Author: KNN IT TEAM

ಚೆನ್ನೈ: ಭಾರತೀಯ ನಟ ಮತ್ತು ಚಲನಚಿತ್ರ ನಿರ್ಮಾಪಕ ಪ್ರತಾಪ್ ಪೋಥೆನ್(Prathap Pothen) ಅವರು ಇಂದು ಚೆನ್ನೈನ ಕಿಲ್ಪಾಕ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಟನಿಗೆ 70 ವರ್ಷ ವಯಸ್ಸಾಗಿತ್ತು. ಪ್ರತಾಪ್ ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸಾವಿಗೂ ಕೆಲವೇ ಗಂಟೆಗಳ ಮೊದಲು ನಟ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ. ಅವರು ಫೇಸ್‌ಬುಕ್‌ನಲ್ಲಿ ಇತ್ತೀಚಿನ ಕೆಲವು ಪೋಸ್ಟ್‌ಗಳಲ್ಲಿ ಸಾವಿನ ಬಗ್ಗೆ ಮಾತನಾಡಿದ್ದಾರೆ. ವರದಿಯ ಪ್ರಕಾರ, ಪ್ರತಾಪ್ ಪೋಥನ್ ಅವರು 44 ವರ್ಷಗಳ ವೃತ್ತಿಜೀವನದಲ್ಲಿ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 100 ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು 12 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ಕೆಲವು ಪ್ರಮುಖ ಪಾತ್ರಗಳು ’22 ಫೀಮೇಲ್ ಕೊಟ್ಟಾಯಂ’, ‘ಉಯರೆ’, ‘ಬೆಂಗಳೂರು ಡೇಸ್’, ‘ವರುಮೈಯಿನ್ ನಿರಂ ಸಿವಪ್ಪು’, ‘ಪನ್ನರ್ ಪುಷ್ಪಂಗಳು’ ಸೇರಿದಂತೆ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿವೆ. https://kannadanewsnow.com/kannada/video-andhra-bride-takes-boat-ride-to-grooms-house-amid-heavy-rain/ https://kannadanewsnow.com/kannada/parliament-cant-be-used-for-protests-strikes-new-rule-by-rajya-sabha/

Read More

ಬಾಗಲಕೋಟೆ: ಬಾದಾಮಿಯ ಕೆರೂರು ಗುಂಪು ಘರ್ಷಣೆ ವೇಳೆ ಕೆಲ ಜನರಿಗೆ ಗಾಯವಾಗಿತ್ತು.ಈ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ಸಾಂತ್ವನ ಹೇಳಿ ಪರಿಹಾರ ನೀಡುವ ಸಲುವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. https://kannadanewsnow.com/kannada/no-dharna-in-parliament-states-order-ahead-of-monsoon-session/ ಈ ವೇಳೆ ಮುಸ್ಲಿಂ ಮಹಿಳೆಯೊಬ್ಬರು ನಮಗೆ ನ್ಯಾಯ ಬೇಕು . ದುಡ್ಡು ಬೇಡ ಎಂದು 2 ಲಕ್ಷ ರೂ. ಹಣವನ್ನು ಎಸೆದಿದ್ದಾರೆ. ಗಾಯಾಳುಗಳು ಬಾಗಲಕೋಟೆ ಬಳಿಯ ಆಶೀರ್ವಾದ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿದೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಗಾಯಾಳುಗಳಿಗೆ 2 ಲಕ್ಷ ರೂ. ಕೊಟ್ಟು ಬರುತ್ತಿದ್ದರು. ಈ ವೇಳೆ ಗಾಯಾಳುಗಳ ಕುಟುಂಬ ನಮಗೆ ಹಣ ಬೇಡ. ನ್ಯಾಯ ಬೇಕು. ನಮಗೆ ಹಣ ಬೇಡ ಶಾಂತಿ ಬೇಕು, ಎಂದು ಮನವಿ ಮಾಡಿದ್ದಾರೆ. https://kannadanewsnow.com/kannada/no-dharna-in-parliament-states-order-ahead-of-monsoon-session/ ಅಲ್ಲಿಂದ ಮರಳಿ ಹಣವನ್ನು ವಾಪಸ್ ಕೊಡಲು ಕಾರು ಹಿಂಬಾಲಿಸಿದ ಮಹಿಳೆಯರನ್ನು ಸಿದ್ದರಾಮಯ್ಯ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಮಹಿಳೆಯರು ಸಮಾಧಾನಕ್ಕೆ ಬಗ್ಗಲಿಲ್ಲ. ಆದರೆ ಇಲ್ಲಿಗೆ ಸುಮ್ಮನಾಗದ ಮಹಿಳೆ ರಾಜ್ಮ ಅವರು ಕಾರಿನ ಹಿಂದೆ ಹೋಗಿ ಹಣವನ್ನು ಎಸೆದಿದ್ದಾರೆ.

Read More

ಬೆಂಗಳೂರು : ಕಾಶಿಯಾತ್ರೆಗೆ ಹೋಗುವವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ರಾಜ್ಯದಿಂದ ಕಾಶಿಯಾತ್ರೆಗೆ ಹೋಗುವವರಿಗೆ 5,000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತಿದೆ. https://kannadanewsnow.com/kannada/bigg-news-sringeri-agumbe-road-washed-away-due-to-heavy-rains-in-chikkamagaluru-district-vehicular-traffic-stopped/ ಈ ಕುರಿತು ಮಾಹಿತಿ ನೀಡಿರುವ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ 30,000 ಯಾತ್ರಾರ್ಥಿಗಳಿಗೆ 5,000 ರೂ.ಗಳ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ. ಭಕ್ತರಿಗೆ ಪ್ರಯೋಜನಗಳ ನೇರ ಪ್ರಯೋಜನ ವರ್ಗಾವಣೆ ಮತ್ತು ಯೋಜನೆಯಡಿ ನೋಂದಣಿಗಾಗಿ ಪೋರ್ಟಲ್ ಅನ್ನು ಪ್ರಾರಂಭಿಸಲು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಉದ್ದೇಶಕ್ಕಾಗಿ ಬಜೆಟ್ ನಲ್ಲಿ15 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಜೊಲ್ಲೆ ಹೇಳಿದರು. ಆರ್ಥಿಕ ಸಹಾಯವನ್ನು ಪಡೆಯಲು, ಕಾಶಿ ತೀರ್ಥಯಾತ್ರೆಯನ್ನು ಪೂರ್ಣಗೊಳಿಸುವ ಭಕ್ತರು itms.kar.nic.in ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಎಂದು ಮಾಹಿತಿ ನೀಡಿದ್ದಾರೆ. https://kannadanewsnow.com/kannada/jammu-and-kashmir-two-soldiers-killed-in-fratricidal-firing-in-poonch/

Read More

ಚಿಕ್ಕಮಗಳೂರು : ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ರಾಜ್ಯ ಹೆದ್ದಾರಿ ಕೊಚ್ಚಿ ಹೋಗಿದ್ದು, ವಾಹನ ಸಂಚಾರ ಬಂದ್ ಆಗಿದೆ. https://kannadanewsnow.com/kannada/parliament-cant-be-used-for-protests-strikes-new-rule-by-rajya-sabha/ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ  ಶೃಂಗೇರಿಯ ನೇರಳೆಕೊಡಿಗೆ ಬಳಿ ರಾಜ್ಯ ಹೆದ್ದಾರೆಇ 100 ಅಡಿಗಳಷ್ಟು ಕೊಚ್ಚಿ ಹೋಗಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ರಾಜ್ಯ ಹೆದ್ದಾರಿ ಕೊಚ್ಚಿ ಹೋಗಿರುವುದರಿಂದ ಶೃಂಗೇರಿ ಹಾಗೂ ಆಗುಂಬೆ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೂಡಿಗೆರೆ, ಕೊಪ್ಪ ತಾಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. https://kannadanewsnow.com/kannada/jammu-and-kashmir-two-soldiers-killed-in-fratricidal-firing-in-poonch/

Read More

ನವದೆಹಲಿ: ಸಂಸತ್ ಭವನದ ಆವರಣದಲ್ಲಿ ಇನ್ನು ಮುಂದೆ ಪ್ರತಿಭಟನೆ, ಧರಣಿ, ಉಪವಾಸ ಅಥವಾ ಧಾರ್ಮಿಕ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ರಾಜ್ಯಸಭಾ ಸಚಿವಾಲಯದ ಹೊಸ ಸುತ್ತೋಲೆ ತಿಳಿಸಿದೆ. ಸಂಸತ್ತಿನಲ್ಲಿ ಕೆಲವು ಪದಗಳನ್ನು ಬಳಸಿದ “ಗಾಗ್ ಆರ್ಡರ್” ಬಗ್ಗೆ ವಿರೋಧ ಪಕ್ಷದ ಆಕ್ರೋಶದ ನಡುವೆಯೇ ಧರಣಿ ಅಥವಾ ಪ್ರತಿಭಟನೆಗಳ ಸುತ್ತೋಲೆ ಬಂದಿದೆ. ಜುಲೈ 18 ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಅವರು ಬಿಡುಗಡೆ ಮಾಡಿದ ಹೊಸ ಸುತ್ತೋಲೆಯಲ್ಲಿ ಸದಸ್ಯರ ಸಹಕಾರವನ್ನು ಕೋರಲಾಗಿದೆ. Vishguru’s latest salvo — D(h)arna Mana Hai! pic.twitter.com/4tofIxXg7l — Jairam Ramesh (@Jairam_Ramesh) July 15, 2022 “ಸದಸ್ಯರು ಯಾವುದೇ ಪ್ರದರ್ಶನ, ಧರಣಿ, ಮುಷ್ಕರ, ಉಪವಾಸ ಅಥವಾ ಯಾವುದೇ ಧಾರ್ಮಿಕ ಸಮಾರಂಭವನ್ನು ನಡೆಸುವ ಉದ್ದೇಶಕ್ಕಾಗಿ ಸಂಸತ್ ಭವನದ ಆವರಣವನ್ನು ಬಳಸುವಂತಿಲ್ಲ” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ನಿನ್ನೆ ಸಂಸತ್ತಿನಲ್ಲಿ ಅಸಂಸದೀಯ ಪದಗಳ ಬಳಕೆಗೆ ಬ್ರೇಕ್‌ ಹಾಕಿತ್ತು. ಇದರ ಬೆನ್ನಲ್ಲೇ, ಸಂಸತ್…

Read More

ಜಮ್ಮು :  ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸೈನಿಕರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. https://kannadanewsnow.com/kannada/bigg-news-congress-will-be-demolished-after-siddharamotsava-bjp/ ಪೂಂಚ್ ಜಿಲ್ಲೆಯ ಸುರನ್ಕೋಟ್ ಪ್ರದೇಶದ ಸೇನಾ ಶಿಬಿರದ ಒಳಗೆ ಈ ಘಟನೆ ನಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಗೋಲಿಬಾರ್ ಘಟನೆಯ ಹಿಂದಿನ ಕಾರಣಗಳನ್ನು ಪತ್ತೆಹಚ್ಚಲಾಗುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. https://kannadanewsnow.com/kannada/bigg-news-congress-will-be-demolished-after-siddharamotsava-bjp/

Read More

ಬೆಂಗಳೂರು : ಬಿರುಕು ಬಿಟ್ಟಿರುವ ಕಾಂಗ್ರೆಸ್ ಮನೆ ಸಿದ್ದರಾಮೋತ್ಸವದ ಬಳಿಕ ನೆಲಸಮವಾಗಲಿದೆ ಎಂದು ರಾಜ್ಯ ಬಿಜೆಪಿ ಘಟಕ ಲೇವಡಿ ಮಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಬಿರುಕು ಬಿಟ್ಟಿರುವ ಕಾಂಗ್ರೆಸ್ ಮನೆ ಸಿದ್ದರಾಮೋತ್ಸವದ ಬಳಿಕ ನೆಲಸಮವಾಗಲಿದೆ. ಮನೆಯೊಳಗಿದ್ದವರು ಗುಳೆ ಹೊರಡಲನುವಾಗಿದ್ದಾರೆ. ಅಕ್ಟೊಬರ್ ತಿಂಗಳಲ್ಲಿ ನಡೆಲಿರುವ ಭಾರತ್ ಜೋಡೋ ಕಾರ್ಯಕ್ರಮಕ್ಕೂ ನಾಯಕರು ಸಿಗಲಾರದಷ್ಟು ಕಾಂಗ್ರೆಸ್‌ ಖಾಲಿಯಾಗಲಿದೆ ಎಂದು ವ್ಯಂಗ್ಯವಾಡಿದೆ. https://twitter.com/BJP4Karnataka/status/1547811001571344385 ಭಾರತ್‌ ಜೋಡೋ ಅಭಿಯಾನ ಮತ್ತು ಸಿದ್ದರಾಮೋತ್ಸವ! ಈ ಎರಡು ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸಲಿದೆ ಎಂದು ಹೇಳಿದೆ. ಭಾರತ್ ಜೋಡೋ ಅಭಿಯಾನದ ಅಂಗವಾಗಿ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಲು ಉದ್ದೇಶಿಸಿರುವ ರಾಹುಲ್ ಗಾಂಧಿ ಅವರೇ, ಭಾರತ ಈಗ ಮತ್ತಷ್ಟು ಬಲಿಷ್ಠವಾಗಿದೆ. ಮುರಿದು ಹೋಗಿರುವುದು ಕಾಂಗ್ರೆಸ್ ಪಕ್ಷ, ಮೊದಲು ಕಾಂಗ್ರೆಸ್ ಜೋಡೋ ಅಭಿಯಾನ ಮಾಡಿ. ಮುಂದೊಂದು ದಿನ ಕಾಂಗ್ರೆಸ್‌ ಪಕ್ಷದ ಬಾಗಿಲು ಮುಚ್ಚಲೂ ಹಿಂಬಾಲಕರು ಸಿಗಲಾರರು ಎಂದು ವ್ಯಂಗ್ಯವಾಡಿದೆ. https://kannadanewsnow.com/kannada/no-dharna-in-parliament-states-order-ahead-of-monsoon-session/

Read More

ನವದೆಹಲಿ: ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ಸಂಸತ್ತಿನಲ್ಲಿ ಯಾವುದೇ ಧರಣಿಗೆ ಅವಕಾಶ ನೀಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. https://kannadanewsnow.com/kannada/tungabhadra-river-water-level-rises-houses-completely-submerged/ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಅವರ ಇತ್ತೀಚಿನ ಆದೇಶವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ಈ ಚಿತ್ರಕ್ಕೆ “ವಿಶ್ವಗುರು ಅವರ ಇತ್ತೀಚಿನ ಸಲ್ವೋ – ಡಿ (ಹ್) ಅರ್ನಾ ಮನ ಹೈ!” ಎಂದು ಶೀರ್ಷಿಕೆ ನೀಡಿದ್ದಾರೆ. https://twitter.com/Jairam_Ramesh/status/1547802825085702144?ref_src=twsrc%5Etfw%7Ctwcamp%5Etweetembed%7Ctwterm%5E1547802825085702144%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fno-dharna-in-parliament-states-order-ahead-of-monsoon-session-1975853-2022-07-15 ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಯ ಇತ್ತೀಚಿನ ಆದೇಶದ ಪ್ರಕಾರ, ಸಂಸತ್ತಿನ ಸದಸ್ಯರು ಯಾವುದೇ ಧರಣಿ ಅಥವಾ ಮುಷ್ಕರಕ್ಕಾಗಿ ಅದರ ಆವರಣವನ್ನು ಬಳಸುವಂತಿಲ್ಲ. “ಸದಸ್ಯರು ಸಂಸತ್ ಭವನದ ಆವರಣವನ್ನು ಯಾವುದೇ ಪ್ರದರ್ಶನ, ಧರಣಿ, ಮುಷ್ಕರ, ಉಪವಾಸ ಅಥವಾ ಯಾವುದೇ ಧಾರ್ಮಿಕ ಸಮಾರಂಭವನ್ನು ನಡೆಸುವ ಉದ್ದೇಶಕ್ಕಾಗಿ ಬಳಸುವಂತಿಲ್ಲ” ಎಂದು ಪಿಸಿ ಮೋದಿ ಅವರ ಆದೇಶದಲ್ಲಿ ತಿಳಿಸಲಾಗಿದೆ.

Read More

ಆಂಧ್ರಪ್ರದೇಶ: ಕರಾವಳಿ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವು ಪ್ರದೇಶಗಳು ಜಲಾವೃತವಾಗಿವೆ. ಈ ನಡುವೆಯೇ ವಧು ಮತ್ತು ಅವರ ಕುಟುಂಬವು ಮದುವೆಯ ವಿಧಿವಿಧಾನಗಳನ್ನು ನೆರವೇರಿಸಲು ವರನ ಮನೆಗೆ ದೋಣಿಯಲ್ಲಿ ತೆರಳಿದ್ದಾರೆ. ಈ ದೃಶ್ಯದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.‌ Fully decked up #BrideOnBoat, making her way to d groom’s place along with family members: Prashanti & Ashok reportedly chose a date in July over August to have rain hassle-free wedding but a #TruantMonsoon left #AndhraPradesh’s #Konaseema flooded #MonsoonWedding @ndtv @ndtvindia pic.twitter.com/iauxbSNIyQ — Uma Sudhir (@umasudhir) July 15, 2022 ಆಂಧ್ರದ ಅಶೋಕ್ ಮತ್ತು ಪ್ರಶಾಂತಿ ಎಂಬ ಜೋಡಿ ಆಗಸ್ಟ್‌ನಲ್ಲಿ ಮದುವೆಯಾಗಬೇಕಿತ್ತು. ಆದ್ರೆ, ಅವರು ಜುಲೈನಲ್ಲೇ(ಇದೇ ತಿಂಗಳು) ಮದುವೆಯಾಗಲು ಭಯಸಿದ್ದರು. ಇದಕ್ಕೆ ಕುಟುಂಬಸ್ಥರು ಕೂಡ ಒಪ್ಪಿಗೆ ನೀಡಿ ಮದುವೆಗೆ ಸಕಲ…

Read More

ದಾವಣಗೆರೆ: ತುಂಗಾಭದ್ರ ನದಿಯ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಹೊನ್ನಾಳಿ ತಾಲೂಕಿನ ಬಾಲರಾಜ್ ಘಾಟ್ ನಲ್ಲಿರುವ ಮನೆಗಳು ಜಲಾವೃತಗೊಂಡಿದೆ. https://kannadanewsnow.com/kannada/removal-of-mangalsutra-by-wife-is-mental-cruelty/ ಹತ್ತು ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇದೀಗ ಶಾಸಕ ಎಂಪಿ ರೇಣುಕಾಚಾರ್ಯ ವಿರುದ್ದ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಶ್ವತ ಪರಿಹಾರ ಒದಗಿಸುತ್ತಿಲ್ಲ .ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದಾಗ ಕಾಳಜಿ ಕೇಂದ್ರಕ್ಕೆ ಕಳಿಸುತ್ತಾರೆ ಸುಮ್ಮನಾಗುತ್ತಾರೆ. ಬೇರೆ ಕಡೆ ಜಾಗ ನೀಡಿದರೆ ಮನೆ ಕಟ್ಟಿಕೊಂಡು ಇರ್ತಿವಿ ಎಂದು ಸ್ಥಳೀಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನದಿ ಪಾತ್ರಕ್ಕೆ ಬಾರದಂತೆ ಬ್ಯಾರಿಕೇಡ್‌ ತಾಲೂಕು ಆಡಳಿತ ಹಾಕಿದ್ದಾರೆ.

Read More