Author: KNN IT TEAM

ಮಂಗಳೂರು: ಈಗಾಗಲೇ ಸುಳ್ಳು ದೂರು ನೀಡಿದ್ದ ಕಾರಣದಿಂದಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಹೀಗೆಯೇ ಮುಂದಿನ ಚುನಾವಣೆ ವೇಳೆಗೆ ಸಿದ್ಧರಾಮಯ್ಯ ( Siddaramaiah ) ಕೂಡ ಜೈಲು ಸೇರಲಿದ್ದಾರೆ. ಯಾಕೆಂದರೇ ಅವರ ಎಲ್ಲಾ ಹಗರಣಗಳನ್ನು ನಾವು ಬಯಲು ಮಾಡುತ್ತೇವೆ ನೋಡುತ್ತಾ ಇರಿ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ( Nalin Kumar Kateel ) ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಗುತ್ತಿಗೆಯಲ್ಲಿ ಶೇ.40 ಪರ್ಸೆಂಟ್ ಕಮೀಷನ್ ಕೊಡಬೇಕು ಎಂಬುದಾಗಿ ಕೆಂಪಣ್ಣ ಆರೋಪಿಸಿದ್ದರು. ಅಲ್ಲದೇ ಕೇಸ್ ಕೂಡ ಹಾಕಿದರು. ಈ ಬಗ್ಗೆ ದಾಖಲೆಗಳಿದ್ದರೇ ಲೋಕಾಯುಕ್ತಕ್ಕೆ ದೂರು ಕೊಡುವಂತೆಯೂ ನಾವು ಹೇಳಿದ್ದೆವು. ಒಂದು ವೇಳೆ ದಾಖಲೆ ನೀಡಿದ್ದೇ ಆದ್ರೇ ಯಾರೇ ಪ್ರಭಾವಿ ಶಾಸಕ, ಸಚಿವನಾಗಿದ್ದರೂ ಕಿತ್ತೆಸೆಯುತ್ತೇವೆ ಎಂದು ಹೇಳಿದ್ದವೆ. ಆದ್ರೇ ಕಾಂಗ್ರೆಸ್ ನ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ಈ ಬಗ್ಗೆ ಗಲಾಟೆ ಮಾಡಿಲ್ಲ, ಲೋಕಾಯುಕ್ತಕ್ಕೆ ದೂರು ನೀಡಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಪಿತಾಮಹವಾಗಿದೆ.…

Read More

ನವದೆಹಲಿ : ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಮಾಜಿ ಮುಖ್ಯಸ್ಥ ಎ.ಎಸ್. ದುಲತ್ ಅವರು ಮಂಗಳವಾರ ದೆಹಲಿಯಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ದುಲಾತ್ ಅವರು ಭಾರತೀಯ ಗುಪ್ತಚರ ಬ್ಯೂರೋದ ಮಾಜಿ ವಿಶೇಷ ನಿರ್ದೇಶಕರೂ ಆಗಿದ್ದರು. ನಿವೃತ್ತಿಯ ನಂತರ ಅವರು ಜನವರಿ 2000 ರಿಂದ ಮೇ 2004 ರವರೆಗೆ ಪ್ರಧಾನ ಮಂತ್ರಿ ಕಚೇರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಒಂಬತ್ತು ದಿನಗಳ ವಿರಾಮದ ನಂತರ ದೆಹಲಿಯಲ್ಲಿ ಭಾರತ್ ಜೋಡೊ ಯಾತ್ರೆ ಪುನಾರಂಭಗೊಂಡಿದ್ದು, ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಯಾತ್ರೆಯಲ್ಲಿ ಭಾಗವಹಿಸಿದ್ದರು. https://twitter.com/ANI/status/1610200933157462018 ಭಾರತ್ ಜೋಡೊ ಯಾತ್ರೆಯು ಮಧ್ಯಾಹ್ನ ಉತ್ತರ ಪ್ರದೇಶವನ್ನು ಪ್ರವೇಶಿಸಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಯುಪಿ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು. ಉತ್ತರ ಪ್ರದೇಶದಿಂದ ಯಾತ್ರೆಯು ಜನವರಿ 6 ರಿಂದ 10 ರವರೆಗೆ ಹರಿಯಾಣದಲ್ಲಿ, ಜನವರಿ 11 ರಿಂದ 20 ರವರೆಗೆ ಪಂಜಾಬ್‌ನಲ್ಲಿ ಮತ್ತು ಜನವರಿ…

Read More

ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ವಿಜಯಪುರದಲ್ಲಿ ಸೈನಿಕ ಶಾಲೆ ಆವರಣದಲ್ಲಿ ಪ್ರಹ್ಲಾದ್‌  ಜೋಶಿ ಅಂತಿಮ ದರ್ಶನ ಪಡೆದರು https://kannadanewsnow.com/kannada/romance-of-romeos-on-the-road-a-shower-of-kisses-for-the-lover-who-was-riding-a-bike/ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಸರ್ಕಾರದ ಪರವಾಗಿ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಿದ್ದೇನೆ. ಸಿದ್ದೇಶ್ವರ ಶ್ರೀಗಳು ನುಡಿದಂತೆ ನಡೆಯುತ್ತಿದ್ದರು. ಶ್ರೀಗಳ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದರು. ಪ್ರಧಾನಿ ಮೋದಿ ನಿನ್ನೆ ಕೂಡಾ ಪೂಜ್ಯರ ಆರೋಗ್ಯ ವಿಚಾರಿಸಿದ್ದರು. ಪ್ರಧಾನಿ ಜತೆ ಫೋನ್‌ನಲ್ಲಿ ಅವರ ಸ್ವರ ಕೇಳುತ್ತಿದಂತೆ ಕೈ ಮುಗಿಯುತ್ತಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದ್ದರು.ಮೊನ್ನೆಯಷ್ಟೇ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ. https://kannadanewsnow.com/kannada/romance-of-romeos-on-the-road-a-shower-of-kisses-for-the-lover-who-was-riding-a-bike/

Read More

ಬೆಂಗಳೂರು : ಇತ್ತೀಚೆಗಂತೂ ರಸ್ತೆಗಳಲ್ಲಿ ರೋಡ್ ರೋಮಿಯೋಗಳ ಹಾವಳಿ ಹೆಚ್ಚಾಗಿದೆ. ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ರೀತಿಯಲ್ಲಿ ಸರ್ಕಸ್ ಮಾಡುತ್ತಲೇ ಇರುತ್ತಾರೆ , ಇತ್ತೀಚೆಗಷ್ಟೇ ಆಂದ್ರಪ್ರದೇಶದ ವಿಶಾಖಪಟ್ಟಣಂನಳ್ಳೀ ಹಾಡಹಗಲೇ ಕಾಲೇಜು ಹುಡುಗಿಯನ್ನು ಯುವಕನೊಬ್ಬ ಅಸಭ್ಯ ರೀತಿಯಲ್ಲಿ ಬೈಕ್ ಟ್ಯಾಂಕ್ ಮೇಲೆ ಕೂರಿಸಿ ಕಿಸ್ ಮಾಡಿದ ಘಟನೆ ನಡೆದಿತ್ತು. ಈ ಬೆನ್ನಲ್ಲೇ ಬೆಂಗಳೂರಿನಲ್ಲಿ ಅಂತಹದ್ದೇ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆಗೆ ವ್ಯಕ್ತವಾಗಿದೆ. ಹೆಲ್ಮೆಟೂ ಹಾಕದೆ ಪ್ರೇಮಿಗಳು ಹುಚ್ಚಾಟ ನಡೆಸಿದ್ದಾರೆ. ಹಿಂಬದಿ ಕಾರ್ ಪ್ರಯಾಣಿಕರ ಮೊಬೈಲ್ ನಲ್ಲಿ ದೃಶ್ಯ ಸೆರೆಯಾಗಿದೆ. ಬೆಂಗಳೂರಿನ ಆರ್ ಆರ್ ನಗರದ ಫ್ಲೈ ಓವರ್ ಮೇಲೆ ಘಟನೆ ನಡೆದಿದ್ದು, ಗಾಡಿ ಓಡಿಸುತ್ತಿದ್ಗ ಹುಡುಗಿಯ ಹಿಂದಿನ ಸೀಟಿನಲ್ಲಿ ಹುಡುಗ ಕೂತಿದ್ದಾನೆ. ನಡು ರಸ್ತೆಯಲ್ಲಿ ಹುಡುಗ ಹುಡುಗಿಗೆ ಮುತ್ತಿನ ಸುರಿಮಳೆ ಸುರಿಸಿದ್ದಾನೆ. ಹಿಂದೆ ಬರುತ್ತಿದ್ದ ಕಾರಿನ ಚಾಲಕ ರೊಮ್ಯಾನ್ಸ್ ದೃಶ್ಯವನ್ನು ಸೆರೆ ಹಿಡಿದಿದ್ದಾನೆ. ಆಂಧ್ರದಲ್ಲೂ ರೋಡ್ ರೋಮಿಯೋ ರೊಮ್ಯಾನ್ಸ್ ಆಂದ್ರಪ್ರದೇಶದ ವಿಶಾಖಪಟ್ಟಣಂನ ಪ್ರಧಾನ ಮಂತ್ರಿ ರಸ್ತೆಯಲ್ಲಿ ಹಾಡಹಗಲೇ…

Read More

ನವದೆಹಲಿ: ಶ್ರೀಲಂಕಾ ಸರಣಿಗೆ ಭಾರತದ ಬಲಿಷ್ಠ ತಂಡವನ್ನು ಇಂದು ಬಿಸಿಸಿಐ ಪ್ರಕಟಿಸಿದೆ. ಈ ಪ್ರಕಟಿತ ತಂಡದ ಪಟ್ಟಿಯಲ್ಲಿ ಗಾಯದಿಂದ ಹೊರಗುಳಿದಿದ್ದಂತ ದ ಜಸ್ಪ್ರೀತ್ ಬುಮ್ರಾ ಕೂಡ,, ಶ್ರೀಲಂಕಾ ಸರಣಿಗೆ ಕಮ್ ಬ್ಯಾಕ್ ಆಗಿದ್ದಾರೆ.  ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಶ್ರೀಲಂಕಾ ಸರಣಿಗಾಗಿ ಏಕದಿನ ಅಂತಾರಾಷ್ಟ್ರೀಯ (ಏಕದಿನ) ತಂಡದಲ್ಲಿ ಸೇರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ದೃಢಪಡಿಸಿದೆ. ಭಾರತದ ಅತ್ಯುನ್ನತ ಕ್ರಿಕೆಟ್ ಮಂಡಳಿ ಹಂಚಿಕೊಂಡಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ, ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ವೇಗಿ ಬುಮ್ರಾ ಅವರನ್ನು ಮುಂಬರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತದ ಏಕದಿನ ತಂಡದಲ್ಲಿ ಸೇರಿಸಿದೆ. ಬುಮ್ರಾ ಸೆಪ್ಟೆಂಬರ್ 2022 ರಿಂದ ಕ್ರಿಕೆಟ್ ಆಟದಿಂದ ಹೊರಗುಳಿದಿದ್ದರು ಮತ್ತು ಬೆನ್ನಿನ ಗಾಯದಿಂದಾಗಿ ಐಸಿಸಿ ಪುರುಷರ ಟಿ 20 ವಿಶ್ವಕಪ್ನಿಂದ ಹೊರಗುಳಿದಿದ್ದರು. ಭಾರತೀಯ ವೇಗಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಳಿಕ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಫಿಟ್ ಎಂದು ಘೋಷಿಸಿದೆ.…

Read More

ಬೆಂಗಳೂರು: ನಗರದಲ್ಲಿ ಮೋಸ, ಸುಲಿಗೆ , ಧರೋಡೆ ಹೆಚ್ಚಾಗಿದೆ. ಅಪರಿಚತರಿಗೆ ಮೊಬೈಲ್‌ ಕೊಡೋ ಮುನ್ನ ಎಚ್ಚರವಾಗಿರಿ. ಅರ್ಜೆಂಟ್ ಒಂದು ಕಾಲ್ ಮಾಡಿ ಕೊಡ್ತೀನಿ ಅಂತ ಮೊಬೈಲ್ ತಗೊಂಡು ವ್ಯಕ್ತಿಗೆ ಮೋಸ ಮಾಡಿದ ಘಟನೆ ನಡೆದಿದೆ. ಮತ್ತಿಕೆರೆಯಲ್ಲಿ ಮೊಬೈಲ್‌ ಕೊಟ್ಟಿದ್ದಕ್ಕೆ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.ದೇವವ್ರಾತ್ ಸಿಂಗ್ ಅನ್ನೋರ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ನನ್ನ ಮೊಬೈಲ್ ನಲ್ಲಿ ಚಾರ್ಜ್ ಇಲ್ಲ ಅರ್ಜೆಂಟ್ ಕಾಲ್ ಮಾಡಬೇಕು ಅಂದಿದ್ದ. ಅವನ ಮಾತು ಕೇಳಿ ದೇವವ್ರಾತ್ ಸಿಂಗ್ ಅವರು ಅಪರಿಚತನ ಕೈಗೆ ಮೊಬೈಲ್ ಕೊಟ್ಟಿದ್ದರು. ಮೊಬೈಲ್ ಕೈಗೆ ಕೊಟ್ಟ ತಕ್ಷಣ ಆತ ಮತ್ತೊಂದು ಬೈಕ್ ಹತ್ತಿ ಮೊಬೈಲ್ ಸಮೇತ ಎಸ್ಕೇಪ್ ಆಗಿದ್ದಾನೆ. ಮೊಬೈಲ್ ನಲ್ಲಿ ದೇವವ್ರಾತ್ ಮತ್ತವನ ಗರ್ಲ್ ಫ್ರೆಂಡ್ ಖಾಸಗಿ ವೀಡಿಯೋಗಳಿದ್ದವು. ಇದನ್ನು ನೋಡಿದ ಅಪರಿಚಿತ, ಇದೀಗ ವ್ಯಕ್ತಿ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕೋದಾಗಿ ಬೆದರಿಕೆ ಹಾಕಿದ್ದಾನೆ. https://kannadanewsnow.com/kannada/silence-at-tapovana-where-siddeshwara-swamiji-was-staying/

Read More

ವಿಜಯಪುರ: ಸಿದ್ಧೇಶ್ವರ ಶ್ರೀಗಳು ನಿಧನಾನಂತ್ರ ಅಗ್ನಿಸ್ಪರ್ಷದ ಮೂಲಕ ಶವಸಂಸ್ಕಾರಕ್ಕೆ ಕೋರಿಕೊಂಡಿದ್ದಾರೆ. ಇದರ ಅರ್ಥ ಅವರು ಸಾವಿನ ನಂತ್ರವೂ ಈ ಪಂಚಭೂತಗಳಲ್ಲಿ ಲೀನರಾಗಿ, ಗಾಳಿಯಲ್ಲಿ ಸಿದ್ದೇಶ್ವರ ಶ್ರೀಗಳು ಇರಲಿದ್ದಾರೆ ಎಂಬುದಾಗಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಸಿದ್ದೇಶ್ವರ ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನದ ಬಳಿಕ ಮಾತನಾಡಿದಂತ ಅವರು, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಂತೆ ಬದುಕಿದವರು ಮತ್ತಾರೂ ಇಲ್ಲ. ಎಲ್ಲರಿಗೂ ಮಾದರಿಯಾಗುವಂತ ನಡೆ ಅವರದ್ದಾಗಿದೆ. ಅವರು ಯಾವತ್ತೂ ಯಾವುದಕ್ಕೂ ಆಸೆ ಪಡಲಿಲ್ಲ ಎಂದರು. ಸಿದ್ದೇಶ್ವರ ಶ್ರೀಗಳು ತಮ್ಮ ನಿಧನಾನಂತ್ರ ಯಾವುದೇ ಸ್ಮಾರಕವನ್ನು ನಿರ್ಮಿಸದಂತೆ ತಿಳಿಸಿದ್ದಾರೆ. ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಷ ಮಾಡುವ ಮೂಲಕ ಅಂತ್ಯ ಸಂಸ್ಕಾರವನ್ನು ಮಾಡುವಂತೆ ಹೇಳಿದ್ದರು. ಹೀಗೆ ಮಾಡುವುದರಿಂದ ಅವರು ಈ ಗಾಳಿಯಲ್ಲಿ ಲೀನರಾಗಿ ಅದನ್ನು ಸೇವಿಸಿದಂತ ಎಲ್ಲರಲ್ಲಿಯೂ ಅವರಿರುತ್ತಾರೆ ಎಂದು ಹೇಳಿದರು. ಸಿದ್ದೇಶ್ವರ ಶ್ರೀಗಳು ಅಂತ್ಯವಾಗಿಲ್ಲ. ಎಲ್ಲಿಯವರೆಗೆ ಈ ಭೂಮಂಡಲ, ನಿಸರ್ಗ, ಈ ಸೂರ್ಯ, ಚಂದ್ರರು ಇರುತ್ತಾರೋ ಅಲ್ಲಿಯವರೆಗೂ ಅವರು ಈ ಭಕ್ತಸಾಗರದ ಶರೀರದಲ್ಲಿ ಇರುತ್ತಾರೆ. ಅವರನ್ನು ಪಡೆದುಕೊಳ್ಳುವ…

Read More

ಶಾಂಘೈ(ಚೀನಾ): ಚೀನಾದಲ್ಲಿ ಏಕಾಏಕಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ಮಧ್ಯೆ ಶಾಂಘೈ ನಗರದಲ್ಲಿ 70 ಪ್ರತಿಶತದಷ್ಟು ಜನರು ಕೊರೊನಾ ಸೋಂಕಿಗೆ ಒಳಗಾಗಿರಬಹುದು ಎಂದು ಶಾಂಘೈನ ಉನ್ನತ ಆಸ್ಪತ್ರೆಯೊಂದರ ಹಿರಿಯ ವೈದ್ಯರು ಹೇಳಿದ್ದಾರೆ ಎಂದು ರಾಜ್ಯ ಮಾಧ್ಯಮ ಮಂಗಳವಾರ ವರದಿ ಮಾಡಿದೆ. ಕಳೆದ ತಿಂಗಳು ಚೀನಾದಲ್ಲಿ ಕಠಿಣ ಕೋವಿಡ್ ನಿಯಮಗಳ ವಿರುದ್ಧ ಜನರು ಬೃಹತ್ ಪ್ರತಿಭಟನೆ ನಡೆಸಿದ್ದರು. ಪರಿಣಾಮವಾಗಿ ಅಲ್ಲಿನ ಸರ್ಕಾರ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿತ್ತು. ಇದಾದ ನಂತರ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಹೆಚ್ಚಾಯಿತು. ಕೋವಿಡ್ ಉಲ್ಬಣಗೊಳ್ಳುತ್ತಿದ್ದಂತೆ ಚೀನಾದಲ್ಲಿ ಆಸ್ಪತ್ರೆಗಳು, ಸ್ಮಶಾನಗಳು ತುಂಬಿ ತುಳುಕುವಂತಾಗಿದೆ. ಪ್ರತಿದಿನ ಲಕ್ಷಗಟ್ಟಲೇ ಪ್ರಕರಣಗಳು ವರದಿಯಾಗುತ್ತಿದ್ದು, ಅದೇ ಸಮಯದಲ್ಲಿ ಸಾವಿರಾರು ಜನರು ಕೊರೊನಾಗೆ ಬಲಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲಿನ ರುಯಿಜಿನ್ ಆಸ್ಪತ್ರೆಯ ಉಪಾಧ್ಯಕ್ಷ ಮತ್ತು ಶಾಂಘೈನ ಕೋವಿಡ್ ತಜ್ಞರ ಸಲಹಾ ಸಮಿತಿಯ ಸದಸ್ಯರಾದ ಚೆನ್ ಎರ್ಜೆನ್, ನಗರದ 25 ಮಿಲಿಯನ್ ಜನರಲ್ಲಿ ಹೆಚ್ಚಿನವರು ಸೋಂಕಿಗೆ ಒಳಗಾಗಿರಬಹುದು ಎಂದು ಅಂದಾಜಿಸಿದ್ದಾರೆ. ಈಗ ಶಾಂಘೈನಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆಯು ತುಂಬಾ…

Read More

ನವದೆಹಲಿ: ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ( Former BCCI president Sourav Ganguly ) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕರನ್ನಾಗಿ ( Delhi Capitals’s Director of Cricket ) ನೇಮಕ ಮಾಡಲು ಸಜ್ಜಾಗಿದ್ದಾರೆ ಎಂದು ಐಪಿಎಲ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. https://twitter.com/PTI_News/status/1610205156813180931 ಭಾರತದ ಮಾಜಿ ನಾಯಕ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅಧಿಕಾರ ವಹಿಸಿಕೊಳ್ಳುವ ಮೊದಲು ಐಪಿಎಲ್ 2019ರಲ್ಲಿ ಸಲಹೆಗಾರರಾಗಿ ಫ್ರಾಂಚೈಸಿಯ ಭಾಗವಾಗಿದ್ದರು. ಇಂತಹ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. https://kannadanewsnow.com/kannada/devotees-queuing-up-for-a-kilometre-to-pay-their-last-respects-to-siddheshwara-swamiji/ https://kannadanewsnow.com/kannada/siddheshwara-sri-astangata-nidagundi-town-closed-swamijis-heartfelt-tribute/

Read More

ವಿಜಯಪುರ: ಮೊನ್ನೆಯಷ್ಟೇ ಸಿದ್ದೇಶ್ವರ ಶ್ರೀ ಆರೋಗ್ಯ ವಿಚಾರಿಸಿದ್ದೆವು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಒತ್ತಾಯಿಸಿದ್ದೆವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ವಿಜಯಪುರದ ಸೈನಿಕ ಶಾಲೆ ಮೈದಾನದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಮೊನ್ನೆಯಷ್ಟೇ ಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆವು, ಫೋನ್ ನಲ್ಲಿ ಪ್ರಧಾನಿ ಮೋದಿ ಧ್ವನಿ ಕೇಳುತ್ತಿದ್ದಂತೆ ಸಿದ್ದೇಶ್ವರ ಶ್ರೀಗಳು ಕೈ ಮುಗಿದಿದ್ದರು. ಮೋದಿಯವರು ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದರು. ಶ್ರೀಗಳು ನುಡಿದಂತೆ ನಡೆಯುತ್ತಿದ್ದರು, ಭಾರತ ಸರ್ಕಾರದ ಪರವಾಗಿ ಶ್ರೀಗಳಿಗೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು. ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಶ್ರೀಗಳ ಅಂತಿಮ ದರ್ಶನವನ್ನು ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ , ಪ್ರಹ್ಲಾದ್ ಜೋಶಿ, ಶಶಿಕಲಾ ಜೋಲ್ಲೆ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ. https://kannadanewsnow.com/kannada/cm-bommai-urges-people-to-cooperate-peacefully-for-siddeshwara-seers-funeral/ https://kannadanewsnow.com/kannada/cm-bommai-bs-yediyurappa-pay-their-last-respects-to-siddeshwara-sri/

Read More