Author: KNN IT TEAM

ಶಿರಸಿ : ರಾಜ್ಯ ಸರ್ಕಾರವು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. https://kannadanewsnow.com/kannada/bigg-breaking-news-coronavirus-cases-in-the-country-continue-to-decline-slightly-20038-cases-detected-in-24-hours/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದ 1,500 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸುವ ಕೆಲಸವನ್ನು ಶೀಘ್ರವೇ ಮಾಡಲಾಗುವುದು. ಮಾದರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಕಲಿಸಲಾಗುವುದು. ಪ್ರತಿ ತರಗತಿಗೆ ಒಬ್ಬ ಶಿಕ್ಷಕರನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. https://kannadanewsnow.com/kannada/breaking-news-actor-producer-veerendra-babu-arrested-in-bengaluru-in-cheating-case/ ಪಠ್ಯಪರಿಷ್ಕರಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಪಠ್ಯಪರಿಷ್ಕರಣೆ ಹಿಂದೆಯೂ ಆಗಿತ್ತು. ಆದರೆ ನಾವು ಚರ್ಚೆ ನಡೆಸುತ್ತಿದ್ದೇವು. ಈಗಿನ ವಿರೋಧ ಪಕ್ಷಗಳಂತೆ ಬೀದಿಯಲ್ಲಿ ಕೂಗುತ್ತಿರಲಿಲ್ಲ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪಠ್ಯಪುಸ್ತಕ ಬದಲಾವಣೆ ಮಾಡಲಾಗಿತ್ತು. ಆದರೆ ಈಗ ಪಠ್ಯಪುಸ್ತಕ ಪರಿಷ್ಕರಣೆ ರಾಜಕೀಯಗೊಳಿಸುತ್ತಿರುವುದು ದುರಾದೃಷ್ಟ ಎಂದು ಹೇಳಿದ್ದಾರೆ. https://kannadanewsnow.com/kannada/1985-air-india-bombing-suspect-shot-dead-in-canada-report/

Read More

ನವದೆಹಲಿ : ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ನಿನ್ನೆಗಿಂತ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 20,038 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 20,038 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನಿಂದ 47 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 525604 ಕ್ಕೆ ಏರಿಕೆಯಾಗಿದೆ. #COVID19 | ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 20,038 ಹೊಸ ಪ್ರಕರಣಗಳು, 16,994 ಚೇತರಿಕೆಗಳು ಮತ್ತು 47 ಸಾವುಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳು 1,39,073 ದೈನಂದಿನ ಪಾಸಿಟಿವಿಟಿ ದರ 4.44% https://twitter.com/ANI/status/1547792562148491264

Read More

ಬೆಂಗಳೂರು : ವಂಚನೆ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ರಾಷ್ಟ್ರ ಜನಹಿತ ಪಕ್ಷ ಸ್ಥಾಪಿಸಿದ್ದ ನಟ, ನಿರ್ಮಾಪಕ ವಿರೇಂದ್ರ ಬಾಬು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. https://kannadanewsnow.com/kannada/bigg-news-another-shock-for-parents-after-coronavirus-children-in-schools-are-witnessing-a-new-disease/ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ವಿರೇಂದ್ರ ಬಾಬು ಬಂಧಿಸಿದ್ದಾರೆ. ರಾಷ್ಟ್ರ ಜನಹಿತ ಪಕ್ಷ ಸ್ಥಾಪಿಸಿದ್ದ ಆರೋಪಿ ವಿರೇಂದ್ರ ಬಾಬು, ಚುನಾವಣೆ ಟಿಕೆಟ್ ಕೊಡುವುದಾಗಿ ನಂಬಿಸಿ ಬಸವರಾಜ್ ಘೋಷಾಲ್ ಎಂಬುವರಿಗೆ 1.88 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿರೇಂದ್ರ ಬಾಬು ವಿರುದ್ಧ ಬಸವರಾಜ ಘೋಷಾಲ್ ಎಂಬುವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಇಂದು ಕೊಡಿಗೆಹಳ್ಳಿ ಪೊಲೀಸರು ವಿರೇಂದ್ರ ಬಾಬುವನ್ನು ವಶಕ್ಕೆ ಪಡೆದಿದ್ದಾರೆ. https://kannadanewsnow.com/kannada/1985-air-india-bombing-suspect-shot-dead-in-canada-report/

Read More

ಸೋನಭದ್ರ (ಉತ್ತರ ಪ್ರದೇಶ): ಇಲ್ಲಿನ ಕಲಿಯಾರಿ ಮಾರುಕಟ್ಟೆ ಪ್ರದೇಶದಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪತ್ರಕರ್ತರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರಾದ ಶ್ಯಾಮ್ ಸುಂದರ್ ಪಾಂಡೆ ಮತ್ತು ಲಡ್ಡು ಪಾಂಡೆ ಮಾರುಕಟ್ಟೆಯೊಂದರ ಹೋಟೆಲ್‌ನಲ್ಲಿ ಕುಳಿತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಎಸ್‌ಎಚ್‌ಒ ಪ್ರಣವ್ ಶ್ರೀವಾಸ್ತವ ತಿಳಿಸಿದ್ದಾರೆ. ಈಗಾಗಲೇ ದಾಳಿಕೋರರ ಬಂಧನಕ್ಕಾಗಿ ಪೊಲೀಸರು ತಂಡ ರಚಿಸಿದ್ದು, ತನಿಖೆ ಚುರುಕುಗೊಂಡಿದೆ. ಗಾಯಗೊಂಡ ಪತ್ರಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. https://kannadanewsnow.com/kannada/patna-ssp-issued-notice-for-comparing-pfi-with-rss/ https://kannadanewsnow.com/kannada/1985-air-india-bombing-suspect-shot-dead-in-canada-report/

Read More

ಬೆಂಗಳೂರು : ಕೋರೊನಾ ಬಳಿಕ ಮಕ್ಕಳಿಗೆ ಹೊಸ ರೋಗದ ಆತಂಕ ಶುರುವಾಗಿದ್ದು, ಬೆಂಗಳೂರಿನಲ್ಲಿ ಮಕ್ಕಳ ಕೈ,ಕಾಲು ಮತ್ತು ಬಾಯಿ ಸುತ್ತಮುತ್ತ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. https://kannadanewsnow.com/kannada/1985-air-india-bombing-suspect-shot-dead-in-canada-report/ ಮಕ್ಕಳ ಕೈ,ಕಾಲು, ಬಾಯಿ ರೋಗದ ಕೇಸ್ ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಪೋಷಕರಿಗೆ ಆತಂಕ ಶುರುವಾಗಿದೆ. ಕೈ, ಕಾಲು ಮತ್ತು ಬಾಯಿ ಸುತ್ತಮುತ್ತ ಗುಳ್ಳೆಗಳು ಹಾಗೂ ಗಾಯಗಳಿಂದ ಮಕ್ಕಳಲ್ಲಿ ಜ್ವರ ಕಾಣಿಸುತ್ತಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಇದು ಮಕ್ಕಳಿಂದ ಮಕ್ಕಳಿಗೆ ಹರಡುತ್ತಿದ್ದು, ಪೋಸಕರಿಗೆ ಹೊಸ ಆತಂಕ ಶುರುವಾಗಿದೆ. https://kannadanewsnow.com/kannada/bigg-news-big-shock-for-bpl-ration-card-holders-distribution-of-ragi-jowar-to-be-stopped-soon/ ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆಯಿಂದ ಸೋಂಕು ಉಲ್ಬಣವಾಗುತ್ತಿದೆ. ಮಕ್ಕಳ ಕೈ,ಕಾಲು ಮತ್ತು ಬಾಯಿ ರೋಗದ ಪ್ರಕರಣಗಳು ಹೆಚ್ಚಾಗುತ್ತಿವೆ.ನಗರ ಪ್ರದೇಶದಲ್ಲಿ ಓದುತ್ತಿರುವ ಮಕ್ಕಳಲ್ಲಿ ಹೆಚ್ಚುಕಂಡು ಬರುತ್ತಿದ್ದು, ರೋಗ ಲಕ್ಷಣ ಕಂಡುಬಂದರೆ ಸೂಕ್ತ ಎಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ. https://kannadanewsnow.com/kannada/patna-ssp-issued-notice-for-comparing-pfi-with-rss/

Read More

ಒಟ್ಟಾವಾ (ಕೆನಡಾ): 331 ಜನರ ಸಾವಿಗೆ ಕಾರಣವಾದ 1985 ರ ಏರ್ ಇಂಡಿಯಾ ಬಾಂಬ್ ಸ್ಫೋಟದಲ್ಲಿ ಖುಲಾಸೆಗೊಂಡ ಶಂಕಿತನನ್ನು ಪಶ್ಚಿಮ ಕೆನಡಾದಲ್ಲಿ ಗುರುವಾರ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಸಿಖ್ ಪ್ರತ್ಯೇಕತಾವಾದಿ ಖಲಿಸ್ತಾನ್ ಚಳವಳಿಯ ಒಂದು ಕಾಲದ ಬೆಂಬಲಿಗ ರಿಪುದಮನ್ ಸಿಂಗ್ ಮಲಿಕ್, 2005 ರಲ್ಲಿ ಏರ್ ಇಂಡಿಯಾ ಸಾಮೂಹಿಕ ಹತ್ಯೆಯ ಸಂಚಿನಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದನು. ಈತ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ಪ್ರದೇಶದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾಗ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ. ಐರ್ಲೆಂಡ್‌ನ ಕರಾವಳಿಯಲ್ಲಿ ಏರ್ ಇಂಡಿಯಾ ಫ್ಲೈಟ್ 182 ರ ಬಾಂಬ್ ಸ್ಫೋಟವು ಎಲ್ಲಾ 329 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಕೊಂದಿತ್ತು. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸೆಪ್ಟೆಂಬರ್ 11 ರ ದಾಳಿಯ ಮೊದಲು ವಾಯುಗಾಮಿ ಭಯೋತ್ಪಾದನೆಯ ಅತ್ಯಂತ ಮಾರಕ ಕೃತ್ಯವಾಗಿತ್ತು. ಜಪಾನ್‌ನ ನರಿಟಾ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಬಾಂಬ್ ಸ್ಫೋಟಗೊಂಡಿದ್ದರಿಂದ ಏರ್ ಇಂಡಿಯಾ ವಿಮಾನಕ್ಕೆ ಸಾಮಾನು ತುಂಬುತ್ತಿದ್ದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದರು. ಬಾಂಬ್‌ಗಳಿದ್ದ…

Read More

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 16 ರಂದು ಜಿಲ್ಲೆಯ ಶಿಗ್ಗಾಂವ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. https://kannadanewsnow.com/kannada/bigg-news-big-shock-for-bpl-ration-card-holders-distribution-of-ragi-jowar-to-be-stopped-soon/ ಅಂದು ಮಧ್ಯಾಹ್ನ 12-30ಕ್ಕೆ ಹುಬ್ಬಳ್ಳಿಯಿಂದ ಹೊರಟು 1-30ಕ್ಕೆ ಶಿಗ್ಗಾಂವ ತಾಲೂಕು ಖುರ್ಸಾಪುರಕ್ಕೆ ಆಗಮಿಸಿ, ಲೋಕೋಪಯೋಗಿ ಇಲಾಖೆಯಿಂದ ಆಯೋಜಿಸಲಾದ ಎನ್.ಎಚ್-4 ಕಲ್ಯಾಣ ರಸ್ತೆ ಅಗಲೀಕರಣ ಹಾಗೂ ಸುಧಾರಣಾ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸವರು. ನಂತರ  ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಲಾದ ಟೆಕ್ಸ್‍ಟೈಲ್ ಪಾರ್ಕ್ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಟೆಕ್ಸ್ ಪೋರ್ಟ್ ಸಿದ್ಧ ಉಡುಪು ಘಟಕದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. https://kannadanewsnow.com/kannada/bigg-news-5-gst-on-food-grains-to-be-imposed-rice-mills-to-remain-closed-across-the-state-today/ ಮಧ್ಯಾಹ್ನ 3-30 ಗಂಟೆಗೆ ಶಿಗ್ಗಾಂವ ತಾಲೂಕು ಕಲ್ಯಾಣದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾದ  ಕೋಲ್ಡ್ ಸ್ಟೋರೇಜ್ ನೂತನ ಗೋದಾಮು ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು. ಸಂಜೆ 4-30ಕ್ಕೆ ಶಿಗ್ಗಾಂವ ಎ.ಪಿ.ಎಂ.ಸಿ. ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾದ ಸಮಗ್ರ ಕೃಷಿ ಪದ್ಧತಿಗಳ ಶ್ರೇಷ್ಠತಾ ಕೇಂದ್ರ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ…

Read More

ಬೆಂಗಳೂರು : ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಲು ಮುಂದಾಗಿದ್ದು, ಬಿಪಿಎಲ್ ಪಡಿತರದಾರರಿಗೆ ಅಕ್ಕಿಯ ಜೊತೆಗೆ ನೀಡುತ್ತಿದ್ದ ಜೋಳ, ರಾಗಿ ವಿತರಣೆ ಆಗಸ್ಟ್ ನಂತರ ಸ್ಥಗಿತಗೊಳ್ಳಲಿದೆ. https://kannadanewsnow.com/kannada/bigg-news-5-gst-on-food-grains-to-be-imposed-rice-mills-to-remain-closed-across-the-state-today/ ಕೇಂದ್ರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ ರಾಗಿ, ಜೋಳ ವಿತರಣೆ ಮಾಡುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಮೆಟ್ರಿಕ್ ಟನ್ ರಾಗಿ, 1 ಲಕ್ಷ ಮೆಟ್ರಿಕ್ ಟನ್ ಜೋಳ, 2.60 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಿತ್ತು, ಕೇಂದ್ರದ ಸೂಚನೆಯಂತೆ ಕಳೆದ ಮೂರು ತಿಂಗಳಿನಿಂದ ವಿತರಣೆ ಮಾಡಲಾಗುತ್ತಿತ್ತು. ಈಗ ಸಂಗ್ರಹಣೆ ಮಾಡಿದ್ದ ರಾಗಿ, ಜೋಳ ಖಾಲಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ರಾಗಿ, ಜೋಳ ವಿತರಣೆ ಸ್ಥಗಿತಗೊಳಿಸಲಾಗುತ್ತಿದೆ. https://kannadanewsnow.com/kannada/patna-ssp-issued-notice-for-comparing-pfi-with-rss/ ಉತ್ತರ ಕರ್ನಾಟಕದಲ್ಲಿ ಬಿಪಿಎಲ್ ಪಡಿತರದಾರರಿಗೆ ಅಕ್ಕಿಯ ಜೊತೆಗೆ ಜೋಳ ಆಗಸ್ಟ್ ನಂತರ ಸ್ಥಗಿತಗೊಂಡರೆ, ದಕ್ಷಿಣ ಕರ್ನಾಟಕ ಭಾಗದಲ್ಲಿ ಸೆಪ್ಟೆಂಬರ್ ನಂತರ ರಾಗಿ ಸ್ಥಗಿತಗೊಳ್ಳಲಿದೆ. ಈ ಹಿಂದೆ ನೀಡುತ್ತಿದ್ದಂತೆ 10…

Read More

ಬೆಂಗಳೂರು : ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆ ಶೇ. 5 ಜಿಎಸ್ ಟಿ ವಿರೋಧಿಸಿ ಇಂದು ರಾಜ್ಯ ಅಕ್ಕಿ ಗಿರಣಿದಾರರ ಸಂಘವು ರಾಜ್ಯಾದ್ಯಂತ ಧರಣಿ ನಡೆಸಲು ನಿರ್ಧರಿಸಿದೆ. https://kannadanewsnow.com/kannada/patna-ssp-issued-notice-for-comparing-pfi-with-rss/ ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆಯೂ ಶೇ. 5 ರಷ್ಟು ಜಿಎಸ್ ಟಿ ವಿಧಿಸಿಸಿರುವುದನ್ನು ಖಂಡಿಸಿ ಧರಣಿಗೆ ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ಇಂದು ಎಲ್ಲ ಚಟುವಟಿಕೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಕೇಂದ್ರ ಸರ್ಕಾರವು ಕೂಡಲೇ ಈ ಪ್ರಸ್ತಾವನೆಯನ್ನು ಹಿಂಪಡೆಯಬೇಕು. ಜಿಎಸ್ ಟಿ ಕೌನ್ಸಿಲ್ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಸಂಘಟನೆಯ ಪ್ರತಿನಿಧಿಗಳು ಮನವಿ ಮಾಡಿದ್ದಾರೆ. https://kannadanewsnow.com/kannada/bigg-news-good-news-for-those-who-want-to-join-army-agniveers-army-recruitment-rally-from-august-10/ ಇನ್ನು ಕೃಷಿ ಮಾರುಕಟ್ಟೆ ವಹಿವಾಟಿನಲ್ಇ ತೊಡಗಿಸಿಕೊಂಡಿರುವ ಹಲವು ಸಂಘಟನೆಗಳು ಎಪಿಎಂಸಿ ಯಾರ್ಡ್ ಬಂದ್ ಗೆ ಕರೆ ಕೊಟ್ಟಿವೆ. ಯಶವಂತಪುರ ಎಪಿಎಂಸಿಯ ಮಾಲೀಕರು, ವರ್ತಕರು, ಕಾರ್ಮಿಕ ಸಂಘಟನೆಗಳು ಬಂದ್ ಗೆ ಬೆಂಬಲ ಘೋಷಿಸಿವೆ. ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆಯವರೆಗೆ ನಡೆಯುವ ಬಂದ್ ಗೆ ಹಲವು ಅಕ್ಕಿಗಿರಿಣಿದಾರರ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ.…

Read More

ಪಾಟ್ನಾ(ಬಿಹಾರ): ಪಾಟ್ನಾ ಎಸ್‌ಎಸ್‌ಪಿ ಮಾನವಜೀತ್ ಸಿಂಗ್ ಧಿಲ್ಲೋನ್ ಅವರು ಆರ್‌ಎಸ್‌ಎಸ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಬಿಹಾರ ಪೊಲೀಸರು ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಅಷ್ಟೇ ಅಲ್ಲದೇ, 24 ಗಂಟೆಗಳ ಒಳಗೆ ಉತ್ತರಿಸುವಂತೆ ಅಧಿಕಾರಿಗೆ ಸೂಚಿಸಿದ್ದಾರೆ. ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಜಿತೇಂದ್ರ ಸಿಂಗ್ ಗಂಗ್ವಾರ್ ಅವರು ನೀಡಿದ ಶೋಕಾಸ್ ನೋಟಿಸ್‌ನಲ್ಲಿ “ಎಸ್‌ಎಸ್‌ಪಿ ಅವರು ಸಾರ್ವಜನಿಕವಾಗಿ ಏಕೆ ಅಂತಹ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಹೇಳಿದ್ದಾರೆ. ನಿಷೇಧಿತ ಸಂಘಟನೆಯಾದ ಪಿಎಫ್‌ಐಗೆ ಸಂಬಂಧ ಹೊಂದಿರುವ ಮೂವರನ್ನು ಪಾಟ್ನಾ ಪೊಲೀಸರು ಗುರುವಾರ ಬಂಧಿಸಿದ ನಂತರ, ಧಿಲ್ಲೋನ್ ತೀವ್ರಗಾಮಿ ಸಂಘಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೊಂದಿಗೆ ಹೋಲಿಸಿದ್ದಾರೆ. “ಆರ್‌ಎಸ್‌ಎಸ್ ತಮ್ಮ ಕಾರ್ಯಕರ್ತರನ್ನು ಸಂಘಟಿಸಿ ಹೇಗೆ ತರಬೇತಿ ನೀಡಲಾಗುತ್ತಿದೆಯೋ, ಇದೇ ಮಾದರಿಯನ್ನು ಪಿಎಫ್‌ಐ ಅನುಸರಿಸುತ್ತಿದೆ. ಮಾರ್ಷಲ್ ಆರ್ಟ್ಸ್ ವೇಷದಲ್ಲಿ ಅವರು ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದಾರೆ” ಎಂದು ಧಿಲ್ಲೋನ್ ಹೇಳಿಕೆ ನೀಡಿದ್ದಾರೆ. पटना के SSP ने पटना से पकड़े गए आतंकियों…

Read More