Author: KNN IT TEAM

ದಾವಣಗೆರೆ :  2023 ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ದಾವಣಗೆರೆಯಲ್ಲಿ ಹೇಳಿದ್ದಾರೆ.  ಸುದ್ದಿಗಾರರ ಜೊತೆ ಮಾತನಾಡಿದ ಅವರು  ಇದು ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ. ಹಳಿ ತಪ್ಪಿರುವ ಈ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. 2023 ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದರು. ಎಸ್. ಎಂ. ಕೃಷ್ಣ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವ ಹಗರಣ ಮಾಡಲಿಲ್ಲ, ಭ್ರಷ್ಟಾಚಾರವೂ ಇಲ್ಲ. ಆದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದರು. ವೋಟರ್ ಐಡಿ ಡಿಲೀಟ್, ಕದಿಯುವಂತಹ ಮಟ್ಟದಲ್ಲಿ ಬಿಜೆಪಿ ಷಡ್ಯಂತ್ರ ಮಾಡುತ್ತಿದೆ., ಯುವಕರಿಗೆ ಉದ್ಯೋಗ ನೀಡಿಲ್ಲ, ರೈತರಿಗೆ ಸಹಾಯ ಮಾಡಿಲ್ಲ ಎಂದು ಕಿಡಿಕಾರಿದರು. https://kannadanewsnow.com/kannada/walking-god-siddheshwara-sri-immersed-in-panchabhutas/ https://kannadanewsnow.com/kannada/talk-about-these-issues-show-your-strength-congress-challenges-kateel-in-a-tweet/

Read More

ಇರಾನ್ : ಕಜಿಕಿಸ್ತಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಟೂರ್ನಮೆಂಟ್‌ನಲ್ಲಿ ಹಿಜಾಬ್ ಮತ್ತು ಹೆಡ್ ಸ್ಕಾರ್ಫ್ ಧರಿಸದೆ ಭಾಗವಹಿಸಿದ ಹಿನ್ನೆಲೆಯಲ್ಲಿ ಚೆಸ್ ಆಟಗಾರ್ತಿ ಸಾರಾ ಖದೇಮ್ ಅವರಿಗೆ ತಾಯ್ನಾಡು ಇರಾನಿಗೆ ಹಿಂದಿರುಗಂತೆ ಇರಾನ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಚೆಸ್ ಆಟಗಾರ್ತಿ ಸಾರಾ ಖದೇಮ್ ಅವರಿಗೆ ಇರಾನ್ ಗೆ ಹಿಂದಿರುಗದಂತೆ ಬೆದರಿಕೆಗಳು ಬರುತ್ತಿಯಂತೆ ಎಂದು ಘಟನೆಯ ಬಗ್ಗೆ ತಿಳಿದಿರುವ ಜನರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಕಜಿಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಖದೇಮ್ ಹಿಜಾಬ್ ಧರಿಸಿದೆ ಭಾಗವಹಿಸಿದ್ದರು. ಇರಾನ್‌ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅಡಿಯಲ್ಲಿ ಎಲ್ಲಾ ಮಹಿಳೆಯರಿಗೆ ಹಿಜಾಬ್ ಕಡ್ಡಾಯವಾಗಿ ವಿಧಿಸಲಾಗಿದೆ. ಖದೇಮ್‌ಗೆ ಹಲವು ಫೋನ್ ಕರೆಗಳು ಬರುತ್ತಿದ್ದು, ಇದರಲ್ಲಿ ವ್ಯಕ್ತಿಗಳು ಪಂದ್ಯಾವಳಿಯ ನಂತರ ಮನೆಗೆ ಹಿಂದಿರುಗದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಇತ್ತ ಇರಾನ್ ನಲ್ಲಿರುವ ಆಟಗಾರ್ತಿಯ ಪೋಷಕರು ಮತ್ತು ಸಂಬಂಧಿಕರು ಬೆದರಿಕೆಗಳು ಬಂದಿದ್ದವು ಎಂದು ತಿಳಿದು ಬಂದಿದೆ. ಆಟಗಾರ್ತಿಗೆ ಬೆದರಿಕೆ…

Read More

ಬೆಂಗಳೂರು :  ಲವ್ ಜಿಹಾದ್ ಬಗ್ಗೆ ಆಮೇಲೆ ಮಾತಾಡುವಿರಂತೆ ಈ ವಿಷಯಗಳ ಬಗ್ಗೆ ಮಾತನಾಡಿ ನಿಮ್ಮ, ಧಮ್ಮು ತಾಕತ್ತು ತೋರಿಸಿ ಎಂದು ನಳೀನ್ ಕುಮಾರ್ ಕಟೀಲ್ ಗೆ ಟ್ವೀಟ್ ನಲ್ಲಿ ಕಾಂಗ್ರೆಸ್ ಸವಾಲ್ ಹಾಕಿದೆ. ಬಿಟ್ ಕಾಯಿನ್ ಹಗರಣ , PSI ಅಕ್ರಮ ,ಕೆಪಿಟಿಸಿಎಲ್ ಅಕ್ರಮ ಸಾಲು ಸಾಲು ನೇಮಕಾತಿ ಅಕ್ರಮಗಳು ,ಗುತ್ತಿಗೆದಾರರ ಆತ್ಮಹತ್ಯೆ ,ರಸ್ತೆ ಗುಂಡಿಯ ಸಾವುಗಳು , ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯ ಮೊದಲು ಈ ವಿಷಯಗಳನ್ನು ಮಾತಾಡಿ ದಮ್ಮು, ತಾಕತ್ತು ತೋರಿಸಿ ಎಂದು ನಳೀನ್ ಕುಮಾರ್ ಕಟೀಲ್ ಗೆ ಟ್ವೀಟ್ ನಲ್ಲಿ ಕಾಂಗ್ರೆಸ್ ಸವಾಲ್ ಹಾಕಿದೆ. https://twitter.com/INCKarnataka/status/1610252024909824006 https://kannadanewsnow.com/kannada/cm-bommai-dignitaries-pay-homage-to-siddeshwar-sris-mortal-body-cremation-in-a-few-moments/ https://kannadanewsnow.com/kannada/walking-god-siddheshwara-sri-immersed-in-panchabhutas/

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ಜನರಿಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನ ನೀಡುತ್ತವೆ. ಈ ವೇದಿಕೆಗಳ ಮೂಲಕ, ಜನರು ತಮ್ಮ ಧ್ವನಿಯನ್ನ ದೊಡ್ಡ ಜನಸಂಖ್ಯೆಗೆ ತಲುಪಲು ಸಾಧ್ಯವಾಗುತ್ತದೆ. ಇಷ್ಟೇ ಅಲ್ಲ, ಅನೇಕ ಜನರು ತಮ್ಮ ಸುತ್ತ ನಡೆಯುತ್ತಿರುವ ಸಮಸ್ಯೆಗಳನ್ನ ಸಾರ್ವಜನಿಕವಾಗಿ ಸುಲಭವಾಗಿ ಪ್ರಸ್ತಾಪಿಸಬಹುದು. ಜನರು ಕೇವಲ ಸಾಮಾಜಿಕ ಮಾಧ್ಯಮದ ಪ್ರಯೋಜನವನ್ನ ಪಡೆಯುತ್ತಿದ್ದಾರೆ. ಆದ್ರೆ, ಸ್ಕ್ಯಾಮರ್ಗಳು ಈ ಪ್ಲಾಟ್ಫಾರ್ಮ್’ಗಳಲ್ಲಿ ತಮ್ಮ ಗುರಿಗಳನ್ನ ಸಹ ಕಂಡುಕೊಳ್ಳುತ್ತಾರೆ. ಜನರ ತಪ್ಪಿನಿಂದಾಗಿ ವಂಚಕರು ಹಣ ವಂಚಿಸುತ್ತಾರೆ. ಮುಂಬೈನಲ್ಲಿ ಮಹಿಳೆಯೊಬ್ಬರಿಗೆ ಅಂತಹದ್ದೇ ಘಟನೆ ನಡೆದಿದೆ. ಮಹಿಳೆಯ ಒಂದು ತಪ್ಪಿನಿಂದಾಗಿ ವಂಚಕರು 64,000 ರೂಪಾಯಿ ದೋಚಿದ್ದಾರೆ. ಇಷ್ಟಕ್ಕೂ ಅಲ್ಲಿ ನಡೆದಿದ್ದಾದ್ರು ಏನು.? ಇಡೀ ವಿಷಯ ಏನು? ವಾಸ್ತವವಾಗಿ, ಬಲಿಪಶು ತನ್ನ RAC ಟಿಕೆಟ್ನ ನವೀಕರಣವನ್ನ ತಿಳಿದುಕೊಳ್ಳಲು ಬಯಸಿದ್ದು, ಇದಕ್ಕಾಗಿ ಟ್ವಿಟರ್ನಲ್ಲಿ IRCTC ಟ್ಯಾಗ್ ಮಾಡುವ ಮೂಲಕ ಟ್ವೀಟ್ ಮಾಡಿದ್ದಾಳೆ. ಈ ಟ್ವೀಟ್ನಲ್ಲಿ ಅವರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಟಿಕೆಟ್ ವಿವರಗಳನ್ನ ಹಂಚಿಕೊಂಡಿದ್ದಾರೆ. MN ಮೀನಾ IRCTC…

Read More

ವಿಜಯಪುರ:  ನಿನ್ನೆ ಅಗಲಿದಂತ ನಡೆದಾಡುವ ದೇವರು, ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ( Siddeshwara Sri ) ಅಂತ್ಯ ಸಂಸ್ಕಾರವನ್ನು ಅವರ ಇಚ್ಛೆಯಂತೆ ಅಗ್ನಿ ಸ್ಪರ್ಷ ಮಾಡುವ ಮೂಲಕ ಜ್ಞಾನಯೋಗಾಶ್ರಮದಲ್ಲಿ ನೆರವೇರಿಸಲಾಯಿತು. ಯಾವುದೇ ಧಾರ್ಮಿಕ ವಿಧಿವಿಧಾನವಿಲ್ಲದೇ ಶ್ರೀಗಳ ಅಂತ್ಯ ಸಂಸ್ಕಾರ ನೇರವೇರಿದೆ.  ಈ ಮೂಲಕ ನಡೆದಾಡುವ ದೇವರು ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನರಾದರು. ಅನಾರೋಗ್ಯದಿಂದಾಗಿ ನಿನ್ನೆ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿದ್ದರು. ಇಂದು ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವಿಜಯಪುರದ ಸೈನಿಕ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಂತ್ಯ ಸಂಸ್ಕಾರಕ್ಕೂ ಮುನ್ನ  ಶ್ರೀಗಳ ಪಾರ್ಥಿವ ಶರೀರವನ್ನು ಅಪಾರ ಭಕ್ತರರ ನಡುವೆ ಅಂತ್ಯ ಸಂಸ್ಕಾರದ ಸ್ಥಳಕ್ಕೆ ತೆರೆದ ವಾಹನದಲ್ಲಿ ಕರೆದು ಹೋಗಲಾಯಿತು. ಇದೇ ವೇಳೇ ದಾರಿ ಉದ್ದಕ್ಕೂ ಸಾವಿರಾರು ಜನರು ನಡೆದಾಡುವ ದೇವರನ್ನು ನೆನಪು ಮಾಡಿ ಕೊಂಡು ಕಣ್ಣೀರ ಜೊತೆಗೆ ವಿದಾಯ ಹೇಳುತ್ತಿದ್ದರು, ಇದಲ್ಲದೇ ಅವರ ಪಾರ್ಥಿವ ಶರೀರವಿದ್ದ ವಾಹನದ ಮೇಲೆ ಹೂವಿನ ಮಳೆಯನ್ನು ಸುರಿಸಿ ಶತಮಾನದ ಸಂತನಿಗೆ ಅಶ್ರುತರ್ಪದ ಮೂಲಕ…

Read More

ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಇದೀಗ ಶ್ರೀಗಳ ಅಂತಿಮ ವಿಧಿ ವಿಧಾನ ನೆರವೇರುತ್ತಿದೆ. ಕೆಲವೇ ಕ್ಷಣದಲ್ಲಿ ಶ್ರೀಗಳ ಚಿತೆಗೆ ಅಗ್ಬಿಸ್ಪರ್ಶ ಮಾಡಲಾಗುತ್ತದೆ. ಕೆಲಹೊತ್ತಿನಲ್ಲೇ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದ್ದು, ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನ ನಡೆಸಲಾಗುತ್ತಿದೆ. ಪಾರ್ಥಿವ ಶರೀರಕ್ಕೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಪೂಜೆ ಸಲ್ಲಿಸಿದ್ದಾರೆ. ಮರಣದ ಬಗ್ಗೆ 8 ವರ್ಷದ ಹಿಂದೆ ಭವಿಷ್ಯ ನುಡಿದಿದ್ದ ಶ್ರೀ ತಮ್ಮ ಮರಣದ ಬಗ್ಗೆ 2014ರಲ್ಲೇ ‘ಸಿದ್ದೇಶ್ವರ ಶ್ರೀ’ಗಳು ಭವಿಷ್ಯ ನುಡಿದಿದ್ದರು ಎಂಬುದಾಗಿ ತಿಳಿದು ಬಂದಿದೆ. ಎಂಟು ವರ್ಷದ ಹಿಂದೆಯೇ ಶ್ರೀಗಳು ತಮ್ಮ ಮರಣ ಯಾವ ರೀತಿ ಇರುತ್ತೆ ಎಂದು ಹೇಳಿದ್ದರಂತೆ. ವೈಕುಂಠ ಏಕಾದಶಿಯ ಪುಣ್ಯದಿನದಂದು (ಜ.2) ರಂದು ಶ್ರೀಗಳು ಲಿಂಗೈಕ್ಯರಾಗಿದ್ದು, ಇದು ದೇಹತ್ಯಾಗ ಎಂದು ಹೇಳಲಾಗಿದೆ. .ತಮ್ಮ ಮರಣದ ಬಗ್ಗೆ ತಾವೇ ಭವಿಷ್ಯ ನುಡಿದ್ದಿದ್ದ ಅವರು ಈ ಪುಣ್ಯದಿನದಂದು ತಮ್ಮ ದೇಹ ತ್ಯಾಗ ಮಾಡಿದ್ದಾರೆ ಎಂದು ಹಿರಿಯರು ಹೇಳಿದ್ದಾರೆ ಎನ್ನಲಾಗಿದೆ. ಮರಣದ ಬಗ್ಗೆ ತಿಳಿಸಿದ್ದ ಶ್ರೀಗಳು ನನ್ನನ್ನು…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ. ಪೂಜೆ ಮಾಡುವಾಗ, ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ನೋಡಿಕೊಳ್ಳುವುದು ಅವಶ್ಯಕ. ಪೂಜೆ ಮಾಡುವಾಗ, ಕೆಲವು ವಿಷಯಗಳಿಗೆ ವಿಶೇಷ ಗಮನ ನೀಡಬೇಕು. ನಿಷ್ಠಿಯಿಂದ ಪೂಜೆ ಮಾಡಿದರೆ ಮಾತ್ರ ದೇವರಿಗೆ ಪ್ರೀತಿಪಾತ್ರರಾಗಬಹುದು. ಪೂಜೆ ಮಾಡುವಾಗ ಈ ನಿಯಮಗಳ ಪಾಲನೆ ಅಗತ್ಯ -ಪೂಜೆಯ ಪ್ರಾರಂಭದಲ್ಲಿ ಮೊದಲು ಗಣಪತಿಯನ್ನು ಪೂಜಿಸಬೇಕು. ಹೀಗೆ ಮಾಡಿದ್ರೆ ಮಾತ್ರ ನಿಮಗೆ ಯಶಸ್ಸು ಸಿಗುತ್ತದೆ. ತಪ್ಪಾಗಿಯೂ ಗಣೇಶ್‌ ಗೆ ತುಳಸಿ ದಳವನ್ನು ಅರ್ಪಿಸಬಾರದು. -ನೀವು ಭಗವಾನ್ ಶಿವನನ್ನು ಪೂಜಿಸುತ್ತಿದ್ದರೆ, ಅವನಿಗೆ ಎಂದಿಗೂ ಕೇತಕಿ ಹೂವನ್ನು ಅರ್ಪಿಸಬೇಡಿ ಎಂಬುದನ್ನು ಗಮನಿಸಿ. ಪೌರಾಣಿಕ ಕಥೆಗಳ ಪ್ರಕಾರ, ಶಿವನು ಕೇತಕಿಗೆ ಶಾಪವನ್ನು ನೀಡಿದ್ದನು. ಅವನು ಅವಳ ಮೇಲೆ ಕೋಪಗೊಂಡನು. ಇಂತಹ ಪರಿಸ್ಥಿತಿಯಲ್ಲಿ ಇವರಿಗೆ ಕೇತಕಿ ಪುಷ್ಪವನ್ನು ಅರ್ಪಿಸದಿರುವುದು ಉತ್ತಮ. -ಪೂಜೆಗೆ ಮುನ್ನ ದೇವರ ಮೂರ್ತಿಗಳನ್ನು ಸ್ವಚ್ಛ ಮಾಡುವಾಗ ಕೇವಲ ಬೆರಳುಗಳನ್ನು ಬಳಸಬೇಕು. ಆ ವೇಳೆ ಹೆಬ್ಬೆರಳು ಬಳಸಬಾರದು. -ಪ್ರತಿದಿನ ತುಳಸಿ ಪೂಜಿಸುವುದು ಒಳ್ಳೆಯದು. ಆದರೆ…

Read More

ಚಿಕ್ಕಮಗಳೂರು : ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಜೋರಾಗಿದೆ. ಕೂಲಿ ಕಾರ್ಮಿಕರು, ರೈತರು ಜಮೀನಿಗೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕಾಡಾನೆ ಜನರ ನಿದ್ದೆಗೆಡಿಸಿದೆ. ಕಳಸ ತಾಲೂಕಿನ ಗಣಪತಿಕಟ್ಟೆ ಗ್ರಾಮದಲ್ಲಿ ಸಂಜೆಯಾಗುತ್ತಿದ್ದಂತೆ ಕಾಡಾನೆಗಳು ಮನೆ ಬಾಗಿಲಿಗೆ ಬರುತ್ತಿವೆ. ಕಳಸ ಹಲವು ಕಡೆ ಸುತ್ತಮುತ್ತಲಿನ ಗ್ರಾಮದ ಜನ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರೋದಕ್ಕೂ ಹೆದರುವ ಸ್ಥಿತಿ ಎದುರಾಗಿದೆ. ಕಳಸ ತಾಲೂಕಿನ ಗಣಪತಿಕಟ್ಟೆಯಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿದ್ದು , ಕಾಡಾನೆಗಳು ಸಂಚರಿಸುವುದನ್ನು ಸ್ಥಳೀಯರು ನೋಡಿದ್ದಾರೆ. ಕಾಡಾನೆ ಸೆರೆಹಿಡಿಯಲು ಗ್ರಾಮದ ಜನರು ಆಗ್ರಹಿಸಿದ್ದಾರೆ. ಇತ್ತೀಚೆಗೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ರಸ್ತೆಬದಿ ಆಶ್ರಯ ಪಡೆದಿದ್ದವರ ಮೇಲೆ ಕಾಡಾನೆ ದಾಳಿಗೈದು, ದಂಪತಿ ಸೇರಿದಂತೆ ಮತ್ತೊರ್ವ ಸಾವಿನಿಂದ ಪಾರಾದ ಘಟನೆ ಬೆಳಕಿಗೆ ಬಂದಿತ್ತು. ಈ ಹಿಂದೆ ತರೀಕೆರೆ ತಾಲೂಕಿನಲ್ಲಿ ಹೊಲದಲ್ಲಿ ರಾಗಿ ಕಾಯುತ್ತಾ ಮಲಗಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ರೈತ ಸಾವನ್ನಪ್ಪಿ ದ್ದರು. ಮೇಲಿಂದ ಮೇಲೆ ಕಾಡಾನೆಗಳ…

Read More

ಚಿಕ್ಕಬಳ್ಳಾಪುರ: ಕಾನೂನು ಪಾಲನೆ, ಸಂಚಾರ ನಿಯಂತ್ರಣ ಕ್ರಮವಷ್ಟೇ ಅಲ್ಲದೇ ನಾಟಕದ ಮೂಲಕವೂ ಪೊಲೀಸ್ ಇಲಾಖೆ ಜನಸ್ನೇಹಿಯೆಂದು ಗೌರಿಬಿದನೂರು ವೃತ್ತದ ಪೊಲೀಸರು ಮಾಡಿ ತೋರಿಸಿದ್ದಾರೆ. ಆ ಬಗ್ಗೆ ಮುಂದೆ ಓದಿ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವೃತ್ತದ ಪೊಲೀಸರು ಕಾನೂನು ಪಾಲನೆಯ ಜೊತೆಗೆ, ನಾಟಕವನ್ನು ಆಡಿ ಜನತೆಯನ್ನು ರಂಜಿಸುವ ಮೂಲಕ ಕಾನೂನು ಅರಿವನ್ನು ಮೂಡಿಸಿದ್ದಾರೆ. ಗೌರಿಬಿದನೂರು ವೃತ್ತದ ಸಿಪಿಐ ಕೆ.ಪಿ ಸತ್ಯನಾರಾಯಣ ಹರಿಯಬ್ಬೆ ಅವರನ್ನು ವಿಶ್ವಮಾನ ದಿನಾಚರಣೆಯ ಪ್ರಯುಕ್ತ ವಿಶೇಷ ಆಹ್ವಾನಿತರಾಗಿ ಕರೆಯೋದಕ್ಕೆ ಸಹ ನಿರ್ದೇಶನಕಾರ ಕೆ.ವಿ ನಾಯಕ್ ಆಗಮಿಸಿದಂತ ವೇಳೆಯಲ್ಲಿ ನಾಟಕದ ಕುರಿತಂತೆ ಕೆಲ ಕಾಲ ಚರ್ಚೆ ನಡೆದಿದೆ. ಆಗ ತಾವು ಕಾಲೇಜು ದಿನಗಳಲ್ಲಿ ರೂಪಕಗಳನ್ನು ರಚಿಸಿ, ನಟಿಸಿ, ನಿರ್ದೇಶಿಸಿದ ಬಗ್ಗೆ ಕೆ.ಪಿ ಸತ್ಯನಾರಾಯಣ ಹೇಳಿದ್ದಾರೆ. ಇದರಿಂದ ಪ್ರೇರಣೆಗೊಂಡಂತ ಕೆ.ವಿ ನಾಯಕ್, ನೀವು ಯಾಕೆ ನಾಟಕದಲ್ಲಿ ನಟಿಸಬಾರದು? ನೀವು ದುರ್ಯೋಧನ, ಭೀಮನ ಪಾತ್ರಕ್ಕೆ ಹೇಳಿಮಾಡಿಸಿದಂತೆ ಇದ್ದೀರಿ ಎಂಬುದಾಗಿ ತಿಳಿಸಿದ್ದಾರೆ. ಕೆ.ವಿ ನಾಯಕ್ ಅವರ ಮಾತಿನಿಂದ ಪ್ರೇರಣೆಗೊಂಡಂತ ಸಿಪಿಐ ಕೆ.ಪಿ ಸತ್ಯನಾರಾಯಣ, ಪೊಲೀಸ್ ಇಲಾಖೆ…

Read More

ನವದೆಹಲಿ : ಒಂದು ಕಾಲದಲ್ಲಿ ಲಕ್ಷಾಂತರ ಜನರಲ್ಲಿ ಕಂಡುಬರುತ್ತಿದ್ದ ಅತ್ಯಂತ ಅಪರೂಪದ ಕಾಯಿಲೆಯಾದ ಕ್ಯಾನ್ಸರ್ ಈಗ ಸಾವಿರಕ್ಕೆ ಒಂದು ಎಂಬಂತಾಗಿದೆ. ಅದ್ರಂತೆ, ಈ ಮಹಾಮಾರಿಗೆ ಅನೇಕ ಜನರು ಸಾವನ್ನಪ್ಪಿದ್ದಾರೆ. ಆದ್ರೆ, ಕೆಲವರು ಈ ಕ್ಯಾನ್ಸರ್ ಮಹಾಮಾರಿಯನ್ನ ಗೆದ್ದಿದ್ದಾರೆ. ಅದ್ರಂತೆ, ಈ ಕ್ಯಾನ್ಸರ್ ತಡೆಗಟ್ಟಲು ಲಸಿಕೆಗಳು ಲಭ್ಯವಿರುತ್ತವೆ ಎಂದು ಹಿಂದೆ ಪ್ರಚಾರ ಮಾಡಲಾಗಿತ್ತು. ಇತ್ತೀಚಿನ ಕ್ಯಾನ್ಸರ್ ಲಸಿಕೆ ಚಿಕಿತ್ಸೆಗಾಗಿ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ. ಈ ರೋಗದ ವಿರುದ್ಧ ಹೋರಾಡಲು ಲಸಿಕೆ ಶೀಘ್ರದಲ್ಲೇ ಬರಲಿದೆ ಎಂದು ತೋರುತ್ತದೆ. ವಿಜ್ಞಾನಿಗಳು ರೂಪಿಸಿರುವ ಪರಿಣಾಮಕಾರಿ ವಿಧಾನ ಅಂತಹ ಭರವಸೆಯನ್ನ ಮೂಡಿಸುತ್ತಿದೆ. ಶೀಘ್ರದಲ್ಲೇ ಬರಲಿರುವ ಕ್ಯಾನ್ಸರ್ ಲಸಿಕೆ ಜ್ವರ ಮತ್ತು ಪೋಲಿಯೊ ಲಸಿಕೆಗಳಂತಹ ರೋಗವನ್ನ ತಡೆಯುವುದಿಲ್ಲ. ಆದ್ರೆ, ಇದು ರೋಗವನ್ನ ಹಿಂತಿರುಗಿಸುವುದನ್ನ ತಡೆಯುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ಗೆಡ್ಡೆಯ ಕೋಶಗಳಲ್ಲಿನ ಪ್ರೋಟೀನ್’ಗಳನ್ನ ಅಪಾಯಕಾರಿ ಎಂದು ಗುರುತಿಸುವಂತೆ ಮಾಡುತ್ತದೆ. ಈಗಾಗಲೇ ಲಭ್ಯವಿರುವ ಇಮ್ಯುನೊಥೆರಪಿ ಪರಿಣಾಮಕಾರಿತ್ವವನ್ನ ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಭಾವಿಸುತ್ತಾರೆ. ಕ್ಯಾನ್ಸರ್ ಲಸಿಕೆಗಳನ್ನ ಅಭಿವೃದ್ಧಿಪಡಿಸುವ ಸಲುವಾಗಿ ವಿಜ್ಞಾನಿಗಳು ಸಾಕಷ್ಟು ಸಂಶೋಧನೆಗಳನ್ನ ಮಾಡಿದ್ದಾರೆ.…

Read More