Author: KNN IT TEAM

ಬೆಂಗಳೂರು: ಕೆಪಿಟಿಸಿಎಲ್ ನಲ್ಲಿ ಖಾಲಿ ಇದ್ದಂತ ವಿವಿಧ ಹುದ್ದೆಗಳ ( KPTCL Recruitment ) ಭರ್ತಿಗೆ ಕೆಇಎ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಸಿವಿಲ್ ಸಹಾಯಕ ಅಭಿಯಂತರರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಕೂಡ ನಡೆಸಲಾಗಿತ್ತು. ಇದೀಗ ಪರೀಕ್ಷೆಯ ಬಳಿಕ ಇಂದು ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಇಂಧನ ಸಚಿವ ಸುನೀಲ್ ಕುಮಾರ್ ( Minister Sunil Kumar ) ಅವರು, ಕೆ.ಪಿ.ಟಿ.ಸಿ.ಎಲ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ನಡೆದ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೂ ಹಾರ್ದಿಕ ಅಭಿನಂದನೆಗಳು. ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ. https://twitter.com/karkalasunil/status/1610215063381770240 ಇನ್ನೂ ಕೆಪಿಟಿಸಿಎಲ್ ನ ಸಹಾಯಕ ಅಭಿಯಂತರರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಹಾಜರಾದಂತ ಅಭ್ಯರ್ಥಿಗಳು ಫಲಿತಾಂಶವನ್ನು https://cetonline.karnataka.gov.in/kea/kptcl2022 ಲಿಂಕ್ ನಲ್ಲಿ ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದಾಗಿದೆ. https://kannadanewsnow.com/kannada/cm-bommai-pays-last-respects-to-siddeshwara-seer/ https://kannadanewsnow.com/kannada/list-of-congress-candidates-to-be-released-by-the-end-of-january-siddaramaiah/

Read More

ವೈರಲ್‌ ನ್ಯೂಸ್‌ : ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿನೂತನ ಸುದ್ದಿಗಳು ಬಿರುಗಾಳಿ ಎಬ್ಬಿಸುತ್ತಲೇ ಇರುತ್ತದೆ ಇದೀಗ ಯುವಕನೊಬ್ಬ ಗುಟ್ಕಾವನ್ನು ಬಾಯಿಗೆ ಹಾಕೋದಕ್ಕೆ ರೆಡಿ ಮಾಡುವಂತೆ  ನಾಗಿನ್‌ ಹಾಡಿಗೆ ಸ್ಟೆಪ್‌ ಹಾಕಿದ್ದ ವಿಚಿತ್ರ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ View this post on Instagram A post shared by 🦋 MAHI 🦋 (@butterfly__mahi) ‘ಗುಟ್ಕಾ ನೃತ್ಯ’ ಎಂದೇ ಪ್ರಸಿದ್ಧಿ ಪಡೆಯುವ ಮಟ್ಟಿಗೆ ಮಾಡಿದ್ದಾರೆ. ಯಾವ ಪ್ರದೇಶದಲ್ಲಿ ನಡೆದ ಘಟನೆ ಎಂದು ಎಲ್ಲಿಯೂ ವರದಿಯಾಗಿಲ್ಲ. https://kannadanewsnow.com/kannada/now-aadhaar-holders-can-update-addresses-online-with-consent-of-head-of-family/ ಈತನ ಸುತ್ತಮುತ್ತಲಿನ ಜನರು ನೃತ್ಯ ಮಾಡುತ್ತ ಎಂಜಾಯ್‌ ಮಾಡುತ್ತಿದ್ದಾರೆ ಆದರೆ ಈ ವ್ಯಕ್ತಿ ಮಾತ್ರ ಡಿಫರಂಟ್‌ ಆಗಿ ಸ್ಟೆಪ್‌ಗಳನ್ನು ಹಾಕುತ್ತಾ ಅಕ್ಷ್ಯನ್ ಮಾಡುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗುತ್ತಿದೆ. ನೆಟ್ಟಿಗರು ಆಚ್ಚರಿಯಿಂದ ನೋಡುವಂತೆ ಮಾಡಿದಂತೂ ನಿಜ https://kannadanewsnow.com/kannada/now-aadhaar-holders-can-update-addresses-online-with-consent-of-head-of-family/

Read More

ರಾಮನಗರ : ಜ. 6 ರಂದು ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಆಯೋಜನೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ರಾಮನಗರ ಜಾಬ್ ಪಾರ್ ಆಲ್ ಹೆಸರಿನಲ್ಲಿ ಮೆಗಾ ಜಾಬ್ ಪೇರ್ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಿರುವ ರಾಜ್ಯ ಸರ್ಕಾರ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿದೆ. ಬಿಜಿಎಸ್ ವರ್ಲ್ಡ್ ಸ್ಕೂಲ್ ಹಾಗೂ ಪಿಯು ಕಾಲೇಜು ಆವರಣದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಜನವರಿ 6 ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಉದ್ಯೋಗ ಮೇಳ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದ್ದು, ಉದ್ಯೋಗ ಮೇಳದಲ್ಲಿ ಎಸ್ಎಸ್ಎಲ್ಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದ್ದು, ಉದ್ಯೋಗ ಮೇಳದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 7090001125 / 7411845322 / 9964784178 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ಹೊರಡಿಸಲಾಗಿದೆ. https://kannadanewsnow.com/kannada/now-aadhaar-holders-can-update-addresses-online-with-consent-of-head-of-family/ https://kannadanewsnow.com/kannada/icmr-invents-new-technology-to-eradicate-mosquitoes-spreading-dengue-zika-malaria/…

Read More

ನವದೆಹಲಿ: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (Unique Identification Authority of India -UIDAI) ಈಗ ನಿವಾಸಿಗಳಿಗೆ ತಮ್ಮ ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ಆನ್ ಲೈನ್ ನಲ್ಲೇ ಆಧಾರ್ ನಲ್ಲಿನ ( Aadhaar online ) ವಿಳಾಸಗಳನ್ನು ನವೀಕರಿಸಲು ಅನುಮತಿ ನೀಡಿದೆ ಎಂದು ಅಧಿಕೃತವಾಗಿ ತಿಳಿಸಿದೆ. ರೇಷನ್ ಕಾರ್ಡ್, ಅಂಕಪಟ್ಟಿ, ಮದುವೆ ಪ್ರಮಾಣಪತ್ರ, ಪಾಸ್ಪೋರ್ಟ್ ಇತ್ಯಾದಿಗಳಂತಹ ಸಂಬಂಧ ದಾಖಲೆಗಳ ಪುರಾವೆಗಳನ್ನು ಸಲ್ಲಿಸಿದ ನಂತರ, ಅರ್ಜಿದಾರರು ಮತ್ತು ಕುಟುಂಬದ ಮುಖ್ಯಸ್ಥರ (ಎಚ್ಒಎಫ್) ಹೆಸರು ಮತ್ತು ಅವರ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ನಂತರ ಹೊಸ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಈ ಪ್ರಕ್ರಿಯೆಗೆ HOF ನಿಂದ OTP-ಆಧಾರಿತ ದೃಢೀಕರಣದ ಅಗತ್ಯವಿದೆ ಎಂದಿದೆ. ಒಂದು ವೇಳೆ ಸಂಬಂಧ ದಾಖಲೆಯ ಪುರಾವೆ ಲಭ್ಯವಿಲ್ಲದಿದ್ದರೆ, ಹೇಳಿಕೆಯ ಪ್ರಕಾರ, ಯುಐಡಿಎಐ ಸೂಚಿಸಿದ ನಮೂನೆಯಲ್ಲಿ ಎಚ್ಒಎಫ್ನಿಂದ ಸ್ವಯಂ ಘೋಷಣೆಯನ್ನು ಸಲ್ಲಿಸಲು ಯುಐಡಿಎಐ ನಿವಾಸಿಗೆ ಒದಗಿಸುತ್ತದೆ. “ಆಧಾರ್ನಲ್ಲಿ ಎಚ್ಒಎಫ್ ಆಧಾರಿತ ಆನ್ಲೈನ್ ವಿಳಾಸ ನವೀಕರಣವು ತಮ್ಮ ಆಧಾರ್ನಲ್ಲಿ ವಿಳಾಸವನ್ನು ನವೀಕರಿಸಲು ತಮ್ಮದೇ ಹೆಸರಿನಲ್ಲಿ ಬೆಂಬಲಿಸುವ ದಾಖಲೆಗಳನ್ನು…

Read More

ಬೆಂಗಳೂರು: ಚಿಕ್ಕಬಾಣಾವರದ ಪ್ರಸಿದ್ಧ ಚನ್ನಕೇಶವ ದೇವಾಲಯದಲ್ಲಿ ಬೀಗ ಮರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಚನ್ನಕೇಶವ ಸ್ವಾಮಿ ದೇವಾಲಯದಲ್ಲೂ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿತ್ತು. ಏಕಾದಶಿ ಹಿನ್ನೆಲೆ ಸಾವಿರಾರು ಭಕ್ತರು ದೇವರ ದರ್ಶನ ಮಾಡಿ ಹುಂಡಿಯಲ್ಲಿ ಕಾಣಿಕೆ ಹಾಕಿದ್ದರು. ಆದರೆ, ವೈಕುಂಠ ಏಕಾದಶಿಯ ರಾತ್ರಿಯಂದೇ ದೇವಾಲಯ ಹುಂಡಿ ಕನ್ನ ಹಾಕಲಾಗಿದೆ. ಹುಂಡಿಯಲ್ಲಿದ್ದ ಸುಮಾರು 80 ಸಾವಿರದಿಂದ 1 ಲಕ್ಷ ರೂ ಕಳ್ಳತನವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸೋಲದೇವನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ. https://kannadanewsnow.com/kannada/siddheswara-sris-discourse-in-north-karnataka-is-famous-may-swamijis-soul-rest-in-peace-murugarajendra-swamy/

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕೆಲವು ಕಷ್ಟಗಳು ಇದ್ದೇ ಇರುತ್ತವೆ. ಇದರ ಹಿಂದೆ ಋಣಾತ್ಮಕ ಶಕ್ತಿಗಳ ಇರುತ್ತವೆ ಎಮಬ ನಂಬಿಕೆಯಿದೆ.  ಇದರಿಂದ ಮನೆಯ ನೆಮ್ಮದಿ, ಸಂತೋಷ ಹಾಳಾಗುತ್ತದೆ. ವಾಸ್ತವವಾಗಿ ಇದು ಮನೆಯಲ್ಲಿ ವಾಸ್ತು ದೋಷದಿಂದ ಸಂಭವಿಸುತ್ತದೆ. ನಾವು ನಮ್ಮ ಮನೆಯಲ್ಲಿ ವಸ್ತುಗಳನ್ನು ಚೆನ್ನಾಗಿ ಅಲಂಕರಿಸುತ್ತೇವೆ. ಆದರೆ ವಸ್ತುಗಳು ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ಇಲ್ಲದ ಕಾರಣ, ವಾಸ್ತು ದೋಷಗಳು ಉಂಟಾಗಿ ಸಮಸ್ಯೆಗಳು ಪ್ರಾರಂಭಿಸುತ್ತವೆ. ಮನೆಯಲ್ಲಿ ಇರುವ ಕನ್ನಡಿ ಕೂಡ ಸಂತೋಷ ಮತ್ತು ಶಾಂತಿಗೆ ಸಂಬಂಧಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ರೀತಿಯ ಕನ್ನಡಿ ಇರಬೇಕು ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು? ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಕನ್ನಡಿಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕನ್ನಡಿಯನ್ನು ಹಾಕುವುದು ಉತ್ತಮವೆಂದು ಪರಿಗಣಿಸಲಾಗಿದೆ. ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಆರ್ಥಿಕ ಸ್ಥಿತಿ…

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ನವದೆಹಲಿ ಮೂಲದ ಇಂಡಿಯನ್ ಸೆಂಟರ್ ಫಾರ್ ಮೆಡಿಕಲ್ ರಿಸರ್ಚ್ (ICMR) ಡೆಂಗ್ಯೂ, ಮಲೇರಿಯಾ, ಜಿಕಾ ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ನಂತಹ ಸೊಳ್ಳೆಯಿಂದ ಹರಡುವ ರೋಗಗಳನ್ನ ತಡೆಗಟ್ಟಲು ಹೊಸ ಸ್ಥಳೀಯ ತಂತ್ರಜ್ಞಾನವನ್ನ ಕಂಡುಹಿಡಿದಿದೆ. ಈ ಸಹಾಯದಿಂದ, ಪ್ರತಿ ವರ್ಷ ಲಕ್ಷಾಂತರ ಜನರನ್ನ ಬಾಧಿಸುವ ಸೊಳ್ಳೆಯಿಂದ ಹರಡುವ ರೋಗಗಳನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ. ಐಸಿಎಂಆರ್ ಪ್ರಕಾರ, ಈ ಆವಿಷ್ಕಾರವು ಸೊಳ್ಳೆಯಿಂದ ಹರಡುವ ರೋಗಗಳ ವಿರುದ್ಧ ಭಾರತದ ಹೋರಾಟವನ್ನು ಬಲಪಡಿಸುತ್ತದೆ. ಖಾಸಗಿ ಕಂಪನಿಗಳಿಂದ ಪ್ರಸ್ತಾವನೆ ಕೋರಿಕೆ ದೇಶದ ದೊಡ್ಡ ಜನಸಂಖ್ಯೆಗೆ ತಂತ್ರಜ್ಞಾನವನ್ನ ಲಭ್ಯವಾಗುವಂತೆ ಮಾಡಲು ಅದು ಖಾಸಗಿ ಕಂಪನಿಗಳಿಂದ ಪ್ರಸ್ತಾವನೆಗಳನ್ನ ಕೋರಿದೆ. ಡೆಂಗ್ಯೂ, ಮಲೇರಿಯಾ, ಝಿಕಾ, ಚಿಕೂನ್ ಗುನ್ಯಾದಂತಹ ರೋಗಗಳನ್ನು ತಡೆಗಟ್ಟಲು ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಎಂಬ ಬ್ಯಾಕ್ಟೀರಿಯಾವನ್ನ ಉತ್ಪಾದಿಸುವ ತಂತ್ರವನ್ನ ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಇದು ಸೊಳ್ಳೆಗಳು ಮತ್ತು ಕಪ್ಪು ನೊಣ ಲಾರ್ವಾಗಳನ್ನ ಇತರ ಪ್ರಾಣಿಗಳಿಗೆ ಹಾನಿಯಾಗದಂತೆ ಕೊಲ್ಲುತ್ತದೆ. ಈ ತಂತ್ರಜ್ಞಾನವು ಇತರ ಪ್ರಾಣಿಗಳು ಮತ್ತು ಪರಿಸರಕ್ಕೆ ಸುರಕ್ಷಿತವಾಗಿದೆ ಎಂದು…

Read More

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :   ಪ್ರಸ್ತುತ ಸಮಯದಲ್ಲಿ ಸ್ಥೂಲಕಾಯತೆಯು ಎಲ್ಲರನ್ನೂ ಕಾಡುವ ಬಹುದೊಡ್ಡ ಸಮಸ್ಯೆಯಾಗಿದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿ ನೀವು ಸುಸ್ತಾಗಿದ್ದೀರಾ? ತೂಕ ಇಳಿಸಿಕೊಳ್ಳೋದಕ್ಕೆ ಹೋಗಿ ಡಯಟಿಂಗ್ ಪ್ಲಾನ್‌ ಮಾಡಿದ್ದೀರಾ? ಆದರಿಂದ ಅದೇಷ್ಟೂ ಹಣ ಕಳೆದುಕೊಂಡಿದ್ದಾರಾ?  ಇವೆಲ್ಲವುಗಳಿಂದ ನೀವು  ಚಿಂತಿತರಾಗಿದ್ದೀರಾ?   ಅಂತಹ ಸಮಸ್ಯೆಗಳಿಗೆ ನೀವು ಮನೆಯಲ್ಲಿಯೇ ಇದ್ದು ಪ್ರೋಟೀನ್ ಪುಡಿಯನ್ನು ತಯಾರಿಸುವ ಮೂಲಕ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಇದು ಕೇಳಲು ಸ್ವಲ್ಪ ಹೊಸದಾದರೂ ಸಹ ಇದು ನಿಜ. ತೂಕ ಕಳೆದುಕೊಳ್ಳುತ್ತಿರುವವರು ಈ ಸೂಪರ್ ಪ್ರೋಟೀನ್ ಪುಡಿಯನ್ನು ಮನೆಯಲ್ಲಿಯೇ ತಯಾರಿಸಬಹುದು. ಈ ಸರಳ ಸಲಹೆಗಳು ಅನುಸರಿಸುವ ಮೂಲಕ ಸ್ಥೂಲಕಾಯತೆ ಸಮಸ್ಯೆಗೆ ಬ್ರೇಕ್‌ ಹಾಕಬಹುದು. https://kannadanewsnow.com/kannada/is-your-baby-also-eating-mud-calcium-iron-deficiency-is-the-reason-doctors/ ಸೂಪರ್ ಪ್ರೋಟೀನ್ ಪುಡಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು ಒಂದು ಕಪ್ ಬಾದಾಮಿ, ಅರ್ಧ ಕಪ್ ವಾಲ್ ನಟ್ಸ್, ಅರ್ಧ ಕಪ್ ಹಸಿರು ಕಡಲೆಕಾಯಿ, ಅರ್ಧ ಕಪ್ ಪಿಸ್ತಾ, ಅರ್ಧ ಕಪ್ ಗೋಡಂಬಿ, ಎರಡು ಟೇಬಲ್ ಸ್ಪೂನ್ ಹಸಿರು ಕಲ್ಲಂಗಡಿ ಬೀಜಗಳು, ಎರಡು ಟೇಬಲ್ ಸ್ಪೂನ್ ಹಸಿ ಕುಂಬಳಕಾಯಿ…

Read More

ವಿಜಯನಗರ : ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಭರ್ಜರಿ ಸಿದ್ದತೆ ನಡೆಸಿದ್ದು, ಜನವರಿ ಅಂತ್ಯದ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಜಯನಗರದ ಹಗರಿಬೊಮ್ಮನಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ಜನವರಿ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಹೇಳಿದರು. ಸಂಕ್ರಾಂತಿಗೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದ ಡಿಕೆಶಿಗೆ ಈ ಮೂಲಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಅಗಲಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ದೊಡ್ಡಸರಳ ಸಂತವಾಗಿದ್ದಾರೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶ್ರೀಗಳು ತುಂಬಾ ಮಾನವೀಯತೆಯಿಂದ ಇದ್ದರು. ಶ್ರೀಗಳನ್ನು ನೋಡಿದವರಿಗೆ ಮಾತ್ರ ಅರಿವಾಗುತ್ತದೆ. ಬಸವಣ್ಣನವರ ತತ್ವವನ್ನು ಪ್ರೀತಿ, ವಿಶ್ವಾಸದಿಂದ ಹಂಚಿದ್ರು. ಶ್ರೀಗಳ ಅಗಲಿಕೆಯಿಂದ ನಾಡಿನ ಜನರಿಗೆ ನಷ್ಟ ಆಗಿದೆ. ಲಕ್ಷಾಂತರ ಭಕ್ತರು, ಅನುಯಾಯಿಗಳಿಗೆ ನೋವಾಗಿದೆ ಎಂದು ಸಿದ್ದರಾಮಯ್ಯ…

Read More

ವಿಜಯಪುರ: ನಿನ್ನೆ ನಿಧನರಾದಂತ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಗೆ, ರಾಜ್ಯ ಸರ್ಕಾರದಿಂದ ಇದೀಗ ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಅಂತಿಮನ ನಮನ ಸಲ್ಲಿಸಿದರು. ಸಾರ್ವಜನಿಕರ ಅಂತಿನ ದರ್ಶನದ ಬಳಿಕ, ಇಂದು ವಿಜಯಪುರದ ಸೈನಿಕ ಶಾಲೆಯ ಆವರಣದಲ್ಲಿ ಲಿಂಗೈಕ್ಯರಾದಂತ ಸಿದ್ದೇಶ್ವರ ಶ್ರೀಗಳ ಪಾರ್ಥೀವ ಶರೀರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು. ಈ ಬಳಿಕ ಪೊಲೀಸ್ ಬ್ಯಾಂಡ್ ನೊಂದಿಗೆ ಕುಶಲ ತೋಪು ಸಿಡಿಸುವ ಮೂಲಕ, ಸಿದ್ದೇಶ್ವರ ಶ್ರೀಗಳಿಗೆ ಸರ್ಕಾರದಿಂದ ಅಂತಿಮ ಗೌರವವನ್ನು ಸಲ್ಲಿಸಲಾಯಿತು. ನಡೆದಾಡುವ ದೇವರು ‘ಸಿದ್ದೇಶ್ವರ ಶ್ರೀ’ ಅಂತ್ಯಕ್ರಿಯೆಗೆ 5 ಕ್ವಿಂಟಾಲ್ ಶ್ರೀಗಂಧ ಸಮರ್ಪಿಸಿದ ಭಕ್ತ ವಿಜಯಪುರ : ನಡೆದಾಡುವ ದೇವರು ‘ಸಿದ್ದೇಶ್ವರ ಶ್ರೀ’ ಅಂತ್ಯಕ್ರಿಯೆಗೆ ಆಶ್ರಮದಲ್ಲಿ ಸಕಲ ಸಿದ್ದತೆ ನಡೆಸಲಾಗುತ್ತಿದ್ದು, ಭಕ್ತರೊಬ್ಬರು ತಮ್ಮ ಹೊಲದಲ್ಲಿ ಬೆಳೆದ 5 ಕ್ವಿಂಟಾಲ್ ಶ್ರೀಗಂಧವನ್ನು ಸಿದ್ದೇಶ್ವರ ಶ್ರೀ’ ಅಂತ್ಯಕ್ರಿಯೆಗೆ ನೀಡಿದ್ದಾರೆ. ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ…

Read More