ನವದೆಹಲಿ: ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬೃಹತ್ ಕೂಟಗಳನ್ನು ತಪ್ಪಿಸಲು ಕೇಂದ್ರವು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.
ಇದೇ ವೇಳೇ ಸೋಂಕನ್ನು ತಪ್ಪಿಸಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವಂತೆ ಕೇಂದ್ರವು ಜನರನ್ನು ಒತ್ತಾಯಿಸಿದೆ.
ಏತನ್ಮಧ್ಯೆ, ಹಲವಾರು ರಾಜ್ಯಗಳು ಮಾಸ್ಕ್ ಕಡ್ಡಾಯಗೊಳಿಸುವುದು ಸೇರಿದಂತೆ ಕೋವಿಡ್ -19 ಸುರಕ್ಷತಾ ಕ್ರಮಗಳನ್ನು ಬಲಪಡಿಸಲು ಪ್ರಾರಂಭಿಸಿವೆ. ಈ ವಾರ ಕರ್ನಾಟಕ ಹಾಗೂ ದೆಹಲಿ ಸರ್ಕಾರವು ಮಾಸ್ಕ್ ಆದೇಶವನ್ನು ಪುನಃಸ್ಥಾಪಿಸಿತು ಮತ್ತು ದೆಹಲಿಯಲ್ಲಿ ಆದೇಶವನ್ನು ಉಲ್ಲಂಘಿಸುವವರಿಗೆ ತಲಾ 500 ರೂ.ಗಳ ದಂಡ ವಿಧಿಸಲಾಗುವುದು ಎಂದು ಹೇಳಿದೆ.