Author: KNN IT TEAM

ವೈರಲ್ ವಿಡಿಯೋ : ಈಜಿಪ್ಟ್ ನಲ್ಲಿ ವ್ಯಕ್ತಿಯೊಬ್ಬ 15,730 ಕೆಜಿ ತೂಕದ ಟ್ರಕ್ ಅನ್ನು ತನ್ನ ಹಲ್ಲುಗಳ ಸಹಾಯದಿಂದ ಎಳೆಯುವ ಭಯಾನಕ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. https://kannadanewsnow.com/kannada/how-to-apply-for-a-minors-pan-card-know-the-procedure/ ಈ ವ್ಯಕ್ತಿ “ಹಲ್ಲುಗಳನ್ನು ಬಳಸಿ ಎಳೆದ ಅತ್ಯಂತ ಭಾರವಾದ ಟ್ರಕ್‌ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ಸ್ಥಾಪಿಸಿದ್ದಾನೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಈ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. View this post on Instagram A post shared by Guinness World Records (@guinnessworldrecords) ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಹಲ್ಲುಗಳಿಂದ ಟ್ರಕ್ ಅನ್ನು ಈಜಿಪ್ಟಿನ ಹೆದ್ದಾರಿಗಳ ಮೇಲೆ ಎಳೆಯುವುದನ್ನು ತೋರಿಸುತ್ತದೆ. ಈ ಕ್ಲಿಪ್ ನೆಟ್ಟಿಗರ ಆಸಕ್ತಿಯನ್ನು ಕೆರಳಿಸಿತು, ಮತ್ತು ಅನೇಕರು ಆತ ಹಲ್ಲಿನ ಬಗ್ಗೆ ಶಾಕ್‌ ಆದರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ಜೂನ್ 13, 2021 ರಂದು ಈಜಿಪ್ಟ್ನ ಇಸ್ಮಾಯಿಲಿಯಾದಲ್ಲಿ ಅಶ್ರಫ್ ಮಹರೋಸ್ ಮೊಹಮ್ಮದ್ ಸುಲಿಮನ್ ಈ ದಾಖಲೆಯನ್ನು ಸ್ಥಾಪಿಸಿದರು.…

Read More

ಕಲಬುರ್ಗಿ:  ಕಳೆದ ಕೆಲ ದಿನಗಳಿಂದ ಕೆಲವು ಆಡಿಯೋಗಳು ವೈರಲ್ ಆಗುತ್ತಿದ್ದು, ಅದನ್ನು ಆಡಳಿತ ಪಕ್ಷದವರು ನಿರಾಕರಿಸುತ್ತಿಲ್ಲ. ಬಿಜೆಪಿ ಎಂದರೆ ಬ್ಕೋಕರ್ಸ್ ಜನತಾ ಪಕ್ಷ. ಇವರು ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ. ವಿಧಾನಸೌಧ ತನ್ನ ಪಾವಿತ್ರ್ಯತೆ, ವೈಭವ ಕಳೆದುಕೊಂಡು, ವಿಶ್ವದ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ಆಗಿದೆ. ಇಲ್ಲಿ ಜನ ಪೋಸ್ಟಿಂಗ್ ಗಳು, ವರ್ಗಾವಣೆ, ಬೇರೆ ಇಲಾಖೆಗಳ ಕಾಮಗಾರಿ, ಉದ್ಯೋಗ ಖರೀದಿ ಮಾಡಬಹುದು. ಪಿಎಸ್ಐ, ಎಇಇ, ಜೆಇಇ, ಸಹಾಯಕ ಪ್ರಾಧ್ಯಾಪಕ ಹುದ್ದೆ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಗಳು ಬೇಕಿದ್ದರೂ ಮಾರಟ್ಟಕ್ಕೆ ಇಟ್ಟಿದ್ದಾರೆ ಎಂಬುದಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಿಗ್ಗಾಮುಗ್ಗ ವಾಗ್ಧಾಳಿ ನಡೆಸಿದ್ದಾರೆ. ನಗರದಲ್ಲಿ ಇಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಕಳೆದ ಎರಡು ದಿನಗಳಿಂದ ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರದ ವಿಚಾರವಾಗಿ ಬಹಳ ಚರ್ಚೆಯಾಗುತ್ತಿದೆ. ಈ ಹಿಂದೆ ನಮ್ಮ ರಾಜ್ಯ ತನ್ನ ಪ್ರಗತಿಪರ ಆಲೋಚನೆ, ಆರ್ಥಿಕ ನೀತಿ, ನಮ್ಮ ಆಡಳಿತದಿಂದ ದೇಶದಲ್ಲೇ ಮಾದರಿ ರಾಜ್ಯವಾಗಿ ಹೆಸರು ಮಾಡಿತ್ತು.…

Read More

ನವದೆಹಲಿ: ತೆರಿಗೆಯನ್ನು ಪಾವತಿಸುವ ರಾಷ್ಟ್ರದ ಪ್ರತಿಯೊಬ್ಬ ಸದಸ್ಯರು ಶಾಶ್ವತ ಖಾತೆ ಸಂಖ್ಯೆ (PAN) ಎಂದು ಕರೆಯಲ್ಪಡುವ 10 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆಯುತ್ತಾರೆ. ಜನರು, ನಿಗಮಗಳು, ಸಂಸ್ಥೆಗಳು ಮತ್ತು ಸ್ಥಳೀಯ ಸರ್ಕಾರಗಳು ಸೇರಿದಂತೆ ತೆರಿಗೆಗಳನ್ನು ಪಾವತಿಸುವ ಪ್ರತಿಯೊಬ್ಬರಿಗೂ PAN ಕಾರ್ಡ್ ಅವಶ್ಯಕವಾಗಿದೆ. 18 ವರ್ಷ ವಯಸ್ಸಿನ ನಂತರವೇ ಪಾನ್ ಕಾರ್ಡ್ ಮಾಡಬಹುದು ಎಂದು ನೀವು ಭಾವಿಸಿದರೆ, ಅದು ತಪ್ಪು ಮಾಹಿತಿಯಾಗಿದೆ. ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, ಐಟಿಆರ್ ಸಲ್ಲಿಸಲು ಯಾವುದೇ ಮಿತಿಯಿಲ್ಲ. ಅಪ್ರಾಪ್ತ ವಯಸ್ಕನು ತಿಂಗಳಿಗೆ 15,000 ರೂ.ಗಿಂತ ಹೆಚ್ಚು ಗಳಿಸಿದರೆ, ಅವನು ಐಟಿಆರ್ ಅನ್ನು ಸಲ್ಲಿಸಬಹುದು. ಗಮನಾರ್ಹವಾಗಿ, ಆದಾಯ ತೆರಿಗೆ ಪಾವತಿಸಲು, ಪಾನ್ ಕಾರ್ಡ್ ಅಗತ್ಯವಿದೆ. ಈ ಕಾರಣಕ್ಕಾಗಿ, ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್‌ಗೆ ಯಾವುದೇ ವಯಸ್ಸನ್ನು ನಿಗದಿಪಡಿಸಿಲ್ಲ. ಅಪ್ರಾಪ್ತ ವಯಸ್ಕರೂ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು ಎಂಬುದು ಇದರಿಂದ ಸ್ಪಷ್ಟವಾಗಿದೆ. ಮಕ್ಕಳಿಗೆ ಪಾನ್ ಕಾರ್ಡ್ ಯಾವಾಗ ಮಾಡಿಸಬೇಕು? 1. ಪೋಷಕರು ಮಗುವಿನ ಹೆಸರಿನಲ್ಲಿ ಹೂಡಿಕೆ…

Read More

ಬೆಂಗಳೂರು : ಬೆಂಗಳೂರಿನ ಖಾಸಗಿ ಶಾಲೆಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ರಾಜಾಜಿನಗರ ಎನ್ ಪಿ ಎಸ್ ಶಾಲೆಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪೋಷಕರು, ಮಕ್ಕಳು, ಶಿಕ್ಷಕರು ಬೆಚ್ಚಿಬಿದ್ದಿದ್ದಾರೆ. ಈ ಹಿನ್ನೆಲೆ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ನಂತರ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಕರೆದುಕೊಂಡು ಹೋಗಿದ್ದಾರೆ. ಕೂಡಲೇ ಶಿಕ್ಷಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಘಟನೆ ನಡೆದ ಸ್ಥಳಕ್ಕೆ ಬಸವೇಶ್ವರನಗರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.ಜೊತೆಗೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಕೂಡ ಶಾಲೆಯತ್ತ ಧಾವಿಸಿ ತಪಾಸಣೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. https://kannadanewsnow.com/kannada/case-of-finding-10-5-lakh-cash-in-vidhana-soudha-what-did-the-lawyer-for-j-jagadish-say/ https://kannadanewsnow.com/kannada/big-twist-to-the-case-of-stabbing-of-a-student-at-presidency-college-do-you-know-what-the-accused-said-in-front-of-the-police/

Read More

ಬೆಂಗಳೂರು: ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಪಾಗಲ್‌ ಪ್ರೇಮಿ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿದ ಕುರಿತು ಆರೋಪಿ ಸ್ಫೋಟಕ ಮಾಹಿತಿ ನೀಡಿದ್ದಾನೆ. ಲಯಸ್ಮಿತಾಳನ್ನು ಹತ್ಯೆ ಮಾಡಲು ನಿಜವಾದ ಕಾರಣ ಏನು ಎಂಬುದನ್ನು ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಈ ಕೂಡಲೇ ಮದುವೆಯಾಗಲು ಒಪ್ಪದೇ ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಿದೆ ಎಂದಿದ್ದು, ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ನಾನು, ಲಯಸ್ಮಿತಾ ಕಳೆದ ಒಂದೂವರೆ ವರ್ಷದಿಂದ ಪ್ರೀತಿ ಮಾಡುತ್ತಿದ್ದೀವಿ. ದೂರದ ಸಂಬಂಧಿಯಾಗಿದ್ದರಿಂದ ಜಾತಿಯ ಸಮಸ್ಯೆ ಇರಲಿಲ್ಲ. ಕುಟುಂಬಸ್ಥರನ್ನು ಒಪ್ಪಿಸುವ ಜವಾಬ್ದಾರಿಯನ್ನು ಲಯ ತೆಗೆದುಕೊಂಡಿದ್ದಳು. ಆದರೆ ಕಾಲೇಜಿಗೆ ಸೇರಿದ ಮೇಲೆ ಲಯಾಳ ಹಾವಭಾವ ಬದಲಾಗ್ತಾ ಇತ್ತು. ಲಯಾಳ ಬದಲಾವಣೆ ನನಗೆ ಅನುಮಾನ ಬಂದು ತಕ್ಷಣ ಮದುವೆಯಾಗೋದಕ್ಕೆ ಕೇಳಿದೆ. https://kannadanewsnow.com/kannada/big-shock-to-commuters-ahead-of-inauguration-of-bengaluru-mysuru-highway-ban-on-two-wheelers-and-three-wheelers/ ಆದರೆ ಆಕೆ ಕೂಡಲೇ ವಿರೋಧ ಮಾಡಲು ಪ್ರಾರಂಭಿಸಿದಳು. ನಾನು ಇವಾಗ ತಾನೆ ಕಾಲೇಜಿಗೆ ಸೇರಿದ್ದೀನಿ, ಕಾಲೇಜು ಮುಗಿದ ಮೇಲೆ ಮದುವೆ ಆಗೋಣ ಅಂದ್ಲು. ಎರಡು ದಿನ…

Read More

ವಿಧಾನಸೌಧಕ್ಕೆ ಆಗಮಿಸಿದ್ದಂತ ಎಇ ಜಗದೀಶ್ ಎಂಬುವರ ಬಳಿಯಲ್ಲಿ 10.5 ಲಕ್ಷ ನಗದು ಪತ್ತೆಯಾಗಿತ್ತು. ಈ ಸಂಬಂಧ ನಗದು ಜಪ್ತಿ ಮಾಡಿದ್ದಂತ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ನಿನ್ನೆ ವಿಚಾರಣೆ ವೇಳೆ ಪತ್ತೆಯಾದ ನಗದು ಹಣದ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ, ಎಇ ಜಗದೀಶ್ ಅನ್ನು ಬಂಧಿಸಿದ್ದಾರೆ. ಈ ಕುರಿತು ಜಗದೀಶ್ ಪರ ವಕೀಲ ರಾಜು ಮಾತನಾಡಿದ್ದು, ಇಂದು ಲಂಚ ಕೊಡಲು ತೆಗೆದುಕೊಂಡು ಹೋಗುತ್ತಿದ್ದ ಹಣ ಅಲ್ಲ ಎಂದು ಹೇಳಿದ್ದಾರೆ. ಜಗದೀಶ್ ಮೇಲೆ ಚೆಕ್ ಬೌನ್ಸ್ ಪ್ರಕರಣವಿತ್ತು, ಪ್ರಕರಣದ ಇತ್ಯರ್ಥಕ್ಕಾಗಿ ಅವರು ಬೆಂಗಳೂರಿಗೆ ಬರುವಾಗ ಹಣ ತಂದಿದ್ದರು. ತುರ್ತಾಗಿ ಅಧಿಕಾರಿಯೊಬ್ಬರನ್ನು ಭೇಟಿ ಮಾಡಬೇಕಿತ್ತು, ಹಾಗಾಗಿ ವಿಧಾನಸೌಧಕ್ಕೆ ತೆರಳಿದ್ದರು ಅಷ್ಟೇ ಎಂದರು. ಪೊಲೀಸರಿಗೆ ಜಗದೀಶ್ ಎಲ್ಲಾ ಮಾಹಿತಿ ನೀಡಿದ್ದಾರೆ, ಆದರೂ ಕರ್ನಾಟಕ ಪೊಲೀಸ್ ಕಾಯಿದೆಯಡಿ ಕೇಸ್ ದಾಖಲಿಸಿದ್ದಾರೆ. ಈ ರೀತಿ ಕೇಸ್ ದಾಖಲಿಸಲು ಕೋರ್ಟ್ ಅನುಮತಿ ಪಡೆದಿರಬೇಕು, ಅನುಮತಿ ಪಡೆಯದೇ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ, ಇನ್ನೂ, ಕೂಡ ಜಗದೀಶ್ ಸಿಕ್ಕಿರುವ ಹಣದ…

Read More

ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದಂತೆ ಬುಧವಾರ (ಜನವರಿ 4) ಬೆಳಗ್ಗೆ ಹೂಗಳನ್ನು ತುಂಬಿದ ಟ್ರ್ಯಾಕ್ಟರ್ ಟ್ರಾಲಿಗಳೊಂದಿಗೆ ರೈತರು ಅವರನ್ನು ಸ್ವಾಗತಿಸಿದರು. ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಅವರನ್ನು ರೈತರು ಸ್ವಾಗತಿಸುತ್ತಿರುವ ದೃಶ್ಯಾವಳಿಗಳ ನಡುವೆ, ಆನ್‌ಲೈನ್‌ನಲ್ಲಿ ಚರ್ಚೆಯ ವಿಷಯವೊಂದು ವೈರಲ್‌ ಆಗಿದೆ. ಇದು ಮೀರತ್‌ನ ಕಾಂಗ್ರೆಸ್ ಕಾರ್ಯಕರ್ತ ಫೈಸಲ್ ಚೌಧರಿ ಅವರ ಕ್ಲಿಪ್ ಆಗಿದೆ. ಇವರು ರಾಹುಲ್ ಗಾಂಧಿಯ ಪ್ರತಿರೂಪದಂತೆ ಕಾಣುತ್ತಾರೆ. ಇವರು ಬುಧವಾರ ಬಾಗ್‌ಪತ್‌ನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ವೇಳೆ ಎಲ್ಲರ ಗಮನ ಸೆಳೆದಿದ್ದಾರೆ. ವೀಡಿಯೋದಲ್ಲಿ, ಚೌಧರಿ ರಾಹುಲ್‌ ಗಾಂಧಿಯಂತೇ ಬಿಳಿ ಪೋಲೋ ಟೀ-ಶರ್ಟ್ ಧರಿಸಿರುವುದನ್ನು ನೋಡಬಹುದು. #WATCH | Uttar Pradesh: Faisal Chaudhary, a Congress worker in Meerut, who’s a look-alike of Congress MP Rahul Gandhi, joined ‘Bharat Jodo Yatra’ yesterday in Baghpat. pic.twitter.com/wy6oEQhdaj — ANI (@ANI) January 5,…

Read More

ಹಾವೇರಿ : ಕನ್ನಡಿಗರ ಬದುಕು ಬಹಳ ಪುರಾತನ ಮತ್ತು ಶ್ರೇಷ್ಟವಾಗಿದೆ. ದೊಡ್ಡ ಚರಿತ್ರೆ ಇರುವ ಸಂಸ್ಕ್ರತಿ ಅಂದರೆ ಅದು ಕನ್ನಡದ ಸಂಸ್ಕ್ರತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಕನ್ನಡ ಸಂಸ್ಕ್ರತಿ ಉಳಿಸಿಕೊಂಡು ಹೋಗುವಜವಾಬ್ದಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲಿದೆ. ಕನ್ನಡವನ್ನು ಭಾರತ ದೇಶದಲ್ಲಿ ಆಳವಾಗಿ ಬಿತ್ತರಿಸಬೇಕು. ಕನ್ನಡ ಇಡೀ ಜಗತ್ತಿನಲ್ಲಿ ಅಂತ್ಯಂತ ಪ್ರಾಚೀನವಾದ ಭಾಷೆ, ಕನ್ನಡಿಗರ ಬದುಕು ಬಹಳ ಪುರಾತನ ಮತ್ತು ಶ್ರೇಷ್ಟವಾಗಿದೆ. ದೊಡ್ಡ ಚರಿತ್ರೆ ಇರುವ ಸಂಸ್ಕ್ರತಿ ಅಂದರೆ ಅದು ಕನ್ನಡದ ಸಂಸ್ಕ್ರತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕನ್ನಡಕ್ಕಾಗಿ ಕೆಲಸ ಮಾಡುವ ಸಮಯ ಇದು. ಭಾಷೆ, ಸಂಸ್ಕೃತಿ ಬೆಳೆಯಲು ನಡೆದು ಬಂದು ದಾರಿ ಸಿಂಹಾವಲೋಕನ ಮಾಡಿಕೊಳ್ಳಬೇಕು. ಹಾವೇರಿ ಸಾಹಿತಿಗಳ ನಾಡು, ಈ ನೆಲದ…

Read More

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು-ಮೈಸೂರು ನಡುವೆ ನಿರ್ಮಾಣ ವಾಗಿರುವ ದಶಪಥ ಎಕ್ಸ್‍ಪ್ರೆಸ್ ವೇಯನ್ನು ಮುಂದಿನ ತಿಂಗಳು ಲೋಕಾರ್ಪಣೆಯಾಗಲಿದೆ. https://kannadanewsnow.com/kannada/a-series-of-fatal-accidents-near-devanahalli-airport-tipper-collides-with-7-cars-including-bmw-completely-damaged/ ಈಗಾಗಲೇ ಉದ್ಘಾಟನೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಉದ್ಘಾಟನೆಗೂ ಮುನ್ನ ಸವಾರರಿಗೆ ಬಿಗ್‌ ಶಾಕ್‌ ನೀಡಿದ್ದಾರೆ. ಬೈಕ್‌, ಆಟೋ ಗೂಡ್ಸ್‌ ಸವಾರರರಿಗೆ ಶಾಕ್‌ ನೀಡಿದ್ದಾರೆ. ಬೆಂಗಳೂರು- ಮೈಸೂರು ಎಕ್ಸ್‌ ಪ್ರೆಸ್‌ ಹೈವೆಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಸರ್ವಿಸ್‌ ರಸ್ತೆ ಆಗೋವರೆಗೂ ಮಾತ್ರ ಅವಕಾಶ ನೀಡಲಾಗಿದೆ. ನಂತರ ಸರ್ವಿಸ್‌ ರಸ್ತೆ ನಿರ್ಮಾಣ ವಾದ್ರೆ ನಿರ್ಬಂಧ ಹೇರಲಾಗುವುದು. ಆಕ್ಸಿಡೆಂಟ್‌ ಫ್ರೀ ರಸ್ತೆ ಮಾಡುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Read More

ಅಲಹಾಬಾದ್ : ವಿಚ್ಛೇದಿತ ಪತಿಯಿಂದ ಜೀವನಾಂಶವನ್ನು ಪಡೆಯುವ ಹಕ್ಕು ಮುಸ್ಲಿಂ ಮಹಿಳೆಗೆ ಇದೆಯೇ ಹೊರತು ‘ಇದ್ದತ್’ ಮುಗಿಯುವವರೆಗೂ ಅಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಮಹತ್ವದ ತೀರ್ಪಿನಲ್ಲಿ ಹೇಳಿದೆ. ಜೀವನಾಂಶವು ವಿಚ್ಛೇದನದ ಮೊದಲು ಅವಳು ನಡೆಸುತ್ತಿದ್ದ ಅದೇ ಜೀವನವನ್ನು ನಡೆಸುವಂತಾಗಬೇಕು ಎಂದು ನ್ಯಾಯಾಲಯವು ತೀರ್ಪು ನೀಡಿದೆ. ‘ಇದ್ದತ್’ ಎಂಬುದು ಮುಸ್ಲಿಂ ಮಹಿಳೆಯರು ತಮ್ಮ ಗಂಡನ ಮರಣದ ನಂತರ ನಾಲ್ಕು ತಿಂಗಳ ಕಾಲ ಹೊರಗೆ ಹೋಗುವುದನ್ನು ಮತ್ತು ಸಂಬಂಧಿಕರನ್ನು ಭೇಟಿ ಮಾಡುವುದನ್ನು ನಿಷೇಧಿಸುವ ಆಚರಣೆಯಾಗಿದೆ. ‘ಇದ್ದತ್’ ಅವಧಿಗೆ ಮಾತ್ರ ಜೀವನಾಂಶವನ್ನು ಪಾವತಿಸುವುದನ್ನು ಕಾನೂನುಬಾಹಿರವೆಂದು ಘೋಷಿಸಿದ ಗಾಜಿಪುರದ ಪ್ರಧಾನ ನ್ಯಾಯಾಧೀಶ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಾಲಯವು ರದ್ದುಗೊಳಿಸಿತು. ಶಾಸನಬದ್ಧ ನಿಬಂಧನೆಗಳು ಮತ್ತು ಪುರಾವೆಗಳನ್ನು ಸರಿಯಾಗಿ ಅಧ್ಯಯನ ಮಾಡದೆಯೇ ಗಾಜಿಪುರ ನ್ಯಾಯಾಲಯವು ಈ ಆದೇಶವನ್ನು ನೀಡಿದೆ ಎಂದು ಅದು ಹೇಳಿದೆ. https://kannadanewsnow.com/kannada/clash-between-bjp-ap-members-ahead-of-delhi-mayoral-election/ https://kannadanewsnow.com/kannada/cricket-tournament-for-vedic-pandits-with-sanskrit-commentary-begins-in-bhopal-video/ https://kannadanewsnow.com/kannada/clash-between-bjp-ap-members-ahead-of-delhi-mayoral-election/ https://kannadanewsnow.com/kannada/cricket-tournament-for-vedic-pandits-with-sanskrit-commentary-begins-in-bhopal-video/

Read More