Subscribe to Updates
Get the latest creative news from FooBar about art, design and business.
Author: KNN IT TEAM
ಕೆಎನ್‌ಎನ್‌ಸಿನಿಮಾಡೆಸ್ಕ್: ಸಿನೆಮಾ ಅಂದ್ರೆ, ವೀಕೆಂಡ್ ನಲ್ಲಿ ಹಬ್ಬದ ಔತಣವನ್ನ ಕೊಟ್ಟು ಸಿನಿಪ್ರಿಯರನ್ನ ಮನರಂಜಿಸುವ ಕ್ಷೇತ್ರ. ಅದರಲ್ಲೂ ಪ್ರೇಕ್ಷರನ್ನ ತುದಿ ಸೀಟಿಗೆ ತಂದು ಕೂರಿಸುವಂಥ ಕಂಟೆಂಟ್, ಸಸ್ಪೇನ್ಸ್, ಕ್ಷಣ ಕ್ಷಣಕ್ಕೂ ಥ್ರಿಲ್ ಎನಿಸೋ ಕಥಾ ಹಂದರದ ಚಿತ್ರ ಬಂದಿದೆ ಅಂದ್ರೆ ಕೇಳ್ಬೇಕಾ? ಆ ಸಿನೆಮಾಗೆ ಮತ್ಯಾವ ಪಬ್ಲಿಸಿಟಿನೂ ಬೇಡ. ಯಾಕಂದ್ರೆ ಚಿತ್ರ ನೋಡಿದವರ ಬಾಯಿಂದ ಬಾಯಿಗೆ ಹರಡಿ ಚಿತ್ರ ಸಕ್ಸಸ್ ಫುಲ್ ಓಟಕ್ಕೆ ನಾಂದಿಯಾಗತ್ತೆ. ಈಗ್ಯಾಕೆ ಈ ಮಾತು ಅಂದ್ರೆ ಇದೇ ತರಹದ ಒಂದೊಳ್ಳೆ ಕಂಟೆಂಟು ಹೊತ್ತು ಕ್ಷಣವೂ ಚಕಿತಗೊಳಿಸುತ್ತಾ ಸಾಗುವ ನಿರೂಪಣೆ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗೇ ಹೊಸಾ ಭಾಷ್ಯ ಬರೆಯುವಂಥಾ ಥ್ರಿಲ್ಲಿಂಗ್ ಅಂಶಗಳೊಂದಿಗೆ ಲಗ್ಗೆ ಇಟ್ಟಿರುವ ಚೇಸ್ ಸಕ್ಸಸ್ ಫುಲ್ ಆಗಿ ರನ್ ಆಗ್ತಿದೆ. ಹೌದು, ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಶುರುವಾದಾಗಿನಿಂದ ಪ್ರೇಕ್ಷಕರನ್ನ ತನ್ನೆಡೆಗೆ ಸೆಳೆದು ಕುತೂಹಲ ಹುಟ್ಟುಹಾಕಿತ್ತು. ಹಾಗಿದ್ದ ಮೇಲೆ ಸಿನೆಮಾ ಕಣ್ತುಂಬಿಕೊಂಡ ಸಿನಿಪ್ರಿಯರನ್ನ ಆವರಿಸಿಕೊಳ್ಳೋದ್ರಲ್ಲಿ ನೋ ಡೌಟ್. ಆದರೆ ನಿರೀಕ್ಷೆಗಿಂತಲೂ ಹೆಚ್ಚಿನ ಮಟ್ಟದಲ್ಲಿ ರೆಸ್ಪಾನ್ಸ್ ಬರ್ತಿದ್ದು…
ಚೀನಾ: ಟಿಯಾಂಜಿನ್ ನಗರದ ಅಪಾರ್ಟ್ ಮೆಂಟ್ ಕಟ್ಟಡವೊಂದರಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಮೂವರು ಕಾಣೆಯಾಗಿದ್ದಾರೆ. ಇತರ 11 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. https://kannadanewsnow.com/kannada/netflix-loses-nearly-1-million-subscribers-in-2nd-quarter/ ಬೆಳಗ್ಗೆ 7:15 ರ ಸುಮಾರಿಗೆ ಸ್ಫೋಟ ಸಂಭವಿಸಿದೆ.ಸ್ಫೋಟದಿಂದಾಗಿ ಆರು ಅಂತಸ್ತಿನ ಕಟ್ಟಡದ ಮೂರು ಮಹಡಿಗಳು ಕುಸಿದಿವೆ ಎಂದು ವದರಿಯಾಗಿದೆ.ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.2015 ರಲ್ಲಿ, ಟಿಯಾಂಜಿನ್ನ ರಾಸಾಯನಿಕ ಗೋದಾಮಿನಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 173 ಜನರು ಮೃತಪಟ್ಟಿದ್ದರು.
ಮಂಗಳೂರು : ಮಂಗಳೂರಿನ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ ಗೌಡ ವಿರುದ್ಧ ದೂರು ದಾಖಲಾಗಿದೆ. https://kannadanewsnow.com/kannada/bigg-news-big-shock-for-pu-lecturers-compulsory-transfer-cancelled-re-transfer-decided/ ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಗೌಡ ವಿರುದ್ದ ಮೂಡಬಿದ್ರೆ ಪೊಲೀಸ್ ಠಾಣೆಗೆ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ಎಂಬುವವರು ದೂರು ನೀಡಿದ್ದಾರೆ. https://kannadanewsnow.com/kannada/us-house-passes-bill-to-protect-same-sex-marriage/ ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಅಕಾಡೆಮಿ ನಡೆಸುವ ಗುಣಪಾಲ ಕಡಂಬ ಮತ್ತು ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಮಾಲೀಕ ರತ್ನಾಕರ ಎಂಬವರ ವಿರುದ್ದ ಕ್ರಿಮಿನಲ್ ದೂರು ನೀಡಲಾಗಿದೆ.
BREAKING NEWS: 2ನೇ ತ್ರೈಮಾಸಿಕದಲ್ಲಿ ಬರೋಬ್ಬರಿ 1 ಮಿಲಿಯನ್ ಚಂದದಾರರ ಕಳೆದುಕೊಂಡ ನೆಟ್ ಫ್ಲಿಕ್ಸ್ ..! ಕಾರಣವೇನು?
ಕ್ಯಾಲಿಫೋರ್ನಿಯಾ: ನೆಟ್‌ಫ್ಲಿಕ್ಸ್ ಕಳೆದ ಏಪ್ರಿಲ್ ಮತ್ತ ಜೂನ್ ವರೆಗೂ 970,000 ಚಂದಾದಾರರನ್ನು ಕಳೆದುಕೊಂಡಿದೆ ಎಂದು ಹೇಳಿದೆ. ಸ್ಟ್ರೀಮಿಂಗ್ ದೈತ್ಯವು ತೀವ್ರ ಸ್ಪರ್ಧೆ ಮತ್ತು ಬೇಡಿಕೆಯೊಂದಿಗೆ ಹೋರಾಡುತ್ತಿರುವುದರಿಂದ ಸತತ ಎರಡನೇ ತ್ರೈಮಾಸಿಕದಲ್ಲಿ ಚಂದಾದಾರರನ್ನು ಕಳೆದುಕೊಳ್ಳುತ್ತಿದೆ ಎಂದು ವರದಿಯಾಗಿದೆ. https://kannadanewsnow.com/kannada/early-morning-bike-ande-car-accident-two-people-death-in-belagavi/ ನಮ್ಮ ಆದಾಯ ಮತ್ತು ಸದಸ್ಯತ್ವದ ಬೆಳವಣಿಗೆಯನ್ನು ತ್ವರಿತಗೊಳಿಸುವುದು ನಮ್ಮ ಸವಾಲು ಮತ್ತು ಅವಕಾಶವಾಗಿದೆ. ಮತ್ತು ನಮ್ಮ ದೊಡ್ಡ ಪ್ರೇಕ್ಷಕರನ್ನು ಉತ್ತಮವಾಗಿ ನಗದೀಕರಿಸಲು” ಎಂದು ತಿಳಿಸಿದೆ. ಚಂದಾದಾರರನ್ನು ಒಟ್ಟುಗೂಡಿಸಿದ ವರ್ಷಗಳ ನಂತರ, ನೆಟ್‌ಫ್ಲಿಕ್ಸ್ 2021 ರ ಅಂತ್ಯಕ್ಕೆ ಹೋಲಿಸಿದರೆ ಮೊದಲ ತ್ರೈಮಾಸಿಕದಲ್ಲಿ ವಿಶ್ವದಾದ್ಯಂತ 200,000 ಗ್ರಾಹಕರನ್ನು ಕಳೆದುಕೊಂಡಿದೆ. ಸ್ಟ್ರೀಮಿಂಗ್ ತಾನು ಪ್ರಾರಂಭಿಸಿದ ಉದ್ಯಮದಲ್ಲಿ ನಾಯಕನಾಗಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಅಗತ್ಯವಾದ ಹೂಡಿಕೆಗಳಿಗೆ ಹಣಕಾಸು ಒದಗಿಸುವ ಉದ್ದೇಶದಿಂದ ಸೇವೆಯಲ್ಲಿ ಜಾಹೀರಾತುಗಳ ಆಗಮನವನ್ನು ಘೋಷಿಸುವ ಮೂಲಕ ಪ್ರತಿಕ್ರಿಯಿಸಿತು. ವಿಶ್ಲೇಷಕರು ಫಲಿತಾಂಶಗಳನ್ನು ಗಮನಿಸಿದರು, ಭಯಕ್ಕಿಂತ ಕಡಿಮೆ ಕೆಟ್ಟದಾದರೂ, ಇನ್ನೂ ಉತ್ತಮವಾಗಿಲ್ಲ. https://kannadanewsnow.com/kannada/early-morning-bike-ande-car-accident-two-people-death-in-belagavi/ ನೆಟ್‌ಫ್ಲಿಕ್ಸ್ ಚಂದಾದಾರರ ನಷ್ಟವನ್ನು ನಿರೀಕ್ಷಿಸಲಾಗಿತ್ತು. ಗ್ರಾಹಕರಿಂದ ಚಂದಾದಾರಿಕೆ ಆದಾಯದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಕಂಪನಿಗೆ…
ಬೆಳಗಾವಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಬೈಲಹೊಂಗಲ ತಾಲೂಕಿನ ಜಾಲಿಕೊಪ್ಪ ಗ್ರಾಮದಲ್ಲಿ ನಡೆದಿದೆ. 11 ವರ್ಷದ ಸಿದ್ದಪ್ಪ ಮಲ್ಲೂರು ಹಾಗೂ 46 ವರ್ಷದ ಬಸವಂತಗೌಡ ಮಲ್ಲೂರು ಎಂಬವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬಲವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸವಾರ ವೀರಣ್ಣ ಚನ್ನಬಸಪ್ಪ ಬಗನಾಳ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಕಾರು ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟಿದ್ದರು. ಬೆಳವಡಿಯಿಂದ ಬೈಲಹೊಂಗಲ ಕಡೆಗೆ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಮತ್ತು ಕಾರು ನಜ್ಜುಗುಜ್ಜಾಗಿದೆ. ಈ ಘಟನಾ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಪಿಯುಸಿ ಉಪನ್ಯಾಸಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದ್ದು, ಪಿಯುಸಿ ಉಪನ್ಯಾಸಕರ ಕೌನ್ಸಿಲಿಂಗ್ ನಲ್ಲಿ ಕೆಲವು ಲೋಪ ದೋಷಗಳು ಉಂಟಾದ ಹಿನ್ನೆಲೆಯಲ್ಲಿ ಜುಲೈ 7 ರಂದು ನಡೆಸಿದ್ದ ಕಡ್ಡಾಯ ವರ್ಗಾವಣೆಯನ್ನು ರದ್ದುಪಡಿಸಿ ಮರು ವರ್ಗಾವಣೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆ ಸುಸೂತ್ರವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಜಿಲ್ಲಾ ಉಪನಿರ್ದೇಶಕರು ತಮ್ಮ ಅಧೀನದಲ್ಲಿರುವ ಪದವಿ ಪೂರ್ವ ಕಾಲೇಜುಗಳಲ್ಲಿ ಮಂಜೂರಾದ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಜುಲೈ 21 ರೊಳಗೆ ಸಲ್ಲಿಸುವಂತೆ ಇಲಾಖೆಯ ನಿರ್ದೇಶಕರು ಸೂಚಿಸಿದ್ದಾರೆ.
ತಿರುವನಂತಪುರಂ (ಕೇರಳ): ರಾಜ್ಯದಲ್ಲಿ ಸಣ್ಣ ಅಂಗಡಿಗಳಲ್ಲಿ ಮಾರಾಟ ಮಾಡುವ ಅಗತ್ಯ ವಸ್ತುಗಳ ಮೇಲೆ ಯಾವುದೇ ರೀತಿಯ ತೆರಿಗೆ ವಿಧಿಸುವುದಿಲ್ಲ ಎಂದು ಕೇರಳ ಸರ್ಕಾರ ಮಂಗಳವಾರ ಹೇಳಿದೆ. ಈ ನಿರ್ಧಾರವು ಕೇಂದ್ರ ಸರ್ಕಾರದೊಂದಿಗೆ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ, ರಾಜ್ಯವು ರಾಜಿ ಮಾಡಿಕೊಳ್ಳಲು ಸಿದ್ಧವಾಗಿಲ್ಲ ಎಂದು ರಾಜ್ಯ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ತಿಳಿಸಿದ್ದಾರೆ. ʻಸಣ್ಣ ಅಂಗಡಿಗಳಲ್ಲಿ 1 ಅಥವಾ 2 ಕೆಜಿ ಪ್ಯಾಕೆಟ್‌ಗಳಲ್ಲಿ ಅಥವಾ ಸಡಿಲವಾದ ಪ್ರಮಾಣದಲ್ಲಿ ಮಾರಾಟ ಮಾಡುವ ವಸ್ತುಗಳಿಗೆ ಕೇರಳ ಸರ್ಕಾರ ತೆರಿಗೆ ವಿಧಿಸುವುದಿಲ್ಲ. ಕೇಂದ್ರದೊಂದಿಗೆ ಸಮಸ್ಯೆಗಳಿಗೆ ಕಾರಣವಾಗಿದ್ದರೂ ಸಹ ನಾವು ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ. ರಾಜ್ಯ ಸರ್ಕಾರ ತನ್ನ ನಿಲುವಿನ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆʼ ಎಂದು ತಿಳಿಸಿದ್ದಾರೆ. ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಮಧ್ಯಸ್ಥಿಕೆ ವಹಿಸಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೋರಿದ್ದು, ಈ ಕ್ರಮವು ಸಾಮಾನ್ಯ ಜನರ ಮೇಲೆ ತೀವ್ರ…
ಪ್ರೊಲೈಫ್ ಆಸ್ಪತ್ರೆ, ಬೆಂಗಳೂರು, ದೂರವಾಣಿ ಸಂಖ್ಯೆ – 9980212424 ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಂಧಿವಾತವೆಂದರೆ ಸಂಧಿಯ ಸಾಮಾನ್ಯವಾದ ಅಸ್ವಸ್ಥತೆ ಎನ್ನಲಾಗಿದೆ. ಅಂದ ಹಾಗೇ ಇದು ವಿಶೇಷವಾಗಿ ಹಿಪ್, ಮೊಣಕಾಲು ಮತ್ತು ಹೆಬ್ಬರುಗಳ ಕೀಲುಗಳಲ್ಲಿ ನೋವು ಮತ್ತು ಬಿಗಿತ ಉಂಟು ಮಾಡುತ್ತಿದೆ. ಅತಿಯಾದ ತೂಕದಿಂದ ಕೂಡ ಅಸ್ಥಿ ಸಂಧಿವಾತ(ಆಸ್ಟಿಯೋಆರ್ಥ್ರೈಟಿಸ್) ಬರುವ ಸಾಧ್ಯತೆ ಕೂಡ ಇರುತ್ತದೆ. ಪ್ರೊಲೈಫ್ ಆಸ್ಪತ್ರೆ, ಬೆಂಗಳೂರು, ದೂರವಾಣಿ ಸಂಖ್ಯೆ – 9980212424 1.ಅಸ್ಥಿಸಂಧಿವಾತ ಎಂದರೇನು? ಮೊಣಕಾಲಿನ ಅಸ್ಥಿಸಂಧಿವಾತವು ವಯಸ್ಸಾದವರಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ಕಾಯಿಲೆಯಾಗಿದೆ ಪ್ರೊಲೈಫ್ ಆಸ್ಪತ್ರೆ, ಬೆಂಗಳೂರು, ದೂರವಾಣಿ ಸಂಖ್ಯೆ – 9980212424 2. ಅಸ್ಥಿಸಂಧಿವಾತಕ್ಕೆ ಕಾರಣಗಳು ಇದು ಒಂದು ಡಿಜೆನರೇಟಿವ್ ಸ್ಥಿತಿಯಾಗಿದೆ ಮತ್ತು ಸಾಮಾನ್ಯವಾಗಿ ಅಧಿಕ ತೂಕ, ಕೀಲುಗಳ ಅತಿಯಾದ ಬಳಕೆ, ಧೂಮಪಾನ, ಆಲ್ಕೋಹಾಲ್ ಮತ್ತು ಕೊಮೊರ್ಬಿಡ್ ಪರಿಸ್ಥಿತಿಗಳು (ಮಧುಮೇಹ, ಅಧಿಕ ರಕ್ತದೊತ್ತಡದ ಪರಿಸ್ಥಿತಿಗಳು) ಇತ್ಯಾದಿ ಸಮಯದಲ್ಲಿ ಇದು ಕಂಡು ಬರುತ್ತದೆ . ಪ್ರೊಲೈಫ್ ಆಸ್ಪತ್ರೆ, ಬೆಂಗಳೂರು, ದೂರವಾಣಿ ಸಂಖ್ಯೆ – 9980212424 3. ಅಸ್ಥಿಸಂಧಿವಾತಕ್ಕೆ ಚಿಕಿತ್ಸೆ ಇರೋದು ಏನು?…
ವಾಷಿಂಗ್ಟನ್ (ಯುಎಸ್): ಸಲಿಂಗ ವಿವಾಹ(same-sex marriage)ದ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಹಿಂತೆಗೆದುಕೊಳ್ಳಬಹುದು ಎಂಬ ಭಯದ ನಡುವೆ ವಿವಾಹ ಸಮಾನತೆಯನ್ನು ರಕ್ಷಿಸುವ ಮಸೂದೆಯನ್ನು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಂಗಳವಾರ (ಸ್ಥಳೀಯ ಕಾಲಮಾನ) ಅಂಗೀಕರಿಸಿದೆ ಎಂದು ಮಾಧ್ಯಮಗಳು ಮಾಡಿವೆ. ʻರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆಕ್ಟ್(ಮದುವೆಯ ಗೌರವ ಕಾಯಿದೆ)ʼ ಎಂಬ ಶೀರ್ಷಿಕೆಯ ಶಾಸನವು 267-157 ಮತಗಳಲ್ಲಿ ಅಂಗೀಕರಿಸಲ್ಪಟ್ಟಿತು. 47 ರಿಪಬ್ಲಿಕನ್ನರು ಈ ಕ್ರಮವನ್ನು ಬೆಂಬಲಿಸುವಲ್ಲಿ ಎಲ್ಲಾ ಡೆಮೋಕ್ರಾಟ್‌ಗಳನ್ನು ಸೇರಿಕೊಂಡರು. ಮದುವೆಯ ಗೌರವ ಕಾಯಿದೆಯು ಯುಎಸ್ ರಾಜ್ಯಗಳು ಸಲಿಂಗ ಒಕ್ಕೂಟಗಳಿಗೆ ಮಾತ್ರವಲ್ಲದೆ ಅಂತರ್ಜಾತಿ ವಿವಾಹಗಳಿಗೆ ರಕ್ಷಣೆಯನ್ನು ಒದಗಿಸುವ ಮತ್ತೊಂದು ರಾಜ್ಯದಲ್ಲಿ ಮಾಡಿದ ಮಾನ್ಯವಾದ ಮದುವೆಯನ್ನು ಗುರುತಿಸಲು ಒತ್ತಾಯಿಸುತ್ತದೆ. ಈ ಮಸೂದೆಯು 1996 ರ ಮದುವೆಯ ರಕ್ಷಣಾ ಕಾಯಿದೆಯನ್ನು ರದ್ದುಗೊಳಿಸುತ್ತದೆ. ಅದು ಮದುವೆಯನ್ನು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯ ನಡುವಿನ ಒಕ್ಕೂಟ ಎಂದು ವ್ಯಾಖ್ಯಾನಿಸುತ್ತದೆ. ಮಂಗಳವಾರ ಹೌಸ್ ಫ್ಲೋರ್‌ನಲ್ಲಿ ಚರ್ಚೆಯ ಸಂದರ್ಭದಲ್ಲಿ, “ತಮ್ಮ ಜೀವನವನ್ನು ಒಟ್ಟಿಗೆ ನಿರ್ಮಿಸುವ ಎಲ್ಲಾ ವಿವಾಹಿತರು ತಮ್ಮ ಮದುವೆಗಳನ್ನು ಸರ್ಕಾರವು ಸಾರ್ವಕಾಲಿಕವಾಗಿ…
ಬಾಗಲಕೋಟೆ: : 2019-20 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಿರಸ್ಕøತ ಅರ್ಜಿಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. https://kannadanewsnow.com/kannada/former-cm-hd-kumaraswamy-jds-is-back-in-power-in-karnataka/ ಬಾಗಲಕೋಟೆ ತಾಲೂಕಿನ 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಒಟ್ಟು 79 ಅರ್ಜಿಗಳು ವಿಮಾ ಸಂಸ್ಥೆಯಿಂದ ಪ್ರಸ್ತಾವನೆಗಳು ತಿರಸ್ಕøತವಾಗಿದ್ದು, ಈ ಮಾಹಿತಿಯನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕಛೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕಗಳ ಮೇಲೆ ಅಳವಡಿಸಲಾಗಿದೆ. ಈ ಕುರಿತು ಆಕ್ಷೇಪಣೆಗಳು ಇದ್ದಲ್ಲಿ ಮರು ಪರಿಶೀಲನೆಗೆ ರೈತರು ಪತ್ರಿಕೆಯಲ್ಲಿ ಪ್ರಕಟಣೆಗೊಂಡ 15 ದಿನಗಳೊಳಗಾಗಿ ಬೆಳೆ ವಿಮೆಗೆ ನೋಂದಣಿಯಾಗಿರುವ ಬೆಳೆಯನ್ನು ಬೆಳೆದಿರುವ ಕುರಿತು, ಅಗತ್ಯ ದಾಖಲಾತಿಯೊಂದಿಗೆ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸಹಾಯಕ ಕೃಷಿ ನಿದೇಶಕ ಪಾಂಡಪ್ಪ ಲಮಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.