Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ಪ್ರಧಾನಿ ಮೋದಿ ಮುಂದೆ ಬೊಮ್ಮಾಯಿ ನಾಯಿಮರಿಯಂತೆ ಇರ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದೀಗ ತಮ್ಮ ಹೇಳಿಕೆಗೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮತ್ತೆ ಸಮರ್ಥನೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಧೈರ್ಯದಿಂದ ಇರಬೇಕು ಎಂದು ಅಷ್ಟೇ ಹೇಳಿದ್ದೆ, ರಾಜ್ಯದ ಹಿತದೃಷ್ಟಿಯಿಂದ ಧೈರ್ಯದಿಂದ ಇರಬೇಕು ಎಂದು ನಾನು ಸದುದ್ದೇಶದಿಂದ ಹೇಳಿದ್ದೆ, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರುವಲ್ಲಿ ಮುಖ್ಯಮಂತ್ರಿಗಳು ಧೈರ್ಯದಿಂದ ಇರಬೇಕು ಎಂದು ಹೇಳಿದ್ದೆ, ಅನುದಾನ ವಿಚಾರದಲ್ಲಿ ಹೇಳಿದ್ದೇನೆ ಅಷ್ಟೇ, ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದರು. ಸೋನಿಯಾ ಗಾಂಧಿ, ರಾಹುಲ್ ಮುಂದೆ ಸಿದ್ದರಾಮಯ್ಯ ಇಲಿ ತರ ಇರುತ್ತಾರೆ ಎಂಬ ಸಚಿವ ಶ್ರೀರಾಮುಲು ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಅವನೊಬ್ಬ ಪೆದ್ದ , ಆತನ ಬಗ್ಗೆ ಮಾತನಾಡೋಲ್ಲ ಎಂದರು.ಸಿಎಂ ಬೊಮ್ಮಾಯಿ ಬಗ್ಗೆ ಲಘುವಾಗಿ ಮಾತನಾಡಿಲ್ಲ, ನಮ್ಮ ಹಳ್ಳಿ ಭಾಷೆಯಲ್ಲಿ ಹಾಗೆ ಮಾತನಾಡುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು, ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು…
ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಂದು ನಿಗದಿತ ಸಮಯಕ್ಕಿಂತ ತಡವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಡ್ಡಾ ಇಂದು ಮಧ್ಯಾಹ್ನ 12:55 ಕ್ಕೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜನವರಿ 5 ಇಂದು ಮತ್ತು 6ರಂದು ಎರಡು ದಿನ ಕರ್ನಾಟಕ ರಾಜ್ಯ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜ.5 ರಂದು ಮಧ್ಯಾಹ್ನ ತುಮಕೂರಿನಲ್ಲಿ, ತುಮಕೂರು ಮತ್ತು ಮಧುಗಿರಿಯ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿರುವ ಅವರು, ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಭೆಗಳಲ್ಲಿ ಭಾಗವಹಿಸಲಿದ್ದು, ಸಿದ್ದಗಂಗಾ ಮಠ ಸೇರಿದಂತೆ ಕೆಲವು ಪ್ರಮುಖ ಮಠಗಳಿಗೆ ಭೇಟಿ ನೀಡಲಿದ್ದಾರೆ. ಜ.5ರಂದು ಮಧ್ಯಾಹ್ನ ತುಮಕೂರಿನ ತುಮಕೂರು ಮತ್ತು ಮಧುಗಿರಿ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಶಕ್ತಿ ಕೇಂದ್ರ ಸಭೆಯಲ್ಲಿ ನಡ್ಡಾ ಭಾಗವಹಿಸಲಿದ್ದು, ನಂತರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಂದು ಸಂಜೆ ಚಿತ್ರದುರ್ಗದಲ್ಲಿ ವೀರ ಮದಕರಿ…
ಬಂದಾ(ಉತ್ತರ ಪ್ರದೇಶ): ದೆಹಲಿಯ ಸುಲ್ತಾನ್‌ಪುರಿಯಲ್ಲಿ 20 ವರ್ಷದ ಯುವತಿಯ ಭೀಕರ ಅಪಘಾತದ ನೆನಪು ಮಾಸುವ ಮುನ್ನವೇ ಅಂತದ್ದೇ ಒಂದು ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ. ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸಮೇತ ಮಹಿಳೆಯನ್ನು ಟ್ರಕ್ ಸುಮಾರು ಮೂರು ಕಿಲೋಮೀಟರ್ ವರೆಗೆ ಎಳೆದೊಯ್ದಿದೆ. ಇದರ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮೃತಳನ್ನು ಪುಷ್ಪಾ ದೇವಿ ಎಂದು ಗುರುತಿಸಲಾಗಿದೆ. ಈಕೆ ವಿಶ್ವವಿದ್ಯಾನಿಲಯವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪುಷ್ಪಾಳ ಸ್ಕೂಟಿಗೆ ಟ್ರಕ್ ಡಿಕ್ಕಿ ಹೊಡೆದಿದ್ದರಿಂದ ಸ್ಕೂಟಿ ಟ್ರಕ್‌ಗೆ ಸಿಲುಕಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಆಕೆ ಅಲ್ಲೇ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸ್ ಪಡೆಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದು, ತನಿಖೆ ಮುಂದುವರೆದಿದೆ. ಆದ್ರೆ, ಚಾಲಕನನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. https://kannadanewsnow.com/kannada/bajrang-dal-workers-go-on-rampage-to-protest-against-pathaan-at-ahmedabad-mall-watch/ https://kannadanewsnow.com/kannada/tmc-leader-beaten-to-death-for-stopping-dj-in-west-bengals-malda-14-detained/ https://kannadanewsnow.com/kannada/bajrang-dal-workers-go-on-rampage-to-protest-against-pathaan-at-ahmedabad-mall-watch/ https://kannadanewsnow.com/kannada/tmc-leader-beaten-to-death-for-stopping-dj-in-west-bengals-malda-14-detained/
ಬೆಂಗಳೂರು : ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ವೇ ವೈಮಾನಿಕ ಪರಿಶೀಲನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು ನಡೆಸಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಕ್ಕೆ ಭೇಟಿ ನೀಡಿದ್ದು, ಇಂದು ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಯೋಜನೆಗಳ ವೈಮಾನಿಕ ಪರಿಶೀಲನೆ ನಡೆಸಿದ್ದಾರೆ. ರಾಜ್ಯದ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಅವರೊಂದಿಗೆ ನಿತಿನ್ ಗಡ್ಕರಿ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣ ಕಾರ್ಯದ ವೈಮಾನಿಕ ಪರಿಶೀಲನೆ ನಡೆಸಿದರು. ಇದರಿಂದ 10 ಲೇನ್ನ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಪ್ರಯಾಣದ ಸಮಯ 7 ಗಂಟೆಗಳಿಂದ 3 ಗಂಟೆಗಳವರೆಗೆ ಕಡಿತಗೊಳಿಸುವ ಗುರಿಯನ್ನು ಹೊಂದಿದೆ. ನಾವು 16,730 ಕೋಟಿ ಮೌಲ್ಯದ ಈ 262 ಕಿ.ಮೀ ಉದ್ದದ 8 ಪಥದ ರಚನೆಯನ್ನು ನಿರ್ಮಿಸುತ್ತಿದ್ದೇವೆ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ. ನಂತರ ನಿತಿನ್ ಚನ್ನಪಟ್ಟಣ ಕಡೆಗೆ ತೆರಳಿ ನಂತರ ಬಂದು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. https://twitter.com/nitin_gadkari/status/1610866665352491012?ref_src=twsrc%5Etfw%7Ctwcamp%5Etweetembed%7Ctwterm%5E1610866665352491012%7Ctwgr%5Ec5d538114c3d60ad93da93b5bf3d54c9542feb88%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fnitin-gadkari-conducted-aerial-inspection-of-bengaluru-chennai-expressway-with-minister-cc-patil-sct-au49-496062.html https://kannadanewsnow.com/kannada/tmc-leader-beaten-to-death-for-stopping-dj-in-west-bengals-malda-14-detained/ https://kannadanewsnow.com/kannada/bomb-threat-letter-to-bhatkal-shocked-people/
ಬೆಂಗಳೂರು : ಸಿಲಿಕಾನ್ ಸಿಟಿ ಬಸ್ ಪ್ರಯಾಣಿಕರಿಗೆ ಮಹಾನಗರ ಸಾರಿಗೆ ಸಂಸ್ಥೆ ಬಿಗ್ ಶಾಕ್ ನೀಡಿದ್ದು, ಇದೀಗ ಬಿಎಂಟಿಸಿ ವಜ್ರ ಬಸ್ ದರ ಗಗನಕ್ಕೇರಲಿದೆ ಎಂದು ಹೊಸ ಆದೇಶ ಹೊರಡಿಸಿದ್ದಾರೆ. https://kannadanewsnow.com/kannada/bomb-threat-letter-to-bhatkal-shocked-people/ ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ಹಿತ ದೃಷ್ಟಿಯಿಂದ ಜನವರಿ 1 ರಿಂದ ಹವಾ ನಿಯಂತ್ರಿತ ಬಸ್‌ನ ದೈನಂದಿನ, ಮಾಸಿಕ ಪಾಸ್‌ಗಳ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜನವರಿ 5 ರಿಂದ ದೂರದ ಪ್ರಯಾಣ ದರ ಕೂಡ ಹೆಚ್ಚಳವಾಗುವ ಸಾಧ್ಯತೆಯಿದೆ ಜನಸಮಾನ್ಯರ ಬೇಬಿಗೆ ಬರೇ ಬೀಳುವು ಪಕ್ಕ ಎಂದು ತಿಳಿದು ಬಂದಿದೆ. https://kannadanewsnow.com/kannada/bomb-threat-letter-to-bhatkal-shocked-people/ ಬಿಎಂಟಿಸಿ ವಜ್ರ ಬಸ್ ದರವೂ 20 ಕಿ.ಮೀ ಗಿಂತ ದೂರದ ಪ್ರಯಾಣದ ದರದಲ್ಲಿ ಏರಿಕೆ ಕಾಣಲಿದೆ. 20 ಕಿ.ಮೀ ವಯಸ್ಕರ ಪ್ರಯಾಣಕ್ಕೆ ಈ ಹಿಂದೆ 45 ರೂ. ಇತ್ತು. ಗುರುವಾರದಿಂದ 20 ಕಿ.ಮೀ ವಯಸ್ಕರ ಪ್ರಯಾಣಕ್ಕೆ 50 ರೂ. ಆಗಿದೆ. 21 ಕಿ.ಮೀ ವಯಸ್ಕರ ಪ್ರಯಾಣಕ್ಕೆ ಈ ಹಿಂದೆ 50 ರೂ. ಇದ್ದು, ಗುರುವಾರದಿಂದ…
ಕಾರವಾರ : ಬಾಂಬ್ ಬೆದರಿಕೆಯೊಡ್ಡಿದ ಹುಸಿ ಬೆದರಿಕೆ ಪೋಸ್ಟ್ ಕಾರ್ಡ್ ಒಂದು ಭಟ್ಕಳ ಠಾಣೆಗೆ ಬಂದಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಹೊಸಪೇಟೆಯ ಹನುಮಂತಪ್ಪ ಎಂಬಾತನನ್ನು ಚೆನ್ನೈ ಪೊಲೀಸರು ಈಗಾಗಲೇ ಬಂಧಿಸಿದ್ದು, ಈತನನ್ನು ವಶಕ್ಕೆ ಪಡೆಯಲು ಭಟ್ಳಳ ಪೊಲೀಸರು ಸಿದ್ದರಾಗಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆಯೇ ಈ ಪತ್ರ ಠಾಣೆಗೆ ತಲುಪಿದ್ದು, ಆದರೆ ಈ ವಿಷಯವನ್ನು ಪೊಲೀಸರು ಬಹಿರಂಗ ಮಾಡಿರಲಿಲ್ಲ. ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25 ಆ್ಯಂಡ್ ಹ್ಯಾಪಿ ನ್ಯೂ ಇಯರ್ 2023 ಬ್ಲಾಸ್ಟ್ ಎಂದು ಇಂಗ್ಷೀಷ್ ನಲ್ಲಿ ಬರೆದ ಪೋಸ್ಟ್ ಭಟ್ಕಳ ಠಾಣೆಗೆ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ. https://kannadanewsnow.com/kannada/bajrang-dal-workers-go-on-rampage-to-protest-against-pathaan-at-ahmedabad-mall-watch/ https://kannadanewsnow.com/kannada/breaking-news-no-new-corona-strain-has-been-detected-in-the-state-minister-sudhakar-clarified/ https://kannadanewsnow.com/kannada/unauthorized-10-in-vidhana-soudha-rs-5-lakh-cash-found/
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಮಾಲ್ಡಾದ ತೃಣಮೂಲ ಉಪ ಮುಖ್ಯಸ್ಥ ಅಫ್ಜಲ್ ಮೊಮಿನ್ ಅವರನ್ನು ಬರ್ಬರವಾಗಿ ಹೊಡೆದು ಕೊಲ್ಲಲಾಗಿದೆ. ಡಿಜೆ ಆಡುವುದನ್ನು ನಿಲ್ಲಿಸಿದ್ದೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ಮೋಥಾ ಬಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳ ಸರ್ಕಾರವು ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ಅಫ್ಜಲ್ ಕೈಲಾಶ್‌ಜಿ ಬ್ಲಾಕ್‌ನ ರಥ ಬರಿ ಗ್ರಾಮ ಪಂಚಾಯತ್‌ನ ಉಪ ಮುಖ್ಯಸ್ಥರಾಗಿದ್ದರು. ಕೆಲ ಯುವಕರು ಗ್ರಾಮದಲ್ಲಿ ಡಿಜೆ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಾ ಗಲಾಟೆ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆಯೂ ಯುವಕರು ಡಿಜೆ ಬಾರಿಸುತ್ತಾ ಗ್ರಾಮಕ್ಕೆ ಭೇಟಿ ನೀಡಿದ್ದರು. ಇದನ್ನು ನಿಲ್ಲಿಸುವಂತೆ ಗ್ರಾಮಸ್ಥರು ಯುವಕರು ಸುಮ್ಮನಾದರು. ಆದರೆ, ಯುವಕರು ಮತ್ತೆ ರಾತ್ರಿ ವೇಳೆ ಡಿಜೆಯನ್ನು ಪ್ಲೇ ಮಾಡಿದ್ದಾರೆ. ಈ ವೇಳೆ ಡಿಜೆ ಆಡುವುದನ್ನು ನಿಲ್ಲಿಸಿ ಎಂದು ಗ್ರಾಮಸ್ಥರು ಮತ್ತು ಯುವಕರ ನಡುವೆ ಘರ್ಷಣೆ ನಡೆಯಿತು. ಈ…
ಬೆಂಗಳೂರು : ವಿಧಾನ ಸೌಧದ ಪಶ್ವಿಮ ದ್ವಾರದಲ್ಲಿ ಅನಧಿಕೃತ 10.5 ಲಕ್ಷ ನಗದು ಹಣ ಪತ್ತೆಯಾಗಿದ್ದು ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್ ಬಳಿ ಇದ್ದ ಹಣ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. https://kannadanewsnow.com/kannada/jds-tweet/ ನಿನ್ನೆ ಸಂಜೆ 7 ಗಂಟೆಗೆ ನಡೆದ ಘಟನೆ ಎಂದು ತಿಳಿದುಬಂದಿದೆ. ಮಂಡ್ಯ ಮೂಲದ ವ್ಯಕ್ತಿಯ ಬ್ಯಾಗ್‌ನಲ್ಲಿ ಹಣ ಪತ್ತೆಯಾಗಿದೆ. ಹಣ ಮೂಲ ಪ್ರಶ್ನೆ ಮಾಡಿದಾಗ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಬಳಿಕ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಲಾಗಿದೆ. ಇದೀಗ ಹಣ ಮೂಲಕ ಹುಡುಕುವಲ್ಲಿ ಪೊಲೀಸರು ಮುಂದಾಗಿದ್ದಾರೆ. ಯಾವ ಇಲಾಖೆ ಸಂಬಂಧಿಸಿದೆಂದು ಮಾಹಿತಿ ಲಭ್ಯವಾಗಿಲ್ಲ. https://kannadanewsnow.com/kannada/jds-tweet/
ಬೆಂಗಳೂರು : 40% ಕಮಿಷನ್ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬರುತ್ತಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸ್ವಾಗತ ಎಂದು ಜೆಡಿಎಸ್ ಟ್ವೀಟ್ ಮಾಡಿದೆ. ಪ್ರಧಾನಿ ಮೋದಿ ಬಂದಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಪಡಿಸಿದ್ದ ರಸ್ತೆ ಕಿತ್ತು ಹೋದ ಸಂಗತಿ ರಾಜ್ಯದ ಜನತೆಗೆ ಗೊತ್ತಿದೆ. ಇಂತಹ ಲಜ್ಜೆಗೆಟ್ಟ ಸರ್ಕಾರಕ್ಕೆ, ಅದೇ ಪಕ್ಷದ ರಸ್ತೆ ಸಾರಿಗೆ ಹಾಗೂ ಹೆದ್ದಾರಿಯ ಕೇಂದ್ರ ಸಚಿವರಾಗಿರುವ ತಾವು ಯಾವ ಸಲಹೆ ಕೊಡಲು ಬಯಸುತ್ತೀರಿ? ಎಂದು ಕಿಡಿಕಾರಿದೆ. ಸುರಕ್ಷತೆಗಿಂತ ಅಸುರಕ್ಷತೆಯೇ ಹೆಚ್ಚಾಗಿರುವ ಈ ರಸ್ತೆಯಲ್ಲಿ ಸಿಸಿಟಿವಿಗಳು ಯಾಕೆ ಅಳವಡಿಕೆಯಾಗಿಲ್ಲ? ಇವೇ ಕಾರಣಗಳಿಂದ ಸಂಭವಿಸಿರುವ ಹತ್ತಾರು ಅಪಘಾತಗಳಿಗೆ ಯಾರು ಜವಾಬ್ದಾರರು? ಅಪಘಾತ ತಡೆ ಸಂಬಂಧ ಪೆಟ್ರೋಲಿಂಗ್ ಯಾಕೆ ಇನ್ನೂ ಆರಂಭವಾಗಿಲ್ಲ? ಸರ್ವೀಸ್ ರಸ್ತೆಯಲ್ಲಿ ವೇಗ ಮಿತಿಗಾಗಿ ವೈಜ್ಞಾನಿಕವಾಗಿ ಹಂಪ್ ಗಳನ್ನು ನಿರ್ಮಿಸಿಲ್ಲ? ಎಂದು ಟ್ವೀಟ್ ನಲ್ಲಿ ಕಿಡಿಕಾರಿದೆ. ಇದೇ ದಶಪಥ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರು…
ಅಹಮದಾಬಾದ್ : ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಚಿತ್ರ ‘ಪಠಾನ್(Pathaan)’ ಪ್ರಚಾರದ ವೇಳೆ ಭಜರಂಗದಳದ ಕಾರ್ಯಕರ್ತರ ಗುಂಪು ಅಹಮದಾಬಾದ್‌ನಲ್ಲಿ ಮಾಲ್ ಅನ್ನು ಧ್ವಂಸಗೊಳಿಸಿದೆ. ಪ್ರತಿಭಟನೆ ವೇಳೆ ಮಾಲ್‌ನ ವಸ್ತುಗಳಿಗೆ ಹಾನಿ ಮಾಡುವ ವೀಡಿಯೋವನ್ನು ಸೆರೆಹಿಡಿಯಲಾಗಿದೆ. ವಿಎಚ್‌ಪಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುವುದು ಮತ್ತು ಪೋಸ್ಟರ್‌ಗಳನ್ನು ಹರಿದು ಹಾಕುವುದು ಹಾಗೂ ಪಠಾಣ್‌ನ ದೊಡ್ಡ ಕಟ್‌ಔಟ್‌ಗಳನ್ನು ಹರಿದು ಹಾಕುವುದನ್ನು ನೋಡಬಹುದು. #WATCH | Gujarat | Bajrang Dal workers protest against the promotion of Shah Rukh Khan’s movie ‘Pathaan’ at a mall in the Karnavati area of Ahmedabad (04.01) (Video source: Bajrang Dal Gujarat’s Twitter handle) pic.twitter.com/NelX45R9h7 — ANI (@ANI) January 5, 2023 ಗುಜರಾತ್ ವಿಎಚ್‌ಪಿ ಈ ಹಿಂದೆ ಗುಜರಾತ್‌ನಲ್ಲಿ ಎಲ್ಲಿಯೂ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು. ಮುಖ್ಯವಾಗಿ ‘ಬೇಷರಂ ರಂಗ್’ ಹಾಡಿನ ಕಾರಣ,…