Author: KNN IT TEAM

ನವದೆಹಲಿ : ಶಿಕ್ಷಣ ಸಚಿವಾಲಯವು 2023ರ ಜನವರಿ 27ರಂದು ಪರೀಕ್ಷಾ ಪೇ ಚರ್ಚಾ 2023 ಕಾರ್ಯಕ್ರಮವನ್ನ ಆಯೋಜಿಸಲಿದೆ. ಕಾರ್ಯಕ್ರಮದ ನೋಂದಣಿಯನ್ನ ಈಗಾಗಲೇ ಮುಚ್ಚಲಾಗಿದ್ದು, 9, 10, 11 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳು ಸೃಜನಶೀಲ ಬರವಣಿಗೆ ಸ್ಪರ್ಧೆಗೆ ಅರ್ಜಿ ಸಲ್ಲಿಸಬಹುದು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಹನ ನಡೆಸುವ ಅವಕಾಶವನ್ನ ಗೆಲ್ಲಬಹುದು. “ಪ್ರಧಾನಿ ನರೇಂದ್ರ ಮೋದಿ ಅವರು 2023ರ ಜನವರಿ 27ರಂದು ಪರೀಕ್ಷಾ ಪರ್ ಚರ್ಚಾ ಅವರ ಮುಂಬರುವ ಆವೃತ್ತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ” ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. https://twitter.com/ANI/status/1610201121494294528?s=20&t=gD1v8C8rC1kJvhNYzffBOQ ಮೈಗವ್’ನಲ್ಲಿ ಸ್ಪರ್ಧೆಗಳ ಮೂಲಕ ಆಯ್ಕೆಯಾದ ಸುಮಾರು 2050 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಶಿಕ್ಷಣ ಸಚಿವಾಲಯವು ಪಿಪಿಸಿ ಕಿಟ್’ಗಳನ್ನು ಉಡುಗೊರೆಯಾಗಿ ನೀಡಲಿದೆ. ಪರೀಕ್ಷಾ ಪೇ ಚರ್ಚಾದಲ್ಲಿ, ಪ್ರಧಾನಿ ಮೋದಿ ಪ್ರತಿ ವರ್ಷ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸುತ್ತಾರೆ. ಪರೀಕ್ಷಾ ಒತ್ತಡವನ್ನ ನಿವಾರಿಸಲು ಮತ್ತು ಲೈವ್…

Read More

ಧಾರವಾಡ: ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಇದ್ದ ತಪೋವನದಲ್ಲೀಗ ನಿರವಮೌನ ಆವರಿಸಿದೆ. https://kannadanewsnow.com/kannada/cm-bommai-bs-yediyurappa-pay-their-last-respects-to-siddeshwara-sri/ ಹುಬ್ಬಳ್ಳಿ ಧಾರವಾಡ ಸೇರಿದಂತೆ ಈ ಭಾಗದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಹಾಗೂ ಯಾವುದೇ ಕಾರ್ಯಕ್ರಮಗಳು ಇದ್ದರು ಅವರ ವಾಸ್ತವ್ಯ ಧಾರವಾಡದ ತಪೋವನ. ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಮಹತ್ವ ನೀಡಿದ್ದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಅತ್ಯಂತ ಪ್ರೀತಿ ಹಾಗೂ ಸಂತಸದಿಂದ ನಿಸರ್ಗದಲ್ಲಿ ವಾತಾವರಣವನ್ನ ಅನುಭವಿಸುತ್ತಿದ್ದರು. https://kannadanewsnow.com/kannada/cm-bommai-bs-yediyurappa-pay-their-last-respects-to-siddeshwara-sri/ ಮಹಾತಪಸ್ವಿ ಕುಮಾರೇಶ್ವರ ಸ್ವಾಮೀಜಿಗಳ ತಪೋವನ ಅಂದರೆ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಪಂಚ ಪ್ರಾಣವಾಗಿತ್ತು. ಯಾವುದೇ ಅಹಂ ಇಲ್ಲದೇ ಸರಳರಲ್ಲಿ ಸರಳರಾಗಿ ತಮ್ಮ ಆಘಾದವಾದ ಜ್ಞಾನ ಸು಼ಧೆಯನ್ನ ಜನರಿಗೆ ನೀಡುತಿದ್ದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಈ ಸ್ಥಳವೂ ಒಂದು ಪ್ರೇರಣೆಯಾಗಿತ್ತು.

Read More

ಅರುಣಾಚಲ ಪ್ರದೇಶ : ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅರುಣಾಚಲ ಪ್ರದೇಶದಲ್ಲಿ ಸುಮಾರು 724 ಕೋಟಿ ಮೌಲ್ಯದ 28 ಮೂಲಸೌಕರ್ಯ ಯೋಜನೆಗಳನ್ನುದೇಶಕ್ಕೆ ಅರ್ಪಿಸಿದರು. ಅರುಣಾಚಲ ಪ್ರದೇಶದ ಅಲಾಂಗ್-ಯಿನ್‌ಕಿಯಾಂಗ್ ರಸ್ತೆಯಲ್ಲಿರುವ ಸಿಯೋಮ್ ಸೇತುವೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಚಿವರು ಗಡಿ ರಸ್ತೆಗಳ ಸಂಸ್ಥೆಯ (BRO) ಯೋಜನೆಗಳನ್ನು ಉದ್ಘಾಟಿಸಿದರು. ಬಳಿಕ ಸಮಾರಂಭದಲ್ಲಿ ಮಾತನಾಡಿದ ಅವರು,ಈ ಯೋಜನೆಗಳು ಗಡಿ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಮತ್ತು ಗಡಿ ರಸ್ತೆಗಳ ಸಂಸ್ಥೆ (BRO) ಸಂಘಟಿತ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಗಡಿ ಪ್ರದೇಶಗಳನ್ನು ಸಂಪರ್ಕಿಸುವುದು, ಅದರ ನಿವಾಸಿಗಳ ಅಭಿವೃದ್ಧಿ ಪಡಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದೇಳಿದರು. ಜಗತ್ತು ಇಂದು ಹಲವು ಸಂಘರ್ಷಗಳಿಗೆ ಸಾಕ್ಷಿಯಾಗಿದೆ. ಭಾರತ ಯಾವಾಗಲೂ ಯುದ್ಧದ ವಿರುದ್ಧವಾಗಿದೆ. ನಾವು ಯುದ್ಧವನ್ನು ನಂಬುವುದಿಲ್ಲ, ಆದರೆ ಅದು ನಮ್ಮ ಮೇಲೆ ಬಲವಂತವಾಗಿ ಬಂದರೆ ನಾವು ಹೋರಾಡುತ್ತೇವೆ. ರಾಷ್ಟ್ರವು ಎಲ್ಲಾ ಬೆದರಿಕೆಗಳಿಂದ ರಕ್ಷಿಸಲ್ಪಟ್ಟಿದೆ. ನಮ್ಮ ಸಶಸ್ತ್ರ ಪಡೆಗಳು ಸಿದ್ಧವಾಗಿದ್ದು, ಬಿಆರ್‌ಒ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿರುವುದು ಸಂತಸ ತಂದಿದೆ…

Read More

ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.  ಸಿದ್ದೇಶ್ವರ ಶ್ರೀಗಳ  ಅಂತಿಮ ದರ್ಶನವನ್ನು ಸಿಎಂ ಬೊಮ್ಮಾಯಿ ಪಡೆದ ಬಳಿಕ ಮಾತನಾಡಿ,  ʻಸರ್ಕಾರಿ ಗೌರವದ ಬಳಿಕವೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುತ್ತೆ ʼಎಂದಿದ್ದಾರೆ https://kannadanewsnow.com/kannada/last-darshan-of-siddeshwar-sri-is-extended-till-tomorrow-district-collector-vijayamahantesh-order/ ಶ್ರೀಗಳ ಅಂತಿಮ ದರ್ಶನ ಪಡೆದ ಬಳಿಕ  ಸಿಎಂ ಬೊಮ್ಮಾಯಿ ಮಾತನಾಡಿ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾಧಿಗಳಲ್ಲಿ ಒಂದು ಮನವಿ ಮಾಡಿಕೊಳ್ಳುತ್ತೇವೆ. ಪೂಜ್ಯರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆ. ಸರ್ಕಾರಿ ಗೌರವದ ಬಳಿವೂ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಭಕ್ತರು ಯಾರು ಆತಂಕ ಪಡುವ ಅಗತ್ಯವಿಲ್ಲ .ಈ ವೇಳೆ  ಶಾಂತಿ, ಶಿಸ್ತಿನ ಮೂಲಕ ದರ್ಶನ ಪಡೆದುಕೊಂಡು ಮುಂದುವರಿಯಬೇಕೆಂದು ಕೇಳುತ್ತೇನೆ ಎಂದು ಮನವಿ ಮಾಡಿದ್ದಾರೆ https://kannadanewsnow.com/kannada/last-darshan-of-siddeshwar-sri-is-extended-till-tomorrow-district-collector-vijayamahantesh-order/

Read More

ವಿಜಯಪುರ : ಸರ್ಕಾರಿ ಗೌರವ ಮುಗಿದ ಮೇಲೂ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಭಕ್ತರು ಆತಂಕಪಡುವುದು ಬೇಡ, ಸಂಜೆ 5:15 ಕ್ಕೆ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ. ಸೂರ್ಯಾಸ್ತದ ಮೊದಲು ಗೌರವ ಸಲ್ಲಿಸಬೇಕಾಗುತ್ತದೆ, ಸರ್ಕಾರಿ ಗೌರವ ಮುಗಿದ ಮೇಲೂ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ, ಭಕ್ತರು ಗಾಬರಿಪಡಬೇಡಿ, ಆತುರಪಡಬೇಡಿ ಶಾಂತವಾಗಿ ದರ್ಶನ ಪಡೆದು ಬೇರೆಯವರಿಗೂ ದರ್ಶನಕ್ಕೆ ಅವಕಾಶ ನೀಡಿ ಎಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ. ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಸಿದ್ದೇಶ್ವರ ಶ್ರೀ’ ಗಳ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಕಿ.ಮೀಗಟ್ಟಲೇ ಕ್ಯೂ ನಿಂತಿದೆ.. ಇದುವರೆಗೂ 12 ಲಕ್ಷಕ್ಕೂ ಹೆಚ್ಚು ಜನರು ಅಂತಿಮ ದರ್ಶನ ಪಡೆದಿದ್ದಾರೆ. ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಈ…

Read More

ವಿಜಯಪುರ: ನಿನ್ನೆ ನಿಧನರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಎಲ್ಲಾ ಭಕ್ತರು ಶಾಂತಿ, ಸಂಯಮ ಹಾಗೂ ಶಿಸ್ತಿನಿಂದ ದರ್ಶನ ಪಡೆದು ಅಂತ್ಯಕ್ರಿಯೆಗೆ ಸಹರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಇಂದು ಈ ಬಗ್ಗೆ ವಿಜಯಪುರದಲ್ಲಿ ಮಾತಾಡಿದಂತ ಅವರು, ವಿಜಯಪುರ ಜಿಲ್ಲಾಡಳಿತ, ಎಲ್ಲಾ ಜನಪ್ರತಿನಿಧಿಗಳು, ಮುಖಂಡರಾದ ಎಂ.ಬಿ.ಪಾಟೀಲ್, ಬಸನಗೌಡರು, ಶಾಸಕರು ಎಲ್ಲರೂ ಅಚ್ಚುಕಟ್ಟಾಗಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು. ಸಕಲ ಸರ್ಕಾರಿ ಗೌರವಗಳನ್ನು ಸಿದ್ದೇಶ್ವರ ಶ್ರೀಗಳಿಗೆ ಸೂರ್ಯ ಅಸ್ತವಾಗೋ ಮೊದಲೇ ಸಲ್ಲಿಸಬೇಕಾಗುತ್ತದೆ. 5.15ಕ್ಕೆ ಸರ್ಕಾರಿ ಗೌರವಗಳನ್ನು ಪ್ರಾರಂಭಿಸಲಾಗುತ್ತದೆ. ಈ ಸಕಲ ಸರ್ಕಾರಿ ಗೌರವಗಳನ್ನು ನೆರವೇರಿಸಿದ ನಂತ್ರವೂ ಭಕ್ತರಿಗೆ ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಯಾರೂ ಆಂತಕ ಪಡುವ ಅಗತ್ಯವಿಲ್ಲ. ಶಾಂತಿಯುತವಾಗಿ ಶ್ರೀಗಳ ಅಂತಿಮ ದರ್ಶನ ಪಡೆಯುವಂತ ಮನವಿ ಮಾಡಿದರು. ಸಿದ್ದೇಶ್ವರ ಶ್ರೀಗಳು ಒಂದು ಸಂಸ್ಕೃತಿ ಯನ್ನೇ ಬಿಟ್ಟುಹೋಗಿದ್ದಾರೆ ವಿಜಯಪುರದ ಜನ ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುತ್ತಿದ್ದಾರೆ. ಸಿದ್ದೇಶ್ವರ ಗುರುಗಳು ಎಷ್ಟು ಪ್ರೀತಿ, ವಿಶ್ವಾಸ…

Read More

ನವದೆಹಲಿ : ಆರ್ಥಿಕ ದುರುಪಯೋಗದ ಆರೋಪದ ಮೇಲೆ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವ್ರನ್ನ ಪದಚ್ಯುತಗೊಳಿಸಿದ ನಂತ್ರ ತೊಂದರೆಗೀಡಾದ ಫಿನ್ಟೆಕ್ ಕಂಪನಿಯ ಮೇಲ್ವಿಚಾರಣೆ ನಡೆಸುತ್ತಿರುವ ಭಾರತ್ ಪೇಯ ಮುಖ್ಯ ಕಾರ್ಯನಿರ್ವಾಹಕ ಸುಹೈಲ್ ಸಮೀರ್ ಕಂಪನಿಯಿಂದ ಹೊರ ಬಂದಿದ್ದಾರೆ. “ಸಮೀರ್ ಎರಡು ವಾರಗಳ ಹಿಂದೆ ರಾಜೀನಾಮೆ ನೀಡಿದ್ದು, ನೋಟಿಸ್ ಅವಧಿಯಲ್ಲಿದ್ದಾರೆ” ಎಂದು ಅನಾಮಧೇಯತೆಯನ್ನ ವಿನಂತಿಸಿದ ಮೂಲಗಳಲ್ಲಿ ಒಬ್ಬರು ತಿಳಿಸಿದ್ದಾರೆ. ಭಾರತ್ ಪೇ ವಕ್ತಾರರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಈ ಬೆಳವಣಿಗೆಯನ್ನ ದೃಢಪಡಿಸಿದ್ದಾರೆ. ಸಮೀರ್ ಜನವರಿ 7 ರಿಂದ ಕಂಪನಿಯ “ಕಾರ್ಯತಂತ್ರದ ಸಲಹೆಗಾರ” ಆಗಿ ಬದಲಾಗಲಿದ್ದಾರೆ ಎಂದು ಅವರು ಹೇಳಿದರು. ಭಾರತ್ ಪೇಯ ಸಿಎಫ್ಒ ನಳಿನ್ ನೇಗಿ ಅವರನ್ನ ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದ್ದು, ಸಮೀರ್ ಅವರ ಸ್ಥಾನಕ್ಕೆ ಕಂಪನಿಯ ಆಡಳಿತ ಮಂಡಳಿ ಶೋಧ ನಡೆಸುತ್ತಿದೆ ಎಂದಿದೆ. https://kannadanewsnow.com/kannada/india-is-growing-from-a-scientific-point-of-view-the-world-is-looking-at-us-pm-modi/ https://kannadanewsnow.com/kannada/third-russian-found-dead-in-odisha-in-span-of-two-weeks/ https://kannadanewsnow.com/kannada/allowance-for-final-darshan-of-siddeshwar-sri-till-tomorrow-vijaypur-dc-mahantesh/

Read More

ವಿಜಯಪುರ: ನಿನ್ನೆ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ(82) ಅನಾರೋಗ್ಯದಿಂದ ನಿಧನರಾಗಿದ್ದರು. ಅವರ ಅಂತಿಮ ದರ್ಶನಕ್ಕೆ ವಿಜಯಪುರದ ಸೈನಿಕ ಶಾಲೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ವಿಜಯಪುರದ ಇತಿಹಾಸದಲ್ಲೇ ಕಂಡು ಕೇಳರಿಯದ ಭಕ್ತಗಣ ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ. ಹೀಗಾಗಿ ಕಿಲೋ ಮೀಟರ್ ಗಟ್ಟಲೇ ಭಕ್ತರು ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಹೌದು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ವಿಜಯಪುರದ ಸೈನಿಕ ಶಾಲೆ ಮೈದಾನಕ್ಕೆ ಸಹಸ್ರಾರು ಭಕ್ತರು ಆಗಮಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಗಣ ಅಂತಿಮ ದರ್ಶನ ಪಡೆಯಲು ಆಗಮಿಸಿರೋ ಕಾರಣ, ಕಿಲೋ ಮೀಟರ್ ಗಟ್ಟಲೇ ಸಾಲು ಉಂಟಾಗಿದೆ. ವಿಜಯಪುರದ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಭಕ್ತಗಣ ಸಿದ್ದೇಶ್ವರ ಸ್ವಾಮೀಜಿಯ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ, ಸುಡುವ ಬಿಸಿಲನ್ನೂ ಲೆಕ್ಕಿಸದೇ ನಿಂತಿದೆ. ಕೆಲವೆಡೆ ಭಕ್ತರ ನೂಕು ನುಗ್ಗಲು ಉಂಟಾದಾಗ ಪೊಲೀಸರು ಲಾಠಿ ಬೀಸಿ ನಿಯಂತ್ರಿಸಿದ್ದು ಕಂಡು ಬಂದಿದೆ. ಈ ನಡುವೆ ಭಕ್ತರು ಅಂತಿಮ ದರ್ಶನಕ್ಕೆ ಕಿಲೋ ಮೀಟರ್…

Read More

ವಿಜಯಪುರ: ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ‘ಸಿದ್ದೇಶ್ವರ ಶ್ರೀ’ ಗಳ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಕಿ.ಮೀಗಟ್ಟಲೇ ಕ್ಯೂ ನಿಂತಿದೆ.. ಇದುವರೆಗೂ 12 ಲಕ್ಷಕ್ಕೂ ಹೆಚ್ಚು ಜನರು ಅಂತಿಮ ದರ್ಶನ ಪಡೆದಿದ್ದಾರೆ. ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಈ ಸಂದರ್ಭದಲ್ಲಿ ವಿಷಲ್ ಹೊಡೆದು ಭಕ್ತರನ್ನು ನಿಯಂತ್ರಿಸಲು ಮುಂದಾದ ಸಚಿವ ಶ್ರೀರಾಮುಲು ಮುಂದಾಗಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದಾರೆ. ಪ್ರತಿ ಮೂಲೆ ಮೂಲೆ, ಹಳ್ಳಿಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ಇನ್ನು ಅಪಾರ ಸಂಖ್ಯೆ ಜನರು ಬರುವ ಸಾಧ್ಯತೆ ಇದೆ. ಇನ್ನು ಇಂದು ಸಂಜೆ 5 ಗಂಟೆಗೆ ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಲಿದೆ. ಅಂತಿಮ ದರ್ಶನ ಮುಗಿಯದಿದ್ಗರೇ ನಾಳೆಯೂ ದರ್ಶಕ್ಕೆ ಅವಕಾಶ ನೀಡಲಾಗುತ್ತದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ವಿಜಯಪುರ ಡಿಸಿ ವಿಜಯ್ ಮಹಾಂತೇಶ್ ಆದೇಶ ನೀಡಿದ್ದಾರೆ.…

Read More

ವಿಜಯಪುರ :  ಸಿದ್ದೇಶ್ವರ ಶ್ರೀಗಳ  ಅಂತಿಮ ದರ್ಶನ ಮುಗಿಯದಿದ್ಗರೇ ನಾಳೆಯೂವಿಸ್ತರಣೆ ಮಾಡಲಾಗುತ್ತದೆ. ವಿಜಯಪುರ ಡಿ.ಸಿ ವಿಜಯ್‌ ಮಹಾಂತೇಶ್‌ ಆದೇಶ ನೀಡಿದ್ದಾರೆ https://kannadanewsnow.com/kannada/people-flock-to-the-final-darshan-of-siddeshwar-shri-is-minister-sriramulu-controlling-the-devotees-by-blowing-whistles/ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಇನ್ನೊಂದೆಡೆ ಶ್ರೀಗಳ ದರ್ಶನಕ್ಕೆ ಓಡಿಕೊಂಡು  ಬರುತ್ತಿದ್ದಾರೆ. ಆ ಕಾರಣಕ್ಕಾಗಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಮುಗಿಯದಿದ್ರೆ ನಾಳೆವರೆಗೂ ವಿಸ್ತರಣೆ ಮಾಡಲಾಗುತ್ತದೆ ಎಂದು ವಿಜಯಪುರ  ಡಿಸಿ ವಿಜಯ್‌ ಮಹಾಂತೇಶ್‌ ಆದೇಶ ಹೊರಡಿಸಿದ್ದಾರೆ. https://kannadanewsnow.com/kannada/people-flock-to-the-final-darshan-of-siddeshwar-shri-is-minister-sriramulu-controlling-the-devotees-by-blowing-whistles/ ಯಾರು ಆತಂಕ ಪಡುವ ಅಗತ್ಯವಿಲ್ಲ. ಓಡಿಕೊಂಡು ಬರುವ ಅಗತ್ಯವಿಲ್ಲ. ಎಲ್ಲರಿಗೂ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅಂತಿಮ ದರ್ಶನ ಮುಗಿಯದಿದ್ಗರೇ ನಾಳೆಯೂವಿಸ್ತರಣೆ ಮಾಡಲಾಗುತ್ತದೆ. ಈಗಾಗಲೇ 15 ಲಕ್ಷ ಜನರು ಬಂದು ಶ್ರೀಗಳ ದರ್ಶನ ಪಡೆದಿದ್ದಾರೆ  ಎಂದಿದ್ದಾರೆ

Read More