ವಿಧಾನಸೌಧಕ್ಕೆ ಆಗಮಿಸಿದ್ದಂತ ಎಇ ಜಗದೀಶ್ ಎಂಬುವರ ಬಳಿಯಲ್ಲಿ 10.5 ಲಕ್ಷ ನಗದು ಪತ್ತೆಯಾಗಿತ್ತು. ಈ ಸಂಬಂಧ ನಗದು ಜಪ್ತಿ ಮಾಡಿದ್ದಂತ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ನಿನ್ನೆ ವಿಚಾರಣೆ ವೇಳೆ ಪತ್ತೆಯಾದ ನಗದು ಹಣದ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ, ಎಇ ಜಗದೀಶ್ ಅನ್ನು ಬಂಧಿಸಿದ್ದಾರೆ.
ಈ ಕುರಿತು ಜಗದೀಶ್ ಪರ ವಕೀಲ ರಾಜು ಮಾತನಾಡಿದ್ದು, ಇಂದು ಲಂಚ ಕೊಡಲು ತೆಗೆದುಕೊಂಡು ಹೋಗುತ್ತಿದ್ದ ಹಣ ಅಲ್ಲ ಎಂದು ಹೇಳಿದ್ದಾರೆ. ಜಗದೀಶ್ ಮೇಲೆ ಚೆಕ್ ಬೌನ್ಸ್ ಪ್ರಕರಣವಿತ್ತು, ಪ್ರಕರಣದ ಇತ್ಯರ್ಥಕ್ಕಾಗಿ ಅವರು ಬೆಂಗಳೂರಿಗೆ ಬರುವಾಗ ಹಣ ತಂದಿದ್ದರು. ತುರ್ತಾಗಿ ಅಧಿಕಾರಿಯೊಬ್ಬರನ್ನು ಭೇಟಿ ಮಾಡಬೇಕಿತ್ತು, ಹಾಗಾಗಿ ವಿಧಾನಸೌಧಕ್ಕೆ ತೆರಳಿದ್ದರು ಅಷ್ಟೇ ಎಂದರು.
ಪೊಲೀಸರಿಗೆ ಜಗದೀಶ್ ಎಲ್ಲಾ ಮಾಹಿತಿ ನೀಡಿದ್ದಾರೆ, ಆದರೂ ಕರ್ನಾಟಕ ಪೊಲೀಸ್ ಕಾಯಿದೆಯಡಿ ಕೇಸ್ ದಾಖಲಿಸಿದ್ದಾರೆ. ಈ ರೀತಿ ಕೇಸ್ ದಾಖಲಿಸಲು ಕೋರ್ಟ್ ಅನುಮತಿ ಪಡೆದಿರಬೇಕು, ಅನುಮತಿ ಪಡೆಯದೇ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ,
ಇನ್ನೂ, ಕೂಡ ಜಗದೀಶ್ ಸಿಕ್ಕಿರುವ ಹಣದ ಬಗ್ಗೆ ಮಾಹಿತಿ ನೀಡದೇ ಇರುವ ಕಾರಣ ಹಣದ ಎಲ್ಲಿಂದ ಬಂತು ಎಂಬುದು ನಿಗೂಢವಾಗಿದೆ. ಈ ಹಿನ್ನೆಲೆ ಇಂದು ಜಗದೀಶ್ ನನ್ನು ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆ ಇದ್ದು, ನಂತರ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಡಿಸಿಪಿ ಅಣತಿಯಂತೆ ಜಗದೀಶ್ ರನ್ನು ಪೊಲೀಸರು ಅಕ್ರಮವಾಗಿ ಕೂಡಿ ಹಾಕಿದ್ದಾರೆ, ನಮ್ಮ ಮನವಿಯನ್ನು ಕೂಡ ಸ್ವೀಕರಿಸಲಿಲ್ಲ ಎಂದು ಕಿಡಿಕಾರಿದ್ದಾರೆ. ವಕೀಲರ ಮನವಿಯನ್ನು ಸ್ವೀಕರಿಸಲು ಒಪ್ಪದೆ ಡಿ.ಸಿ.ಪಿ ಅವರ ಅಣತಿಯಂತೆ ಪ್ರಕರಣದ ವಿಚಾರಣೆಗೆ ವಕೀಲರ ಮುಖಾಂತರ ಠಾಣೆಗೆ ಹಾಜರಾದ ವ್ಯಕ್ತಿಯನ್ನು ಆಕ್ರಮವಾಗಿ ಠಾಣೆಯಲ್ಲಿ ಕೂಡಿ ಹಾಕಿದ ವಿಧಾನ ಸೌದ ಪೋಲಿಸ್ ಠಾಣೆಯ ಸಿಬ್ಬಂದಿಗಳು ಎಂದು ಟ್ವೀಟ್ ಮಾಡಿದ್ದಾರೆ.
ಎಇ ಜಗದೀಶ್ ಬಳಿಯಲ್ಲಿ ವಿಧಾನಸೌಧದಲ್ಲಿ ಪೊಲೀಸರು ತಪಾಸಣೆ ನಡೆಸುವಂತ ಸಂದರ್ಭದಲ್ಲಿ 10.5 ಲಕ್ಷ ನಗದು ಪತ್ತೆಯಾಗಿತ್ತು. ವಿಧಾನಸೌಧ ಪೊಲೀಸರು ಆ ಹಣವನ್ನು ಜಪ್ತಿ ಮಾಡಿ, ಸೂಕ್ತ ದಾಖಲೆಯೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.ನಿನ್ನೆ ವಿಧಾನಸೌಧ ಪೊಲೀಸ್ ಠಾಣೆಯ ವಿಚಾರಣಾಧಿಕಾರಿಯ ಮುಂದೆ ತಮ್ಮ ವಕೀಲರೊಂದಿಗೆ ಹಾಜರಾದಂತ ಎಇ ಜಗದೀಶ್, ಪತ್ತೆಯಾದಂತ 10.5 ಲಕ್ಷ ನಗದು ಸಂಬಂಧ ಸರಿಯಾದ ಸಮರ್ಪಕ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿಯೇ ಅವರನ್ನು ವಿಧಾನಸೌಧ ಪೊಲೀಸರು ಬಂಧಿಸಿರೋದಾಗಿ ತಿಳಿದು ಬಂದಿದೆ.
BIG NEWS: ʻವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಮುಸ್ಲಿಂ ಮಹಿಳೆಗಿದೆʼ: ಹೈಕೋರ್ಟ್ ಮಹತ್ವದ ತೀರ್ಪು
ಕನ್ನಡಿಗರ ಬದುಕು ಬಹಳ ಪುರಾತನ ಮತ್ತು ಶ್ರೇಷ್ಟವಾಗಿದೆ : ಸಿಎಂ ಬೊಮ್ಮಾಯಿ |Kannada Sahitya Sammelana