊಳಿಸಲಿ. pic.twitter.com/D2Xcvl3560
— Karnataka Congress (@INCKarnataka) August 12, 2022
ಈ ಕುರಿತಂತೆ ಟ್ವಿಟ್ ಮಾಡಿದ್ದು, ಬಿಜೆಪಿ ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯೂ ತಿಳಿದಿಲ್ಲ, ದೇಶದ ಗೌರವವೂ ತಿಳಿದಿಲ್ಲ. ಎಷ್ಟಾದರೂ ಗೋಡ್ಸೆ ಭಕ್ತರಲ್ಲವೇ, ಭಗವಾಧ್ವಜದ ಆರಾಧಕರಲ್ಲವೇ, ಸಂವಿಧಾನ ವಿರೋಧಿಗಳಲ್ಲವೇ, ಮನದೊಳಗೆ ಸಂಘದ ಪಾಠವಾದ ತಿರಂಗಾ ದ್ವೇಷ ಇಟ್ಟುಕೊಂಡಿರುವ ನಳೀನ್ ಕುಮಾರ್ ಕಟೀಲ್ ಅವರಿಗೆ ಧ್ವಜ ತಲೆಕೆಳಗಾಗಿಸುವುದೇ ಮೂಲ ಅಜೆಂಡಾ ಇರುವಂತಿದೆ ಎಂದು ಹೇಳಿದೆ.
ಬಿಜೆಪಿ ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯೂ ತಿಳಿದಿಲ್ಲ, ದೇಶದ ಗೌರವವೂ ತಿಳಿದಿಲ್ಲ.
ಎಷ್ಟಾದರೂ ಗೋಡ್ಸೆ ಭಕ್ತರಲ್ಲವೇ, ಭಗವಾಧ್ವಜದ ಆರಾಧಕರಲ್ಲವೇ,
ಸಂವಿಧಾನ ವಿರೋಧಿಗಳಲ್ಲವೇ,ಮನದೊಳಗೆ ಸಂಘದ ಪಾಠವಾದ ತಿರಂಗಾ ದ್ವೇಷ ಇಟ್ಟುಕೊಂಡಿರುವ @nalinkateel ಅವರಿಗೆ ಧ್ವಜ ತಲೆಕೆಳಗಾಗಿಸುವುದೇ ಮೂಲ ಅಜೆಂಡಾ ಇರುವಂತಿದೆ#NakliDeshBhakts pic.twitter.com/9OHByP18jH
— Karnataka Congress (@INCKarnataka) August 12, 2022
ರಾಷ್ಟ್ರಧ್ವಜ ಮಾರಾಟದ ಸರಕಾದಾಗ ಅದರ ಗುಣಮಟ್ಟ ಕಳೆದುಹೋಗುತ್ತವೆ, ವ್ಯಾಪಾರವೇ ಮುಖ್ಯವಾದಾಗ ಶ್ರದ್ಧೆ, ಭಕ್ತಿಗಳು ಕಳೆದುಹೋಗುತ್ತದೆ. ಮೊಟ್ಟೆಯಾಕಾರದ ಚಕ್ರ, ನಿಯಮವಿಲ್ಲದ ರಚನೆ, ಆಕಾರವಿಲ್ಲದ ಧ್ವಜ, ಹರಿದ, ಬಣ್ಣಗೆಟ್ಟ ರಾಷ್ಟ್ರಧ್ವಜ ಇವುಗಳಿಗೆ ಹೊಣೆ ಯಾರು, ಈ ಅಪಸಾವ್ಯಗಳಿಗೆ ಶಿಕ್ಷೆ ಯಾರಿಗೆ ಬಿಜೆಪಿ ? ಎಂದು ಪ್ರಶ್ನಿಸಿದೆ.
ರಾಷ್ಟ್ರಧ್ವಜ ಮಾರಾಟದ ಸರಕಾದಾಗ ಅದರ ಗುಣಮಟ್ಟ ಕಳೆದುಹೋಗುತ್ತವೆ, ವ್ಯಾಪಾರವೇ ಮುಖ್ಯವಾದಾಗ ಶ್ರದ್ಧೆ, ಭಕ್ತಿಗಳು ಕಳೆದುಹೋಗುತ್ತದೆ.
ಮೊಟ್ಟೆಯಾಕಾರದ ಚಕ್ರ, ನಿಯಮವಿಲ್ಲದ ರಚನೆ,
ಆಕಾರವಿಲ್ಲದ ಧ್ವಜ,
ಹರಿದ, ಬಣ್ಣಗೆಟ್ಟ ರಾಷ್ಟ್ರಧ್ವಜಇವುಗಳಿಗೆ ಹೊಣೆ ಯಾರು, ಈ ಅಪಸಾವ್ಯಗಳಿಗೆ ಶಿಕ್ಷೆ ಯಾರಿಗೆ @BJP4Karnataka?#NakliDeshBhakts pic.twitter.com/lvp1j5k694
— Karnataka Congress (@INCKarnataka) August 12, 2022