Subscribe to Updates
Get the latest creative news from FooBar about art, design and business.
Author: KNN IT TEAM
ನವದೆಹಲಿ: ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ( Central Reserve Police Force – CRPF ) 1458 ಸಹಾಯಕ ಸಬ್-ಇನ್ಸ್ಪೆಕ್ಟರ್ (ಸ್ಟೆನೋಗ್ರಾಫರ್), ಹೆಡ್ ಕಾನ್ಸ್ಟೇಬಲ್ (ಸಚಿವಾಲಯ) ಹುದ್ದೆಗಳನ್ನ ಭರ್ತಿ ಮಾಡಲು ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಆಹ್ವಾನಿಸಿದೆ. ಇದರಲ್ಲಿ 143 ಸಹಾಯಕ ಸಬ್ ಇನ್ಸ್ಪೆಕ್ಟರ್ ಮತ್ತು 1315 ಹೆಡ್ ಕಾನ್ಸ್ಟೆಬಲ್ ಹುದ್ದೆಗಳಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಪಿಯುಸಿ ಅಥವಾ ತತ್ಸಮಾನ ಕೋರ್ಸ್ನಲ್ಲಿ ಉತ್ತೀರ್ಣರಾಗಿರಬೇಕು. ಇನ್ನು ಪುರುಷರಿಗೆ 165 ಸೆಂ.ಮೀ ಎತ್ತರ ಮತ್ತು ಮಹಿಳೆಯರಿಗೆ 155 ಸೆಂ.ಮೀ ಎತ್ತರ ಇರಬೇಕು. ಅಭ್ಯರ್ಥಿಗಳ ವಯಸ್ಸು ಜನವರಿ 25, 2023 ರಂತೆ 18 ರಿಂದ 25 ವರ್ಷಗಳ ನಡುವೆ ಇರಬೇಕು. ಅರ್ಹ ಅಭ್ಯರ್ಥಿಗಳು ಜನವರಿ 25, 2023 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅಪ್ಲಿಕೇಶನ್ಗಳು ಜನವರಿ 4, 2023 ರಿಂದ ಪ್ರಾರಂಭವಾಗುತ್ತವೆ.…
ನವದೆಹಲಿ: ಜನರು ಚಿತ್ರಮಂದಿರಗಳಿಗೆ ಆಹಾರವನ್ನು ತೆಗೆದುಕೊಂಡು ಹೋಗಬಹುದೇ ಎಂಬ ಬಗ್ಗೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಚಿತ್ರಮಂದಿರಗಳಲ್ಲಿ ಹೊರಗಿನಿಂದ ಆಹಾರವನ್ನು ನಿಷೇಧಿಸಬೇಕೆಂದು ಕೋರಿದ ಅರ್ಜಿಯಿಂದಾಗಿ ಚರ್ಚೆ ಪ್ರಾರಂಭವಾಯಿತು. ಚಲನಚಿತ್ರ ಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ಗಳು ಚಲನಚಿತ್ರ ವೀಕ್ಷಕರು ಹೊರಗಿನಿಂದ ಆಹಾರ ಮತ್ತು ಪಾನೀಯಗಳನ್ನು ಸಾಗಿಸುವುದನ್ನು ನಿಯಂತ್ರಿಸುವ ಹಕ್ಕನ್ನು ಹೊಂದಿವೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು. ಹೈಕೋರ್ಟ್ ತನ್ನ ಸಂಕ್ಷಿಪ್ತತೆಯನ್ನು ಮೀರಿದೆ ಮತ್ತು ವಿಶೇಷವಾಗಿ ಮಕ್ಕಳಿಗೆ ಉಚಿತ ಆಹಾರ ಮತ್ತು ಶುದ್ಧ ನೀರನ್ನು ಒದಗಿಸಲು ಚಿತ್ರಮಂದಿರಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು. “ಚಲನಚಿತ್ರವನ್ನು ವೀಕ್ಷಿಸಲು ಅವನು ಯಾವ ಚಿತ್ರಮಂದಿರವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದು ವೀಕ್ಷಕರ ಹಕ್ಕು ಮತ್ತು ವಿವೇಚನೆಯಾಗಿದೆ, ಆದ್ದರಿಂದ ಆಡಳಿತ ಮಂಡಳಿಗೆ ನಿಯಮಗಳನ್ನು ರೂಪಿಸುವ ಹಕ್ಕು ಸಹ ಇದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿದಿದೆ. ಇದೀಗ ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಕೂಗು ಕೇಳಿ ಬಂದಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ ವಿಜಯಮಹಾಂತೇಶ್ ಮಠದ ಗುರುಮಹಾಂತ ಶ್ರೀಗಳು, ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರ ಮಾತನಾಡಿದ ಅವರು ಸಿದ್ದೇಶ್ವರ ಶ್ರೀಗಳು ನಾಡಿನ ಮಹಾನ್ ಸಂತರು. ನಡೆದಾಡುವ ದೇವರು. ಅವರಿಗೆ ಜಾತಿಭೇದ ಪಂತವಿಲ್ಲ. ಹಾಗಾಗಿ ಅವರಿಗೆ ಭಾರತ ಸರಕಾರ ಭಾರತರತ್ನ ನೀಡಬೇಕು. ಇದರಿಂದ ಪ್ರಶಸ್ತಿ ಪ್ರಶಸ್ತಿ ಗೌರವ ಹೆಚ್ಚಾಗುತ್ತದೆ. ಆದ್ದರಿಂದ ಸಿದ್ದೇಶ್ವರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕೆಂದು ಆಗ್ರಹಿಸಿದರು. ಈಗಾಗಲೇ ಅಗಲಿದ ಸಿದ್ದೇಶ್ವರ ಶ್ರೀಗಳಿಗೆ ರಾಜ್ಯ ಸರ್ಕಾರದಿಂದ ಗೌರವ ನಮನ ಸಲ್ಲಿಕೆಯಾಗಿದ್ದು, ಜ್ಞಾನಯೋಗಾಶ್ರಮಕ್ಕೆ ಸಿದ್ದೇಶ್ವರ ಸ್ವಾಮೀಜಿ ಅಂತಿಮ ಯಾತ್ರೆಯ ಮೆರವಣಿಗೆ ಹೊರಟಿದೆ.ಹೂವಿನಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಶ್ರೀಗಳ ಅಂತಿಮ ಯಾತ್ರೆ ಸಾಗುತ್ತಿದ್ದು, ಯಾತ್ರೆಗೆ ಲಕ್ಷಾಂತರ ಮಂದಿ ಭಕ್ತ ಗಣ ಸಾಕ್ಷಿಯಾಗಿದೆ. ಸುಮಾರು…
ನವದೆಹಲಿ : ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿ ಫಾರ್ಮಾಸ್ಯುಟಿಕಲ್ಸ್ ಇಲಾಖೆ, ಮೋದಿ ಸರ್ಕಾರವು 2017ರಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ದೇಶದಲ್ಲಿ ಪ್ರಾರಂಭಿಸಿತು. ಈಗ ಈ ಕಾರ್ಯಕ್ರಮದ ಭಾಗವಾಗಿ ದೇಶಾದ್ಯಂತ 766 ಜಿಲ್ಲೆಗಳ ಪೈಕಿ 743 ಜಿಲ್ಲೆಗಳಲ್ಲಿ 10,000 ಜನೌಷಧಿ ಕೇಂದ್ರಗಳನ್ನ ತೆರೆಯಲಾಗುವುದು. ಇದರ ಪ್ರಾರಂಭದೊಂದಿಗೆ, ಅತಿ ಶೀಘ್ರದಲ್ಲಿ ಜನಸಾಮಾನ್ಯರಿಗೆ ದೇಶದ ಮೂಲೆ ಮೂಲೆಗಳಲ್ಲಿ ಅಗ್ಗದ ಔಷಧಗಳು ಲಭ್ಯವಾಗಲಿವೆ. ಭಾರತೀಯ ಜನೌಷಧಿ ಕೇಂದ್ರದಲ್ಲಿ ಜೆನೆರಿಕ್ ಔಷಧಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳ ಬೆಲೆ ಬ್ರಾಂಡೆಡ್ ಔಷಧಗಳಿಗಿಂತ ಶೇ.50ರಿಂದ 90ರಷ್ಟು ಕಡಿಮೆ. ಮಾರ್ಚ್ 2024 ರ ವೇಳೆಗೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ಕೇಂದ್ರಗಳು ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಗಳನ್ನ ಒದಗಿಸುತ್ತವೆ. 18,000 ಕೋಟಿಗಳ ಉಳಿತಾಯ.! ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಮೂಲಕ ಕಳೆದ 8 ವರ್ಷಗಳಲ್ಲಿ ಸುಮಾರು ರೂ.18,000 ಕೋಟಿಗಳನ್ನ ಉಳಿಸಲಾಗಿದೆ. ಸರ್ಕಾರವು ದೇಶಾದ್ಯಂತ 766 ಜಿಲ್ಲೆಗಳ…
ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿದಿದೆ. ಇದೀಗ ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಕೂಗು ಕೇಳಿ ಬಂದಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ ವಿಜಯಮಹಾಂತೇಶ್ ಮಠದ ಗುರುಮಹಾಂತ ಶ್ರೀಗಳು, ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರ ಮಾತನಾಡಿದ ಅವರು ಸಿದ್ದೇಶ್ವರ ಶ್ರೀಗಳು ನಾಡಿನ ಮಹಾನ್ ಸಂತರು. ನಡೆದಾಡುವ ದೇವರು. ಅವರಿಗೆ ಜಾತಿಭೇದ ಪಂತವಿಲ್ಲ. ಹಾಗಾಗಿ ಅವರಿಗೆ ಭಾರತ ಸರಕಾರ ಭಾರತರತ್ನ ನೀಡಬೇಕು. ಇದರಿಂದ ಪ್ರಶಸ್ತಿ ಪ್ರಶಸ್ತಿ ಗೌರವ ಹೆಚ್ಚಾಗುತ್ತದೆ. ಆದ್ದರಿಂದ ಸಿದ್ದೇಶ್ವರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕೆಂದು ಆಗ್ರಹಿಸಿದರು. ಈಗಾಗಲೇ ಅಗಲಿದ ಸಿದ್ದೇಶ್ವರ ಶ್ರೀಗಳಿಗೆ ರಾಜ್ಯ ಸರ್ಕಾರದಿಂದ ಗೌರವ ನಮನ ಸಲ್ಲಿಕೆಯಾಗಿದ್ದು, ಜ್ಞಾನಯೋಗಾಶ್ರಮಕ್ಕೆ ಸಿದ್ದೇಶ್ವರ ಸ್ವಾಮೀಜಿ ಅಂತಿಮ ಯಾತ್ರೆಯ ಮೆರವಣಿಗೆ ಹೊರಟಿದೆ.ಹೂವಿನಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಶ್ರೀಗಳ ಅಂತಿಮ ಯಾತ್ರೆ ಸಾಗುತ್ತಿದ್ದು, ಯಾತ್ರೆಗೆ ಲಕ್ಷಾಂತರ ಮಂದಿ ಭಕ್ತ ಗಣ ಸಾಕ್ಷಿಯಾಗಿದೆ. ಸುಮಾರು…
ನವದೆಹಲಿ : ದೆಹಲಿ ಹಿಟ್ ಅಂಡ್ ರನ್ ನಲ್ಲಿ ಮೃತಪಟ್ಟ ಯುವತಿಯ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಯನ್ನು ನಾಚಿಕೆಗೇಡು ಎಂದು ಕರೆದಿರುವ ಕೇಜ್ರಿವಾಲ್, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ವಿರುದ್ಧ ಹೋರಾಡಲು ಸರ್ಕಾರವು ಉತ್ತಮ ವಕೀಲರನ್ನು ನೇಮಿಸುತ್ತದೆ ಎಂದು ಹೇಳಿದ್ದಾರೆ. ದೆಹಲಿಯ ಮಗಳಿಗೆ ನ್ಯಾಯ ಸಿಗಿದೆ. ಪ್ರಕರಣದ ಹೋರಾಟಕ್ಕೆ ಅತ್ಯುತ್ತಮ ವಕೀಲರನ್ನು ನೇಮಿಸುತ್ತದೆ. ಸಂತ್ರಸ್ತೆಯ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆಕೆಯ ಚಿಕಿತ್ಸೆಯ ವೆಚ್ಚವನ್ನು ದೆಹಲಿ ಸರ್ಕಾರ ಭರಿಸಲಿದೆ. ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು. ಸಂತ್ರಸ್ತೆಯ ಕುಟುಂಬದ ಜೊತೆಗಿದ್ದೇನೆ, ಭವಿಷ್ಯದಲ್ಲಿ ಉದ್ಭವಿಸುವ ಯಾವುದೇ ಅಗತ್ಯವನ್ನು ನಾವು ಪೂರೈಸುತ್ತೇವೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. https://twitter.com/ArvindKejriwal/status/1610230953607327748 ದೆಹಲಿಯಲ್ಲಿ ಕಾರು ಎಳೆದೊಯ್ದು ಮೃತಪಟ್ಟ ಯುವತ ಕುಟುಂಬಕ್ಕೆ ಏಕೈಕ ಜೀವನಾಧಾರವಾಗಿದ್ದಳು. ಆಕೆತ ತಾಯಿ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಡಯಾಲಿಸಿಸ್ ಅಗತ್ಯವಿದೆ ಎನ್ನಲಾಗುತ್ತಿದೆ. ಯುವತಿ ಸಾವಿಗೆ ಸಂಬಂಧಿಸಿದಂತೆ…
ನವದೆಹಲಿ : ಕೇಂದ್ರ ಸರ್ಕಾರವು ದೇಶದ ಜನರನ್ನು ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಮೊನ್ನೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ ಚಿರತೆಗಳ ಹೆಸರುಗಳನ್ನ ಸೂಚಿಸುವಂತೆ ಅವ್ರು ದೇಶದ ಜನರನ್ನ ಒತ್ತಾಯಿಸಿದರು. ಇದಕ್ಕಾಗಿ, ನಗದು ಬಹುಮಾನವನ್ನ ಸಹ ನೀಡಲಾಗುತ್ತಿದೆ ಮತ್ತು ಉತ್ಸಾಹಿಗಳನ್ನ ಪ್ರೋತ್ಸಾಹಿಸಲಾಗುತ್ತಿದೆ. ಇದರ ಭಾಗವಾಗಿ, ಭಾರತ ಸರ್ಕಾರವು ಇತ್ತೀಚೆಗೆ ದೇಶದ ಜನರಿಗೆ ಮತ್ತೊಂದು ಬಂಪರ್ ಕೊಡುಗೆಯನ್ನ ಘೋಷಿಸಿದೆ. ಆಯುಷ್ಮಾನ್ ಭಾರತ್ ಯೋಜನೆಗೆ ಹೊಸ ಲೋಗೋ ವಿನ್ಯಾಸವನ್ನ ಸೂಚಿಸಲು ಜನರಿಗೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರವು ದೇಶದ ಬಡ ಜನರಿಗೆ ಉಚಿತ ಆರೋಗ್ಯ ವಿಮೆಯನ್ನ ಒದಗಿಸುತ್ತಿದೆ. ಅಕ್ಟೋಬರ್ 25, 2021ರಂದು, ಆಯುಷ್ಮಾನ್ ಭಾರತ್ ಯೋಜನೆಯನ್ನ ಪ್ರಾರಂಭಿಸಲಾಯಿತು. ಇದರ ಭಾಗವಾಗಿ, ಅರ್ಹ ಜನರು 5 ಲಕ್ಷ ರೂಪಾಯಿವರೆಗಿನ ವೈದ್ಯಕೀಯ ಸೌಲಭ್ಯವನ್ನ ಉಚಿತವಾಗಿ ಒದಗಿಸಲಾಗುವುದು. ಈಗ ಸರ್ಕಾರವು ಈ ಯೋಜನೆಗಾಗಿ ಹೊಸ ಲೋಗೋವನ್ನು ವಿನ್ಯಾಸಗೊಳಿಸಲು ಜನರನ್ನ ಕೇಳಿದೆ. ಈ ಲೋಗೋದ ವಿತರಣೆಯು ಅತ್ಯುತ್ತಮ ಲೋಗೋಗೆ ಆಯ್ಕೆಯಾದ ವಿಜೇತರಿಗೆ 10,000 ರೂಪಾಯಿಂದ 1 ಲಕ್ಷ ರೂಪಾಯಿಗಳ…
ಬೆಂಗಳೂರು: ಕೆಪಿಟಿಸಿಎಲ್ ನಲ್ಲಿ ಖಾಲಿ ಇದ್ದಂತ ವಿವಿಧ ಹುದ್ದೆಗಳ ( KPTCL Recruitment ) ಭರ್ತಿಗೆ ಕೆಇಎ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಸಿವಿಲ್ ಸಹಾಯಕ ಅಭಿಯಂತರರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಕೂಡ ನಡೆಸಲಾಗಿತ್ತು. ಇದೀಗ ಪರೀಕ್ಷೆಯ ಬಳಿಕ ಇಂದು ಅಭ್ಯರ್ಥಿಗಳು ಗಳಿಸಿದಂತ ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಇಂಧನ ಸಚಿವ ಸುನೀಲ್ ಕುಮಾರ್ ( Minister Sunil Kumar ) ಅವರು, ಕೆ.ಪಿ.ಟಿ.ಸಿ.ಎಲ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ನಡೆದ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೂ ಹಾರ್ದಿಕ ಅಭಿನಂದನೆಗಳು. ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ. https://twitter.com/karkalasunil/status/1610215063381770240 ಇನ್ನೂ ಕೆಪಿಟಿಸಿಎಲ್ ನ ಸಹಾಯಕ ಅಭಿಯಂತರರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಹಾಜರಾದಂತ ಅಭ್ಯರ್ಥಿಗಳು ಫಲಿತಾಂಶವನ್ನು https://cetonline.karnataka.gov.in/kea/kptcl2022 ಲಿಂಕ್ ನಲ್ಲಿ ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದಾಗಿದೆ. https://kannadanewsnow.com/kannada/cm-bommai-pays-last-respects-to-siddeshwara-seer/ https://kannadanewsnow.com/kannada/list-of-congress-candidates-to-be-released-by-the-end-of-january-siddaramaiah/
ವಿಜಯಪುರ : ಈಗಾಗಲೇ ಅಗಲಿದ ಸಿದ್ದೇಶ್ವರ ಶ್ರೀಗಳಿಗೆ ರಾಜ್ಯ ಸರ್ಕಾರದಿಂದ ಗೌರವ ನಮನ ಸಲ್ಲಿಕೆಯಾಗಿದ್ದು, ಜ್ಞಾನಯೋಗಾಶ್ರಮಕ್ಕೆ ಸಿದ್ದೇಶ್ವರ ಸ್ವಾಮೀಜಿ ಅಂತಿಮ ಯಾತ್ರೆಯ ಮೆರವಣಿಗೆ ಹೊರಟಿದೆ. ಹೂವಿನಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಶ್ರೀಗಳ ಅಂತಿಮ ಯಾತ್ರೆ ಸಾಗುತ್ತಿದ್ದು, ಯಾತ್ರೆಗೆ ಲಕ್ಷಾಂತರ ಮಂದಿ ಭಕ್ತ ಗಣ ಸಾಕ್ಷಿಯಾಗಿದೆ. ಸುಮಾರು 7-8 ಕಿಮೀ ದೂರವಿರುವ ಜ್ಞಾನಯೋಗಾಶ್ರಮಕ್ಕೆ ಯಾತ್ರೆ ಸಾಗುತ್ತಿದೆ. ನಂತರ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಸಂಸ್ಕಾರ ನಡೆಯಲಿದೆ. ಶ್ರೀಗಳ ಇಚ್ಚೆಯಂತೆ ಅವರ ದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ವಿಜಯಪುರದಲ್ಲಿ ಸೈನಿಕ ಶಾಲೆ ಆವರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಗಲಿದ ಶ್ರೀಗಳಿಗೆ ಸರ್ಕಾರಿ ಗೌರವ ನಮನ ಸಲ್ಲಿಸಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅಂತಿನ ನಮನ ಸಲ್ಲಿಸಿದರು. ಪೊಲೀಸ್ ಬ್ಯಾಂಡ್ ನಿಂದ ರಾಷ್ಟ್ರಗೀತೆ ಮೂಲಕ ಸ್ವಾಮೀಜಿಗೆ ನಮನ ಸಲ್ಲಿಸಲಾಯಿತು. ನಂತರ ಸಿಎಂ ಬೊಮ್ಮಾಯಿ ಶ್ರೀಗಳ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು. https://kannadanewsnow.com/kannada/hundi-stolen-from-channakeshava-temple-on-vaikuntha-ekadashi/ https://kannadanewsnow.com/kannada/a-devotee-offered-5-quintal-sandalwood-for-the-funeral-of-the-walking-god-siddeshwar-shri/
ಕೆಎನ್ ಎನ್ ನ್ಯೂಸ್ ಡೆಸ್ಕ್ : ಮನೆ ಕಟ್ಟಿನೋಡು ಒಮ್ಮೆ ಮದುವೆಯಾಗಿ ನೋಡು ಅಂತಾ ಗಾದೆ ಮಾತು ಹೇಳೋದನ್ನ ಕೇಳಿರುತ್ತಿಯಾ? ಮದುವೆಯಾಗದವರನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುವುದು ಸಾಮಾನ್ಯ. ಯಾಕದ್ರೂ ಮದುವೆ ಆದೆ ಅನ್ನೋ ಕಾಡುತ್ತಿರುತ್ತದೆ. ಇತ್ತೀಚಿಗೆ ನಡೆದ ಅಧ್ಯಯನ ಒಂದು ವಿವಾಹಿತರಿಗೆ ಖುಷಿ ಸುದ್ದಿಯನ್ನು ನೀಡಿದೆ ಮದುವೆಯಾಗದವರಿಗಿಂತ ಮದುವೆಯಾದವರಲ್ಲಿ ಬುದ್ಧಿವಂತಿಕೆ ಕಾಣುವುದು ಕಡಿಮೆ ಎಂದು ಅಧ್ಯಯನ ಹೇಳಿದೆ. ನರ ವಿಜ್ಞಾನ ನ್ಯಾರೋ ಸರ್ಜನ್ ಸೈಕ್ಯಾಟಿಸ್ಟ್ ಜನರಲ್ ನಲ್ಲಿ ಪ್ರಖ್ಯಾತವಾದ ಅಧ್ಯಯನದ ಪ್ರಕಾರ ಜೀವನಪೂರ್ತಿ ಒಂಟಿಯಾಗಿ ಜೀವನ ನಡೆಸುವವರಲ್ಲಿ ಬುದ್ಧಿ ಮಂದಕ್ಕೆ ಕಾಡುವ ಸಾಧ್ಯತೆ 42ರಷ್ಟು ಇದೆಯಂತೆ. https://kannadanewsnow.com/kannada/hundi-stolen-from-channakeshava-temple-on-vaikuntha-ekadashi/ ಸಂಗಾತಿ ಸಾವಿನ ನಂತರ ಅನೇಕ ವರ್ಷಗಳ ಕಾಲ ಏಕಾಂಗಿಯಾಗಿರುವವರಲ್ಲಿ ಕೂಡ ಬುದ್ಧಿಮಾಂದ್ಯತೆ 20% ರಷ್ಟು ಕಾಣುತ್ತದೆ ಎಂದು ಅಧ್ಯಯನ ಹೇಳಿದೆ. ಲಂಡನ್ ನ ಯುನಿವರ್ಸಿಟಿ ಕಾಲೇಜಿನಲ್ಲಿ ಈ ಅಧ್ಯಯನ ನಡೆಸಲಾಗಿದೆ. 15 ಬೇರೆ ಬೇರೆ ದೇಶಗಳಲ್ಲಿ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಎಂಟು ಲಕ್ಷ ಮಂದಿ ಪಾಲ್ಗೊಂಡಿದ್ದರು. ಮದುವೆಯಾದ ನಂತರ ಸಂಗಾತಿ ಜೊತೆಗಿನ…