Author: KNN IT TEAM

ಕಲಬುರಗಿ : ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕಲಬುರಗಿ ಜಿಲ್ಲೆಯಾದ್ಯಂತ ಇದೇ ಜುಲೈ 17 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಪ್ರವಾಹ ಪೀಡಿತ ಪ್ರದೇಶದಲ್ಲಿ ತುರ್ತು ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕಾಗಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯೆಂದು ನೇಮಿಸಿ ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಆದೇಶ ಹೊರಡಿಸಿದ್ದಾರೆ. https://kannadanewsnow.com/kannada/river-cauvery-in-srirangapatna-saibaba-temple-flooded/ ನಿಯೋಜಿಸಿದ ಅಧಿಕಾರಿಗಳು ಕೂಡಲೇ ತಮಗೆ ಸಂಬಂಧಪಟ್ಟ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹದಿಂದ ಜನ ಮತ್ತು ಜಾನುವಾರುಗಳ ಸ್ಥಳಾಂತರ, ಪರಿಹಾರ ಕೇಂದ್ರಗಳ ಉಸ್ತುವಾರಿ ಸೇರಿದಂತೆ ಇನ್ನಿತರ ಮುನ್ನೆಚ್ಚರಿಕೆ ಕ್ರಮಕೈಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದ್ದು, ಗ್ರಾಮವಾರು ನಿಯೋಜಿಸಿದ ನೋಡಲ್ ಅಧಿಕಾರಿಗಳ ವಿವರ ಹಾಗೂ ಮೊಬೈಲ್ ಸಂಖ್ಯೆ ಇಂತಿದೆ. ಅಫಜಲಪುರ ತಾಲೂಕು:  ಹೊಸೂರ, ಶೇಷಗಿರಿವಾಡಿ, ಮಣ್ಣೂರ, ದೇವಪ್ಪನಗರ, ಕೂಡಗನೂರ ಹಾಗೂ ಶಿವೂರ ಗ್ರಾಮಗಳಿಗೆ ಕಲಬುರಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು-9740477810. ಉಡಚಾಣ, ಹಿರಿಯಾಳ, ಭೋಸಗಾ, ದುದ್ದಣಗಿ, ಮಂಗಳೂರು ಗ್ರಾಮಗಳಿಗೆ ಕಲಬುರಗಿ ಸಾರ್ವಜನಿಕ…

Read More

ದೆಹಲಿ :  ಇಂಡಿಗೋ ವಿಮಾನವನ್ನು ಕಳೆದ ರಾತ್ರಿ ದೆಹಲಿಯಿಂದ ವಡೋದರಾಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನವನ್ನು ಒಂದು ಸೆಕೆಂಡಿನ ಸ್ವಲ್ಪ ಸಮಯದವರೆಗೆ ಎಂಜಿನ್ ಗಳಲ್ಲಿ ಕೆಲವು ಕಂಪನಗಳು ಕೇಳಿದ ನಂತರ ಮುಂಜಾಗ್ರತಾ ಕ್ರಮವಾಗಿ ಜೈಪುರಕ್ಕೆ ತಿರುಗಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಸಿಜಿಎ) ಶುಕ್ರವಾರ ತಿಳಿಸಿದೆ. ತನಿಖೆಗೆ ಆದೇಶಿಸಲಾಗಿದೆ. https://twitter.com/ANI/status/1547799352009461761?ref_src=twsrc%5Etfw%7Ctwcamp%5Etweetembed%7Ctwterm%5E1547799352009461761%7Ctwgr%5E%7Ctwcon%5Es1_c10&ref_url=https%3A%2F%2Fwww.indiatvnews.com%2Fnews%2Findia%2Findigo-flight-from-delhi-to-vadodara-diverted-to-jaipur-after-vibrations-heard-in-engines-latest-updates-2022-07-15-792237

Read More

ನವದೆಹಲಿ: ವಿಚ್ಛೇದಿತ ಪತ್ನಿಯಿಂದ ಮಂಗಳಸೂತ್ರ ತೆಗೆದುಹಾಕುವುದು ಗಂಡನನ್ನು ಅತ್ಯುನ್ನತ ಶ್ರೇಣಿಯ ಮಾನಸಿಕ ಕ್ರೌರ್ಯಕ್ಕೆ ಒಳಪಡಿಸಿದಂತಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. https://kannadanewsnow.com/kannada/river-cauvery-in-srirangapatna-saibaba-temple-flooded/ ನ್ಯಾಯಮೂರ್ತಿಗಳಾದ ವಿ.ಎಂ.ವೇಲುಮಣಿ ಮತ್ತು ಎಸ್.ಸೌಂಧರ್ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇತ್ತೀಚೆಗೆ ಈರೋಡ್ನ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಸಿ.ಶಿವಕುಮಾರ್ ಅವರು ಸಿವಿಲ್ ವಿವಿಧ ಮೇಲ್ಮನವಿಗೆ ಅನುಮತಿ ನೀಡಿತು. 2016ರ ಜೂನ್ 15ರಂದು ಸ್ಥಳೀಯ ಕೌಟುಂಬಿಕ ನ್ಯಾಯಾಲಯ ತನಗೆ ವಿಚ್ಛೇದನ ನೀಡಲು ನಿರಾಕರಿಸಿದ್ದ ಆದೇಶವನ್ನು ರದ್ದುಗೊಳಿಸುವಂತೆ ಅವರು ಮನವಿ ಮಾಡಿದ್ದರು.

Read More

ಬೆಂಗಳೂರು: ತಮ್ಮ ಬಾಯ್ ಫ್ರೆಂಡ್ಸ್ ಗಾಗಿ, ಗರ್ಲ್ ಫ್ರೆಂಡ್ಸ್ ಡ್ರಗ್ಸ್ ಸಾಗಾಟ ಮಾಡಲು ಹೋಗಿ ಪೋಲಿರಿಗೆ ಸಿಕ್ಕಿ ಬಿದ್ದಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಚಾಮರಾಜಪೇಟೆ ಮೂಲದ ಸಂಗೀತಾ ಎಂಬಾಕೆ ತನ್ನ ಸ್ನೇಹಿತ ಲೋಹಿತ್‍ಗಾಗಿ 220 ಗ್ರಾಂ ಆಯಿಸ್ ಆಯಿಲ್ ಡ್ರಗ್ಸ್ ಅನ್ನು ಕೊಬ್ಬರಿ ಎಣ್ಣೆ ಡಬ್ಬಾದಲ್ಲಿ ತುಂಬಿಸಿ ತನ್ನ ಗುಪ್ತಾಂಗದಲ್ಲಿ ಇಟ್ಟುಕೊಂಡು ತಂದಿದ್ದಳು ಎನ್ನಲಾಗಿದೆ. ಇದೇ ವೇಳೆ ಛಾಯ ಎಂಬ ಮತ್ತೊಬ್ಬ ಮಹಿಳೆ ಕಾಳಪ್ಪ ಎಂಬ ಕೈದಿಗಾಗಿ 50 ಗ್ರಾಂ ಆಶಿಸ್ ಆಯಿಲ್ ಡ್ರಗ್ಸ್ ತಂದಿದ್ದಳು ಎನ್ನಲಾಗಿದೆ. ಗುಪ್ತಾಂಗದಲ್ಲಿ ಡ್ರಗ್ಸ್ ಇಟ್ಟುಕೊಂಡು ಸಾಗಾಟ ಮಾಡಲು ಹೋಗಿ ಇವರಿಬ್ಬರು ಸಿಕ್ಕಿ ಬಿದಿದ್ದು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಇಬ್ಬರನ್ನು ನ್ಯಾಯಾಂಗ ಸದ್ಯ ಬಂಧನಕ್ಕೆ ನೀಡಲಾಗಿದೆ ಅಂತ ತಿಳಿದು ಬಂದಿದೆ. https://kannadanewsnow.com/kannada/river-cauvery-in-srirangapatna-saibaba-temple-flooded/ https://kannadanewsnow.com/kannada/beware-dont-ignore-these-12-symptoms-which-may-be-a-sign-of-serious-heart-disease/ https://kannadanewsnow.com/kannada/real-life-baahubali-man-carries-3-month-old-baby-in-basket-in-flood-hit-manthani-watch/

Read More

ಪೆದ್ದಪಲ್ಲಿ(ತೆಲಂಗಾಣ): ತೆಲಂಗಾಣದ ಕೆಲವು ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗ ಪ್ರವಾಹದಂತಹ ಪರಿಸ್ಥತಿ ನಿರ್ಮಾಣವಾಗಿದೆ. ಪ್ರವಾಹ ಪೀಡಿತ ಭಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಜನರನ್ನು ಸುರಕ್ಷತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈ ವೇಳೆ, ತೆಲುಗಿನ ಬಾಹುಬಲಿ ಚಿತ್ರದ ದೃಶ್ಯವನ್ನೋಲುವ ಘಟನೆಯೊಂದು ನಡೆದಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ. ಹೌದು, ವ್ಯಕ್ತಿಯೊಬ್ಬ ತನ್ನ ತಲೆಯ ಮೇಲೆ ಪ್ಲಾಸ್ಟಿಕ್ ಟಬ್‌ನಲ್ಲಿ ಮೂರು ತಿಂಗಳ ಮಗುವನ್ನು ಮಲಗಿಸಿಕೊಂಡು ಸುರಕ್ಷಿತವಾಗಿ ಹೊತ್ತುಕೊಂಡು ಹೋಗುವ ದೃಶ್ಯವನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. The real-life Baahubali! Man carries a months-old baby over his head in a basket in flood affected village of Manthani. #TelanganaFloods #TelanganaRain pic.twitter.com/0Y0msp8Jbp — Inspired Ashu. (@Apniduniyama) July 14, 2022 ಪೆದ್ದಪಲ್ಲಿ ಜಿಲ್ಲೆಯ ಮಂಥನಿ ಪಟ್ಟಣದಲ್ಲಿ ಗುರುವಾರ ಈ ದೃಶ್ಯ ಕಂಡುಬಂದಿದೆ. ಕುಟುಂಬವೊಂದು ಪ್ರವಾಹದ ನೀರಿನಲ್ಲಿ ಬೇರೆ ಜಾಗಕ್ಕೆ ತೆರಳುತ್ತಿರುವುದನ್ನು ನೋಡಬಹುದು. https://kannadanewsnow.com/kannada/breaking-news-tremors-felt-again-in-several-parts-of-kodagu-district-people-worried/ https://kannadanewsnow.com/kannada/new-lanka-president-within-7-days-says-speaker-after-g-rajapaksa-quits/

Read More

ಮಂಡ್ಯ: ಕಾವೇರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಮುಳುಗಡೆಯಾಗಿದೆ. https://kannadanewsnow.com/kannada/big-twist-to-jj-nagar-chandrus-murder/ ಪಶ್ಚಿಮ ವಾಹಿನಿಗೆ ಪಿಂಡ ಪ್ರಧಾನ ಮತ್ತು ಅಸ್ತಿ ವಿಸರ್ಜನೆಗೆ ಬ್ರೇಕ್ ಹಾಕಲಾಗಿದೆ. ಪಶ್ಚಿಮ ವಾಹಿನಿಯ ನಾಗರಕಟ್ಟೆ, ಮಂಟಪಗಳು ಮುಳುಗಡೆಯಾಗಿದ್ದು, ನದಿ ಪಕ್ಕದ ದೇವಸ್ಥಾನಗಳು ಜಲಾವೃತವಾಗಿದೆ. ಈ ಹಿನ್ನೆಲೆ ಪಶ್ಚಿಮ ವಾಹಿನಿಗೆ ಪ್ರವಾಸಿಗರಿಗೆ ಹಾಗೂ ಜನರಿಗೆ ನಿರ್ಬಂಧ ಹೇರಲಾಗಿದೆ. https://kannadanewsnow.com/kannada/big-twist-to-jj-nagar-chandrus-murder/ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಬರ್ತಿದ್ದರು. ಕಾವೇರಿ ನದಿಯಲ್ಲಿ ಅಸ್ತಿ ವಿಸರ್ಜನೆ ಮಾಡಿ ಪಿಂಡ ಪ್ರಧಾನ ಮಾಡಲಾಗುತ್ತಿತ್ತು. ಇದೀಗ ಶ್ರೀರಂಗಪಟ್ಟಣ ಪುರಸಭೆ ಪಿಂಡ ಪ್ರಧಾನ, ಆಸ್ತಿ ವಿಸರ್ಜನೆಗೂ ನಿಷೇಧ ಹೇರಲಾಗಿದೆ.

Read More

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :   ಪ್ರಪಂಚದಾದ್ಯಂತ ಸಾವಿರಾರು ಜನರು ಹೃದ್ರೋಗದಂತಹ ಮಾರಣಾಂತಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಮತ್ತು ಅದರಿಂದ ಉಂಟಾಗುವ ಸಾವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ವಯಸ್ಸು ಹೆಚ್ಚಾದಂತೆ ಹೃದ್ರೋಗದ ಅಪಾಯವೂ ಹೆಚ್ಚಾಗುತ್ತದೆ. https://kannadanewsnow.com/kannada/breaking-news-tremors-felt-again-in-several-parts-of-kodagu-district-people-worried/ ವಿಶೇಷವಾಗಿ ಅನಾರೋಗ್ಯಕರ ಜೀವನಶೈಲಿ ಬದಲಾಗುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಆಹಾರ ಪದ್ಧತಿ ಮತ್ತು ಕೆಟ್ಟ ಅಭ್ಯಾಸಗಳಿಂದಾಗಿ, ದೇಹದಲ್ಲಿ ರಕ್ತ ಪರಿಚಲನೆ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ . ಹೃದ್ರೋಗವನ್ನು ಸಕಾಲದಲ್ಲಿ ಗುರುತಿಸಿದರೆ, ಅದರಿಂದ ಉಂಟಾಗುವ ಹಾನಿಯನ್ನು ತಪ್ಪಿಸಬಹುದು. ಎಲ್ಲಾ ಹೃದಯದ ಸಮಸ್ಯೆಗಳು ಸ್ಪಷ್ಟ ಎಚ್ಚರಿಕೆಗಳೊಂದಿಗೆ ಬರುವುದಿಲ್ಲವಾದರೂ, ಹೃದ್ರೋಗವನ್ನು ಸೂಚಿಸುವ ಕೆಲವು ಚಿಹ್ನೆಗಳಿವೆ ಮತ್ತು ಅವುಗಳನ್ನು ನಿರ್ಲಕ್ಷಿಸಬಾರದು. ಆದ್ದರಿಂದ ಈ ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳೋಣ. ಬೆವರಲು ನೀವು ಸಾಮಾನ್ಯಕ್ಕಿಂತ ಹೆಚ್ಚು ಬೆವರುತ್ತಿದ್ದರೆ, ಅದು ಹೃದ್ರೋಗದ ಸಂಕೇತವಾಗಿರಬಹುದು. ಅತಿಯಾದ ಶಾಖ ಅಥವಾ ಅತಿಯಾದ ದೈಹಿಕ ವ್ಯಾಯಾಮವು ಸಹ ಬೆವರುವಿಕೆಗೆ ಕಾರಣವಾಗುತ್ತದೆ, ಆದರೆ ನೀವು ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡದೆ ಬೆವರಿದಾಗ, ಅದು ಹೃದ್ರೋಗದ ಸಂಕೇತವಾಗಬಹುದು ಎಂದು ಅರ್ಥಮಾಡಿಕೊಳ್ಳಿ. ಎದೆಯ ಅಸ್ವಸ್ಥತೆ ಇದು ಹೃದ್ರೋಗದ ಅತ್ಯಂತ…

Read More

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಮತ್ತೆ ಭೂಕಂಪನದ ಅನುಭವವಾಗಿದ್ದು, ಭಯಭೀತರಾಗಿ ಜನರು ಮನೆಯಿಂದ ಹೊರಗೆ ಓಡಿ ಬಂದಿರುವ ಘಟನೆ ನಡೆದಿದೆ. https://kannadanewsnow.com/kannada/bigg-news-tungabhadra-dam-full-full-this-time-before-expected-minister-anand-singh/ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ, ಗೂನಡ್ಕ ಗ್ರಾಮದಗಳ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10.10 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಭೂಕಂಪನದ ಅನುಭವವಾಗುತ್ತಿದ್ದು, ಇದೀಗ ಮತ್ತೆ ಹಲವೆಡೆ ಭೂಕಂಪನದ ಅನುಭವವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. https://kannadanewsnow.com/kannada/new-lanka-president-within-7-days-says-speaker-after-g-rajapaksa-quits/

Read More

ಕೊಪ್ಪಳ : ನಿರೀಕ್ಷೆಗೂ ಮುನ್ನವೇ ಈ ಬಾರಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಪ್ರಸಕ್ತ ವರ್ಷ ರೈತರಿಗೆ ಎರಡೂ ಹಂಗಾಮಿಗೂ ನೀರಿನ ಕೊರತೆಯಾಗದೆ ಸಮರ್ಪಕವಾಗಿ ಲಭ್ಯವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಅವರು ಹೇಳಿದರು. ಸಂಪೂರ್ಣ ಭರ್ತಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಗುರುವಾರದಂದು ಬಾಗಿನ ಸಮರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ, ಸುಮಾರು 40 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಜುಲೈ ತಿಂಗಳಿನಲ್ಲಿಯೇ ಅಂದರೆ ಅವಧಿಗೂ ಮುನ್ನವೇ ಭರ್ತಿಯಾಗಿದ್ದು, ರೈತರು, ಜನಪ್ರತಿನಿಧಿಗಳು ಹಾಗೂ ಈ ಭಾಗದ ಜನರಲ್ಲಿ ಹರ್ಷವನ್ನು ಉಂಟುಮಾಡಿದೆ. ನಮ್ಮ ಸಂಸ್ಕೃತಿಯಂತೆ ಗಂಗಾ ಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಲು ಸಂತಸವಾಗುತ್ತಿದೆ.  ಬರುವ ದಿನಗಳಲ್ಲಿ ರೈತರಿಗೆ ಇದೇ ರೀತಿ ಸುಖ ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇನೆ.  ತುಂಗಭದ್ರೆ ಉಗ್ರವಾಗಿ ಹರಿಯದೆ, ಶಾಂತಯುತವಾಗಿ ಹರಿದು,…

Read More

ಕೊಲಂಬೊ: ಶ್ರೀಲಂಕಾಕ್ಕೆ ಇನ್ನು ಏಳು ದಿನಗಳಲ್ಲಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಸಂಸದೀಯ ಸ್ಪೀಕರ್ ಶುಕ್ರವಾರ ಹೇಳಿದ್ದಾರೆ. ಗೋಟಬಯ ರಾಜಪಕ್ಸ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. “ಗುರುವಾರ ಗೋಟಬಯ ರಾಜಪಕ್ಸ ಅವರು ಕಾನೂನುಬದ್ಧವಾಗಿ ರಾಜೀನಾಮೆ ನೀಡಿದ್ದಾರೆ” ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ದನಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ರಾಜಪಕ್ಸ ಅವರು ರಾಜೀನಾಮೆ ನೀಡುವುದಾಗಿ ಸಿಂಗಾಪುರದಿಂದ ಸ್ಪೀಕರ್‌ಗೆ ಸೂಚನೆ ನೀಡಿದರು ಎನ್ನಲಾಗಿದೆ. ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸ್ಪೀಕರ್ ಸಂಕ್ಷಿಪ್ತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮ್ಮ ದೇಶದ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಸರ್ಕಾರದ ವಿರೋಧಿ ಪ್ರತಿಭಟನೆಯಿಂದ ತಪ್ಪಿಸಿಕೊಳ್ಳಲು ಸಿಂಗಾಪುರಕ್ಕೆ ಪಲಾಯನ ಮಾಡಿದ ನಂತರ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ ಎಂದು ಶ್ರೀಲಂಕಾದವರು ಔಪಚಾರಿಕವಾಗಿ ಘೋಷಿಸಿದರು. ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ಆಗಮಿಸಿದ ನಂತರ ಗೋತಬಯ ರಾಜಪಕ್ಸೆ ಗುರುವಾರ ತಡರಾತ್ರಿ ರಾಜೀನಾಮೆ ಸಲ್ಲಿಸಿದ್ದಾರೆ. ವಾರಾಂತ್ಯದಲ್ಲಿ ಪ್ರತಿಭಟನಾಕಾರರು ಅವರ ಅರಮನೆಯನ್ನು…

Read More