Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2022-23 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಈ ಹಿಂದೆ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು. ಇದೀಗ ವಿದ್ಯಾರ್ಥಿಗಳ ಹಿತದೃಷ್ಟಿ ಹಿನ್ನೆಲೆ ಅರ್ಜಿ ಸಲ್ಲಿಸುವ ಅವಧಿಯನ್ನು 31:01:2023 ರವರೆಗೆ ವಿಸ್ತರಿಸಿ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಲಾಗಿದೆ. ಜ.31 ರವರೆಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೆಟ್ರಿಕ್-ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಮತ್ತು ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್ಸೈಟ್ ವಿಳಾಸ ಹಾಗೂ ಹೆಚ್ಚಿನ ಮಾಹಿತಿಗಾಗಿ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಸಂಬಂಧಿಸಿದ ಹಾಗೂ…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಮಾರುಕಟ್ಟೆಯಿಂದ ಯಾವುದೇ ವಸ್ತುಗಳನ್ನು ಖರೀದಿಸುವ ಮನ್ನಾ ಅವುಗಳ ಮೇಲೆ ಬರೆದಂತಹ ಮಯಕ್ತಾಯದ ದಿನಾಂಕ (Expiry date) ನೋಡುತ್ತೇವೆ. ಅದರಂತೆ ಕುಡಿಯುವ ನೀರಿನ ಬಾಟಲ್ ಮೇಲೂ ಕೂಡ ಮುಕ್ತಾಯದ ದಿನಾಂಕವನ್ನು ಬರೆದಿರುತ್ತಾರೆ. ನೀರಿನ ಬಾಟಲ್ ಮೇಲೆ ಏಕೆ ಎಕ್ಸ್‌ಪೈರ್ಡ್ ದಿನಾಂಕ ಬರೆದಿರುತ್ತಾರೆ ಎಂಬುದರ ಹಿಂದಿನ ಕಾರಣವನ್ನು ತಜ್ಞರು ನೀಡಿದ್ದಾರೆ. ನೀರು ಕೆಡುವ ಪದಾರ್ಥನಾ ? ಲೈವ್ ಸೈನ್ಸ್ ವರದಿಯ ಪ್ರಕಾರ, ನೀರು ಎಂದಿಗೂ ಕೆಟ್ಟದಾಗುವುದಿಲ್ಲ. ಬಾಟಲಿಯ ಮೇಲೆ ಬರೆಯಲಾದ ಮುಕ್ತಾಯ ದಿನಾಂಕವನ್ನು ಪ್ಲಾಸ್ಟಿಕ್‌ಗೆ ಸಂಬಂಧಿಸಿರುತ್ತದೆ. ಈ ಪ್ಲಾಸ್ಟಿಕ್ ಬಾಟಲಿಗಳನ್ನು ನೀರನ್ನು ಸಂಗ್ರಹಿಸಲು ಮಾತ್ರ ಬಳಸಲಾಗುತ್ತದೆ. ವಾಸ್ತವವಾಗಿ ನಿರ್ದಿಷ್ಟ ಸಮಯದ ನಂತರ ಪ್ಲಾಸ್ಟಿಕ್ ನೀರಿನಲ್ಲಿ ಕರಗಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಅನೇಕ ವರ್ಷಗಳಿಂದ ಇಡುವುದರಿಂದ ನೀರಿನ ರುಚಿಯ ಮೇಲೆ ಪರಿಣಾಮ ಬೀರಬಹುದು ಮತ್ತು ವಾಸನೆ ಕೂಡ ಉಂಟಾಗುತ್ತದೆ. ಸಾಮಾನ್ಯವಾಗಿ, ಈ ಬಾಟಲಿಗಳ ಮೇಲೆ ತಯಾರಿಕೆಯ ದಿನಾಂಕದಿಂದ 2 ವರ್ಷಗಳ ಮುಕ್ತಾಯ ದಿನಾಂಕವನ್ನು ಬರೆಯಲಾಗುತ್ತದೆ.…
ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿದಿದೆ. ಸಿದ್ದೇಶ್ವರ ಸ್ವಾಮೀಜಿ’ ಅಂತಿಮ ಯಾತ್ರೆಗೆ ಜನಸಾಗರ ವೇ ಹರಿದು ಬಂದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರ ಹರಿದು ಬಂದಿದ್ದು, ಎಲ್ಲೆಡೆ ಸಿದ್ದೇಶ್ವರ ಸ್ವಾಮೀಜಿಗೆ ಜೈ ಎಂಬ ಘೋಷಣೆ ಮೊಳಗಿದೆ. ಯಾತ್ರೆ ಸಾಗುವ ಮಾರ್ಗದಲ್ಲಿ ರಂಗೋಲಿ ಹಾಕಲಾಗಿದ್ದು. ವಾಹನಕ್ಕೆ ಹೂವಿನ ಸುರಿಮಳೆ ಸುರಿಸಲಾಗಿದೆ. ಅಂತಿಮ ಯಾತ್ರೆ ಜ್ಞಾನಯೋಗಾಶ್ರಮಕ್ಕೆ ತೆರಳುತ್ತಿದ್ದು, ಮೆರವಣಿಗೆಯಲ್ಲಿ ವಿವಿಧ ಮಠದ ಮಠಾಧೀಶರು, ರಾಜಕೀಯ ಗಣ್ಯರು ಭಾಗವಹಿಸಿದ್ದಾರೆ. ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹ ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಕೂಗು ಕೇಳಿ ಬಂದಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ ವಿಜಯಮಹಾಂತೇಶ್ ಮಠದ ಗುರುಮಹಾಂತ ಶ್ರೀಗಳು, ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರ ಮಾತನಾಡಿದ ಅವರು ಸಿದ್ದೇಶ್ವರ ಶ್ರೀಗಳು ನಾಡಿನ ಮಹಾನ್ ಸಂತರು. ನಡೆದಾಡುವ ದೇವರು. ಅವರಿಗೆ…
ದಕ್ಷಿಣ ಕನ್ನಡ: ಜಿಲ್ಲೆಯ ತಣ್ಣೀರು ಬಾವಿ ಬೀಚ್ ನಲ್ಲಿನ ರಸ್ತೆಯಲ್ಲಿ ಕ್ರಿಕೆಟ್ ಆಟವಾಡಿದ ಬಳಿಕ ತೆರಳುತ್ತಿದ್ದಂತ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಪೇದೆ, ನಿಮ್ಮಿಂದಲೇ ಇಲ್ಲಿನ ರಸ್ತೆ ವಾಹನಗಳಿಂದ ಬ್ಲಾಕ್ ಆಗುತ್ತಿದೆ. ಇದಕ್ಕೆ ನೀವೇ ಕಾರಣವೆಂದು ಹೇಳಿ ಲಾಠಿಯಿಂದ ಹೊಡೆದಿದ್ದರು. ಲಾಠಿ ಏಟಿನಿಂದ ಕೆಲವರಿಗೆ ಗಾಯವಾಗಿತ್ತು. ಈ ವಿಷಯ ತಿಳಿದಂತ ಮಂಗಳೂರು ನಗರ ಪೊಲೀಸ್ ಕಮೀಷನರ್ ಪೊಲೀಸ್ ಕಾನ್ಸ್ ಟೇಬಲ್ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಜನವರಿ 1ರಂದು ನಗರದ ತಣ್ಣೀರುಬಾವಿ ಬೀಚ್ ನಲ್ಲಿ ರಸ್ತೆ ವಾರಾಂತ್ಯದ ಕಾರಣ ಜನಸಂದಣಿ ಹೆಚ್ಚಾಗಿ, ಹೊಸ ವರ್ಷದ ಪ್ರಯುಕ್ತ ವಾಹನ ದಟ್ಟಣೆ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಕ್ರಿಕೆಟ್ ಆಟವಾಡಿ, ಮನೆಗೆ ತೆರಳುತ್ತಿದ್ದಂತ 6ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನಿಮ್ಮಿಂದಲೇ ರಸ್ತೆ ಬ್ಲಾಕ್ ಆಗುತ್ತಿರುವುದು ಎಂಬುದಾಗಿ ಪಣಂಬೂರು ಪೊಲೀಸ್ ಠಾಣೆ ಪೇದೆ ಸುನೀಲ್ ಲಾಠಿಯಿಂದ ಥಳಿಸಿದ್ದರು. ಪೊಲೀಸ್ ಕಾನ್ಸ್ ಸ್ಟೇಬಲ್ ವಿದ್ಯಾರ್ಥಿಗಳಿಗೆ ಹೊಡೆದಿದ್ದ ಕಾರಣ, ಕೆಲವರಿಗೆ ಗಾಯವಾಗಿತ್ತು. ಹೀಗೆ ಥಳಿಸಿದಂತ ಪೊಲೀಸ್ ವಿರುದ್ಧ ಕಾನೂನು ಕ್ರಮಕ್ಕೆ ಪೋಷಕರು ಒತ್ತಾಯಿಸಿದ್ದರು.…
ನವದೆಹಲಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ಟ್ಯಾಕ್ಸ್ (Toll Tax) ಬಗ್ಗೆ ದೊಡ್ಡ ಮಾಹಿತಿ ನೀಡಿದ್ದಾರೆ. ಭಾರೀ ಟೋಲ್ ತೆರಿಗೆಯಿಂದ (Toll Tax Rules) ನೀವು ಸಹ ತೊಂದರೆಗೊಳಗಾಗಿದ್ದರೆ, ಟೋಲ್ ತೆರಿಗೆಯನ್ನ ಪಾವತಿಸಬೇಕಾಗಿಲ್ಲ. ಈ ಕುರಿತು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದ್ದು, ಹೊಸ ನಿಯಮಗಳ ಅಡಿಯಲ್ಲಿ, ಟೋಲ್ ತೆರಿಗೆಯಲ್ಲಿ ವಿನಾಯಿತಿಯ ಲಾಭವನ್ನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಇನ್ನು ವಿನಾಯಿತಿಯ ಲಾಭ ಪಡೆಯುವ ಜನರ ಸಂಪೂರ್ಣ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಜನರು ತೆರಿಗೆ ಪಾವತಿಸಬೇಕಾಗಿಲ್ಲ.! ಟೋಲ್ ತೆರಿಗೆಯನ್ನು NHAI ಸಂಗ್ರಹಿಸುತ್ತದೆ. ನೀವು ಹೆದ್ದಾರಿಯಲ್ಲಿ ನಾಲ್ಕು ಚಕ್ರದ ವಾಹನದಲ್ಲಿ ಪ್ರಯಾಣಿಸಿದರೆ ನೀವು ಈ ತೆರಿಗೆಯನ್ನ ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ, ನೀವು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದರೆ, ನಿಮ್ಮಿಂದ ಟೋಲ್ ತೆರಿಗೆಯನ್ನ ಸಂಗ್ರಹಿಸಲಾಗುವುದಿಲ್ಲ. ದ್ವಿಚಕ್ರ ವಾಹನ ಖರೀದಿಸುವ ಸಂದರ್ಭದಲ್ಲಿ ಮಾತ್ರ ಗ್ರಾಹಕರಿಂದ ರಸ್ತೆ ತೆರಿಗೆ ಸಂಗ್ರಹಿಸಲಾಗುತ್ತದೆ. ಪ್ರಸ್ತುತ, ಟೋಲ್ ತೆರಿಗೆಯ ಮೊತ್ತವು ವಾಹನದ ಉದ್ದವನ್ನ ಅವಲಂಬಿಸಿರುತ್ತದೆ. ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ.! >> ಭಾರತದ…
ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಲಿಂಬಾವಳಿ ಬಂಧನಕ್ಕೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ . ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಈ ದೇಶದಲ್ಲಿ ಕಾನೂನು ಇದೆ. ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಲಿಂಬಾವಳಿ ಹೆಸರು ಕೇಳಿಬಂದಿದೆ. ಸರ್ಕಾರ ಯಾರನ್ನೂ ಕೂಡ ರಕ್ಷಣೆ ಮಾಡಬಾರದು, ತಪ್ಪಿತಸ್ದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಡಿಕೆಶಿ ಒತ್ತಾಯಿಸಿದ್ದಾರೆ. ನಗರದ ಮಹದೇವಪುರದ ಅಂಬಲಿಪುರದಲ್ಲಿರುವ ಪ್ರದೀಪ್ ನಿವಾಸಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವು ಮುಖಂಡರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಲಿಂಬಾವಳಿ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ತಾವು ನಂಬಿದ್ದ ಸ್ನೇಹಿತರಿಂದ ಹಣಕಾಸಿನ ವಿಚಾರದಲ್ಲಿ ಮೋಸಹೋಗಿ ಹಣಕಳೆದುಕೊಂಡು ಹತಾಷರಾಗಿ…
ಬೆಂಗಳೂರು: ಬಿಜೆಪಿ ಸರ್ಕಾರದ ( BJP Government ) ಭ್ರಷ್ಟಾಚಾರದಿಂದಾಗಿ ಹಲವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ, ಇನ್ನು ಕೆಲವರು ದಯಾಮರಣ ಕೋರಿ ಅರ್ಜಿ ಹಾಕಿದ್ದಾರೆ. ಬಿಜೆಪಿ ನಾಯಕರ ಹಣದಾಸೆಗೆ ಇಂಥಾ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು? ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ( Former CM Siddaramaiah ) ಕಿಡಿಕಾರಿದ್ದಾರೆ. https://twitter.com/siddaramaiah/status/1610195762423660544 ಈ ಬಗ್ಗೆ ಇಂದು ಸರಣಿ ಟ್ವಿಟ್ ಮಾಡಿರುವಂತ ಅವರು, ಉದ್ಯಮಿ ಪ್ರದೀಪ್ ಅವರ ಆತ್ಮಹತ್ಯೆ ದುರದೃಷ್ಟಕರ. ಅವರ ಆತ್ಮಹತ್ಯೆಗೆ ಕಾರಣರಾದ ಶಾಸಕ ಅರವಿಂದ ಲಿಂಬಾವಳಿ ಸಹಿತ ಇತರೆ ಎಲ್ಲಾ ಆರೋಪಿಗಳನ್ನು ಈ ಕೂಡಲೇ ಬಂಧಿಸಿ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. https://twitter.com/siddaramaiah/status/1610194598227513344 ದಿವಂಗತ ಪ್ರದೀಪ್ ಅವರು ಉದ್ಯಮವೊಂದಕ್ಕೆ ಸುಮಾರು 1.5 ಕೋಟಿ ರೂಪಾಯಿ ಬಂಡವಾಳ ಹೂಡಿದ್ದರು, ಆದರೆ ಈ ವರೆಗೆ ನಯಾಪೈಸೆ ಲಾಭದ ಹಣ ಅವರ ಕೈಸೇರಿಲ್ಲ. ಈ ವಿವಾದದಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ಮಧ್ಯಸ್ಥಿಕೆ…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗಾಗಿ ಹೊಸ ಹೊಸ ಪೀಷರ್ಸ್ ಗಳನ್ನು ಪರಿಚಯಿಸುತ್ತಿರುತ್ತದೆ. ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಕಂಪನಿಯು ಕಳೆದ ವರ್ಷ ಹಲವು ಹೊಸ ವೈಶಿಷ್ಟ್ಯಗಳನ್ನು ಪ್ರಾರಂಭಿಸಿತ್ತು. ಇದೀಗ ಧ್ವನಿ, ವಿಡಿಯೋ ಮತ್ತು ಸಂದೇಶದ (message ) ಗುಣಮಟ್ಟವನ್ನು ಹೆಚ್ಚಿಸಲು ವಾಟ್ಸಾಪ್ ಈ ವರ್ಷ ಅನೇಕ ಹೊಸ ವೈಶಿಷ್ಟ್ಯಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ವಾಟ್ಸಾಪ್ (WhatsApp) ಡೆಸ್ಕ್‌ಟಾಪ್‌ನಲ್ಲಿ ಕರೆ ಟ್ಯಾಬ್ ಮೆಟಾ ಒಡೆತನದ ಪ್ಲಾಟ್‌ಫಾರ್ಮ್ ಅಪ್ಲಿಕೇಶನ್‌ನ ಡೆಸ್ಕ್‌ಟಾಪ್ ಆವೃತ್ತಿಗೆ ಮೀಸಲಾದ ಕರೆ ಟ್ಯಾಬ್ ಅನ್ನು ತರುವ ನಿರೀಕ್ಷೆಯಿದೆ. ಬಳಕೆದಾರರು ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್‌ಗಳೊಂದಿಗೆ ವಾಟ್ಸಾಪ್ ಕರೆಗಳ ಡೇಟಾವನ್ನು ಟ್ರ್ಯಾಕ್ ಮಾಡಬಹುದು. ಸದ್ಯ ವಿಂಡೋಸ್ ಬಳಕೆದಾರರಿಗೆ ಕೆಲವು ವಾಟಸ್ಆಪ್ ಬೀಟಾದಲ್ಲಿ ಈ ವೈಶಿಷ್ಟ್ಯವು ಲಭ್ಯವಿದೆ. ವ್ಯೂ ಒನ್ಸ್ ಟೆಕ್ಸ್ಟ್ (View once text) ವ್ಯೂ ಒನ್ಸ್ ಮೀಡಿಯಾ ಫೀಚರ್‌ನಂತೆಯೇ, ವಾಟ್ಸಾಪ್ ಒಮ್ಮೆ ಪಠ್ಯ ವೀಕ್ಷಣೆ (View once text) ವೈಶಿಷ್ಟ್ಯವನ್ನು ಹೊರತರುತ್ತದೆ. ಇದು ಬಳಕೆದಾರರು ತಮ್ಮ ಪಠ್ಯ ಸಂಭಾಷಣೆಗಳನ್ನು…
ನವದೆಹಲಿ : ಕೇಂದ್ರ ಬಜೆಟ್ 2023 ಒಂದು ತಿಂಗಳಿಗಿಂತ ಕಡಿಮೆ ಇರುವಾಗ, ಸರ್ಕಾರವು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನ ಈಗಿರುವ 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಬಹುದು ಎಂದು ಸುದ್ದಿ ವರದಿಯೊಂದು ಹೇಳಿದೆ. ಹೌದು, ಮುಂಬರುವ 2023-24 ರ ಬಜೆಟ್ನಲ್ಲಿ, ಸರ್ಕಾರವು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನ ಈಗಿರುವ 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಬೆಳವಣಿಗೆಗಳ ಬಗ್ಗೆ ಖಾಸಗಿ ಮೂಲಗಳು ತಿಳಿಸಿವೆ. ಈ ಕ್ರಮವು ಬಳಕೆಯನ್ನ ಹೆಚ್ಚಿಸುತ್ತಿದ್ದು, ಇದು ಆರ್ಥಿಕ ಚೇತರಿಕೆಗೆ ಕಾರಣವಾಗಬಹುದು. ಇದು ಹೂಡಿಕೆಯನ್ನ ಉತ್ತೇಜಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 1 ರಂದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ರ ಕೇಂದ್ರ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. ಆದಾಯ ತೆರಿಗೆಗೆ ವಿಧಿಸಲಾಗದ ಗರಿಷ್ಠ 2.5 ಲಕ್ಷ ರೂ. 60-80 ವರ್ಷ ವಯಸ್ಸಿನವರಿಗೆ, ವಿನಾಯಿತಿ ಮಿತಿ 3 ಲಕ್ಷ ರೂ., 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ…
ಬೆಂಗಳೂರು : ಹೆಚ್. ಡಿ ಕುಮಾರಸ್ವಾಮಿ ಮತಿ ಭ್ರಮಣೆಯಾದವರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿದ ಬಿಜೆಪಿ ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಸಭೆಗೆ ದೊರೆತ ಅಪಾರ ಬೆಂಬಲದಿಂದ ಜೆಡಿಎಸ್ ಪತರುಗುಟ್ಟಿದೆ. ಅಭಿವೃದ್ಧಿ ಕಾರ್ಯಗಳನ್ನು ಮಾಡದೇ, ಮೊಸಳೆ ಕಣ್ಣೀರಿನಿಂದಲೇ ಕೋಟೆ ಕಟ್ಟಿ ಮೆರೆಯುತ್ತಿದ್ದವರ ನಿದ್ದೆ ಹಾರಿದೆ. ಹಾಗಾಗಿಯೇ, ಕುಮಾರಸ್ವಾಮಿ ಮತಿ ಭ್ರಮಣೆಯಾದವರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ. https://twitter.com/BJP4Karnataka/status/1610248358374920192 https://kannadanewsnow.com/kannada/are-you-a-puc-pass-if-so-apply-for-this-post/ https://kannadanewsnow.com/kannada/gurumahant-shri-agraha-to-give-bharat-ratna-to-the-walking-god-siddeshwar-shri-2/