Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ನಾಳೆ ನಿವೃತ್ತಿಯಾಗಬೇಕಿದ್ದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಅವ್ರ ಸೇವಾವಧಿಯನ್ನ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದ್ರಂತೆ, ಮಂಜುನಾಥ್ ಅವ್ರ ಸೇವಾವಧಿ ಒಂದು ವರ್ಷ ವಿಸ್ತರಣೆಯಾಗಲಿದೆ. ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಡಾ. ಸಿ.ಎನ್ ಮಂಜುನಾಥ್ ಅವ್ರ ಸೇವೆಯನ್ನ ಪರಿಗಣಿಸಿ ಅವಧಿ ವಿಸ್ತರಿಸಿದೆ. ಇನ್ನು ಈ ಕುರಿತು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಾ.ಮಂಜುನಾಥ್ ಅವ್ರಿಗೆ ಕರೆ ಮಾಡಿ ಸೇವಾವಧಿ ವಿಸ್ತರಿಸಿದ ವಿಷಯ ತಿಳಿಸಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಡಾ. ಮಂಜುನಾಥ್ ಸೇವಾವಧಿ ಮತ್ತೆ ಒಂದು ವರ್ಷ ಹೆಚ್ಚಳವಾಗಿದೆ.
ಬೆಂಗಳೂರು: ರಾಜ್ಯದ ಪ್ರಸಿದ್ಧ ಹೃದ್ರೋಗ ಆಸ್ಪತ್ರೆಗಳಲ್ಲಿ ಒಂದಾದಂತ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ( Dr Manjunath ) ಅವಧಿ ನಾಳೆಗೆ ಮುಕ್ತಾಯಗೊಳ್ಳಲಿತ್ತು. ನಾಳೆ ನಿವೃತ್ತಿಯಾಗಬೇಕಿದ್ದಂತ ಅವರ ಅವಧಿಯನ್ನು ಇದೀಗ ರಾಜ್ಯ ಸರ್ಕಾರ ಮತ್ತೆ ಒಂದು ವರ್ಷ ವಿಸ್ತರಿಸಿ ಆದೇಶಿಸಿದೆ. https://kannadanewsnow.com/kannada/shimoga-on-july-20-there-was-a-power-outage-in-these-areas-of-the-district/ ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನಾಳೆ ನಿವೃತ್ತಿಯಾಗಲಿದ್ದಂತ ಜಯದೇವ ಆಸ್ಪತ್ರೆಯ ನಿರ್ದೇಶದ ಡಾ.ಮಂಜುನಾಥ್ ಅವರ ಸೇವಾವಧಿಯನ್ನು ಮುಂದಿನ ಒಂದು ವರ್ಷದವರೆಗೆ ವಿಸ್ತರಿಸಿ ಆದೇಶಿಸಿದೆ. https://kannadanewsnow.com/kannada/chitradurga-two-couples-killed-on-the-spot-in-a-car-lorry-collision-in-chitradurga/ ಅಂದಹಾಗೇ ನಾಳೆ ನಿವೃತ್ತಿಯಾಗಲಿದ್ದಂತ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಅವರ ಸೇವಾವಧಿಯನ್ನು ವಿಸ್ತರಿಸುವಂತೆ ಹಲವರು ಒತ್ತಾಯಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಈ ಬಗ್ಗೆ ಸರ್ಕಾರವನ್ನು ಆಗ್ರಹಿಸಿದ್ದರು. ಇದೀಗ ರಾಜ್ಯ ಸರ್ಕಾರ ಮುಂದಿನ ಒಂದು ವರ್ಷ ಅವರ ಸೇವಾವಧಿ ವಿಸ್ತರಿಸಿ ಆದೇಶಿಸಿದೆ.
ಕೆಎನ್ ಎನ್ ನ್ಯೂಸ್ ಡೆಸ್ಕ್ : ಬಿಸಿ ಬಿಸಿ ಕಾರ್ನ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕಾರ್ನ್ ಗಾಡಿ ಕಾಣ್ತು ಅಂದರೆ ಸಾಕು ಮಸಾಲಾ, ಸ್ವೀಟ್ ಕಾರ್ನ್ ತಿನ್ನಲೇಬೇಕು. ಅದು ಏನೋ ಒಂಥರಾ ಸಮಾಧಾನ. ಅದರಲ್ಲೂ ಜೋಳವನ್ನ ಒಲೆಯಲ್ಲಿ ಸುಟ್ಟುಕೊಂಡು ತಿನ್ನೋ ಮಜಾನೇ ಬೇರೆ ಇರುತ್ತದೆ. https://kannadanewsnow.com/kannada/gangster-lawrence-bishnois-remand-extended-in-hoshiarpur-firing-case/ ಆದರೆ ಮಳೆಗಾಲದಲ್ಲಿ ಜೋಳ ತಿನ್ನದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಂತೆ. ಹೀಗಾಗಿ ಪ್ರತೀ ಬಾರಿ ಆಹಾರ ಸೇವನೆ ಮಾಡುವಾಗ ಆರೋಗ್ಯಕ್ಕೆ ಧಕ್ಕೆಯಾಗದಂತೆ ಸೇವನೆ ಮಾಡಬೇಕು. ಆದಷ್ಟು ಬೀದಿ ಬದಿ ಆಹಾರಗಳಿಂದ ದೂರವಿರುವುದು ಒಳ್ಳೆಯದು. ಜೋಳ ನಿಮ್ಮಿಷ್ಟದ ತಿಂಡಿಯಾಗಿದ್ದರೆ ಮನೆಯಲ್ಲೇ ತಯಾರಿಸಿ ತಿನ್ನಿ ಅಥವಾ ತಾಜಾ ಜೋಳವನ್ನು ಮಾತ್ರ ಖರೀದಿಸಿ ತಿನ್ನಿ. ಆದರೆ ಜೋಳ ತಿಂದ ತಕ್ಷಣ ನೀರನ್ನು ಸೇವಿಸಬಾರದು ಯಾಕೆ ಅನ್ನೋದು ತಿಳಿದುಕೊಳ್ಳೊಣ * ಜೋಳ ತಿನ್ನದು ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಆಗುತ್ತದೆ. ಜೋಳ ಕಾರ್ಬೋಹೈಡ್ರೇಟ್ ಹೊಂದಿರುತ್ತದೆ. ಗ್ಯಾಸ್ಟ್ರಿಕ್ ಮತ್ತು ತೀವ್ರ ಹೊಟ್ಟೆ ನೋವಿಗೆ ಕಾರಣವಾಗಬಹುದು. * ಇನ್ನು…
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಪ್ರಪಂಚದಲ್ಲಿ ಹೆಚ್ಚು ಇಷ್ಟಪಡುವ ಪಾನೀಯದ ಬಗ್ಗೆ ಮಾತನಾಡುವಾಗ, ಚಹಾದ ಹೆಸರು ಅಗ್ರಸ್ಥಾನದಲ್ಲಿದೆ. ಇದು ಇಲ್ಲದೆ ಅನೇಕ ಜನರು ದಿನವನ್ನು ಸಹ ಪ್ರಾರಂಭಿಸುವುದಿಲ್ಲ. ಅನೇಕ ಜನರು ಖಂಡಿತವಾಗಿಯೂ ಬೆಳಿಗ್ಗೆ ಚಹಾದೊಂದಿಗೆ ಏನನ್ನಾದರೂ ತಿನ್ನಬೇಕು, ಇದರಿಂದ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಗ್ಯಾಸ್ ಸಮಸ್ಯೆಗಳು ಉಂಟಾಗುವುದಿಲ್ಲ. https://kannadanewsnow.com/kannada/dont-miss-my-name-says-actor-huccha-venkat/ ಸಾಮಾನ್ಯವಾಗಿ ಜನರು ಚಹಾದೊಂದಿಗೆ ಬಿಸ್ಕತ್ತುಗಳು ಅಥವಾ ಪಕೋಡಾಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಚಹಾದೊಂದಿಗೆ ಏನನ್ನು ಸೇವಿಸಬೇಕು ಎಂದು ತಿಳಿದುಕೊಳ್ಳುವುದು ಸಹ ಮುಖ್ಯ ಎಂದು ನಿಮಗೆ ತಿಳಿದಿದೆಯೇ, ಏಕೆಂದರೆ ಅದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದೆ. ಹೌದು, ಚಹಾದೊಂದಿಗೆ ಕೆಲವು ವಸ್ತುಗಳನ್ನು ಸೇವಿಸುವುದು ದೇಹಕ್ಕೆ ಹಾನಿಕಾರಕವಾಗಿದೆ. ಚಹಾದೊಂದಿಗೆ ಪಕೋಡಾ ಅಥವಾ ತಿಂಡಿಗಳನ್ನು ಸೇವಿಸುವುದು ಪಕೋಡಾ ತಿನ್ನುತ್ತ ಚಹಾ ಕುಡಿಯಲು ನಿಮಗೂ ಇಷ್ಟವಿದೆಯೇ? ಈ ಅಭ್ಯಾಸವು ನಿಮಗೆ ಹಾನಿಕಾರಕವಾಗಬಹುದು. ಚಹಾದೊಂದಿಗೆ ಕಡಲೆ ಹಿಟ್ಟಿನ ವಸ್ತುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳ ಅಪಾಯವಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇಂತಹ ವಸ್ತುಗಳನ್ನು ಹೆಚ್ಚಾಗಿ ಸೇವಿಸುವ ಜನರು,…
ನವದೆಹಲಿ : ಕೋವಿಡ್ -19ಗೆ ಬಲಿಯಾದವರ ಕುಟುಂಬಗಳಿಗೆ ಸಮಯವನ್ನ ವ್ಯರ್ಥ ಮಾಡದೆ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು, “ಪರಿಹಾರವನ್ನ ಪಡೆಯದ ಹಕ್ಕುದಾರನಿದ್ದರೆ ಅಥವಾ ಅವ್ರ ಮನವಿಯನ್ನ ತಿರಸ್ಕರಿಸಿದ್ದರೆ, ಅವ್ರು ಈ ವಿಷಯಕ್ಕೆ ಸಂಬಂಧಿಸಿದ ಕುಂದುಕೊರತೆ ನಿವಾರಣಾ ಸಮಿತಿಗೆ ದೂರು ಸಲ್ಲಿಸಬಹುದು” ಎಂದು ಹೇಳಿದೆ. ಇನ್ನು ಇದೇ ವೇಳೆ ಕುಂದುಕೊರತೆ ನಿವಾರಣಾ ಸಮಿತಿಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದ್ದು; ನಾಲ್ಕು ವಾರಗಳಲ್ಲಿ ದೂರು ಆಲಿಸಿ, ಪರಿಹಾರ ನೀಡಬೇಕು ಎಂದಿದೆ. ಆಂಧ್ರಪ್ರದೇಶ ಸರ್ಕಾರವು ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ತನ್ನ ವೈಯಕ್ತಿಕ ಖಾತೆಗೆ ಹಣವನ್ನ ವರ್ಗಾಯಿಸಿದ ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ನಡೆಸಿತು. ಎರಡು ದಿನಗಳಲ್ಲಿ ಹಣವನ್ನ ಎಸ್‌ಡಿಆರ್‌ಎಫ್ ಖಾತೆಗೆ ಮರಳಿ ಜಮಾ ಮಾಡುವಂತೆ ನ್ಯಾಯಪೀಠ ಆದೇಶಿಸಿದೆ. “ಹಿಂದಿನ ಆದೇಶದ ಅಡಿಯಲ್ಲಿ ಅರ್ಹ ಜನರಿಗೆ ಒಂದು ನಿಮಿಷವೂ ವಿಳಂಬ ಮಾಡದೇ ಪರಿಹಾರವನ್ನ ಪಾವತಿಸುವುದನ್ನ ಖಚಿತಪಡಿಸಿಕೊಳ್ಳಲು…
ಚೆನ್ನೈ: ಚೆನ್ನೈನ ಕ್ರೋಮ್ಪೆಟ್ನಲ್ಲಿ 19 ವರ್ಷದ ಯುವಕನೊಬ್ಬ ತಾಂಬರಂ ಸ್ಯಾನಿಟೋರಿಯಂ ಪ್ರದೇಶದಲ್ಲಿ ಹೈಟೆನ್ಷನ್ ವಿದ್ಯುತ್ ಪ್ರಸರಣ ಗೋಪುರದ ಮೇಲೆ ಹತ್ತಿ ಉಪನಗರ ರೈಲು ಸೇವೆಗಳಿಗೆ ಅಡ್ಡಿಪಡಿಸಿದ ಆಘಾತಕಾರಿ ಘಟನೆ ನಡೆದಿದೆ. ತನ್ನ 15 ವರ್ಷದ ಗೆಳತಿಯನ್ನು ತನ್ನನ್ನು ಮದುವೆಯಾಗುವಂತೆ ಮನವೊಲಿಸುವ ಪ್ರಯತ್ನದಲ್ಲಿ ಈ ಕೆಲಸವನ್ನು ಯುವಕ ಕೆಲಸ ಮಾಡಿದ್ದಾನೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಕೃಷ್ಣ ಎನ್ನುವ ಯುವಕ ಕ್ರೋಮ್ಪೆಟ್ನ ರಾಧಾ ನಗರದಲ್ಲಿ ವಾಸಿಸುತ್ತಿದ್ದಾನೆ. ಅವನು 11 ನೇ ತರಗತಿಯಲ್ಲಿ ಓದುತ್ತಿರುವ ತನ್ನ ಪ್ರದೇಶದ ಹುಡುಗಿಯನ್ನು ಲವ್ ಮಾಡುತ್ತಿದ್ದಾನೆ ಎನ್ನಲಾಗಿದೆ. ಇನ್ನೂ ಕೃಷ್ಣ ಮನೆ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಯುವಕನ ಜೊತೆಗೆ ಮಾತುಕತೆ ನಡೆಸಲು ಪೊಲೀಸರು, ಅಗ್ನಿಶಾಮಕ ಇಲಾಖೆ ಮತ್ತು ರಕ್ಷಣಾ ತಂಡವು ಸ್ಥಳಕ್ಕೆ ಆಗಮಿಸಿದ್ದರು ಎನ್ನಲಾಗಿದ್ದು, ಇದೇ ವೇಳೆ ವಿದ್ಯುತ್ ಸರಬರಾಜು ನಿಗಮದ ಸಿಬ್ಬಂದಿ ವಿದ್ಯುತ್ ಸ್ಥಗಿತಗೊಳಿಸಿದ್ದು ಎನ್ನಲಾಗಿದೆ. ಪೊಲೀಸರು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿದ ನಂತರವೂ, ಯುವಕ ಕೆಳಗೆ ಇಳಿಯಲು ನಿರಾಕರಿಸಿದನು ಎನ್ನಲಾಗಿದೆ. ನಂತರ ಹುಡುಗಿಯನ್ನು ಸ್ಥಳಕ್ಕೆ ಕರೆದೊಯ್ಯಲಾಯಿತು,…
ಚಿತ್ರದುರ್ಗ: ಜಿಲ್ಲೆಯ ಭರಮಸಾಗರದ ಬಳಿಯಲ್ಲಿ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಪರಿಣಾಮ ಕಾರಿನಲ್ಲಿದ್ದಂತ ದಂಪತಿಗಳಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರೋ ಘಟನೆ ನಡೆದಿದೆ. https://kannadanewsnow.com/kannada/shimoga-on-july-20-there-was-a-power-outage-in-these-areas-of-the-district/ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಬಳಿಯಲ್ಲಿ ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿಯಾದ ಪರಿಣಾಮ, ಕಾರಿನಲ್ಲಿದ್ದಂತ ನಿವೃತ್ತ ಡಿವೈಎಸ್ಪಿ ಜಯರಾಂ ನಾಯಕ್ ಹಾಗೂ ಅವರ ಪತ್ನಿ ಲತಾ ಎಂಬುವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ದಂಪತಿಗಳು ದಾವಣಗೆರೆ ಮೂಲದವರು ಎಂಬುದಾಗಿ ತಿಳಿದು ಬಂದಿದೆ. https://kannadanewsnow.com/kannada/presidential-election-polling-in-karnataka-completed-an-hour-ahead-of-schedule/ ಬೆಂಗಳೂರಿನಿಂದ ದಾವಣಗೆರೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಭರಮಸಾಗರದ ಬಳಿಯಲ್ಲಿ ಕಾರು ಅಪಘಾತಗೊಂಡಿದೆ. ಭರಮಸಾಗರ ಠಾಣಾ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ ಬಳಿ ಲಾರಿ & ಕಾರಿನ ನಡುವೆ ಅಪಘಾತವಾಗಿರುವ ಕುರಿತು ಹೊಯ್ಸಳ-3ರ ಅಧಿಕಾರಿ & ಸಿಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳದಲ್ಲೇ ಮೃತ ಪಟ್ಟಿದ್ದ ಇಬ್ಬರು ವ್ಯಕ್ತಿಗಳ ಮೃತ ದೇಹಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. https://kannadanewsnow.com/kannada/video-uttarakhand-policemen-jump-into-river-to-save-drowning-man-in-haridwar/
ಶಿವಮೊಗ್ಗ: ವಿವಿದ ವಿದ್ಯುತ್ ಕಾಮಗಾರಿಯ ಕೆಲಸ ಹಿನ್ನಲೆಯಲ್ಲಿ, ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಜುಲೈ.20ರಂದು ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ. ಈ ಬಗ್ಗೆ ಮೆಸ್ಕಾಂ ಮಾಹಿತಿ ನೀಡಿದ್ದು, ಜುಲೈ 20 ರಂದು ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಘಟಕ 2, 5 ಮತ್ತು 6 ರಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆವರೆಗೆ ನಗರದ ಇಲಿಯಾಸ್ ನಗರ 2 ರಿಂದ 13ನೇ ಕ್ರಾಸ್‍ವರೆಗೆ, 100 ಅಡಿರಸ್ತೆ, ಫಾರೂಕ್ಯ ಶಾದಿಮಹಲ್, ಮಂಡಕ್ಕಿಭಟ್ಟಿ, ಟಿಪ್ಪುನಗರ, ಮಂಜುನಾಥ ಬಡಾವಣೆ, ಖಾಜಿ ನಗರ 80 ಅಡಿರಸ್ತೆ, ಕಾಮತ್ ಲೇಔಟ್, ಮಲ್ಲಿಕಾರ್ಜುನ ಬಡಾವಣೆ ಹಾಗೂ ಸುತ್ತಮುತ್ತಲ ಪ್ರದೇಶ, ಕುಂಬಾರಕೇರಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. https://kannadanewsnow.com/kannada/presidential-election-polling-in-karnataka-completed-an-hour-ahead-of-schedule/ ಮುಂದುವರೆದು ಬಿ.ಬಿರಸ್ತೆ, ಕೆ.ಆರ್.ಪುರಂ, ಸೀಗೆಹಟ್ಟಿ, ಮುರಾದ್‍ನಗರ, ಸವಾಯಿಪಾಳ್ಯ, ಕುರುಬರಪಾಳ್ಯ, ಇಮಾಮ್‍ಬಾಡ, ಶಿವಶಂಕರ್ ರೈಸ್‍ಮಿಲ್, ಮಂಡ್ಲಿ ಸರ್ಕಲ್, ದಿಲ್ಲಿ ದರ್ಬಾರ್ ಹಿಂಭಾಗ, ನಾಗಭೂಷಣ್ ಪೆಟ್ರೊಲ್ ಬಂಕ್, ಬೈಪಾಸ್ ರಸ್ತೆ, ಟಿ.ಎಸ್.ಆರ್.ರಸ್ತೆ, ರವಿವರ್ಮ ಬೀದಿ, ಮಾಕಮ್ಮನ…
ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಈಕ್ವಿಟಿ ಹೂಡಿಕೆಗಳನ್ನ ಪ್ರಸ್ತುತ 15% ರಿಂದ 20% ವರೆಗೆ ಹೂಡಿಕೆ ಮಾಡಬಹುದಾದ ಠೇವಣಿಗಳ 20% ವರೆಗೆ ಹೆಚ್ಚಿಸುವ ಪ್ರಸ್ತಾಪವನ್ನ ಈ ತಿಂಗಳು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಜುಲೈ 29 ಮತ್ತು 30ರಂದು ನಡೆಯಲಿರುವ ಇಪಿಎಫ್ಒ ಟ್ರಸ್ಟಿಗಳ ಸಭೆಯಲ್ಲಿ ಈ ವಿಚಾರವನ್ನ ಚರ್ಚಿಸಿ ಅನುಮೋದಿಸುವ ನಿರೀಕ್ಷೆಯಿದೆ. ನಿವೃತ್ತಿ ನಿಧಿ ಸಂಸ್ಥೆಯು ಪ್ರಸ್ತುತ ಹೂಡಿಕೆ ಮಾಡಬಹುದಾದ ಠೇವಣಿಗಳ 5-15% ಅನ್ನು ಈಕ್ವಿಟಿ-ಸಂಬಂಧಿತ ಅಥವಾ ಈಕ್ವಿಟಿ-ಸಂಬಂಧಿತ ಯೋಜನೆಗಳಲ್ಲಿ ಹೂಡಿಕೆ ಮಾಡುವ ಆಯ್ಕೆಯನ್ನ ಹೊಂದಿದೆ. ಇಪಿಎಫ್ಒನ ಸಲಹಾ ಸಂಸ್ಥೆಯಾದ ಫೈನಾನ್ಸ್ ಆಡಿಟ್ ಮತ್ತು ಇನ್ವೆಸ್ಟ್ಮೆಂಟ್ ಕಮಿಟಿಯು ಗರಿಷ್ಠ 20%ಕ್ಕೆ ಬದಲಾಯಿಸುವ ವಿನಂತಿಯನ್ನ ಪರಿಶೀಲಿಸಿದೆ ಮತ್ತು ಅನುಮೋದಿಸಿದೆ. ಇಪಿಎಫ್ಒನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (CBT) ಎಫ್ಎಐಸಿಯ ಶಿಫಾರಸು ಪರಿಶೀಲಿಸಿ ಅನುಮೋದಿಸಲಿದೆ. “ಕೇಂದ್ರ ಕಾರ್ಮಿಕ ಸಚಿವರ ನೇತೃತ್ವದ ಟ್ರಸ್ಟಿಗಳ ಕೇಂದ್ರೀಯ ಮಂಡಳಿ (CBT) ಈಕ್ವಿಟಿ ಮತ್ತು ಈಕ್ವಿಟಿ ಸಂಬಂಧಿತ ಯೋಜನೆಗಳಲ್ಲಿ…
ಬೆಂಗಳೂರು: ಇಂದು ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆಗೆ ( President Election 2022 ) ಮತದಾನ ನಡೆಯಿತು. ಕರ್ನಾಟಕದ 226 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೊದಲೆ ಮತದಾನ ಕರ್ನಾಟಕದಲ್ಲಿ ಪೂರ್ಣಗೊಂಡಿದೆ. https://kannadanewsnow.com/kannada/dont-miss-my-name-says-actor-huccha-venkat/ ಬೆಂಗಳೂರಿನ ವಿಧಾನಸೌಧದಲ್ಲಿರುವಂತ 106ರಲ್ಲಿನ ಕೊಠಡಿಯಲ್ಲಿ ರಾಷ್ಟ್ರಪತಿ ಚುನಾವಣೆಯ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕದ 224 ಶಾಸಕರು, ಒಬ್ಬ ರಾಜ್ಯಸಭಾ ಸದಸ್ಯರು ಒಬ್ಬ ಲೋಕಸಭಾ ಸದಸ್ಯರು ಸೇರಿದಂತೆ 226 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. https://kannadanewsnow.com/kannada/second-positive-case-of-monkeypox-confirmed-in-keralas-kannur-district/ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ( Farmer PM HD Devegowdha ) ಹಾಗೂ ವಿ ಶ್ರೀನಿವಾಸ್ ಪ್ರಸಾದ್ ಗೆ ಅನಾರೋಗ್ಯದ ಹಿನ್ನಲೆಯಲ್ಲಿ ದೆಹಲಿಯ ಸಂಸತ್ ಭವನದಲ್ಲಿ ಮತದಾನದ ಬದಲು ಹೀಗಾಗಿ ಬೆಂಗಳೂರಿನಲ್ಲಿಯೇ ಮತ ಚಲಾಯಿಸೋದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದಾಗಿ ಬೆಂಗಳೂರಿನಲ್ಲಿಯೇ ಮಾಜಿ ಪಿಎಂ ಹೆಚ್ ಡಿ ದೇವೇಗೌಡ ಅವರು ವೀಲ್ ಚೇರ್ ನಲ್ಲಿ ಬಂದು ಮತ ಹಾಕಿದರು. https://kannadanewsnow.com/kannada/video-uttarakhand-policemen-jump-into-river-to-save-drowning-man-in-haridwar/ ನಿಗದಿತ ಸಮಯಕ್ಕಿಂತ ಒಂದು ಗಂಟೆ…