Author: KNN IT TEAM

ಬೆಂಗಳೂರು: ಜುಲೈ 13 ರಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ( Mangaluru international airport ) ಬಂದಿಳಿದ ಕೇರಳದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಸೋಂಕು ( Monkeypox Virus ) ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ( Dakshina Kannada ) ಜಿಲ್ಲೆಯಲ್ಲಿ ವಿಶೇಷ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಕೂಡ ಘೋಷಣೆ ಮಾಡಿದೆ. ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇರಳದ ಕಣ್ಣೂರು ಮೂಲದ ಈ ಪ್ರಯಾಣಿಕ ಈಗ ಕಣ್ಣೂರು ಜಿಲ್ಲೆಯ ಪರಿಯಾರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. https://kannadanewsnow.com/kannada/gst-on-milk-curd-former-cm-hd-kumaraswamy-demands-centres-review-of-policy/ ಈ ಕುರಿತು ಮಾಹಿತಿ ನೀಡಿದಂತ ದಕ್ಷಿಣಕನ್ನಡ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಅವರು, ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳಿರುವ ವಾರ್ಡ್ ಅನ್ನು ಮಂಕಿಪಾಕ್ಸ್ ರೋಗಿಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ವಿದೇಶದಿಂದ ಆಗಮಿಸುವ ಪ್ರಯಾಣಿಕರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಈವರೆಗೆ ಯಾವುದೇ ಮಂಗನಕಾಯಿಲೆ ಪ್ರಕರಣಗಳು…

Read More

ನವದೆಹಲಿ : ಮಾದಕ ವ್ಯಸನಿಗಳಂತೆಯೇ ನಾವು ವಿದೇಶದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳಿಗೆ ವ್ಯಸನಿಗಳಾಗಿದ್ದೆವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಎನ್.ಐ.ಓ ಮತ್ತು ಡಿ.ಐ.ಒ.ಯ ಸಹಯೋಗದ ಯೋಜನೆಯಾದ ‘ಸ್ಪ್ರಿಂಟ್’ ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, “21ನೇ ಶತಮಾನದ ಭಾರತಕ್ಕೆ ರಕ್ಷಣೆಯಲ್ಲಿ ‘ಆತ್ಮನಿರ್ಭರ’ ಬಹಳ ನಿರ್ಣಾಯಕವಾಗಿದೆ.. ಮುಂದಿನ ವರ್ಷ ಆಗಸ್ಟ್ 15ರೊಳಗೆ ನೌಕಾಪಡೆಗಾಗಿ 75 ದೇಶೀಯ ತಂತ್ರಜ್ಞಾನಗಳನ್ನ ರಚಿಸುವುದು ಮೊದಲ ಹೆಜ್ಜೆಯಾಗಿದೆ. ಇನ್ನು ನಾವು 100 ವರ್ಷಗಳ ಸ್ವಾತಂತ್ರ್ಯೋತ್ಸವ ಆಚರಿಸುವ ಹೊತ್ತಿಗೆ ಭಾರತದ ರಕ್ಷಣೆಯನ್ನ ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ಗುರಿಯಾಗಿರಬೇಕು” ಎಂದರು. “ಅತ್ಯಂತ ಸರಳವಾದ ಉತ್ಪನ್ನಗಳಿಗೆ ಸಹ ನಾವು ವಿದೇಶಗಳ ಮೇಲೆ ಅವಲಂಬಿತರಾಗುವ ಅಭ್ಯಾಸವನ್ನು ಬೆಳೆಸಿಕೊಂಡೆವು. ಮಾದಕ ವ್ಯಸನಿಗಳಂತೆಯೇ ನಾವು ವಿದೇಶದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳಿಗೆ ವ್ಯಸನಿಗಳಾಗಿದ್ದೆವು. ಆದ್ರೆ, ಈ ಮನಸ್ಥಿತಿಯನ್ನ ಬದಲಾಯಿಸಲು, ನಾವು 2014ರ ನಂತ್ರ ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಿದ್ದೇವೆ, ಹಿಂದಿನ ವಿಧಾನದಿಂದ ಕಲಿತ ನಂತ್ರ ‘ಸಬ್ಕಾ ಪ್ರಯಾಸ್’ ಸಹಾಯದಿಂದ ರಕ್ಷಣೆಯ ಹೊಸ ಪರಿಸರ ವ್ಯವಸ್ಥೆಯನ್ನ ರಚನೆಯಾಗಲಿದೆ” ಎಂದು…

Read More

ಬೆಂಗಳೂರು: ಜಿಎಸ್ ಟಿ ( GST ) ಮೂಲಕ ಕೇಂದ್ರ ಸರಕಾರವು ಬಡವರನ್ನು ದೋಚುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಎಸ್ ಟಿ ಜನ ವಿರೋಧಿ ತೆರಿಗೆ ನೀತಿ. ಪೆಟ್ರೋಲ್ ಬೆಲೆ, ದಿನ ನಿತ್ಯದ ವಸ್ತು ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈಗ ಆಹಾರ ಪದಾರ್ಥಗಳಿಗೆ ಜಿಎಸ್ ಟಿ ವಿಧಿಸಿ ಬಡವರ ಅನ್ನವನ್ನೂ ಕಸಿದುಕೊಳ್ಳಲಾಗುತ್ತಿದೆ. ಅಚ್ಛೇದಿನ್‌ ಎಂದರೆ ಇದೇನಾ? ಇವು ಜನ ವಿರೋಧಿ ಸರಕಾರಗಳು ಎಂದು ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಷ್ಟ್ರಪತಿ ಚುನಾವಣೆಯಲ್ಲಿ ಇಂದು ವಿಧಾನಸೌಧದಲ್ಲಿ ಮತ ಚಲಾಯಿಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾಲು, ಮೊಸರು, ಉಪ್ಪಿನಕಾಯಿ ಮೇಲೆ ತೆರಿಗೆ ಹೆಚ್ಚು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ತೆರಿಗೆ ಹೆಸರಿನಲ್ಲಿ ಲೂಟಿ ಮಾಡುವುದಕ್ಕೂ ಒಂದು ಮಿತಿ ಬೇಡವೇ? ಇದು ಜನ ವಿರೋಧಿ ನಿರ್ಧಾರ ಎಂದು…

Read More

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಂತ ನೌಕರರನ್ನು, ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ, ಇದೀಗ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಶಿಕ್ಷಣ ಇಲಾಖೆಯ SDA ನೌಕರರಿಗೆ ಗುಡ್ ನ್ಯೂಸ್ ನೀಡಿದೆ. https://kannadanewsnow.com/kannada/azadi-ka-amrit-mahotsav-to-be-held-in-ramanagara-on-july-22-minister-ashwathnarayan/ ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದಂತ ಡಾ.ರೂಪಶ್ರೀ ಅವರು ಆದೇಶ ಹೊರಡಿಸಿದ್ದು, ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರರುಗಳಿಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ಸಂಬಂಧ ಜೇಷ್ಟತಾ ಪಟ್ಟಿಯನ್ನು ಆಧರಿಸಿ, ನೌಕರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/presidential-polls-2022-over-99-turnout-in-parliament-all-eyes-now-on-july-21/ ಈ ನೌಕರರುಗಳಿಗೆ ಸಂಬಂಧಿಸಿದಂತೆ 2017-18 ರಿಂದ 2021-22ನೇ ಸಾಲಿನವರೆಗಿನ 5 ವರ್ಷಗಳ ಕಾರ್ಯ ನಿರ್ವಹಣಾ ವರದಿಗಳನ್ನು, ಶಿಸ್ತು ಪ್ರಕರಣ ಬಾಕಿ ಇಲ್ಲದೇ ಇರುವ ಬಗ್ಗೆ ಉಪ ನಿರ್ದೇಶಕರಿಂದ ದೃಢೀಕರಿಸಲ್ಪಟ್ಟ ದೃಢೀಕರಣ ಪತ್ರ ಹಾಗೂ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಬಗ್ಗೆ ಪ್ರಮಾಣ ಪತ್ರಗಳ ದೃಢೀಕರಣ ಪತ್ರಿಗಳನ್ನು…

Read More

ಬೆಂಗಳೂರು: ರಾಮನಗರ ಜಿಲ್ಲಾ ಕೇಂದ್ರದಲ್ಲಿ ಇದೇ 22ರಂದು ‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ. https://kannadanewsnow.com/kannada/good-news-for-state-government-employees-dearness-allowance-vda-deferred-withdrawn/ ಈ ಸಂಬಂಧ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅಂದು ಜಿಲ್ಲೆಯ ಎಲ್ಲ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ, ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮ ಬೃಹತ್ ಸ್ವರೂಪದಲ್ಲಿ ನಡೆಯಲಿದ್ದು, ಅಪಾರ ಸಂಖ್ಯೆಯ ಜನ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಜಾಗವನ್ನು ತ್ವರಿತವಾಗಿ ನಿರ್ಧರಿಸಲಾಗುವುದು ಎಂದು ಅವರು ನುಡಿದರು. https://kannadanewsnow.com/kannada/presidential-polls-2022-over-99-turnout-in-parliament-all-eyes-now-on-july-21/ ಸಭೆಯಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್ಪಿ ಸಂತೋಷ್ ಅವರು ರಾಮನಗರದಿಂದ ವರ್ಚುಯಲ್ ನಲ್ಲಿ ಭಾಗವಹಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಬೆಂಗಳೂರು ವಿವಿ ಕುಲಪತಿ ಡಾ.ಜಯಕರ್, ಕಲಾವಿದೆ ವೀಣಾಮೂರ್ತಿ…

Read More

ಮುಂಬೈ : ಇಂದೋರ್-ಅಮಲ್ನೇರ್‌ಗೆ ತೆರಳುತ್ತಿದ್ದ ಎಸ್‌ಟಿ ಕಾರ್ಪೊರೇಷನ್ ಬಸ್‌ನಲ್ಲಿದ್ದ ಎಲ್ಲ 12 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂದು ಬೆಳಿಗ್ಗೆ ಇಂದೋರ್-ಅಮಲ್ನೇರ್‌ಗೆ ತೆರಳುತ್ತಿದ್ದ ಬಸ್ ಅಪಘಾತದ ಸುದ್ದಿಯಿಂದ ಅನೇಕ ಜನರು ಆಘಾತಕ್ಕೊಳಗಾಗಿದ್ದರು. ಈ ಬಸ್ ಪ್ರಯಾಣಿಕರೊಂದಿಗೆ ಸೇತುವೆಯಿಂದ ಕೆಳಗೆ ಬಿದ್ದಿದ್ದು, ನರ್ಮದಾ ನದಿಯಲ್ಲಿ ಮುಳುಗಿತ್ತು. ನಂತ್ರ ರಕ್ಷಣೆ ಕಾರ್ಯಾಚರಣೆ ನಡೆಸಿದಾದ್ರು, ದುರದೃಷ್ಟವಶಾತ್ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಎಸ್ಟಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶೇಖರ್ ಚನ್ನೆ ಈ ಕುರಿತು ಮಾಹಿತಿ ನೀಡಿದ್ದು, “ಖಾಲ್‌ಘಾಟ್ ಎಸ್‌ಟಿ ಕಾರ್ಪೊರೇಷನ್ ಅಪಘಾತದಲ್ಲಿ ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಪಘಾತದ ಕಾರಣವನ್ನ ಕಂಡುಹಿಡಿಯಲು 3 ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಮತ್ತು ಈ ಬಸ್‌ನಲ್ಲಿರುವ VTS ಅಂದರೆ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್‌ನ ತಾಂತ್ರಿಕ ವಿಶ್ಲೇಷಣೆಯನ್ನ ಮಾಡಲಾಗುತ್ತಿದೆ. ಪ್ರಯಾಣಿಕರು ಬೇರೆ ರಾಜ್ಯದವರಾಗಿದ್ದರೂ ಅವರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ನೆರವು ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ” ಎಂದರು. ಆರಂಭದಲ್ಲಿ ಈ ಬಸ್‌ನಲ್ಲಿ 40 ಮಂದಿ ಪ್ರಯಾಣಿಕರಿದ್ದರು…

Read More

ನವದೆಹಲಿ: ಇಂದು ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆಯ ಮತದಾನ ನಡೆಯಿತು. ಇಂದು ನಡೆದಂತ ಚುನಾವಣೆಯಲ್ಲಿ ಶೇ.99.18ರಷ್ಟು ಮತದಾನ ನಡೆಸಲಾಗಿದೆ. ವಿಪಕ್ಷಗಳ ಎಂಟು ಸದಸ್ಯರು ಮತದಾನ ಮಾಡಿಲ್ಲ. https://kannadanewsnow.com/kannada/jayadeva-hospital-director-dr-manjunaths-tenure-extended-by-1-year/ ಈ ಬಗ್ಗೆ ರಾಜ್ಯ ಸಭೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಚುನಾವಣಾಧಿಕಾರಿ ಪಿ.ಸಿ ಮೋದಿ ಮಾಹಿತಿ ನೀಡಿದ್ದು, 727 ಸಂಸದರು ಮತ್ತು 9 ವಿಧಾನಸಭೆ ಸದಸ್ಯರನ್ನು ಒಳಗೊಂಡ 736 ಮತದಾರರಲ್ಲಿ 721 ಸಂಸದರು ಮತ್ತು 9 ವಿಧಾನಸಭೆ ಸದಸ್ಯರನ್ನು ಒಳಗೊಂಡ 730 ಮತದಾರರು ಮತ ಚಲಾಯಿಸಿದರು. ಶೇ.99.18ರಷ್ಟು ಮತದಾನವಾಗಿದೆ ಎಂದು ತಿಳಿಸಿದರು. https://kannadanewsnow.com/kannada/good-news-for-state-government-employees-dearness-allowance-vda-deferred-withdrawn/ ಭಾರತದ 15 ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಸೋಮವಾರ ಸಂಜೆ 5 ಗಂಟೆಗೆ ಚುನಾವಣೆಗಳು ಕೊನೆಗೊಂಡವು, ದೇಶಾದ್ಯಂತ ಸಂಸದರು ಮತ್ತು ಶಾಸಕರು ವಿರೋಧ ಪಕ್ಷದ ಯಶವಂತ್ ಸಿನ್ಹಾ ಮತ್ತು ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದರು. ಫಲಿತಾಂಶವು ಪೂರ್ವನಿರ್ಧರಿತ ತೀರ್ಮಾನದಂತೆ ತೋರುತ್ತದೆ. ಮುರ್ಮು ಅವರು ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ನಾಯಕ ಮತ್ತು ಎರಡನೇ…

Read More

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ನಿಶ್ವಿಕನಾಯ್ದು ಗೋವಾದಲ್ಲಿ ತಮ್ಮಸ್ನೇಹಿತರ ಜೊತೆಗೆ ಮಾಡಿರುವ ಕೆಲಸಗಳ ಕೆಲವು ವಿಡಿಯೋಗಳು ಈಗ ವೈರಲ್‌ ಆಗಿದೆ. ತಮ್ಮ ಸ್ನೇಹಿತರ ಜೊತೆಗೆ ಗೋವಾದಲ್ಲಿ ಇರುವ ನಟಿ ನಿಶ್ವಿಕನಾಯ್ದು ಪಾರ್ಟಿ ಮಾಡೊ ಟೈಮ್‌ನಲ್ಲಿ ತಮ್ಮ ಗೆಳೆತಿಯೊಬ್ಬಳು ಹುಕ್ಕ ಹೊಡೆದು ನಿಶ್ವಿಕನಾಯ್ದುಗೆ ಬಾಯಿಗೆ ಲಿಪ್‌ ಲಾಕ್‌ ಮಾಡಿದ ವೇಳೆಯಲ್ಲಿ ಆಕೆಯ ಬಾಯಿಂದ ಹುಕ್ಕಾದ ಸ್ಮೋಕ್‌ ತೆಗೆದುಕೊಂಡು ತನ್ನ ಬಾಯಿಂದ ಹೊಗೆ ಬಿಡುವು ವಿಡಿಯೋವೊಂದು ವೈರಲ್‌ ಆಗಿದೆ. ನಟಿ ನಿಶ್ವಿಕನಾಯ್ದು ವಿನ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ನಾನಾರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

Read More

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದಂತ ವಿಡಿಎ ತುಟ್ಟಿ ಭತ್ಯೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಈ ಆದೇಶವನ್ನು ಇಂದು ರಾಜ್ಯ ಸರ್ಕಾರ ವಾಪಾಸ್ ಪಡೆದ ಕಾರಣ, ಶೀಘ್ರವೇ ಮತ್ತೆ ತುಟ್ಟಿಭತ್ಯೆಯನ್ನು ನೀಡುವ ಸಂಬಂಧ ಆದೇಶ ಹೊರಡಿಸಲಾಗುತ್ತದೆ. ಈ ಮೂಲಕ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಿದೆ. https://kannadanewsnow.com/kannada/jayadeva-hospital-director-dr-manjunaths-tenure-extended-by-1-year/ ಈ ಬಗ್ಗೆ ರಾಜ್ಯ ಕಾರ್ಮಿಕ ಇಲಾಖೆಯ ಅಧಿಕಾರಿ ನಡವಳಿಯನ್ನು ಹೊರಡಿಸಿದ್ದು, ಕೋವಿಡ್-19 ತುರ್ತು ಸಂದರ್ಭದ ಹಿನ್ನಲೆಯಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ಅವಧಿಗೆ ವೇತನವನ್ನು ನೀಡಬೇಕೆಂದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಲ್ಲಿ ತಿಳಿಸಿದ್ದು, ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಉದ್ಯೋಗದಾತರ ಹಿತ ರಕ್ಷಣೆಯನ್ನು ಪರಿಗಣಿಸಿ, ದಿನಾಂಕ 01-04-2020 ರಿಂದ 31-03-2021ರವರೆಗೆ ಪಾವತಿಸಬೇಕಾಗಿರುವ ವಿಡಿಎ ಮೊತ್ತವನ್ನು ಮುಂದೂಡಿ ಆದೇಶಿಸಲಾಗಿತ್ತು. https://kannadanewsnow.com/kannada/chitradurga-two-couples-killed-on-the-spot-in-a-car-lorry-collision-in-chitradurga/ ರಾಜ್ಯ ಸರ್ಕಾರದ ಈ ಆದೇಶದ ವಿರುದ್ಧ ಕಾರ್ಮಿಕ ಸಂಘಟನೆಗಳು ಉಚ್ಛನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿರುತ್ತದೆ. ಅಲ್ಲದೇ ಈ ಸಂಬಂಧ ಸರ್ಕಾರದ ಹಂತದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ…

Read More

ನವದೆಹಲಿ: ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಣವು ಸೋಮವಾರ ಪಕ್ಷದ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಘೋಷಿಸಿದೆ ಮತ್ತು ಇದೇ ವೇಳೆ ಈ ಹಿಂದೆ ಅಸ್ತಿತ್ವದಲ್ಲಿದ್ದ ಹಳೆಯ ಸಮಿತಿಯನ್ನು ವಿಸರ್ಜಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಶಿಂಧೆ ಅವರನ್ನು ಶಿವಸೇನೆಯ ಮುಖ್ಯ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಶಾಸಕ ದೀಪಕ್ ಕೇಸರ್ಕರ್ ಅವರನ್ನು ವಕ್ತಾರರನ್ನಾಗಿ ನೇಮಕ ಮಾಡಲಾಗಿದ್ದು, ರಾಮದಾಸ್ ಕದಂ ಮತ್ತು ಆನಂದರಾವ್ ಅದ್ಸುಲ್ ಅವರನ್ನು ಶಿವಸೇನೆಯ ನಾಯಕರಾಗಿ ನೇಮಿಸಲಾಗಿದೆ. ರಾಮದಾಸ್ ಕದಂ ಮತ್ತು ಆನಂದರಾವ್ ಅದ್ಸುಲ್ ಅವರನ್ನು ಕೆಲವು ಸಮಯದ ಹಿಂದೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಶಿವಸೇನೆಯಿಂದ ಉಚ್ಚಾಟಿಸಲಾಗಿತ್ತು. ಆಗ ಶಿವಸೇನಾ ಪಕ್ಷದ ಮುಖ್ಯಸ್ಥರಾಗಿದ್ದ ಉದ್ಧವ್ ಠಾಕ್ರೆ ಅವರ ಆದೇಶದ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿತ್ತು. ಇದಾದ ಕೂಡಲೇ ಶಿಂಧೆ ಗುಂಪು ಅವರಿಬ್ಬರಿಗೂ ನಾಯಕನ ಸ್ಥಾನವನ್ನು ನೀಡಿದೆ.

Read More