Subscribe to Updates
Get the latest creative news from FooBar about art, design and business.
Author: KNN IT TEAM
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವ್ರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ ಮುಂಬರುವ ಸಂಚಿಕೆಗಾಗಿ ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನ ಹಂಚಿಕೊಳ್ಳಲು ಜನರನ್ನು ಆಹ್ವಾನಿಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವ್ರು ನಿಮಗೆ ಮುಖ್ಯವಾದ ವಿಷಯಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅವ್ರು ಮಾತನಾಡಬೇಕಾದ ವಿಷಯಗಳ ಬಗ್ಗೆ ನಿಮ್ಮ ಆಲೋಚನೆಗಳನ್ನ ಹಂಚಿಕೊಳ್ಳಲು ಪ್ರಧಾನ ಮಂತ್ರಿಗಳು ನಿಮ್ಮನ್ನು ಆಹ್ವಾನಿಸುತ್ತಾರೆ” ಎಂದು ಮೈಗವ್ ಪುಟದಲ್ಲಿ ಪ್ರೇಕ್ಷಕರ ಸಲಹೆಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಸಲಹೆಗಳನ್ನ ಕಳಿಸುವುದು ಹೇಗೆ? * ಆಲೋಚನೆಗಳನ್ನು MyGov ಮತ್ತು ನಮೋ ಅಪ್ಲಿಕೇಶನ್ʼನಲ್ಲಿ ಹಂಚಿಕೊಳ್ಳಬಹುದು. * MyGov ಪ್ರಕಾರ, ಪ್ರೇಕ್ಷಕರು ತಮ್ಮ ವೆಬ್ಸೈಟ್‌ನ ಮುಕ್ತ ವೇದಿಕೆಯಲ್ಲಿ ತಮ್ಮ ಸಲಹೆಗಳನ್ನ ಕಳುಹಿಸಬಹುದು ಅಥವಾ ಟೋಲ್-ಫ್ರೀ ಸಂಖ್ಯೆ 1800-11-7800ಗೆ ಡಯಲ್ ಮಾಡಬಹುದು. ಇನ್ನವ್ರ ಸಂದೇಶವನ್ನ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ರೆಕಾರ್ಡ್ ಮಾಡಬಹುದು. * “ರೆಕಾರ್ಡ್ ಮಾಡಲಾದ ಕೆಲವು ಸಂದೇಶಗಳು ಪ್ರಸಾರದ ಭಾಗವಾಗಬಹುದು” ಎಂದು ಅದು ಹೇಳಿದೆ. * ನೀವು 1922…
ಬೆಂಗಳೂರು: ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ, 2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎಸ್ ಎಸ್ ಎಲ್ ಸಿ ಪರೀಕ್ಷಾ ( SSLC Exam) ಪ್ರಶ್ನೆಪತ್ರಿಕೆ ಸ್ವರೂಪ ಮತ್ತು ಕಠಿಣತೆಯ ಮಟ್ಟವನ್ನು ಸರಳಗೊಳಿಸಲಾಗಿದೆ. ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ( Karnataka Secondary Education Examination Board ) ಸುತ್ತೋಲೆ ಹೊರಡಿಸಿದ್ದು, 2015-16ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ( SSLC Exam Question Paper ) ವಿನ್ಯಾಸ ಹಾಗೂ ನೀಲನಕಾಶೆಯನ್ನು ಪರಿಷ್ಕರಿಸಲಾಗಿತ್ತು. 2019-20ನೇ ಸಾಲಿನಲ್ಲಿ ಪ್ರಶ್ನೆಪತ್ರಿಕೆ ಸ್ವರೂಪದಲ್ಲಿ ಅಲ್ಪ ಬದಲಾವಣೆ ಮಾಡಿ, ಕಠಿಣತೆ ಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿರಿಲ್ಲ ಎಂದು ತಿಳಿಸಿದೆ. https://kannadanewsnow.com/kannada/good-news-for-those-looking-forward-to-competitive-exam-training/ 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೋವಿಡ್ 2ನೇ ಅಲೆಯ ಕಾರಣ ವಿದ್ಯಾರ್ಥಿಗಳ ಸುರಕ್ಷತಾ ಮತ್ತು ಶೈಕ್ಷಣಿಕ ಹಿತದೃಷ್ಠಿಯಿಂದ ಪರೀಕ್ಷೆಯನ್ನು ಸರಳೀಕರಿಸಿ, ಎರಡು ದಿನಗಳಲ್ಲಿ ಬಹುಆಯ್ಕೆ ಪ್ರಶ್ನೆ ಆಧರಿತವಾಗಿ ನಡೆಸಲಾಗಿತ್ತು. 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಶಾಲೆಗಳು ಭೌತಿಕವಾಗಿ 2-3…
ಬೆಂಗಳೂರು: ರಾಜ್ಯ ಸರ್ಕಾರದಿಂದ 2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಸಮುದಾಯದ 50 ಸಾವಿರ ಅಭ್ಯರ್ಥಿಗಳಿಗೆ ಖಾಸಗಿ ತರಬೇತಿ ಸಂಸ್ಥೆಗಳಿಂದ ಸ್ಪರ್ಧಾತ್ಮಕ ತರಬೇತಿ ನೀಡಲು ಅನುಮತಿಸಿದೆ. ಈ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತರಬೇತಿಯ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. https://kannadanewsnow.com/kannada/heavy-rains-dcs-of-this-district-temporarily-exempted-from-deputy-commissioners-move-halli-kade-campaign/ ಈ ಸಂಬಂಧ ನಡವಳಿಗಳನ್ನು ಹೊರಡಿಸಿದ್ದು, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಂದ 50,000 ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತರಬೇತಿ ನೀಡಲಾಗುವುದು ಎಂದು ಘೋಷಿಸಲಾಗಿದೆ. ಈ ಯೋಜನೆಯ ಅನುಷ್ಠಾನಗೊಳಿಸಲು ಹಾಗೂ ಮೊದಲ ಹಂತದಲ್ಲಿ 15,000 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಷರತ್ತುಗಳೊಂದಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶಿಸಿದೆ. https://kannadanewsnow.com/kannada/full-emergency-declared-at-kochi-airport-following-hydraulic-failure-reported/ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಗೆ ಯುಪಿಎಸ್ಸಿ, ಕೆಎಎಸ್, ಬ್ಯಾಂಕಿಂಗ್, ಗ್ರೂಪ್-ಸಿ, ಎಸ್ಎಸ್ಸಿ, ಆರ್…
ನವದೆಹಲಿ : ಡಿಜಿಲಾಕರ್ʼಗೆ ಸೆಕ್ಯುರಿಟಿ ಪಿನ್ʼನ ರೀತಿಯಲ್ಲಿ ಹೆಚ್ಚುವರಿ ಭದ್ರತೆ ಸೇರಿಸಲಾಗಿದೆ. ಇದರರ್ಥ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) 10 ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಘೋಷಿಸಿದಾಗ, ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನ ಡೌನ್ಲೋಡ್ ಮಾಡಲು ಸಾಧ್ಯವಾಗಲು ಪಿನ್ ನಮೂದಿಸಬೇಕಾಗುತ್ತದೆ. ಇನ್ನು ವಲಸೆ ಪ್ರಮಾಣಪತ್ರವನ್ನ ಡೌನ್ಲೋಡ್ ಮಾಡಲು ಆರು ಅಂಕಿಗಳ ಭದ್ರತಾ ಪಿನ್ ಸಹ ಅಗತ್ಯವಿದೆ. ಮಂಡಳಿಯು ಹೊರಡಿಸಿದ ನೋಟಿಸ್ ಪ್ರಕಾರ, ವಿದ್ಯಾರ್ಥಿವಾರು ಭದ್ರತಾ ಪಿಐಎನ್‌ಗಳನ್ನ ಶಾಲೆಗಳಿಗೆ ನೀಡಲಾಗುವುದು. ಅದನ್ನು ವೈಯಕ್ತಿಕ ವಿದ್ಯಾರ್ಥಿಗಳಿಗೆ ವರ್ಗಾಯಿಸಲು ಶಾಲೆಗಳು ಜವಾಬ್ದಾರರಾಗಿರುತ್ತವೆ. ಪಿಎನ್‌ಗಳನ್ನು ಡೌನ್ಲೋಡ್ ಮಾಡಲು, ಶಾಲೆಗಳು cbse.digitallocker.gov.in ಭೇಟಿ ನೀಡಬೇಕಾಗುತ್ತದೆ ಮತ್ತು ರುಜುವಾತುಗಳನ್ನ ಬಳಸಿಕೊಂಡು ಖಾತೆಗೆ ಲಾಗಿನ್ ಆಗಬೇಕು. ನಂತ್ರ ಅವರು ಪರದೆಯ ಎಡ ಫಲಕದಲ್ಲಿ ಲಭ್ಯವಿರುವ ಡೌನ್ಲೋಡ್ ಪಿನ್ ಫೈಲ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಒಮ್ಮೆ ಪಿನ್ ಒತ್ತಿದ ನಂತ್ರ ಶಾಲೆಗಳು ಅದನ್ನು ವೈಯಕ್ತಿಕ ವಿದ್ಯಾರ್ಥಿಗಳೊಂದಿಗೆ ಸುರಕ್ಷಿತ ರೀತಿಯಲ್ಲಿ ಹಂಚಿಕೊಳ್ಳಬಹುದು. ಡಿಜಿಲಾಕರ್ ಖಾತೆಗಳನ್ನ ಸಕ್ರಿಯಗೊಳಿಸಿದ ನಂತ್ರ ವಿದ್ಯಾರ್ಥಿಗಳು ‘ವಿತರಿಸಿದ ದಾಖಲೆಗಳು’ ವಿಭಾಗದ…
ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿರುವದರಿಂದ ಜಿಲ್ಲಾಧಿಕಾರಿಗಳ ನಡೆ, ಹಳ್ಳೆಯ ಕಡೆ ಅಭಿಯಾನಕ್ಕೆ ಕೆಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವಿನಾಯ್ತಿ ನೀಡಿ ಸರ್ಕಾರ ಆದೇಶಿಸಿದೆ. https://kannadanewsnow.com/kannada/karnatakas-iisc-best-in-india-mysore-university-manipal-academy-also-ranked/ ಈ ಬಗ್ಗೆ ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಪ್ರತಿ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನವನ್ನು ಜರುಗಿಸಲಾಗುತ್ತಿದೆ. ಆದ್ರೇ.. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ, ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರನ್ನು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಮತ್ತು ಪರಿಹಾರ ವಿತರಿಸುವ, ನಷ್ಟದ ಅಂದಾಜು ಮಾಡುವ ಕಾರ್ಯದಲ್ಲಿ ಜಿಲ್ಲಾಡಳಿತವು ಕಾರ್ಯಪ್ರವೃತ್ತವಾಗಿದೆ. https://kannadanewsnow.com/kannada/full-emergency-declared-at-kochi-airport-following-hydraulic-failure-reported/ ಈ ಹಿನ್ನಲೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ನಡೆಸಲು ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಹೆಚ್ಚು ಮಳೆಯಾಗುತ್ತಿರುವಂತ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ದಿನಾಂಕ 16-07-2022 ರಂದು ಜರುಗಬೇಕಾಗಿರುವ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಅಭಿಯಾನಕ್ಕೆ ಜುಲೈ ತಿಂಗಳಿನಲ್ಲಿ ವಿನಾಯ್ತಿಯನ್ನು ನೀಡಲಾಗಿದೆ ಎಂದು…
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ದೇಶದಲ್ಲಿ ಅಪರೂಪದ ರಕ್ತದ ಗುಂಪು ಪತ್ತೆಯಾಗಿದೆ. ಇಲ್ಲಿಯವರೆಗೆ ನಮಗೆ ನಾಲ್ಕು ವಿಧದ ರಕ್ತದ ಗುಂಪುಗಳು ತಿಳಿದಿದ್ದವು. ಅವುಗಳೆಂದರೆ A, B, O ಮತ್ತು AB. ಆದರೆ ಈಗ ಮತ್ತೊಂದು ರಕ್ತದ ಗುಂಪು ಕಂಡುಬಂದಿದ್ದು, ಅದರ ಹೆಸರು EMM ನೆಗೆಟಿವ್ ಅಂತಾ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ 65 ವರ್ಷದ ವ್ಯಕ್ತಿಯ ದೇಹದಲ್ಲಿ ಈ ಅಪರೂಪದ ರಕ್ತ ಹರಿಯುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಅಪರೂಪದ ರಕ್ತದ ಗುಂಪಿನೊಂದಿಗೆ ಇದು ಭಾರತದ ಮೊದಲ ವ್ಯಕ್ತಿ ಮತ್ತು ವಿಶ್ವದ ಹತ್ತನೇ ವ್ಯಕ್ತಿಯಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಅಂದರೆ, ಜಗತ್ತಿನಲ್ಲಿ ಕೇವಲ 10 ಜನರು ಮಾತ್ರ ಈ ರಕ್ತದ ಗುಂಪನ್ನ ಹೊಂದಿದ್ದಾರೆ. ಮಾನವ ದೇಹದಲ್ಲಿ 42 ವಿವಿಧ ರೀತಿಯ ರಕ್ತ ವ್ಯವಸ್ಥೆಗಳಿವೆ. ಉದಾಹರಣೆಗೆ- A, B, O, RH ಮತ್ತು Duffy. ಆದರೆ ಸಾಮಾನ್ಯವಾಗಿ ನಾಲ್ಕು ರಕ್ತ ಗುಂಪುಗಳನ್ನ ಮಾತ್ರ ಪರಿಗಣಿಸಲಾಗುತ್ತದೆ. EMM ಋಣಾತ್ಮಕ ರಕ್ತದ ಗುಂಪನ್ನು 42ನೇ ರಕ್ತದ ಗುಂಪು ವ್ಯವಸ್ಥೆ ಎಂದು ಪರಿಗಣಿಸಲಾಗುತ್ತದೆ.…
ಕೊಚ್ಚಿ: ಇಲ್ಲಿನ ವಿಮಾನ ನಿಲ್ದಾಣಕ್ಕೆ ಶಾರ್ಜಾದಿಂದ ಆಗಮಿಸಿದಂತ ವಿಮಾನದಿಂದ ಹೈಡ್ರಾಲಿಕ್ ವೈಫಲ್ಯ ( hydraulic failure ) ವರದಿಯಾದ ನಂತರ ಸಂಪೂರ್ಣ ತುರ್ತುಸ್ಥಿತಿಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ( Kochi airport ) ಘೋಷಿಸಲಾಗಿದೆ. https://kannadanewsnow.com/kannada/karnatakas-iisc-best-in-india-mysore-university-manipal-academy-also-ranked/ ಈ ಬಗ್ಗೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕೊಚ್ಚಿಯಿಂದ ಹೊರಟಿದ್ದ ಏರ್ ಅರೇಬಿಯಾ ವಿಮಾನ (ಜಿ9-426) ಯುಎಇಯ ಶಾರ್ಜಾದಿಂದ ಹೊರಟು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಹೈಡ್ರಾಲಿಕ್ ವೈಫಲ್ಯ ಅನುಭವಿಸಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದಲ್ಲಿದ್ದ ಎಲ್ಲಾ 222 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ. https://kannadanewsnow.com/kannada/ban-on-photo-and-video-in-government-office-is-like-giving-licence-to-corruption-dinesh-gundu-rao/ ದೇಶದಲ್ಲಿ ವಿಮಾನಗಳ ಅವಘಡ ಮುಂದುವರೆದಿದೆ. ಈ ಹಿಂದೆ ಸ್ಪೈಸ್ ಜೆಟ್ ಸೇರಿದಂತೆ ಹಲವು ವಿಮಾನಗಳು ತಾಂತ್ರಿಕ ದೋಷದ ಕಾರಣದಿಂದಾಗಿ ತುರ್ತು ಭೂ ಸ್ಪರ್ಷ ಮಾಡಿದ್ದವು. ದೊಡ್ಡ ಅನಾಹುತಗಳು ತಪ್ಪಿದ್ದವು. ಇಂದು ಕೂಡ ಅದೇ ಮಾದರಿಯಲ್ಲಿನ ದೊಡ್ಡ ಅನಾಹುತವೊಂದು ಪೈಲೆಟ್ ಸಮಯ ಪ್ರಜ್ಞೆಯಿಂದ ತಪ್ಪಿದೆ. https://twitter.com/ANI/status/1547955690492153862
ಬೆಂಗಳೂರು: ಶಿಕ್ಷಣ ಸಚಿವಾಲಯವು ( education ministry ) ಶುಕ್ರವಾರ ಬಿಡುಗಡೆ ಮಾಡಿದ ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಫ್ರೇಮ್ವರ್ಕ್ನ 2022 ರ ( National Institutional Ranking Framework 2022 ) ಶ್ರೇಯಾಂಕದ ಪ್ರಕಾರ, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ( Indian Institute of Science – Bengaluru ) ಭಾರತದ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಾಗಿದೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮತ್ತು ಮೈಸೂರು ವಿಶ್ವವಿದ್ಯಾಲಯ ( Mysore University ) ಸೇರಿದಂತೆ ಕರ್ನಾಟಕದ ಇತರ ಏಳು ವಿಶ್ವವಿದ್ಯಾಲಯಗಳು ಅಥವಾ ಸಂಶೋಧನಾ ಸಂಸ್ಥೆಗಳು ಒಟ್ಟಾರೆ ಅಗ್ರ 100 ರಲ್ಲಿ ಸ್ಥಾನ ಪಡೆದಿವೆ. https://kannadanewsnow.com/kannada/ban-on-photo-and-video-in-government-office-is-like-giving-licence-to-corruption-dinesh-gundu-rao/ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ( Manipal Academy of Higher Education ) ಏಳನೇ ಸ್ಥಾನದಲ್ಲಿದ್ದರೆ, ಮೈಸೂರು ವಿಶ್ವವಿದ್ಯಾಲಯ ಮತ್ತು ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಮೊದಲ 40…
ಬೆಂಗಳೂರು: ಸರ್ಕಾರ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು. ಅದು ಬಿಟ್ಟು ಸರ್ಕಾರಿ ಕಚೇರಿಯಲ್ಲಿ ಫೋಟೋ-ವಿಡಿಯೋ ನಿಷೇಧಿಸಿದ್ದು ಮಾತ್ರ, ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟಂತೆ. ಇದು ಭ್ರಷ್ಪಪರ ಸರ್ಕಾರ ಎಂಬುದಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ( Dinesh Gundu Rao ) ಕಿಡಿಕಾರಿದ್ದಾರೆ. https://kannadanewsnow.com/kannada/there-should-be-a-lion-of-peace-in-the-launch-and-not-the-lion-of-roar-dk-shivakumar/ ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ/ವಿಡಿಯೋ ದೃಶ್ಯ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಲು ಈ ನಿಷೇಧವೆ? ಸರ್ಕಾರಿ ಕಚೇರಿಗಳು ಭ್ರಷ್ಟರ ತಾಣವಾಗಿವೆ. ಸಾರ್ವಜನಿಕರು ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಮೊಬೈಲ್ ಮೂಲಕ ಬಯಲಿಗೆಳೆದಿದ್ದಾರೆ. ಇದು ಅಪಥ್ಯವೇ? ಎಂದು ಪ್ರಶ್ನಿಸಿದ್ದಾರೆ. https://twitter.com/dineshgrao/status/1547945007893475330 ಈ ಸರ್ಕಾರ ಕೆಲ ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ 40% ಕಮೀಷನ್ ಹೊಡೆಯುತ್ತಿದೆ. ಸರ್ಕಾರದ ಅನೇಕ ಇಲಾಖೆಗಳು ಸಾರ್ವಜನಿಕರನ್ನು ಸುಲಿಗೆ ಮಾಡುವ ವಸೂಲಿ ಕೇಂದ್ರಗಳಾಗಿವೆ. ಸರ್ಕಾರ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು. ಅದು ಬಿಟ್ಟು ಫೋಟೋ-ವಿಡಿಯೋ ನಿಷೇಧ ಭ್ರಷ್ಟಾಚಾರಕ್ಕೆ ಲೈಸೆನ್ಸ್…
ಮೈಸೂರು: ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಯಾವ ಲಾಂಚನ ಇತ್ತೊ ಅದನ್ನೇ ಮುಂದುವರಿಸಿಕೊಂಡು ಹೋಗಬೇಕು. ಲಾಂಚನದಲ್ಲಿ ಶಾಂತಿಯ ಸಿಂಹವೇ ಇರಬೇಕೇ ಹೊರತು ಘರ್ಜನೆಯ ಸಿಂಹ ಬರಬಾರದು. ದೇಶದಲ್ಲಿ ಶಾಂತಿ ಇರಬೇಕೇ ಹೊರತು ಘರ್ಜನೆ ಇರಬಾರದು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar ) ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಎಲ್ಲ ದುಃಖವನ್ನು ದೂರ ಮಾಡುವ ದೇವಿ ದುರ್ಗಾ ದೇವಿ. ಆಕೆಯ ಸ್ವರೂಪಿ ಹಾಗೂ ಕರ್ನಾಟಕ ರಾಜ್ಯದ ನಾಡ ದೇವತೆ ಚಾಮುಂಡೇಶ್ವರಿ ತಾಯಿ. ಇಡೀ ರಾಜ್ಯ ಬಹಳ ಸಂಭ್ರಮದಿಂದ ಈ ದೇವಿಯನ್ನು ಪೂಜಿಸಿಕೊಂಡು ಬಂದಿದೆ. ಈ ನಾಡು, ಭೂಮಿಯನ್ನು ಆ ದೇವತೆ ಕಾಪಾಡಬೇಕು ಎಂದು ಪ್ರಾರ್ಥಿಸುತ್ತಿದ್ದೇವೆ. ಈ ಶುಭದಿನದಂದು ನನ್ನ ಕುಟುಂಬ ಹಾಗೂ ಸ್ನೇಹಿತರ ಜತೆ ಬಂದು ದೇವಿಯ ದರ್ಶನ ಮಾಡಿ ಪ್ರಾರ್ಥನೆ ಮಾಡಿದ್ದೇವೆ. ಎಲ್ಲ ಭಕ್ತಾದಿಗಳು ಹಾಗೂ ಅವರ ಕುಟುಂಬಕ್ಕೆ ದೇವಿ ಆಶೀರ್ವಾದ ಮಾಡಲಿ, ಅವರ ಇಚ್ಛೆ ಈಡೇರಿಸಲಿ ಎಂದು ಬೇಡುತ್ತೇನೆ ಎಂದರು. https://kannadanewsnow.com/kannada/vidyut-adalat-to-be-held-in-8-districts-under-bescom-tomorrow/…