ಕೆಎನ್ಎನ್ ಡಿಜಿಟಲ್ ಡೆಸ್ಕ್: ಅನೇಕರ ಅನಾರೋಗ್ಯಕ್ಕೆ ಇತ್ತೀಚಿಗೆ ಕಾರಣವಾಗುತ್ತಿರೋ ರೋಗವೆಂದ್ರೇ ಅದು ಆಮ್ಲಪಿತ್ತ / ಉಳಿ ಅಥವಾ ಕಹಿ ತೇಗು(Hyperacidity). ಈ ರೋಗದ ಸಮಸ್ಯೆಯ ನಿವಾರಣೆಗೆ ಕೆಲವರು ಇಂಗ್ಲೀಷ್ ಮೆಡಿಸಿನ್ ಮೊರೆ ಹೋದ್ರೆ, ಮತ್ತೆ ಕೆಲವರು ಆಯುರ್ವೇದ ಔಷಧದ ( Ayurvedic Remedies ) ಮೊರೆ ಹೋಗುತ್ತಾರೆ. ಆದ್ರೇ ಇವರೆಡೂ ಬಿಟ್ಟು ಜಸ್ಟ್ ಈ ಮನೆ ಮದ್ದು ( Home Medicine ) ಮಾಡಿ ಸೇವಿಸಿ ನೋಡಿ, ನಿಮ್ಮ ಆಮ್ಲಪಿತ್ತ, ಉಳಿ-ಕಹಿ ತೇಗಿನ ಸಮಸ್ಯೆ ನಿವಾರಣೆ ಎನ್ನುತ್ತಾರೆ ವೈದ್ಯ ಡಾ. ಪ್ರವೀಣ್ ಕುಮಾರ್. ಹಾಗಾದ್ರೇ ಆ ಬಗ್ಗೆ ಮುಂದೆ ಓದಿ.
ಇತ್ತೀಚಿನ ದಿನಗಳಲ್ಲಿ ಆಮ್ಲಪಿತ್ತ ರೋಗವು ಎಲ್ಲ ವರ್ಗದ ಜನರಿಗೆ ಮತ್ತು ಎಲ್ಲ ವಯಸ್ಸಿನವರಿಗೂ ಕಾಡುತ್ತಿದೆ ಇದಕ್ಕೆ ನಮ್ಮ ಕೆಟ್ಟ ಜೀವನ ಪದ್ಧತಿ ಹಾಗೂ ಆಹಾರ ಪದ್ಧತಿಯೇ ಕಾರಣ.
ಆಮ್ಲಪಿತ್ತವು ಒಂದು ಅನ್ನವಹ ಸ್ರೋತಸ್ಸಿನ (gastrointestinal tract) ರೋಗ. ಪಿತ್ತವನ್ನು ಪ್ರಕೋಪ ಮಾಡುವಂತಹ ಪದಾರ್ಥಗಳನ್ನು ತಿಂದಾಗ ಪಾಚಕ ಪಿತ್ತದಲ್ಲಿ ಆಮ್ಲದ ಭಾವವು ಹೆಚ್ಚಾಗುವುದರಿಂದ ಆಮ್ಲಪಿತ್ತವು ಉಂಟಾಗುತ್ತದೆ. ಇದನ್ನು ಆಧುನಿಕ ವೈದ್ಯಕೀಯ ಶಾಸ್ತ್ರದಲ್ಲಿ Acid reflux, Hyperacidity & Acid peptic disease ಅಂತಲೂ ಕರೆಯುತ್ತಾರೆ.
ಆಮ್ಲಪಿತ್ತವನ್ನು ಉರ್ದ್ವಗ ಆಮ್ಲಪಿತ್ತ ಮತ್ತು ಅಧೋಗ ಆಮ್ಲಪಿತ್ತ ಎಂದು ಎರಡು ವಿಧವಾಗಿ ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
BIGG NEWS: ಮನಾಲಿಯಲ್ಲಿ ಜಾನಪದ ಕಲಾವಿದರೊಂದಿಗೆ ನೃತ್ಯ ಮಾಡಿದ ʼಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ʼ| Watch
ಆಮ್ಲಪಿತ್ತ ಬರಲು ಮುಖ್ಯ ಕಾರಣಗಳು
- ಅಳಸಿದ / ಕೆಟ್ಟು ಹೋದ ಪದಾರ್ಥಗಳನ್ನು ತಿನ್ನುವುದು
- ಅತಿಯಾದ ಹುಳಿ/ ಖಾರದ ಆಹಾರ ಸೇವನೆ
- ಕರಿದ ಪದಾರ್ಥಗಳ ಸೇವನೆ
- ವಿರುದ್ಧ ಆಹಾರ ಸೇವನೆ
ಇದರಿಂದ ದೇಹದಲ್ಲಿನ ಪಿತ್ತ/ ಉಷ್ಣತೆಯು ಏರಿಕೆಯಾಗುತ್ತದೆ. ಆದ ಕಾರಣ ಆಮ್ಲಪಿತ್ತ / ಉಳಿ ಅಥವಾ ಕಹಿ ತೇಗು ಅಂತಹ ಲಕ್ಷಣಗಳು ಕಾಣಿಸುತ್ತದೆ.
ಆಮ್ಲಪಿತ್ತದ ಲಕ್ಷಣಗಳು
- ಅನ್ನ ಜೀರ್ಣವಾಗದಿರುವುದು
- ಉಳಿ / ಕಹಿ ತೇಗುನಂತೆ ಬರುವುದು
- ವಾಂತಿ / ವಾಕರಿಕೆ
- ಮೈ ಭಾರ
- ಎದೆ ಮತ್ತು ಗಂಟಲಿನಲ್ಲಿ ಉರಿ
- ಆಯಾಸ
- ಅರುಚಿ
ಜಸ್ ಈ ಮನೆಮದ್ದು ಮಾಡಿ, ಸೇವಿಸಿ ನೋಡಿ
- 1/2 ಚಮಚ ಕೊತ್ತಂಬರಿ ಕಾಳನ್ನು ನೆನಸಿದ ನೀರಿನಲ್ಲಿ ಸ್ವಲ್ಪ ಕಲ್ಲು ಸಕ್ಕರೆ ಬೆರೆಸಿ ಸೇವಿಸುವುದು
- ಊಟ ಮುಗಿದ ನಂತರ ಕಾಲು ಚಮಚ ಜೀರಿಗೆಯನ್ನು ಸೇವಿಸುವುದು
- ಅರ್ಧ ಚಮಚ ಜೇಷ್ಠ ಮಧು ಅಥವಾ ನೆಲ್ಲಿಕಾಯಿ ಪುಡಿವನ್ನು ನೀರಿನಲ್ಲಿ ಕಲಸಿ ಸೇವಿಸುವುದು
ಆದ್ರೇ ನೆನಪಿರಲಿ, ನಿಮ್ಮ ಸಮಸ್ಯೆ ಇದಕ್ಕಿಂತ ಹೆಚ್ಚಾಗಿದ್ದರೇ ಸಮೀಪದ ವೈದ್ಯರ ಬಳಿ ತೆರಳಿ ಸೂಕ್ತ ಸಲಹೆಯ ಮೂಲಕ ಚಿಕಿತ್ಸೆ ಪಡೆಯೋದು ಮರೆಯಬೇಡಿ.
ಈ ಮನೆ ಮದ್ದು, ನಿಮ್ಮ ಹಲವು ಸಮಸ್ಯೆ ನಿವಾರಣೆಗಾಗಿ ಡಾ. ಪ್ರವೀಣ್ ಕುಮಾರ್, ಬಿ.ಎ.ಎಂ.ಎಸ್, 8660885793 ( ವಾಟ್ಸಾಪ್ ಮಾತ್ರ ಮಾಡುವುದು) ಸಂಖ್ಯೆಗೆ ಸಂಪರ್ಕಿಸಿಯೂ ಪಡೆಯಬಹುದಾಗಿದೆ.