ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐಎ) ಟರ್ಮಿನಲ್ 3 ರಲ್ಲಿ ಜನದಟ್ಟಣೆ ಮತ್ತು ನೂಕುನುಗ್ಗಲು ಉಂಟಾದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ, ಇಂದು ಬೆಳಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದರು.
ಭೇಟಿಗೂ ಮುನ್ನ ಜ್ಯೋತಿರಾದಿತ್ಯ ಸಿಂಧಿಯಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿರುವುದು ಮತ್ತು ಉದ್ದನೆಯ ಸರತಿ ಸಾಲುಗಳ ಬಗ್ಗೆ ದೂರುಗಳು ಸಾಮಾಜಿಕ ಮಾಧ್ಯಮದಲ್ಲಿ ದೂರುಗಳ ಬಂದ ಹಿನ್ನೆಲೆ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ದೆಹಲಿ ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ (DIAL) ನಾಲ್ಕು ಅಂಶಗಳ ಕ್ರಿಯಾ ಯೋಜನೆಯನ್ನು ತಕ್ಷಣದ ಪರಿಹಾರ ಕ್ರಮಗಳಾಗಿ ಜಾರಿಗೆ ತರಲು ಮುಂದಾಗಿದೆ.
Been here from last 30 minutes and still not halfway through the security check line on T3, @DelhiAirport
What is going on?@AAI_Official help please 🙏
#help #airports #waiting pic.twitter.com/p8JLBmqYTz— Riya Bhatia (@riyatennis) December 8, 2022
#WATCH | Union Civil Aviation Minister Jyotiraditya M. Scindia makes a surprise visit to Terminal 3 of Delhi International Airport amid complaints of congestion by passengers pic.twitter.com/5XBrNNDhDD
— ANI (@ANI) December 12, 2022
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ರ ಹಠಾತ್ ತಪಾಸಣೆಯನ್ನು ಸಿಂಧಿಯಾ ಯೋಜಿಸಬಹುದು ಎಂದು ಈ ಹಿಂದೆ ವರದಿ ಮಾಡಲಾಗಿತ್ತು. ಕಳೆದ ಕೆಲವು ದಿನಗಳಿಂದ, ದೆಹಲಿ ವಿಮಾನ ನಿಲ್ದಾಣದಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳ ಬಗ್ಗೆ ಪ್ರಯಾಣಿಕರು ಟ್ವಿಟರ್ನಲ್ಲಿ ತಮ್ಮ ಸಂಕಟವನ್ನು ಹಂಚಿಕೊಳ್ಳುತ್ತಿದ್ದಾರೆ. ಅನೇಕರು ಭದ್ರತೆಯಲ್ಲಿ ದೀರ್ಘ ಸರತಿ ಸಾಲುಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
WATCH VIDEO: ತನ್ನ ಮುದ್ದಿನ ಸಾಕು ನಾಯಿಗೆ ʻಸೀಮಂತʼ ಕಾರ್ಯ ಮಾಡಿದ ಮಹಿಳೆ!… ಹೃದಯಸ್ಪರ್ಶಿ ವಿಡಿಯೋ ವೈರಲ್
WATCH VIDEO: ತನ್ನ ಮುದ್ದಿನ ಸಾಕು ನಾಯಿಗೆ ʻಸೀಮಂತʼ ಕಾರ್ಯ ಮಾಡಿದ ಮಹಿಳೆ!… ಹೃದಯಸ್ಪರ್ಶಿ ವಿಡಿಯೋ ವೈರಲ್