ಥಾಣೆ: ಕಾಲೇಜು ವಿದ್ಯಾರ್ಥಿನಿಗೆ ಆಟೋ ಚಾಲಕನೋರ್ವ ಕಿರುಕುಳ ನೀಡಿ ಆಕೆಯನ್ನು ಅರ್ಧ ಕಿಮೀವರೆಗೆ ಎಳೆದೊಯ್ಯ ಅಮಾನವೀಯ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಥಾಣೆಯಲ್ಲಿ ಬೆಳಗ್ಗೆ 6.45ರ ಸುಮಾರಿಗೆ ನಡೆದ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುವತಿ ಕಾಲೇಜಿಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ನಿಂತಿದ್ದ ಆಟೋರಿಕ್ಷಾ ಚಾಲಕನೊಬ್ಬ ಆಕೆಯ ಬಗ್ಗೆ ಕೆಟ್ಟದಾಗಿ ಮಾಡಿದ್ದಾನೆ. ಇದನ್ನು ಪ್ರಶ್ನಿಸಲು ಯುವತಿ ಹೋದಾಗ ಆಕೆಗೆ ಕಿರುಕುಳ ನೀಡಿ ಅವಳ ಕೈ ಹಿಡಿದು ಎಳೆದಿದ್ದಾನೆ. ಬಳಿಕ ಯುವತಿ ಕೂಗಲು ಪ್ರಾರಂಭಿಸಿದ್ದಾಳೆ, ಆಗ ಚಾಲಕ ಪರಾರಿಯಾಗಲು ಯತ್ನಿಸಿದ್ದನು. ಆದರೆ ಯುವತಿ ಆತನ ಕೈ ಹಿಡಿದುಕೊಂಡಿದ್ದಳು ಎನ್ನಲಾಗುತ್ತಿದೆ.
ಈ ವೇಳೆ ಚಾಲಕ ಆಟೋವನ್ನು ಓಡಿಸಲು ಪ್ರಾರಂಭಿಸಿದ್ದಾನೆ. ಈ ವೇಳೆ ಯುವತಿ ವಾಹನದೊಂದಿಗೆ ಸುಮಾರು 500 ಮೀಟರ್ ಎಳೆದೊಯ್ದು ಬಿದ್ದಳು, ನಂತರ ಆರೋಪಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
#Thane: Rickshaw driver molests schoolgirl, starts the auto and drags her with it#Shocking #Video #Mumbai #MumbaiNews #ThaneNews #Driver #Girl pic.twitter.com/m5xgVErb3L
— Free Press Journal (@fpjindia) October 14, 2022
ದೂರಿನ ಆಧಾರದ ಮೇಲೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಆಟೊರಿಕ್ಷಾ ಚಾಲಕ ತಲೆಮರೆಸಿಕೊಂಡಿದ್ದಾನೆ.