ಕೆಎನ್ ಎನ್ ನ್ಯೂಸ್ ಡೆಸ್ಕ್ : ಹೊಸ ವರ್ಷದ ಮೊದಲು ಹಬ್ಬ ಸಂಕ್ರಾತಿ. ಇನ್ನೇನು ಈ ಹಬ್ಬ ಹತ್ರವಿದೆ. ರಾಜ್ಯಗಳಲ್ಲಿ ವಿವಿಧ ಹೆಸರಿನಿಂದ ಆಚರಿಸುತ್ತಾರೆ. ಹಳ್ಳಿ ಕಡೆಯಲ್ಲಿ ಈ ಹಬ್ಬವನ್ನು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಬ್ಬವನ್ನು ಸಂಕ್ರಾಂತಿ, ಲೋಹ್ರಿ, ಉತ್ತರಾಯಣ, ಪೊಂಗಲ್, ಮಾಗ್ ಬಿಹು, ಸಕ್ರತ್ ಎಂಬ ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಮಕರ ಸಂಕ್ರಾಂತಿ ಮಹತ್ವ : ಸೂರ್ಯನು ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ದಿನವನ್ನು ಮಕರ ಸಂಕ್ರಾತಿ ಹಬ್ಬವಾಗಿ ಪ್ರತಿ ವರ್ಷ ಆಚರಿಸುತ್ತೇವೆ. ಇದರ ಪ್ರಕಾರ 6 ತಿಂಗಳ ಕಾಲ ಹೆಚ್ಚು ಬೆಳಕು ಹಾಗೂ ಉಳಿದ 6 ತಿಂಗಳು ಅಂದರೆ ಜೂನ್ 15 ರಿಂದ ದಕ್ಷಿಣಾಯಣ ಆರಂಭವಾಗಿ ಆಗ ಬೆಳಕು ಕಡಿಮೆ ಇರುತ್ತದೆ. ಪುರಾಣದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ ಸಂಬಂಧಿಸಿದಂತೆ ಮಹಾಭಾರತದ ಒಂದು ಕಥೆ ಪ್ರಚಲಿತದಲ್ಲಿದೆ. ಭೀಷ್ಮನು ಬಾಣಗಳ ಮೇಲೆ ಮಲಗಿ ಯಾತನೆ ಅನುಭವಿಸಿದರೂ ದಕ್ಷಿಣಾಯನದಲ್ಲಿ ದೇಹತ್ಯಾಗ…
Read More